ಮನೆಗೆ ತನ್ನಿ ಈ ಜನಪ್ರಿಯ ರೇಂಜ್ ರೋವರ್ ಎಸ್‍ಯುವಿ: ಬೆಲೆ ರೂ.56 ಲಕ್ಷದವರೆಗೆ ಕಡಿತ
ಲ್ಯಾಂಡ್ ರೋವರ್ ಕಂಪನಿಯು ತನ್ನ ರೇಂಜ್ ರೋವರ್ ಆಟೋಬಯೋಗ್ರಫಿ ಎಸ್‍ಯುವಿಯನ್ನು ಭಾರತೀಯ ಮಾರುಕಟ್ಟೆಯಲ್ಲಿ ಮಾರಾಟ ಮಾಡುತ್ತಿದೆ. ಈ ರೇಂಜ್ ರೋವರ್ ಆಟೋಬಯೋಗ್ರಫಿ ಎಸ್‍ಯುವಿಯು ಸೆಲಬ್ರಿಟಿಗಳು ಮತ್ತು ಶ್ರೀಮಂತರ ಮೆಚ್ಚಿನ ಆಯ್ಕೆಯಾಗಿದೆ. ರೇಂಜ್ ರೋವರ್ ಆಟೋಬಯೋಗ್ರಫಿ ಮತ್ತು ರೇಂಜ್ ರೋವರ್ ಸ್ಪೋರ್ಟ್ ಭಾರತದಲ್ಲಿ ಸ್ಥಳೀಯವಾಗಿ ತಯಾರಾಗಲಿದೆ. ಈಗಾಗಗಲೇ ಭಾರತದಲ್ಲಿ ಸ್ಥಳೀಯವಾಗಿ ರೇಂಜ್ ರೋವರ್ ಎಫ್-ಪೇಸ್, ಡಿಸ್ಕವರಿ ಸ್ಪೋರ್ಟ್ ಮತ್ತು ಇವೊಕ್‌ನಂತಹ ಮಾದರಿಗಳ ಶ್ರೇಣಿಗೆ ಸೇರಿಕೊಂಡಿವೆ. ಇದೀಗ ಸ್ಥಳೀಯವಾಗಿ ತಯಾರಾಗುವುದರಿಂದ ರೇಂಜ್ ರೋವರ್ ಆಟೋಬಯೋಗ್ರಫಿ ಎಸ್‍ಯುವಿಯ ಬೆಲೆಯು ರೂ.56 ಲಕ್ಷದವರೆಗೆ ಬೆಲೆ ಕಡಿತವಾಗಿದೆ.
ರೇಂಜ್ ರೋವರ್ ಅನ್ನು ಚಾಲನೆ ಮಾಡುವುದು ಒಂದು ಪ್ರೀಮಿಯಂ ಅನುಭವವಾಗಿದೆ. ಬೆಲೆ ಕಡಿತದ ಮೊದಲು ರೇಂಜ್ ರೋವರ್ ಆಟೋಬಯೋಗ್ರಫಿ (Range Rover Autobiography) ಎಸ್‍ಯುವಿ ಬೆಲೆಯು ರೂ.2.60 ಕೋಟಿಯಾಗಿತ್ತು. ಪ್ರಸ್ತುತ ರೇಂಜ್ ರೋವರ್ ಅನ್ನು ಹೊಸ ಎಂಎಲ್ಎ-ಫ್ಲೆಕ್ಸ್ ಪ್ಲಾಟ್‌ಫಾರ್ಮ್‌ನಲ್ಲಿ ಅಭಿವೃದ್ಧಿಪಡಿಸಲಾಗಿದೆ. ಈ ಹೊಸ ಮಾದರಿಯು ಇದರ ಹಿಂದಿನ ಜನರೇಷನ್ ಹೆಚ್ಚಿನ ಶೈಲಿಯನ್ನು ಉಳಿಸಿಕೊಂಡಿದೆ. ಆದರೆ ಕೆಲವು ಕಾಸ್ಮೆಟಿಕ್ ನವೀಕರಣಗಳನ್ನು ಪಡೆದುಕೊಂಡಿದೆ.

ಇನ್ನು ಈ ಹೊಸ ರೇಂಜ್ ರೋವರ್ ಎಸ್‌ಯುವಿಯು ಪರಿಚಿತವಾಗಿ ಕಾಣುತ್ತದೆ ಮತ್ತು ವಿಭಿನ್ನ ಸಿಲೂಯೆಟ್ ಅನ್ನು ತಕ್ಷಣವೇ ಗುರುತಿಸಬಹುದಾಗಿದೆ. ರೇಂಜ್ ರೋವರ್ ಎಸ್‍ಯುವಿಯ ಹೊಸ ಗ್ರಿಲ್ ಮತ್ತು ಹೆಡ್‌ಲ್ಯಾಂಪ್‌ನೊಂದಿಗೆ ಇದು ಹೆಚ್ಚು ಹೊಳಪು ತೋರುತ್ತಿದೆ. ಈ ರೇಂಜ್ ರೋವರ್ ಎಸ್‍ಯುವಿಯಲ್ಲಿ ಸಮತಟ್ಟಾದ ಮೇಲ್ಮೈಗಳು ಕೇವಲ 0.30 ಸಿಡಿಯ ಪ್ರಭಾವಶಾಲಿ ಡ್ರ್ಯಾಗ್ ಅಂಶವವನ್ನು ಒಳಗೊಂಡಿದೆ.
ಈ ಮಾದರಿಯು 23-ಇಂಚಿನ ಅಲಾಯ್ ವ್ಹೀಲ್ ಗಳನ್ನು ಹೊಂದಿವೆ. ಆದರೆ ಇದರ ಸಣ್ಣ ಓವರ್‌ಹ್ಯಾಂಗ್‌ಗಳು ಬೃಹತ್ ಪ್ರಮಾಣವನ್ನು ನಿಯಂತ್ರಣದಲ್ಲಿಡುವುದನ್ನು ಖಚಿತಪಡಿಸುತ್ತದೆ. ಈ ಎಸ್‍ಯುವಿಯ ಟರ್ನ್ ಇಂಡಿಕೇಟರ್‌ಗಳನ್ನು ಸಂಯೋಜಿಸುವ ಟೈಲ್‌ಗೇಟ್‌ನಲ್ಲಿನ ಬ್ಲ್ಯಾಕ್ ಅಸ್ಸೆಂಟ್ ಗಳನ್ನು ಸಂಪರ್ಕಗೊಂಡಿರುವ ಹಿಂಭಾಗದ ಸ್ಪೋರ್ಟ್ಸ್ ಬ್ಲ್ಯಾಕ್ಡ್-ಔಟ್ ಟೈಲ್‌ಲೈಟ್‌ಗಳಾಗಿವೆ.
ರೇಂಜ್ ರೋವರ್ ಎಸ್‍ಯುವಿಯ ಇಂಟಿರಿಯರ್ ನಲ್ಲಿ 13.7-ಇಂಚಿನ ಡಿಜಿಟಲ್ ಇನ್ಸ್ ಟ್ರೂಮೆಂಟ್ ಕ್ಲಸ್ಟರ್ ಅನ್ನು ಹೊಂದಿದೆ. ಇನ್ನು ಸೆಂಟರ್ ಕನ್ಸೋಲ್ ದೊಡ್ಡ 13.1-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಡಿಸ್ ಪ್ಲೇ ಹ್ಯಾಪ್ಟಿಕ್ ಪ್ರತಿಕ್ರಿಯೆಯೊಂದಿಗೆ ಹೊಂದಿದೆ. ಇದು ಗೊಂದಲ-ಮುಕ್ತ ವಿನ್ಯಾಸವಾಗಿದೆ ಮತ್ತು ವಿನ್ಯಾಸದ ವಿಷಯದಲ್ಲಿ ಬಹಳ ಪರಿಚಿತವಾಗಿದೆ.
ಈ ಎಸ್‍ಯುವಿಯ ಹಿಂಭಾಗದಲ್ಲಿ ಪ್ರಯಾಣಿಕರು 11.4-ಇಂಚಿನ ಮನರಂಜನಾ ಡಿಸ್ ಪ್ಲೇಯನ್ನು ಪಡೆಯುತ್ತಾರೆ. ಅದನ್ನು ಮುಂಭಾಗದ ಸೀಟ್‌ಬ್ಯಾಕ್‌ಗಳಿಗೆ ಜೋಡಿಸಲಾಗಿದೆ. ಇನ್ನು ಎಕ್ಸಿಕ್ಯುಟಿವ್ ಕ್ಲಾಸ್ ಹಿಂಬದಿಯ ಸೀಟುಗಳೊಂದಿಗೆ, ಸೆಂಟರ್ ಆರ್ಮ್‌ರೆಸ್ಟ್‌ನಲ್ಲಿ 8.0-ಇಂಚಿನ ಟಚ್‌ಸ್ಕ್ರೀನ್ ಕೂಡ ಇದೆ, ಇದರೊಂದಿಗೆ ನ್ಯೂ ಜನರೇಷನ್ ರೇಂಜ್ ರೋವರ್ 1600-ವ್ಯಾಟ್, 35-ಸ್ಪೀಕರ್ ಮೆರಿಡಿಯನ್ ಸಿಗ್ನೇಚರ್ ಸೌಂಡ್ ಸಿಸ್ಟಂ ಅನ್ನು ಸಹ ಪಡೆಯುತ್ತದೆ.
ಆಟೋಬಯೋಗ್ರಫಿ ಟ್ರಿಮ್ ಹೆಡ್‌ರೆಸ್ಟ್‌ನಲ್ಲಿ ಎಂಬೆಡ್ ಮಾಡಲಾದ ವಿಶ್ವದ ಮೊದಲ ಆಕ್ಟಿವ್ ಸ್ಪೀಕರ್‌ಗಳನ್ನು ಹೊಂದಿದೆ. ಈ ಹೊಸ ರೇಂಜ್ ರೋವರ್ ಕ್ಯಾಬಿನ್‌ನಲ್ಲಿ ಹೆಚ್ಚು ಸಮರ್ಥನೀಯ ಐಷಾರಾಮಿ ವಸ್ತುಗಳನ್ನು ಬಳಸುತ್ತದೆ.ಹೊಸ ರೇಂಜ್ ರೋವರ್ ಎಸ್‍ಯುವಿಯು ಹೊಸ ಐದು-ಲಿಂಕ್ ಹಿಂಬದಿಯ ಆಕ್ಸಲ್‌ನೊಂದಿಗೆ ಅಡಾಪ್ಟಿವ್ ಏರ್ ಸಸ್ಪೆಂಕ್ಷನ್ ಅನ್ನು ಹೊಂದಿದೆ. ಇದು ನ್ಯಾವಿಗೇಷನ್ ಸಿಸ್ಟಂ ಅನ್ನು ಮುಂದಿನ ರಸ್ತೆಗೆ ಅನುಗುಣವಾಗಿ ಹೊಂದಿಸಲು ಬಳಸುತ್ತದೆ.
ಈ ಎಸ್‍ಯುವಿಯಲ್ಲಿ 4.4-ಲೀಟರ್ ಟ್ವಿನ್-ಟರ್ಬೊ ವಿ8 ಎಂಜಿನ್ ಗಳಾಗಿವೆ. ಇದರಲ್ಲಿ 3.0-ಲೀಟರ್ ಪೆಟ್ರೋಲ್ ಮೈಲ್ಡ್-ಹೈಬ್ರಿಡ್ 394 ಬಿಹೆಚ್‍ಪಿ ಪವರ್ ಮತ್ತು 550 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಈ ಎಸ್‍ಯುವಿಯು 5.3 ಸೆಕೆಂಡ್‌ಗಳಲ್ಲಿ 0-100 ವೇಗವನ್ನು ಪಡೆದುಕೊಳ್ಳುತ್ತದೆ. ಇನ್ನು ಈ ಎಸ್‍ಯುವಿಯು ಸುಮಾರು 80 ಕಿ.ಮೀ ರೇಂಜ್ ಹೊಂದಿರಲಿದೆ. ಎಲ್ಲಾ ಮಾದರಿಗಳು ಆಲ್-ವೀಲ್ ಡ್ರೈವ್ ಮತ್ತು ಸಕ್ರಿಯ-ಲಾಕಿಂಗ್ ರಿಯರ್ ಡಿಫರೆನ್ಷಿಯಲ್ ಜೊತೆಗೆ ಸ್ಟ್ಯಾಂಡರ್ಡ್ ಬರುತ್ತವೆ.


Click it and Unblock the Notifications








