Safest cars: ಚಿಂತೆಯೇ ಬೇಡ ಕಣ್ಣು ಮುಚ್ಚಿ ಖರೀದಿಸಿ... 2024ರ ಅತ್ಯಂತ ಸುರಕ್ಷಿತ ಕಾರುಗಳಿವು!

ಈ ವರ್ಷ ಭಾರತ್ ಎನ್‌ಸಿಎಪಿ ಪರೀಕ್ಷಿಸಿ ಟಾಪ್ ಸುರಕ್ಷತಾ ರೇಟಿಂಗ್ ನೀಡುರುವ 10 ಕಾರುಗಳನ್ನು ನಿಮ್ಮ ಮುಂದಿಡುತ್ತಿದ್ದೇವೆ. ಎಲ್ಲಾ 10 ಕಾರುಗಳು ಹಾಗೂ ಎಸ್‌ಯುವಿಗಳಲ್ಲಿ ಒಂದು ಎಸ್‌ಯುವಿಯನ್ನು ಹೊರತುಪಡಿಸಿ ಉಳಿದೆಲ್ಲವೂ 5-ಸ್ಟಾರ್ ಸುರಕ್ಷತಾ ರೇಟಿಂಗ್ ಗಳಿಸಿವೆ. ಎಲ್ಲರಿಗೂ ತಿಳಿದಿರುವಂತೆ ಸುರಕ್ಷತೆಯಲ್ಲಿ ಟಾಟಾ ಮೋಟಾರ್ಸ್ ಅಗ್ರಸ್ಥಾನದಲ್ಲಿರುತ್ತದೆ. ಅಂತೆಯೇ ನಾವು ಇಲ್ಲಿ ಪಟ್ಟಿ ಮಾಡಿರುವ 10 ಕಾರುಗಳಲ್ಲಿ ಟಾಟಾದ 5 ಕಾರುಗಳಿವೆ. ಉಳಿದಂತೆ ಮೂರು ಮಹೀಂದ್ರಾ, ಹ್ಯುಂಡೈ ಮತ್ತು ಸಿಟ್ರನ್‌ನ ತಲಾ ಒಂದು ಎಸ್‌ಯುವಿಗಳಿವೆ. 2024 ರಲ್ಲಿ ಭಾರತ್ ಎನ್‌ಸಿಎಪಿ ಪ್ರಕಾರ ಸುರಕ್ಷಿತ ಕಾರುಗಳ ಪಟ್ಟಿ ಇಲ್ಲಿದೆ.

ಟಾಟಾ ನೆಕ್ಸಾನ್, ನೆಕ್ಸಾನ್ ಇವಿ: ಈ ವರ್ಷ ಟಾಟಾ ನೆಕ್ಸಾನ್ ಐಸಿಇ ಮತ್ತು ಎಲೆಕ್ಟ್ರಿಕ್ ಆವೃತ್ತಿಗಳ ಸೇಫ್ಟಿಯನ್ನು ಪರೀಕ್ಷಿಸಲಾಗಿದೆ. ನೆಕ್ಸಾನ್ ಮತ್ತು ನೆಕ್ಸಾನ್ ಇವಿ ಎರಡೂ 5-ಸ್ಟಾರ್ ರೇಟಿಂಗ್ ಪಡೆದುಕೊಂಡಿವೆ. ನೆಕ್ಸಾನ್ ವಯಸ್ಕರ ರಕ್ಷಣೆಯಲ್ಲಿ 32ಕ್ಕೆ 29.41 ಅಂಕಗಳು ಮತ್ತು ಮಕ್ಕಳ ರಕ್ಷಣೆಯಲ್ಲಿ 49ಕ್ಕೆ 43.83 ಅಂಕಗಳನ್ನು ಗಳಿಸಿದೆ. ನೆಕ್ಸಾನ್ ಇವಿ ವಯಸ್ಕರ ರಕ್ಷಣೆಯಲ್ಲಿ 29.86 ಮತ್ತು ಮಕ್ಕಳ ರಕ್ಷಣೆಯಲ್ಲಿ 44.95 ಅಂಕಗಳನ್ನು ಗಳಿಸಿದೆ.

safest-cars-2024-tata-mahindra-hyundai-citroen

ಟಾಟಾ ಕರ್ವ್, ಕರ್ವ್ ಇವಿ: ಟಾಟಾ ಮೋಟಾರ್ಸ್ ತನ್ನ ಕರ್ವ್ ಕಾರನ್ನು ಎಲೆಕ್ಟ್ರಿಕ್ ಹಾಗೂ ಇಂಧನ ಚಾಲಿತ ಆವೃತ್ತಿಗಳಲ್ಲಿ ಬಿಡುಗಡೆ ಮಾಡಿದೆ. ಇವೆರಡನ್ನು ಒಟ್ಟಿಗೆ ಪರೀಕ್ಷೆಗೆ ಒಳಪಡಿಸಲಾಗಿದ್ದು, ಎರಡೂ ಮಾದರಿಗಳು 5-ಸ್ಟಾರ್ ಸುರಕ್ಷತಾ ರೇಟಿಂಗ್ ಪಡೆದಿವೆ. ಎರಡೂ ಒಂದೇ ಬಾಡಿ ವರ್ಕ್ ಹೊಂದಿದ್ದರೂ ನಿಯಮಗಳ ಪ್ರಕಾರ ಎರಡನ್ನು ಈ ಪರೀಕ್ಷೆಗೆ ಒಳಪಡಿಸಲಾಗಿದೆ.

ಕರ್ವ್ ಎಸ್‌ಯುವಿ ವಯಸ್ಕ ಪ್ರಯಾಣಿಕರ ರಕ್ಷಣೆ ಪರೀಕ್ಷೆಯಲ್ಲಿ 32 ಅಂಕಗಳಿಗೆ 29.50 ಪಾಯಿಂಟ್‌ಗಳು ಮತ್ತು ಮಕ್ಕಳ ರಕ್ಷಣೆ ಪರೀಕ್ಷೆಯಲ್ಲಿ 49 ಅಂಕಗಳಿಗೆ 43.66 ಪಾಯಿಂಟ್‌ಗಳನ್ನು ಪಡೆದಿದೆ. ಕರ್ವ್ ಇವಿ ವಯಸ್ಕ ಪ್ರಯಾಣಿಕರ ರಕ್ಷಣೆಯಲ್ಲಿ 30.81 ಅಂಕಗಳು ಮತ್ತು ಮಕ್ಕಳ ರಕ್ಷಣೆಯಲ್ಲಿ 44.83 ಅಂಕಗಳನ್ನು ದಕ್ಕಿಸಿಕೊಂಡು ಅತ್ಯಂತ ಸುರಕ್ಷಿತ ಕಾರೆನಿಸಿಕೊಂಡಿದೆ.

safest-cars-2024-tata-mahindra-hyundai-citroen

ಟಾಟಾ ಪಂಚ್ ಇವಿ: ಪಂಚ್ ಇವಿ 2024 ರಲ್ಲಿ ಭಾರತ್ ಎನ್‌ಸಿಎಪಿ ಕ್ರ್ಯಾಶ್ ಟೆಸ್ಟ್‌ನಲ್ಲಿ ವಯಸ್ಕ ಪ್ರಯಾಣಿಕರ ರಕ್ಷಣೆಲ್ಲಿ 32 ಅಂಕಗಳಿಗೆ 31.46 ಅಂಕಗಳನ್ನು ಗಳಿಸಿದೆ, ಇದು ಭಾರತದ ಇತರ ಎಲ್ಲಾ ಎಲೆಕ್ಟ್ರಿಕ್ ಕಾರುಗಳಿಂತ ಅತಿ ಹೆಚ್ಚು ಅಂಕಗಳಾಗಿವೆ. ಮಕ್ಕಳ ರಕ್ಷಣಾ ಪರೀಕ್ಷೆಯಲ್ಲಿ 49 ಅಂಕಗಳಿಗೆ 45 ಅಂಕಗಳನ್ನು ಪಡೆದಿದೆ.

ಮಹೀಂದ್ರಾ ಥಾರ್ ರೋಕ್ಸ್: ಅತ್ಯಂತ ನಿರೀಕ್ಷಿತ ಮಹೀಂದ್ರಾ ಥಾರ್ ರೋಕ್ಸ್ ಎಸ್‌ಯುವಿ ಕೂಡ 5 ಸ್ಟಾರ್ ಸುರಕ್ಷತಾ ರೇಟಿಂಗ್ ಪಡೆದುಕೊಂಡಿದೆ. ಥಾರ್ ರೋಕ್ಸ್ ವಯಸ್ಕ ಪ್ರಯಾಣಿಕರ ರಕ್ಷಣಾ ಪರೀಕ್ಷೆಯಲ್ಲಿ 32 ಅಂಕಗಳಿಗೆ 31.09 ಅಂಕಗಳನ್ನು ಮತ್ತು ಮಕ್ಕಳ ಪ್ರಯಾಣಿಕರ ರಕ್ಷಣೆ ಪರೀಕ್ಷೆಯಲ್ಲಿ 49 ಅಂಕಗಳಿಗೆ 45 ಅಂಕಗಳನ್ನು ಪಡೆದುಕೊಂಡಿದೆ.

safest-cars-2024-tata-mahindra-hyundai-citroen

ಮಹೀಂದ್ರಾ ಎಕ್ಸ್‌ಯುವಿ 400 ಇವಿ: ಈ ವರ್ಷ ಭಾರತ್ ಎನ್‌ಸಿಎಪಿ ಕ್ರ್ಯಾಶ್ ಟೆಸ್ಟ್‌ಗಳಿಗೆ ಒಳಗಾದ ಭಾರತದ ನಾಲ್ಕನೇ ಎಲೆಕ್ಟ್ರಿಕ್ ಕಾರು ಇದಾಗಿದೆ. ಈ ಎಲೆಕ್ಟ್ರಿಕ್ ಕಾರು ವಯಸ್ಕ ಪ್ರಯಾಣಿಕರ ರಕ್ಷಣೆ ಪರೀಕ್ಷೆಯಲ್ಲಿ 32 ಅಂಕಗಳಿಗೆ 30.38 ಅಂಕಗಳು ಮತ್ತು ಮಕ್ಕಳ ಪ್ರಯಾಣಿಕರ ರಕ್ಷಣೆ ಪರೀಕ್ಷೆಯಲ್ಲಿ 49 ಅಂಕಗಳಿಗೆ 43 ಅಂಕಗಳೊಂದಿಗೆ 5 ಸ್ಟಾರ್ ಸುರಕ್ಷತಾ ರೇಟಿಂಗ್ ಪಡೆದಿದೆ.

ಮಹೀಂದ್ರಾ ಎಕ್ಸ್‌ಯುವಿ 3 ಎಕ್ಸ್‌ಒ: ಈ ವರ್ಷ ಭಾರತದಲ್ಲಿ ಬಿಡುಗಡೆಯಾದ ಇತ್ತೀಚಿನ ಸಬ್-ಕಾಂಪ್ಯಾಕ್ಟ್ ಎಸ್‌ಯುವಿ ಮಹೀಂದ್ರಾ ಎಕ್ಸ್‌ಯುವಿ 3 ಎಕ್ಸ್‌ಒ ಸಹ 5 ಸ್ಟಾರ್ ಸುರಕ್ಷತಾ ರೇಟಿಂಗ್ ಪಡೆದಿದೆ. ವಯಸ್ಕ ಪ್ರಯಾಣಿಕರ ರಕ್ಷಣೆಯಲ್ಲಿ 32 ಅಂಕಗಳಿಗೆ 29.36 ಅಂಕಗಳನ್ನು ಮತ್ತು ಮಕ್ಕಳ ರಕ್ಷಣೆಯಲ್ಲಿ 49 ಅಂಕಗಳಿಗೆ 43 ಅಂಕಗಳನ್ನು ಪಡೆದುಕೊಂಡಿದೆ.

ಹ್ಯುಂಡೈ ಟಕ್ಸನ್: ಹ್ಯುಂಡೈ ಟಕ್ಸನ್ ಎಸ್‌ಯುವಿ ಕೂಡ 5 ಸ್ಟಾರ್ ಸುರಕ್ಷತಾ ರೇಟಿಂಗ್ ಪಡೆದಿದ್ದು, ಭಾರತ್ ಎನ್‌ಸಿಎಪಿಯಲ್ಲಿ 5 ಸ್ಟಾರ್ ಪಡೆದ ಮೊದಲ ಹ್ಯುಂಡೈ ಕಾರು ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಇದು ವಯಸ್ಕ ಪ್ರಯಾಣಿಕರ ರಕ್ಷಣೆಲ್ಲಿ 32 ಅಂಕಗಳಿಗೆ 30.84 ಅಂಕಗಳು ಮತ್ತು ಮಕ್ಕಳ ರಕ್ಷಣೆಯಲ್ಲಿ 49 ಅಂಕಗಳಲ್ಲಿ 41 ಅಂಕಗಳನ್ನು ಗಳಿಸಿದೆ.

ಸಿಟ್ರನ್ ಬಸಾಲ್ಟ್: ಸಿಟ್ರನ್ ಬಸಾಲ್ಟ್ ಎಸ್‌ಯುವಿ ಐದು ಸ್ಟಾರ್ ಸುರಕ್ಷತಾ ರೇಟಿಂಗ್ ಪಡೆಯಲಿಲ್ಲ. ಸ್ಟ್ಯಾಂಡರ್ಡ್ ಆಗಿ ಆರು ಏರ್ ಬ್ಯಾಗ್‌ಗಳು, ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಪ್ರೋಗ್ರಾಂ (ಇಎಸ್ ಪಿ) ನಂತಹ ಸುರಕ್ಷತಾ ವೈಶಿಷ್ಟ್ಯಗಳ ಹೊರತಾಗಿಯೂ, ವಯಸ್ಕ ರಕ್ಷಣೆಯಲ್ಲಿ 32 ಅಂಕಗಳಲ್ಲಿ 26.19 ಅಂಕಳು ಮತ್ತು ಮಕ್ಕಳ ರಕ್ಷಣೆಯಲ್ಲಿ 49 ಅಂಕಗಳಿಗೆ 35.90 ಅಂಗಳನ್ನು ಗಳಿಸಿದೆ.

More from DriveSpark

Article Published On: Tuesday, December 31, 2024, 10:00 [IST]
English summary
Safest cars 2024 tata mahindra hyundai citroen
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+