ಕೇವಲ 6 ಲಕ್ಷವಿದ್ದರೆ ಸಾಕು ಈ ಎರಡು ಕಾರುಗಳಲ್ಲಿ ಒಂದನ್ನು ಖರೀದಿಸಬಹುದು: ಯಾವುದು ಬೆಸ್ಟ್?

ಸಣ್ಣ ಎಸ್‌ಯುವಿ ವಿಭಾಗದಲ್ಲಿ ಕೈಗೆಟುವ ಬೆಲೆಯ ಬೆಸ್ಟ್ ಕಾರುಗಳೆಂದರೆ ಹೊಸ ರೆನಾಲ್ಟ್ ಕೈಗರ್ ಮತ್ತು 2024 ನಿಸ್ಸಾನ್ ಮ್ಯಾಗ್ನೈಟ್ ಆಗಿದೆ. ಈ ಎರಡು ಕಾರುಗಳ ಬೆಲೆಗಳು, ವೈಶಿಷ್ಟ್ಯಗಳು ಸೇರಿದಂತೆ ಪವರ್‌ಟ್ರೇನ್ ವಿಷಯದಲ್ಲಿ ತುಂಬಾ ಹೋಲುತ್ತವೆ. ಹಾಗಾಗಿ ಈ ಎರಡರ ನಡುವೆ ಆಯ್ಕೆ ಮಾಡುವುದು ನಿಜವಾಗಿಯೂ ಗೊಂದಲಮಯವಾಗಿರುತ್ತದೆ. ಆದ್ರೂ ಸಹ ಬೆಸ್ಟ್ ಯಾವುದೆಂದು ತಿಳಿಯಲು ಎರಡೂ ಕಾರುಗಳ ನಡುವಿನ ಬೆಲೆ, ವಿನ್ಯಾಸ, ವೈಶಿಷ್ಟ್ಯಗಳು ಮತ್ತು ಸುರಕ್ಷತೆಯನ್ನು ಹೋಲಿಸಿದ್ದೇವೆ. ಬನ್ನಿ ಹಾಗಾದ್ರೆ ಯಾವುದು ಬೆಸ್ಟ್ ಎಂದು ನೋಡೇ ಬಿಡೋಣ.

ಬೆಲೆ: ಬೆಲೆಯ ವಿಷಯದಲ್ಲಿ ಎರಡೂ ಕಾರುಗಳು ಬಹುತೇಕ ಒಂದೇ ದರವನ್ನು ಹೊಂದಿವೆ. ಹೊಸ 2024ರ ನಿಸ್ಸಾನ್ ಮ್ಯಾಗ್ನೈಟ್ ಕಾರಿನ ಬೆಲೆಯು ಭಾರತದ ಎಕ್ಸ್ ಶೋರೂಂ ದರದಂತೆ ರೂ. 5.99 ಲಕ್ಷದಿಂದ ರೂ. 11.50 ಲಕ್ಷಗಳಾಗಿದೆ. ಹೊಸ ರೆನಾಲ್ಟ್ ಕೈಗರ್ ಕಾರಿನ ಬೆಲೆಯು ಭಾರತದ ಎಕ್ಸ್ ಶೋರೂಂ ದರದಂತೆ ರೂ. 6 ಲಕ್ಷದಿಂದ ರೂ. 11.23 ಲಕ್ಷಗಳಾಗಿದೆ.

renault-kiger-vs-nissan-magnite-price-mileage-features-comparison

ವೈಶಿಷ್ಟ್ಯಗಳು ಮತ್ತು ಸುರಕ್ಷತೆ: ರೆನಾಲ್ಟ್ ಕಿಗರ್‌ನಲ್ಲಿ 4 ಏರ್ ಬ್ಯಾಗ್‌ಗಳು, ಬ್ರೇಕ್ ಅಸಿಸ್ಟ್ ನೊಂದಿಗೆ ಎಬಿಎಸ್ ಮತ್ತು ಇಬಿಡಿ, ISOFIX ಚೈಲ್ಡ್ ಸೀಟ್ ಮೌಂಟ್, ಸೀಟ್ ಬೆಲ್ಟ್ ರಿಮೈಂಡರ್, ಟ್ರಾಕ್ಷನ್ ಕಂಟ್ರೋಲ್ ಸಿಸ್ಟಮ್, ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಪ್ರೋಗ್ರಾಂ, ಹಿಲ್ ಸ್ಟಾರ್ಟ್ ಅಸಿಸ್ಟ್ ನಂತಹ ಸೇಫ್ಟಿ ಫೀಚರ್ಸ್ ನೀಡಲಾಗಿದೆ. ವೈಶಿಷ್ಟ್ಯಗಳ ವಿಷಯಕ್ಕೆ ಬಂದರೆ ಹಿಂಭಾಗದ ಎಸಿ ವೆಂಟ್‌ಗಳು, PM 2.5 ಏರ್ ಫಿಲ್ಟರ್, ಹಿಂಭಾಗದ ಡಿಫೋಗರ್ ನೀಡಲಾಗಿದೆ.

ಇವಿಷ್ಟೇ ಅಲ್ಲದೇ 7 ಇಂಚಿನ ಟಚ್ ಸ್ಕ್ರೀನ್ ಇನ್ಫೋಟೈನ್ ಮೆಂಟ್ ಡಿಸ್ಪ್ಲೇ, ವೈರ್‌ಲೆಸ್ ಚಾರ್ಜರ್, ವೈರ್‌ಲೆಸ್ ಆಪಲ್ ಕಾರ್ಪ್ಲೇ ಮತ್ತು ಆಂಡ್ರಾಯ್ಡ್ ಆಟೋ, 3.5-ಇಂಚಿನ ಎಲ್ಇಡಿ ಇನ್ಸ್ಟ್ರುಮೆಂಟ್ ಕ್ಲಸ್ಟರ್, ಡ್ರೈವ್ ಮೋಡ್‌ಗಳು, ಕ್ರೂಸ್ ಕಂಟ್ರೋಲ್, 6-ಸ್ಪೀಕರ್ 3D ಸೌಂಡ್ ಸಿಸ್ಟಮ್, ರಿಯರ್ ವ್ಯೂ ಕ್ಯಾಮರಾ, ಎಲೆಕ್ಟ್ರಿಕಲ್ಲಿ ಅಡ್ಜಸ್ಟಬಲ್ ORVM ಗಳನ್ನು ನೀಡಲಾಗಿದೆ.

renault-kiger-vs-nissan-magnite-price-mileage-features-comparison

ಹೊಸ 2024 ನಿಸ್ಸಾನ್ ಮ್ಯಾಗ್ನೈಟ್ ವಿಷಯಕ್ಕೆ ಬಂದರೆ, ಸೆಂಟರ್ ಕನ್ಸೋಲ್ ಸೇರಿದಂತೆ ಲೆದರೆಟ್ ಒಳಾಂಗಣ, ನಾಲ್ಕು ಆಂಬಿಯೆಂಟ್ ಲೈಟಿಂಗ್ ಬಣ್ಣಗಳು, 7-ಇಂಚಿನ ಟಿಎಫ್‌ಟಿ ಡ್ರೈವರ್ ಡಿಸ್ಪ್ಲೇ, 8 ಇಂಚಿನ ಫ್ಲೋಟಿಂಗ್ ಟಚ್ ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಡಿಸ್ಪ್ಲೇ, 336-ಲೀಟರ್ ಬೂಟ್ ಸ್ಪೇಸ್, ಕ್ಲಸ್ಟರ್ ಅಯೋನೈಜರ್ (PM2.5 ಏರ್ ಪ್ಯೂರಿಫೈಯರ್), ವೈರ್‌ಲೆಸ್ ಆಂಡ್ರಾಯ್ಡ್ ಆಟೋ ಮತ್ತು ಆಪಲ್ ಕಾರ್ಪ್ಲೇ ನೀಡಲಾಗಿದೆ.

ಇವಿಷ್ಟೇ ಅಲ್ಲದೇ, ವೈರ್‌ಲೆಸ್ ಫೋನ್ ಚಾರ್ಜರ್, ಹೊಸ ಐ-ಕೀ, 3 ಪಾಯಿಂಟ್ ಸೀಟ್ ಬೆಲ್ಟ್‌ಗಳು, ISOFIX ಚೈಲ್ಡ್ ಸೀಟ್ ಮೌಂಟ್‌ಗಳು, 40ಕ್ಕೂ ಹೆಚ್ಚು ಸ್ಟ್ಯಾಂಡರ್ಡ್ ಸುರಕ್ಷತಾ ವೈಶಿಷ್ಟ್ಯಗಳು, 6-ಸ್ಪೀಕರ್ 3D ಸೌಂಡ್ ಸಿಸ್ಟಮ್, 6 ಏರ್ ಬ್ಯಾಗ್‌ಗಳು, ಹೈಸ್ಪೀಡ್ ಅಲರ್ಟ್ ಸಿಸ್ಟಮ್, ತುರ್ತು ನಿಲುಗಡೆ ಸಿಗ್ನಲ್ (ESS) ನಂತಹ ಆಧುನಿಕ ಸುರಕ್ಷತಾ ವೈಶಿಷ್ಟ್ಯಗಳನ್ನು ಒಳಗೊಂಡಿದೆ.

renault-kiger-vs-nissan-magnite-price-mileage-features-comparison

ಎಂಜಿನ್ ಮತ್ತು ಮೈಲೇಜ್: ಹೊಸ 2024ರ ನಿಸ್ಸಾನ್ ಮ್ಯಾಗ್ನೈಟ್ 5-ಸ್ಪೀಡ್ ಮ್ಯಾನುವಲ್ ಮತ್ತು ಎಎಂಟಿ ಅಥವಾ ಸಿವಿಟಿ ಆಟೋಮ್ಯಾಟಿಕ್ ಗೇರ್ ಬಾಕ್ಸ್ ಆಯ್ಕೆಯನ್ನು ಹೊಂದಿರುವ 1.2-ಲೀಟರ್ 3-ಸಿಲಿಂಡರ್ ನ್ಯಾಚುರಲ್ಲಿ ಆಸ್ಪಿರೇಟೆಡ್ ಮತ್ತು ಟರ್ಬೋಚಾರ್ಜ್ಡ್ ಪೆಟ್ರೋಲ್ ಎಂಜಿನ್ ಹೊಂದಿದೆ. ಮ್ಯಾನುವಲ್‌ನಲ್ಲಿ 20 ಕಿ.ಮೀ ಮತ್ತು ಸಿವಿಟಿ ಆಟೋಮ್ಯಾಟಿಕ್‌ನಲ್ಲಿ 17.4 ಕಿ.ಮೀ ಮೈಲೇಜ್ ನೀಡುತ್ತದೆ.

ರೆನಾಲ್ಟ್ ಕೈಗರ್ ವಿಚಾರಕ್ಕೆ ಬಂದರೆ 5-ಸ್ಪೀಡ್ ಮ್ಯಾನುವಲ್ ಮತ್ತು ಎಎಂಟಿ ಅಥವಾ ಸಿವಿಟಿ ಆಟೋಮ್ಯಾಟಿಕ್ ಗೇರ್‌ಬ್ಆಕ್ಸ್ ಆಯ್ಕೆಯನ್ನು ಒಳಗೊಂಡಿರುವ 1.2-ಲೀಟರ್ 3-ಸಿಲಿಂಡರ್ ನ್ಯಾಚುರಲ್ಲಿ ಆಸ್ಪಿರೇಟೆಡ್ ಮತ್ತು ಟರ್ಬೊ ಪೆಟ್ರೋಲ್ ಎಂಜಿನ್ ಹೊಂದಿದೆ. ಮ್ಯಾನುವಲ್‌ನಲ್ಲಿ 19.17 ಕಿ.ಮೀ, ಆಟೋಮ್ಯಾಟಿಕ್‌ನಲ್ಲಿ 19.03 ಕಿ.ಮೀ ಮತ್ತು ಸಿವಿಟಿನಲ್ಲಿ 18.24 ಕಿ.ಮೀ ಮೈಲೇಜ್ ನೀಡುತ್ತದೆ.

Article Published On: Sunday, November 17, 2024, 14:00 [IST]
English summary
Renault kiger vs nissan magnite price mileage features comparison
Read more on auto news india
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+