ಕೇಂದ್ರ ಸಚಿವ ನಿತಿನ್ ಗಡ್ಕರಿ ಕೊಟ್ರು ಗುಡ್‌ನ್ಯೂಸ್‌: ಹೊಸ ಕಾರುಗಳಿಗೆ ಭರ್ಜರಿ ರಿಯಾಯಿತಿ.. ಏನಿದು?

ಕೇಂದ್ರ ಭೂ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ (Nitin Gadkari) ಅವರು ಸಿಹಿಸುದ್ದಿಯೊಂದನ್ನು ನೀಡಿದ್ದಾರೆ. ಹಳೆಯ ವಾಹನ ಗುಜರಿಗೆ (Scrap) ಹಾಕಿ, ಹೊಸ ವಾಹನವನ್ನು ಖರೀದಿಸುವ ಗ್ರಾಹಕರಿಗೆ ಶೇಕಡ 1.5 ರಿಂದ 3% ರಿಯಾಯಿತಿ (Discount) ನೀಡಲು ಪ್ರಮುಖ ವಾಣಿಜ್ಯ (Commercial) ಮತ್ತು ಪ್ರಯಾಣಿಕ (Passenger) ವಾಹನ ತಯಾರಕ ಕಂಪನಿಗಳು ಒಪ್ಪಿಕೊಂಡಿವೆ ಎಂದು ತಿಳಿಸಿದ್ದಾರೆ. ಈ ರಿಯಾಯಿತಿ ಪ್ರಯೋಜನದಿಂದ ಮುಂಬರಲಿರುವ ಹಬ್ಬದ ಋತುವಿನಲ್ಲಿ ವಾಹನ ಮಾರಾಟ ಪ್ರಮಾಣ ಹೆಚ್ಚಳವಾಗಲಿದೆ. ಜೊತೆಗೆ ಕೇಂದ್ರ ಸರ್ಕಾರದ ಗುಜರಿ ನೀತಿಗೂ (Scrappage Policy) ಉತ್ತೇಜನ ದೊರೆಯುವ ನಿರೀಕ್ಷೆಯಿದೆ.

ಮಂಗಳವಾರ, ಸೊಸೈಟಿ ಆಫ್ ಇಂಡಿಯನ್ ಆಟೋಮೊಬೈಲ್ ಮ್ಯಾನುಫ್ಯಾಕ್ಚರರ್ಸ್ ಸಂಸ್ಥೆಯ ಪ್ರತಿನಿಧಿಗಳೊಂದಿಗೆ ಆಟೋಮೊಬೈಲ್ ಉದ್ಯಮಕ್ಕೆ ಸಂಬಂಧಿಸಿದ ಸಮಸ್ಯೆಗಳ ಕುರಿತಂತೆ ಚರ್ಚಿಸಲು ಸಚಿವರು ವಿಸ್ತೃತ ಸಭೆ ನಡೆಸಿದ್ದರು. ಈ ವೇಳೆ, ಹಲವು ವಾಣಿಜ್ಯ ಮತ್ತು ಪ್ರಯಾಣಿಕ ವಾಹನ ತಯಾರಕ ಕಂಪನಿಗಳು ಗುಜರಿಗೆ ಹಾಕಿರುವ ದಾಖಲೆ ಪತ್ರ (Scrappage Certificate) ತೋರಿಸಿದವರಿಗೆ ಸೀಮಿತ ಅವಧಿಗೆ ರಿಯಾಯಿತಿ ನೀಡಲು ಸಿದ್ಧರಿರುವುದಾಗಿ ಹೇಳಿದ್ದಾರೆ ಎಂದು ರಸ್ತೆ ಸಾರಿಗೆ ಸಚಿವಾಲಯ ತಿಳಿಸಿದೆ.

Scrapping Old Vehicles Buy New Vehicles Get Big Discount Nitin Gadkari Said

ವಾಣಿಜ್ಯ ವಾಹನ ತಯಾರಕರು (Commercial Vehicle Manufacturers) 2 ವರ್ಷ ಹಾಗೂ ಪ್ರಯಾಣಿಕ ವಾಹನ ತಯಾರಕರು (Passenger Vehicle Manufacturers) 1 ವರ್ಷದ ಸೀಮಿತ ಅವಧಿಗೆ ರಿಯಾಯಿತಿ ಕೊಡಲು ತಯಾರಿವೆ ಎಂದು ರಸ್ತೆ ಸಾರಿಗೆ ಸಚಿವಾಲಯ ಹೇಳಿದೆ. ಈಗಾಗಲೇ ಮರ್ಸಿಡಿಸ್ ಬೆಂಜ್ ರೂ.25,000 ರೂಪಾಯಿ ರಿಯಾಯಿತಿ ನೀಡಲು ಒಪ್ಪಿದೆ ಎಂದು ವರದಿಯಾಗಿದೆ.

ಶೀಘ್ರದಲ್ಲೇ ಗುಜರಿಗೆ ಹಾಕಿರುವ ದಾಖಲೆ ಪತ್ರ ತೋರಿಸಿದವರಿಗೆ, ಪ್ರಯಾಣಿಕ ವಾಹನ ತಯಾರಕ ಕಂಪನಿಗಳಾದ ಮಾರುತಿ ಸುಜುಕಿ, ಟಾಟಾ, ಮಹೀಂದ್ರಾ ಹ್ಯುಂಡೈ, ಕಿಯಾ, ಟೊಯೊಟಾ ಹಾಗೂ ಹೋಂಡಾಗಳು ಹೊಸ ಕಾರಿನ ಎಕ್ಸ್ ಶೋರೂಂ ಮೇಲೆ 1.5% ರಿಯಾಯಿತಿ ನೀಡಲಿವೆ ಎಂದು ತಿಳಿದುಬಂದಿದೆ. ಉದಾಹರಣೆಗೆ ನೂತನ ಕಾರು 6 ಲಕ್ಷ ಎಕ್ಸ್ ಶೋರೂಂ ದರವನ್ನು ಹೊಂದಿದ್ದರೆ, ರೂ.9,000 ರಿಯಾಯಿತಿ ಲಭ್ಯವಾಗಲಿದೆ.

Scrapping Old Vehicles Buy New Vehicles Get Big Discount Nitin Gadkari Said

ಅದೇ ರೀತಿಯಲ್ಲಿ ವಾಣಿಜ್ಯ ವಾಹನ ತಯಾರಕರಾದ ಟಾಟಾ ಮೋಟಾರ್ಸ್, ವೋಲ್ವೋ ಐಷರ್ ಕಮರ್ಷಿಯಲ್ ವೆಹಿಕಲ್ಸ್, ಅಶೋಕ್ ಲೇಲ್ಯಾಂಡ್, ಫೋರ್ಸ್ ಮೋಟಾರ್ಸ್ ಮತ್ತು ಮಹೀಂದ್ರಾಗಳು, ಕಾರ್ಗೋ (ಸರಕು ಸಾಗಾಣಿಕೆ) ವಾಹನಗಳ ಎಕ್ಸ್ ಶೋರೂಂ ಮೇಲೆ 3% ರಿಯಾಯಿತಿ ಕೊಡಲು ಅಣಿಯಾಗುತ್ತಿವೆ ಎಂದು ಗೊತ್ತಾಗಿದೆ. ಇದರಿಂದ ಸಾಮಾನ್ಯ ವರ್ಗದ ಜನರಿಗೆ ಹೆಚ್ಚಿನ ಅನುಕೂಲವಾಗಲಿದೆ.

2022ರಲ್ಲಿ ಕೇಂದ್ರ ಭೂ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯ, ಹಳೆಯ ವಾಹನಗಳನ್ನು ಗುಜರಿಗೆ ಹಾಕಿ ಹೊಸ ವಾಹನಗಳನ್ನು ತೆಗೆದುಕೊಳ್ಳುವವರಿಗೆ ಶೇಕಡ 5% ರಿಯಾಯಿತಿ ನೀಡುವಂತೆ ಆಟೋಮೊಬೈಲ್ ಒಕ್ಕೂಟಗಳಿಗೆ ಸಲಹೆ ನೀಡಿತ್ತು. ಆದಾಗ್ಯೂ, ನಾನಾ ಕಾರಣಗಳಿಗೆ ಯಾವುದೇ ವಾಹನ ತಯಾರಕ ಕಂಪನಿಗಳು ಸಹ ಈ ಮಟ್ಟದಲ್ಲಿ ರಿಯಾಯಿತಿ ನೀಡಲು ಆಸಕ್ತಿ ತೋರಿಸಿರಲಿಲ್ಲ.

ಸದ್ಯ ನೋಂದಾಯಿತ ಗುಜರಿ ಕೇಂದ್ರಗಳಲ್ಲಿ (Registered Scrapping Centers) ಸುಮಾರು 1.2 ಲಕ್ಷ ವಾಹನಗಳನ್ನು ಗುಜರಿಗೆ ಹಾಕಲಾಗಿದೆ. ಇವುಗಳಲ್ಲಿ 15 ವರ್ಷಗಳಿಗಿಂತ ಹಳೆಯದಾದ 61,000 ಸರ್ಕಾರಿ ವಾಹನಗಳು ಸೇರಿವೆ. 2025ರ ಮಾರ್ಚ್‌ ವೇಳೆಗೆ 90,000 ಹಳೆಯ ಸರ್ಕಾರಿ ವಾಹನಗಳನ್ನು ಗುಜರಿಗೆ ಹಾಕಲು ಉದ್ದೇಶಿಸಲಾಗಿದೆ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

Article Published On: Wednesday, August 28, 2024, 12:24 [IST]
English summary
Scrapping old vehicles buy new vehicles get big discount nitin gadkari said
Read more on auto news india
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+