ಒಮ್ಮೆ ಖರೀದಿಸಿದರು ಜೀವ ಉಳಿಸುವ ಕಾರನ್ನು ಖರೀದಿಸಿ: ಅಗ್ಗದ ಬೆಲೆಯ 5-ಸ್ಟಾರ್ ಕಾರುಗಳು!
ಭಾರತದಲ್ಲಿ ಕಾರು ಖರೀದಿಸುವವರ ಸಂಖ್ಯೆ ಹೆಚ್ಚಾಗುತ್ತಲೇ ಇದೆ. ಮೊದಲು ಬೆಸ್ಟ್ ಫೀಚರ್ಸ್ ಹಾಗೂ ಉತ್ತಮ ಮೈಲೇಜ್ ಕೊಡುವ ಕಾರುಗಳನ್ನು ಮಾತ್ರ ಹೆಚ್ಚಾಗಿ ಖರೀದಿಸಲಾಗುತ್ತಿತ್ತು. ಆದರೆ ಈಗ ಕಾಲ ಬದಲಾಗಿದೆ, ಖರೀದಿದಾರರು ಸುರಕ್ಷತೆಗೆ ಹೆಚ್ಚಿನ ಆದ್ಯತೆ ನೀಡುತ್ತಿದ್ದಾರೆ. ಉತ್ತಮ ಸೇಫ್ಟಿ ಫೀಚರ್ಸ್ ಹಾಗೂ ನಿರ್ಮಾಣ ಗುಣಮಟ್ಟವನ್ನು ಹೆಚ್ಚಾಗಿ ಪರಿಶೀಲಿಸದ ಬಳಿಕವಷ್ಟೇ ಕಾರುಗಳನ್ನು ಖರೀದಿಸುತ್ತಿದ್ದಾರೆ. ಸುರಕ್ಷಿತ ಕಾರುಗಳೆಂದರೆ ಸಾಮಾನ್ಯವಾಗಿಯೇ ಹೆಚ್ಚಿನ ಬೆಲೆ ಹೊಂದಿರುತ್ತವೆ. ಆದ್ರೆ ನಾವು ಇಲ್ಲಿ ಪಟ್ಟಿ ಮಾಡಿರುವ ಕಾರುಗಳು ಸುರಕ್ಷತೆ ಜೊತೆಗೆ ಬಜೆಟ್ ಬೆಲೆಯಲ್ಲಿ ಸಿಗುತ್ತವೆ.
ಮಾರುತಿ ಸುಜುಕಿ ಡಿಜೈರ್: ಹೊಸ ತಲೆಮಾರಿನ ಮಾರುತಿ ಸುಜುಕಿ ಡಿಜೈರ್ ಇತ್ತೀಚೆಗೆ ನಡೆಸಿದ ಸೇಫ್ಟಿ ಟೆಸ್ಟ್‌ನಲ್ಲಿ 5-ಸ್ಟಾರ್ ರೇಟಿಂಗ್ ಪಡೆದುಕೊಂಡಿದೆ. ಇದರ ಬೆಲೆಯು ಭಾರತದ ಎಕ್ಸ್ ಶೋರೂಂ ದರದಂತೆ ರೂ.6.79 ಲಕ್ಷಗಳಾಗಿದೆ. ಇದು ಅಗ್ಗದ ಬೆಲೆಗೆ ಸಿಗುವ ಬೆಸ್ಟ್ ಕಾರೆಂದು ಹೇಳಬಹುದು. ಇದು ವಯಸ್ಕರ ರಕ್ಷಣೆಯಲ್ಲಿ 5-ಸ್ಟಾರ್ ಸುರಕ್ಷತಾ ರೇಟಿಂಗ್ ಮತ್ತು ಮಕ್ಕಳ ರಕ್ಷಣೆಯಲ್ಲಿ 4-ಸ್ಟಾರ್ ರೇಟಿಂಗ್ ಅನ್ನು ಪಡೆದುಕೊಂಡಿದೆ.

ಟಾಟಾ ಕರ್ವ್: ಟಾಟಾ ಹೊಸ ಕೂಪೆ-ಮಾದರಿಯ ಎಸ್‌ಯುವಿಯಾದ ಕರ್ವ್ ಕಾರು ಸೇಫ್ಟಿ ಟೆಸ್ಟ್‌ನಲ್ಲಿ ವಯಸ್ಕ ಮತ್ತು ಮಕ್ಕಳ ಸುರಕ್ಷತೆಯಲ್ಲಿ ಪೂರ್ಣ 5-ಸ್ಟಾರ್ ರೇಟಿಂಗ್ ಪಡೆದುಕೊಂಡಿದೆ. ಇದರ ಆರಂಭಿಕ ಬೆಲೆಯು ಭಾರತದ ಎಕ್ಸ್ ಶೋರೂಂ ದರದಂತೆ ರೂ.9.99 ಲಕ್ಷಗಳಾಗಿದೆ. ಇದು ವಯಸ್ಕ ಪ್ರಯಾಣಿಕರ ರಕ್ಷಣೆಯಲ್ಲಿ 32 ಅಂಕಗಳಿಗೆ 29.50 ಮತ್ತು ಮಕ್ಕಳ ರಕ್ಷಣೆಯಲ್ಲಿ 49 ಕ್ಕೆ 43.66 ಅಂಕಗಳನ್ನು ಪಡೆದಿದೆ.
ಟಾಟಾ ಪಂಚ್ ಇವಿ: ನೀವು ಸುರಕ್ಷಿತ ಎಲೆಕ್ಟ್ರಿಕ್ ಕಾರನ್ನು ಹುಡುಕುತ್ತಿದ್ದರೇ ಟಾಟಾ ಪಂಚ್ ಇವಿಯನ್ನು ಪರಿಗಣಿಸಬಹುದು, ಇದು ವಯಸ್ಕರ ರಕ್ಷಣೆಯಲ್ಲಿ 32 ಅಂಕಗಳಿಗೆ 31.46 ಮತ್ತು ಮಕ್ಕಳ ರಕ್ಷಣೆಯಲ್ಲಿ 49 ಕ್ಕೆ 45 ಅಂಕಗಳನ್ನು ಗಳಿಸುವ ಮೂಲಕ 5-ಸ್ಟಾರ್ ರೇಟಿಂಗ್ ಪಡೆದುಕೊಂಡಿದೆ. ಹೊಸ ಟಾಟಾ ಪಂಚ್ ಇವಿ ಕಾರಿನ ಬೆಲೆಯು 9.99 ಲಕ್ಷ ರೂ.ಗಳಿಂದ (ಎಕ್ಸ್ ಶೋರೂಂ) ಪ್ರಾರಂಭವಾಗುತ್ತದೆ.

ಟಾಟಾ ನೆಕ್ಸಾನ್: ಟಾಟಾ ನೆಕ್ಸಾನ್ ಕಾರಿನ ಬೆಲೆಯು ರೂ.7.99 ಲಕ್ಷಗಳಾಗಿದ್ದು, ಆಧುನಿಕ ವಿನ್ಯಾಸವನ್ನು ಹೊಂದಿದೆ. ಇದು ವಯಸ್ಕ ಮತ್ತು ಮಕ್ಕಳ ಆಕ್ಯುಪೆನ್ಸಿ ಕ್ರ್ಯಾಶ್ ಪರೀಕ್ಷೆಗಳಲ್ಲಿ ಪೂರ್ಣ 5 ಸ್ಟಾರ್ ರೇಟಿಂಗ್ ಗಳಿಸಿದೆ. ವಯಸ್ಕ ಪ್ರಯಾಣಿಕರ ರಕ್ಷಣೆಯಲ್ಲಿ ನೆಕ್ಸಾನ್ 32 ಕ್ಕೆ 29.41 ಅಂಕಗಳನ್ನು ಮತ್ತು ಮಕ್ಕಳ ರಕ್ಷಣೆಯಲ್ಲಿ 49 ಕ್ಕೆ 43.83 ಅಂಕಗಳನ್ನು ಗಳಿಸಿದೆ.
ಮಹೀಂದ್ರಾ ಎಕ್ಸ್‌ಯುವಿ 3XO: ಮಹೀಂದ್ರಾ ಎಕ್ಸ್‌ಯುವಿ 3 ಎಕ್ಸ್‌ಒ (Mahindra XUV3 XO) ಕಾರಿನ ಬೆಲೆಯು ಭಾರತದ ಎಕ್ಸ್ ಶೋರೂಂ ದರದಂತೆ ಆರಂಭಿಕ ರೂ.7.79 ಲಕ್ಷಗಳಾಗಿದೆ. ಇದು ಸೇಫ್ಟಿ ಟೆಸ್ಟ್‌ನಲ್ಲಿ ವಯಸ್ಕರ ಪ್ರಯಾಣಿಕರ ರಕ್ಷಣೆಯಲ್ಲಿ 32 ಅಂಕಗಳಿಗೆ 29.36 ಅಂಕಗಳು ಮತ್ತು ಮಕ್ಕಳ ರಕ್ಷಣೆಯಲ್ಲಿ 49 ಕ್ಕೆ 43 ಅಂಕಗಳನ್ನು ಗಳಿಸಿಸುವ ಮೂಲಕ 5-ಸ್ಟಾರ್ ಸುರಕ್ಷತಾ ರೇಟಿಂಗ್ ಪಡೆದುಕೊಂಡಿದೆ.

ಈ ಕಾರಿನಲ್ಲಿ 6 ಏರ್‌ಬ್ಯಾಗ್, ಇಎಸ್‌ಪಿ ಮತ್ತು ಐಎಸ್ ಒಫಿಕ್ಸ್ ಆಂಕರ್ ಸೇರಿದಂತೆ ವಿವಿಧ ಸುರಕ್ಷತಾ ವೈಶಿಷ್ಟ್ಯಗಳನ್ನು ಸ್ಟ್ಯಾಂಡರ್ಡ್ ಆಗಿ ನೀಡಲಾಗಿದೆ. ಲೆವೆಲ್ 2 ADAS, ಹಿಲ್ ಹೋಲ್ಡ್ ಅಸಿಸ್ಟ್, ಎಲೆಕ್ಟ್ರಾನಿಕ್ ಪಾರ್ಕಿಂಗ್ ಬ್ರೇಕ್ ಮತ್ತು ಬ್ಲೈಂಡ್-ಸ್ಪಾಟ್ ಮಾನಿಟರ್‌ಗಳಂತಹ ಸುಧಾರಿತ ವೈಶಿಷ್ಟ್ಯಗಳನ್ನು ಟಾಪ್ ವೇರಿಯೆಂಟ್‌ಗಳಲ್ಲಿ ನೀಡಲಾಗುತ್ತದೆ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊ ಗಳನ್ನು ಪಡೆಯಲು ನಮ್ಮ ಫೇಸ್ ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications