Safest cars in india: ಭಾರತದಲ್ಲಿ ಭಾರೀ ಮಾರಾಟ ಕಾಣುವ ಗರಿಷ್ಟ ಸುರಕ್ಷತೆಯ ಕಾರುಗಳಿವು!

Safest cars in india: ಭಾರತದಲ್ಲಿ ಸಾರ್ವಜನಿಕರು ಇತ್ತೀಚೆಗೆ ಸುರಕ್ಷತೆಗೆ ಹೆಚ್ಚಿನ ಪ್ರಾಮುಖ್ಯತೆ ಕೊಟ್ಟು ಕಾರುಗಳನ್ನು ಖರೀದಿಸುತ್ತಿದ್ದಾರೆ. ಕಾರು ತಯಾರಕರು ಕೂಡ ಪೈಪೋಟಿಯ ಮೇಲೆ ಗುಣಮಟ್ಟದ ಕಾರುಗಳನ್ನು ಬಿಡುಗಡೆ ಮಾಡುತ್ತಿದ್ದಾರೆ. ಸುರಕ್ಷಿತ ಕಾರುಗಳನ್ನು ನೀಡುವಲ್ಲಿ ಹಿಂದುಳಿದಿದ್ದ ಮಾರುತಿ ಸುಜುಕಿ ಕೂಡ ಈಗ ಅತ್ಯಂತ ಸುರಕ್ಷಿತ ಕಾರುಗಳನ್ನು ನೀಡಲು ನಿರ್ಧರಿಸಿದೆ. ಇತ್ತೀಚೆಗೆ ಬಿಡುಗಡೆಯಾದ ಮಾರುತಿ ಡಿಜೈರ್ ಗರಿಷ್ಟ 5-ಸ್ಟಾರ್ ಸೇಫ್ಟಿ ರೇಟಿಂಗ್ ಪಡೆದುಕೊಂಡು ಎಲ್ಲರನ್ನು ಅಚ್ಚರಿಗೊಳಿಸಿದೆ. ಪ್ರಸ್ತುತ ಭಾರತದಲ್ಲಿ ಅತೀ ಹೆಚ್ಚು ಮಾರಾಟವಾಗುವ ಟಾಪ್-5 ಸುರಕ್ಷಿತ ಸೆಡಾನ್ ಕಾರುಗಳನ್ನು ಈ ಕೆಳಗೆ ನೋಡೋಣ.

ಸ್ಕೋಡಾ ಸ್ಲಾವಿಯಾ: ಸ್ಕೋಡಾ ಸ್ಲಾವಿಯಾ ರೂ. 10.69 ಲಕ್ಷ (ಎಕ್ಸ್‌ ಶೋರೂಂ)ರೂ. ಆರಂಭಿಕ ಬೆಲೆಯನ್ನು ಹೊಂದಿದ್ದು, ಗ್ಲೋಬಲ್ ಎನ್‌ಸಿಎಪಿ ಕ್ರ್ಯಾಶ್ ಟೆಸ್ಟ್‌ನಲ್ಲಿ 5-ಸ್ಟಾರ್ ರೇಟಿಂಗ್ ಪಡೆದುಕೊಂಡಿದೆ. 6 ಏರ್ ಬ್ಯಾಗ್‌ಗಳು, ಟೈರ್ ಪ್ರೆಶರ್ ಮಾನಿಟರಿಂಗ್ ಸಿಸ್ಟಮ್ (ಟಿಪಿಎಂಎಸ್), ಮಲ್ಟಿ-ಕೊಲಿಷನ್ ಬ್ರೇಕಿಂಗ್, ಎಲೆಕ್ಟ್ರಾನಿಕ್ ಬ್ರೇಕ್ ಫೋರ್ಸ್ ಡಿಸ್ಟ್ರಿಬ್ಯೂಷನ್ (ಇಬಿಡಿ) ನೊಂದಿಗೆ ಎಬಿಎಸ್, ಟ್ರಾಕ್ಷನ್ ಕಂಟ್ರೋಲ್, ಹಿಲ್-ಹೋಲ್ಡ್ ಕಂಟ್ರೋಲ್ ಮತ್ತು ಐಎಸ್ ಒಫಿಕ್ಸ್ ಚೈಲ್ಡ್ ಸೀಟ್ ಮೌಂಟ್‌ಗಳನ್ನು ಹೊಂದಿದೆ.

safest-cars-in-india-maruti-skoda-hyundai-tata

ಮಾರುತಿ ಸುಜುಕಿ ಡಿಜೈರ್: ಮಾರುತಿ ಸುಜುಕಿ ಡಿಜೈರ್ ಭಾರತದಲ್ಲಿ 6.79 ಲಕ್ಷ ರೂ.ಗಳ (ಎಕ್ಸ್ ಶೋರೂಂ) ಆರಂಭಿಕ ಬೆಲೆಯಲ್ಲಿ ಖರೀದಿಗೆ ಲಭ್ಯವಿದೆ. ಇದು ಕೂಡ ಗ್ಲೋಬಲ್ ಎನ್‌ಸಿಎಪಿ ಕ್ರ್ಯಾಶ್ ಟೆಸ್ಟ್‌ನಲ್ಲಿ 5-ಸ್ಟಾರ್ ರೇಟಿಂಗ್ ಪಡೆದುಕೊಂಡಿದೆ. ಜಿಎನ್‌ಸಿಎಪಿಯಲ್ಲಿ ಪೂರ್ಣ ರೇಟಿಂಗ್ ಪಡೆದ ಮೊದಲ ಮಾರುತಿ ಸುಜುಕಿ ಕಾರು ಇದಾಗಿದೆ. ಹೊಸ ಡಿಜೈರ್ ವಯಸ್ಕರ ಸುರಕ್ಷತೆಯಲ್ಲಿ ಐದು ಸ್ಟಾರ್ ಮತ್ತು ಮಕ್ಕಳ ಸುರಕ್ಷತೆಯಲ್ಲಿ ನಾಲ್ಕು ಸ್ಟಾರ್‌ಗಳನ್ನು ಪಡೆದಿದೆ.

ಡಿಜೈರ್‌ನಲ್ಲಿ ಸುರಕ್ಷತೆಗಾಗಿ ಆರು ಏರ್‌ಬ್ಯಾಗ್‌ಗಳು, ಎಬಿಎಸ್ ವಿತ್ ಇಬಿಡಿ, ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಪ್ರೋಗ್ರಾಂ (ಇಎಸ್ಪಿ), ಹಿಲ್ ಹೋಲ್ಡ್ ಅಸಿಸ್ಟ್ (ಎಚ್ಎಚ್ಎ), ಎಲ್ಲಾ ಪ್ರಯಾಣಿಕರಿಗೆ 3-ಪಾಯಿಂಟ್ ಸೀಟ್ ಬೆಲ್ಟ್‌ಗಳು, ಸ್ಪೀಡ್ ಸೆನ್ಸಿಂಗ್ ಆಟೋ ಡೋರ್ ಲಾಕಿಂಗ್, ರಿವರ್ಸ್ ಪಾರ್ಕಿಂಗ್ ಸೆನ್ಸಾರ್‌ಗಳು, ಐಎಸ್ಒಫಿಕ್ಸ್ ಚೈಲ್ಡ್ ಸೀಟ್ ಆಂಕೋರೇಜ್‌ಗಳು ಮತ್ತು ಹೈಸ್ಪೀಡ್ ವಾರ್ನಿಂಗ್ ಅಲರ್ಟ್, ಪ್ರತಿ ಪ್ರಯಾಣಿಕರಿಗೆ ಸೀಟ್ ಬೆಲ್ಟ್ ರಿಮೈಂಡರ್‌ನಂತಹ ಪ್ರಮಾಣಿತ ಸುರಕ್ಷತಾ ವೈಶಿಷ್ಟ್ಯಗಳಿವೆ.

safest-cars-in-india-maruti-skoda-hyundai-tata

ಹ್ಯುಂಡೈ ವರ್ನಾ: ಹೊಸ ಹ್ಯುಂಡೈ ವರ್ನಾ 11 ಲಕ್ಷ (ಎಕ್ಸ್‌ ಶೋರೂಂ)ರೂ. ಆರಂಭಿಕ ಬೆಲೆ ಹೊಂದಿದ್ದು, ಗ್ಲೋಬಲ್ ಎನ್‌ಸಿಎಪಿಯಲ್ಲಿ 5-ಸ್ಟಾರ್ ಸುರಕ್ಷತಾ ರೇಟಿಂಗ್ ಗಳಿಸಿದೆ. 5-ಸ್ಟಾರ್ ರೇಟಿಂಗ್‌ನೊಂದಿಗೆ ಭಾರತದಲ್ಲಿ ಮಾರಾಟವಾದ ಮೊದಲ ಹ್ಯುಂಡೈ ಕಾರು ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಇದರಲ್ಲಿ 6 ಏರ್‌ಬ್ಯಾಗ್‌ಗಳು, ಇಎಸ್‌ಸಿ, ಹಿಂಭಾಗದ ಐಎಸ್‌ಒಫಿಕ್ಸ್ ಮೌಂಟ್‌ಗಳು ಮತ್ತು ಎಲ್ಲಾ ಆಸನಗಳಿಗೆ ಸೀಟ್ ಬೆಲ್ಟ್ ರಿಮೈಂಡರ್‌ಗಳನ್ನು ಸ್ಟ್ಯಾಂಡರ್ಡ್ ಆಗಿ ನೀಡಲಾಗಿದೆ.

ಫೋಕ್ಸ್ ವ್ಯಾಗನ್ ವರ್ಟಸ್: ಫೋಕ್ಸ್ ವ್ಯಾಗನ್ ವರ್ಟಸ್ ಭಾರತೀಯ ಮಾರುಕಟ್ಟೆಯಲ್ಲಿ 11.56 ಲಕ್ಷ (ಎಕ್ಸ್‌ ಶೋರೂಂ)ರೂ. ಆರಂಭಿಕ ಬೆಲೆಯಲ್ಲಿ ಖರೀದಿಗೆ ಲಭ್ಯವಿದೆ. ಈ ಮಧ್ಯಮ ಗಾತ್ರದ ಸೆಡಾನ್ ಅತ್ಯುನ್ನತ 5-ಸ್ಟಾರ್ ಸುರಕ್ಷತಾ ರೇಟಿಂಗ್ ಪಡೆದುಕೊಂಡಿದೆ. ಪಾರ್ಕ್ ಡಿಸ್ಟೆನ್ಸ್ ಕಂಟ್ರೋಲ್, ಹಿಲ್ ಹೋಲ್ಡ್ ಅಸಿಸ್ಟ್, ಟೈರ್ ಪ್ರೆಶರ್, ಟ್ರಾಕ್ಷನ್ ಕಂಟ್ರೋಲ್, ಮಲ್ಟಿ-ಕೊಲಿಷನ್ ಬ್ರೇಕ್, ಐಎಸ್ಒಫಿಕ್ಸ್ ಚೈಲ್ಡ್ ಸೀಟ್ ಮೌಂಟ್‌ಗಳಂತಹ ಸುರಕ್ಷತಾ ವೈಶಿಷ್ಟ್ಯಗಳನ್ನು ಹೊಂದಿದೆ.

safest-cars-in-india-maruti-skoda-hyundai-tata

ಟಾಟಾ ಟಿಗೋರ್: ಸಬ್-ಕಾಂಪ್ಯಾಕ್ಟ್ ಸೆಡಾನ್ ಆಗಿರುವ ಟಾಟಾ ಟಿಗೋರ್ 6 ಲಕ್ಷ (ಎಕ್ಸ್‌ ಶೋರೂಂ) ರೂ. ಆರಂಭಿಕ ಬೆಲೆಯಲ್ಲಿ ಖರೀದಿಗೆ ಲಭ್ಯವಿದೆ. ಈ ಕಾರು ವಯಸ್ಕರ ರಕ್ಷಣೆಯಲ್ಲಿ ನಾಲ್ಕು ಸ್ಟಾರ್ ಮತ್ತು ಮಕ್ಕಳ ರಕ್ಷಣೆಯಲ್ಲಿ ಮೂರು ಸ್ಟಾರ್ ಸುರಕ್ಷತಾ ರೇಟಿಂಗ್ ಪಡೆದುಕೊಂಡಿದೆ. ಪರೀಕ್ಷೆಯನ್ನು 2020 ರಲ್ಲಿ ಮಾಡಲಾಗಿದ್ದು, ಸೆಡಾನ್ ಕೇವಲ ಎರಡು ಏರ್‌ಬ್ಯಾಗ್‌ಗಳನ್ನು ಒದಗಿಸುವ ಮೂಲಕ ಈ ಅಂಕಗಳನ್ನು ಸಾಧಿಸಿರುವುದು ವಿಶೇಷ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊ ಗಳನ್ನು ಪಡೆಯಲು ನಮ್ಮ ಫೇಸ್‌ ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

Article Published On: Friday, November 22, 2024, 10:00 [IST]
English summary
Safest cars in india maruti skoda hyundai tata
Read more on auto news india
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+