KWID: ಜನಪ್ರಿಯ ರೆನಾಲ್ಟ್ ಕ್ವಿಡ್ ಕಾರು ಖರೀದಿಸಬೇಕೇ.. ಆನ್ - ರೋಡ್ ಬೆಲೆ ಏನು, EMI ಎಷ್ಟು?
ಪ್ರತಿಯೊಬ್ಬರಿಗೂ ಜೀವನದಲ್ಲಿ ಹೊಸ ಕಾರು ಖರೀದಿಸಬೇಕೆಂಬ ಆಸೆಯಿರುತ್ತದೆ. ಆದರೆ, ಬಜೆಟ್ ಬೆಲೆಗೆ ಯಾವ ಗಾಡಿ ಸಿಗುತ್ತದೆ ಎಂಬ ಗೊಂದಲವಿರುತ್ತದೆ. ಇಲ್ಲಿ ಅತ್ಯಾಧುನಿಕವಾಗಿರುವ ರೆನಾಲ್ಟ್ ಕ್ವಿಡ್ (Renault KWID) ಕಾರಿನ ಆನ್ - ರೋಡ್ ಬೆಲೆ ಹಾಗೂ ಇಎಂಐ ಆಯ್ಕೆ ಬಗ್ಗೆ ವಿವರಿಸಿದ್ದೇವೆ.
ಬೆಂಗಳೂರಿನಲ್ಲಿ ರೆನಾಲ್ಟ್ ಕ್ವಿಡ್ ಕಾರಿನ ಬೇಸ್ ಮಾಡೆಲ್ (ಆರಂಭಿಕ ಆವೃತ್ತಿ) ಆರ್‌ಎಕ್ಸ್‌ಇ ರೂಪಾಂತರ ರೂ.5.63 ಲಕ್ಷ, ಆರ್‌ಎಕ್ಸ್‌ಎಲ್ ರೂ.5.96 ಲಕ್ಷ, ಆರ್‌ಎಕ್ಸ್‌ಎಲ್ ಎಎಂಟಿ (ಆಟೋಮೆಟಿಕ್ ಗೇರ್ ಬ್ಯಾಕ್) ಮಾದರಿ ರೂ.6.56 ಲಕ್ಷ, ಗರಿಷ್ಠ ಸಂಖ್ಯೆಯಲ್ಲಿ ಮಾರಾಟವಾಗುವ ಆರ್‌ಎಕ್ಸ್‌ಟಿ ರೂ.6.62 ಲಕ್ಷ, ಕ್ಲೈಂಬರ್ ರೂಪಾಂತರ ರೂ.7.09 ಲಕ್ಷ, ಆರ್‌ಎಕ್ಸ್‌ಟಿ ಎಎಂಟಿ ರೂ.7.16 ಲಕ್ಷ ಆನ್ - ರೋಡ್ ಬೆಲೆಯನ್ನು ಹೊಂದಿದೆ.

ಇನ್ನುಳಿದಂತೆ ಕ್ಲೈಂಬರ್ ಡಿಟಿ ರೂ.7.23 ಲಕ್ಷ, ಕ್ಲೈಂಬರ್ ಎಎಂಟಿ ರೂ.7.62 ಲಕ್ಷ ಹಾಗೂ ಕ್ಲೈಂಬರ್ ಡಿಟಿ ಎಎಂಟಿ ಮಾದರಿಯು ರೂ.7.77 ಲಕ್ಷ ಆನ್ - ರೋಡ್ ದರವನ್ನು ಪಡೆದಿದೆ. ನೀವು ಈ ಕಾರನ್ನು ರೂ.56,000 ಡೌನ್ ಪೇಮೆಂಟ್ ಪಾವತಿಸಿ, ಕೊಂಡುಕೊಂಡರೆ ಶೇಕಡ 9.8% ಬಡ್ಡಿ ದರದಲ್ಲಿ ತಿಂಗಳಿಗೆ ರೂ.10,735 ಇಎಂಐ (EMI) ಕಟ್ಟಬೇಕು.
ಈ ರೆನಾಲ್ಟ್ ಕ್ವಿಡ್ (Renault KWID) ಕಾರು ಐಸ್ ಕೂಲ್ ವೈಟ್, ಮೂನ್‌ಲೈಟ್ ಸಿಲ್ವರ್ ಸೇರಿದಂತೆ 5 ಮೊನೊಟೋನ್ ಮತ್ತು 5 ಡುಯಲ್ ಟೋನ್ ಬಣ್ಣಗಳ ಆಯ್ಕೆಯಲ್ಲಿ ಗ್ರಾಹಕರಿಗೆ ಸಿಗುತ್ತದೆ. ಇದು ಪುಟ್ಟ ಕಾರಾಗಿದ್ದರೂ ವಿನ್ಯಾಸದ ದೃಷ್ಟಿಯಿಂದ ಹೆಚ್ಚು ಅತ್ಯಾಧುನಿಕವಾಗಿದೆ. 5 ಮಂದಿ ಆರಾಮದಾಯಕವಾಗಿ ಪ್ರಯಾಣಿಸಬಹುದು.

ನೂತನ ರೆನಾಲ್ಟ್ ಕ್ವಿಡ್ ಕಾರು 1-ಲೀಟರ್ ಪೆಟ್ರೋಲ್ ಎಂಜಿನ್ ಆಯ್ಕೆಯನ್ನು ಹೊಂದಿದೆ. 68 ಪಿಎಸ್ ಗರಿಷ್ಠ ಪವರ್ (ಶಕ್ತಿ) ಮತ್ತು 91 ಎನ್ಎಂ ಪೀಕ್ ಟಾರ್ಕ್ ಉತ್ಪಾದಿಸುವ ಸಾಮರ್ಥ್ಯವನ್ನು ಒಳಗೂಂಡಿದೆ. ಜೊತೆಗೆ 5-ಸ್ವೀಡ್ ಮ್ಯಾನುವಲ್ ಅಥವಾ 5-ಸ್ವೀಡ್ ಎಎಂಟಿ (ಆಟೋಮೆಟಿಕ್) ಗೇರ್ ಬಾಕ್ಸ್ ಆಯ್ಕೆಯಲ್ಲಿ ಲಭ್ಯವಿದ್ದು, ರೂಪಾಂತರಗಳಿಗೆ ಅನುಗುಣವಾಗಿ 21.46 ರಿಂದ 22.3 ಕೆಎಂಪಿಎಲ್ ಮೈಲೇಜ್ ಕೊಡುತ್ತದೆ.
ಈ ಕಾರು 8-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್, ಆಂಡ್ರಾಯ್ಡ್ ಆಟೋ, ಆಪಲ್ ಕಾರ್ ಪ್ಲೇ, ಕೀಲೆಸ್ ಎಂಟ್ರಿ, ಮ್ಯಾನುವಲ್ ಎಸಿ ಸೇರಿದಂತೆ ವಿವಿಧ ವೈಶಿಷ್ಟ್ಯಗಳನ್ನು ಒಳಗೊಂಡಿದೆ. ಸುರಕ್ಷತೆಯ ದೃಷ್ಟಿಯಿಂದ ಡುಯಲ್ ಫ್ರಂಟ್ ಏರ್ ಬ್ಯಾಗ್, ABS (ಆಂಟಿಲಾಕ್ ಬ್ರೇಕಿಂಗ್ ಸಿಸ್ಟಮ್), EBD (ಎಲೆಕ್ಟ್ರಾನಿಕ್ ಬ್ರೇಕ್‌ಫೋರ್ಸ್ ಡಿಸ್ಟ್ರಿಬ್ಯೂಷನ್), TPMS (ಟೈರ್ ಪ್ರೆಶರ್ ಮಾನಿಟರಿಂಗ್ ಸಿಸ್ಟಮ್), ESP (ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಪ್ರೋಗ್ರಾಂ) ಅನ್ನು ಹೊಂದಿದೆ.

ರೆನಾಲ್ಟ್ ಕ್ವಿಡ್ ಕಾರಿಗೆ ಮಾರುತಿ ಸುಜುಕಿ ಆಲ್ಟೊ ಕೆ10, ಮಾರುತಿ ಸುಜುಕಿ ಎಸ್-ಪ್ರೆಸ್ಸೊ ಹಾಗೂ ಟಾಟಾ ಟಿಯಾಗೊ ಪ್ರಬಲ ಪ್ರತಿಸ್ಪರ್ಧಿಯಾಗಿವೆ. ನಿಮ್ಮ ಗಮನಕ್ಕೆ.. ಈ ಆನ್ - ರೋಡ್ ಬೆಲೆ, ಸಾಲದ ಆಯ್ಕೆಗಳು ರಾಜ್ಯದಿಂದ ರಾಜ್ಯಕ್ಕೆ ರೂಪಾಂತರ ಹಾಗೂ ಬಣ್ಣಗಳನ್ನು ಆಧರಿಸಿ, ಬೇರೆಯಿರಲಿದ್ದು, ಹೆಚ್ಚಿನ ಮಾಹಿತಿಗೆ ಹತ್ತಿರದ ಶೋರೂಂಗೆ ಭೇಟಿ ನೀಡಿರಿ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications








