Renault: ಕೈಗೆಟುಕುವ ಬೆಲೆಯ ರೆನಾಲ್ಟ್ ಕಾರುಗಳಿಗೆ ದೊಡ್ಡ ರಿಯಾಯಿತಿ.. ಒಳ್ಳೆ ಮೈಲೇಜ್, ಭರ್ಜರಿ ವೈಶಿಷ್ಟ್ಯಗಳು
ಭಾರತದಲ್ಲಿ ಕೈಗೆಟುಕುವ ಬೆಲೆಯ ಕಾರುಗಳನ್ನು ಮಾರಾಟಗೊಳಿಸುವ ಮೂಲಕ ರೆನಾಲ್ಟ್ (Renault) ದೊಡ್ಡಮಟ್ಟದಲ್ಲಿ ಜನಪ್ರಿಯತೆ ಗಳಿಸಿದೆ. ಈ ಫೆಬ್ರವರಿ ತಿಂಗಳು ದೇಶೀಯ ಮಾರುಕಟ್ಟೆಯಲ್ಲಿ ಕಂಪನಿ ಮಾರಾಟಗೊಳಿಸುವ ವಿವಿಧ ಕಾರುಗಳ ಮೇಲೆ ರೂ. 65,000 ವರೆಗೆ ರಿಯಾಯಿತಿ ಪ್ರಯೋಜನಗಳನ್ನು ಘೋಷಿಸಲಾಗಿದೆ. ಆ ಬಗ್ಗೆ ಇಲ್ಲಿದೆ ಮಾಹಿತಿ.
ಮೊದಲಿಗೆ ಅತ್ಯಂತ ಕಡಿಮೆ ಬೆಲೆಗೆ ಖರೀದಿಗೆ ದೊರೆಯುವ ರೆನಾಲ್ಟ್ ಕ್ವಿಡ್ (Renault Kwid) ಪಡೆದಿರುವ ಡಿಸ್ಕೌಂಟ್ ಆಫರ್ ಬಗ್ಗೆ ಮಾತನಾಡೋಣ. ಈ ಕಾರು, ಒಟ್ಟು ರೂ.60,000 ವರೆಗೆ ರಿಯಾಯಿತಿ ಸೌಲಭ್ಯವನ್ನು ಹೊಂದಿದೆ. ಇದರಲ್ಲಿ ರೂ.30,000 ನಗದು ರಿಯಾಯತಿ (Cash Discount), ರೂ.20,000 ವಿನಿಮಯ ಬೋನಸ್ (Exchange Bonus), ರೂ.10,000 ಲಾಯಲ್ಟಿ ಬೋನಸ್ (Loyalty Bonus) ಸೇರಿದೆ.

ದೇಶದಲ್ಲಿ ಖರೀದಿಗೆ ದೊರೆಯುವ ರೆನಾಲ್ಟ್ ಕ್ವಿಡ್ ರೂ.4.70 ಲಕ್ಷದಿಂದ ರೂ.6.45 ಲಕ್ಷ ಎಕ್ಸ್ ಶೋರೂಂ ಬೆಲೆಯನ್ನು ಹೊಂದಿದೆ. ಆರ್‌ಎಕ್ಸ್‌ಇ, ಆರ್‌ಎಕ್ಸ್‌ಎಲ್, ಆರ್‌ಎಕ್ಸ್‌ಎಲ್ (ಒ) ಸೇರಿದಂತೆ ಐದು ರೂಪಾಂತರ ಮತ್ತು ಐಸ್ ಕೂಲ್ ವೈಟ್, ಔಟ್‌ಬ್ಯಾಕ್ ಬ್ರೋನ್ ಒಳಗೊಂಡಂತೆ 6 - ಮೊನೊಟೊನ್ ಹಾಗೂ 2 - ಡುಯೆಲ್ ಟೋನ್ ಬಣ್ಣಗಳ ಆಯ್ಕೆಯಲ್ಲಿ ಗ್ರಾಹಕರಿಗೆ ಸಿಗುತ್ತದೆ.
ಈ ರೆನಾಲ್ಟ್ ಕ್ವಿಡ್ ಕಾರು, 1- ಲೀಟರ್ ಪೆಟ್ರೋಲ್ ಎಂಜಿನ್ ಹೊಂದಿದ್ದು, 68 ಪಿಎಸ್ ಗರಿಷ್ಠ ಪವರ್, 91 ಎನ್ಎಂ ಪೀಕ್ ಟಾರ್ಕ್ ಹೊರಹಾಕುವ ಸಾಮರ್ಥ್ಯವನ್ನು ಒಳಗೊಂಡಿದೆ. 5 - ಸ್ವೀಡ್ ಮ್ಯಾನುವಲ್/ 5 - ಸ್ವೀಡ್ ಆಟೋಮೆಟಿಕ್ ಗೇರ್ ಬಾಕ್ಸ್ ಆಯ್ಕೆ ಲಭ್ಯವಿದೆ. ರೂಪಾಂತರಗಳಿಗೆ ಅನುಗುಣವಾಗಿ 21.46 - 22.3 ಕೆಎಂಪಿಎಲ್ ಮೈಲೇಜ್ ಕೊಡುತ್ತದೆ.

ರೆನಾಲ್ಟ್ ಕ್ವಿಡ್ ಕಡಿಮೆ ಬೆಲೆಯ ಕಾರು ಆಗಿದ್ದರೂ ಅತ್ಯಾಕರ್ಷಕ ವೈಶಿಷ್ಟ್ಯಗಳನ್ನು ಹೊಂದಿದೆ. ಪ್ರಮುಖವಾಗಿ 8 - ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್, ಆಂಡ್ರಾಯ್ಡ್ ಆಟೋ, ಆಪಲ್ ಕಾರ್ ಪ್ಲೇ, ಕೀ ಲೆಸ್ ಎಂಟ್ರಿಯನ್ನು ಹೊಂದಿದೆ. ಸುರಕ್ಷತೆಯ ಸಲುವಾಗಿ ಡುಯಲ್ ಫ್ರಂಟ್ ಏರ್‌ಬ್ಯಾಗ್, ರೇರ್ ಪಾರ್ಕಿಂಗ್ ಸೇನಾರ್ಸ್, ESP (ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಪ್ರೋಗ್ರಾಂ), HSA (ಹಿಲ್ ಸ್ಟಾರ್ಟ್ ಅಸಿಸ್ಟ್) ಅನ್ನು ಪಡೆದಿದೆ.
ರೆನಾಲ್ಟ್ ಕಿಗರ್ (Renault Kiger) ಸಹ ಭರ್ಜರಿ ರಿಯಾಯಿತಿ ಸೌಲಭ್ಯವನ್ನು ಹೊಂದಿದ್ದು, ಒಟ್ಟು 65,000 ಡಿಸ್ಕೌಂಟ್ ಆಫರ್ ಒಳಗೊಂಡಿದೆ. ಇದರಲ್ಲಿ ರೂ.35,000 ನಗದು ರಿಯಾಯಿತಿ, ರೂ.20,000 ವಿನಿಮಯ ಬೋನಸ್ ಮತ್ತು ರೂ.10,000 ಲಾಯಲ್ಟಿ ಬೋನಸ್ ಸೇರ್ಪಡೆಗೊಂಡಿದೆ. ಕಿಗರ್, ರೂ.6 ಲಕ್ಷದಿಂದ ರೂ.11.23 ಲಕ್ಷ ಎಕ್ಸ್ ಶೋರೂಂ ಬೆಲೆಯಲ್ಲಿ ಲಭ್ಯವಿದೆ.

ಈ ಕಿಗರ್ ಕಾರು, 1 - ಲೀಟರ್ ನ್ಯಾಚುರಲ್ ಆಸ್ಪಿರೇಟೆಡ್ ಪೆಟ್ರೋಲ್ ಹಾಗೂ 1 - ಲೀಟರ್ ಟರ್ಬೊ ಪೆಟ್ರೋಲ್ ಎಂಜಿನ್ ಹೊಂದಿದೆ. ರೂಪಾಂತರಗಳ ಅನ್ವಯ 18.24 - 20.5 ಕೆಎಂಪಿಎಲ್ ಮೈಲೇಜ್ ನೀಡುತ್ತದೆ. 8 - ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್, 7 - ಇಂಚಿನ ಡಿಜಿಟಲ್ ಡ್ರೈವರ್ ಡಿಸ್ಪ್ಲೇ, ಆಟೋಮೆಟಿಕ್ ಕ್ಲೇಮೇಟ್ ಕಂಟ್ರೋಲ್ ಸೇರಿದಂತೆ ಹತ್ತಾರು ವೈಶಿಷ್ಟ್ಯಗಳನ್ನು ಹೊಂದಿದೆ.
ರೆನಾಲ್ಟ್ ಟ್ರೈಬರ್ (Renault Triber) ಕಾರು, ಒಟ್ಟು ರೂ.55,000ವರೆಗೆ ರಿಯಾಯಿತಿ ಪ್ರಯೋಜನವನ್ನು ಪಡೆದಿದೆ. ಅದರಲ್ಲಿ ರೂ.25,000 ನಗದು ರಿಯಾಯಿತಿ, ರೂ.20,000 ವಿನಿಮಯ ಬೋನಸ್, ರೂ.10,000 ಲಾಯಲ್ಟಿ ಬೋನಸ್ ಸೇರಿದೆ. ಟ್ರೈಬರ್ ಕಾರು ರೂ.6 ಲಕ್ಷದಿಂದ ರೂ.8.97 ಲಕ್ಷ ಎಕ್ಸ್ ಶೋರೂಂ ದರದಲ್ಲಿ ಖರೀದಿಗೆ ಸಿಗುತ್ತದೆ.
ಈ ರೆನಾಲ್ಟ್ ಟ್ರೈಬರ್, 1-ಲೀಟರ್ ನ್ಯಾಚುರಲ್ ಆಸ್ಪಿರೇಟೆಡ್ 3-ಸಿಲಿಂಡರ್ ಪೆಟ್ರೋಲ್ ಎಂಜಿನ್ ಹೊಂದಿದ್ದು, 5 - ಸ್ವೀಡ್ ಮ್ಯಾನುವಲ್/ 5 - ಸ್ವೀಡ್ ಆಟೋಮೆಟಿಕ್ ಗೇರ್ ಬಾಕ್ಸ್ ಆಯ್ಕೆಯಲ್ಲಿ ದೊರೆಯುತ್ತದೆ. ಇಲ್ಲಿ ಗಮನಿಸಿ.. ಈ ಕಾರುಗಳ ರಿಯಾಯಿತಿ ಪ್ರಯೋಜನಗಳು ಫೆಬ್ರವರಿ 29 ರವರೆಗೆ ಮಾತ್ರ ಮಾನ್ಯವಾಗಿರಲಿದೆ. ರಾಜ್ಯದಿಂದ ರಾಜ್ಯಕ್ಕೆ, ಡೀಲರ್‌ಶಿಪ್, ರೂಪಾಂತರ, ಬಣ್ಣಗಳನ್ನು ಆಧರಿಸಿಯು ಡಿಸ್ಕೌಂಟ್ ಬೇರೆಯಿರಲಿದ್ದು, ಹೆಚ್ಚಿನ ಮಾಹಿತಿಗೆ ಸಮೀಪದ ಶೋರೂಂ ಸಂಪರ್ಕಿಸಿರಿ.


Click it and Unblock the Notifications








