ಸೆಕೆಂಡ್ ಹ್ಯಾಂಡ್ ಕಾರುಗಳಿಗೂ ಸಾಲ ಕೊಡ್ತಾರೆ: 30 Km ಮೈಲೇಜ್.. ಕಮ್ಮಿ ಬೆಲೆಗೆ ಸಿಗುವ ಯೂಸ್ಡ್ ಕಾರುಗಳಿವು!
ಯಾವುದೇ ವ್ಯಕ್ತಿಯಾಗಲಿ ಜೀವನದಲ್ಲಿ ಹೊಸ ಕಾರು ಖರೀದಿ ಮಾಡಬೇಕು ಎಂಬ ಬಹುದೊಡ್ಡ ಆಸೆಯನ್ನು ಹೊಂದಿರುತ್ತಾರೆ. ಆದರೆ, ಹಲವರಿಗೆ ನೂತನ ಕಾರು ಕೊಂಡುಕೊಳ್ಳಲು ಸಾಧ್ಯವಾಗುವುದಿಲ್ಲ. ಆಗ ಸೆಕೆಂಡ್ ಹ್ಯಾಂಡ್ ಕಾರನ್ನು ತೆಗೆದುಕೊಳ್ಳೋಣ ಎಂದು ಆಲೋಚಿಸುತ್ತಾರೆ. ಆ ರೀತಿಯ ಸಂದರ್ಭದಲ್ಲೂ ಹಣ ಹೊಂದಿಸಲು ಪರದಾಡುತ್ತಾರೆ. ಕೆಲವು ಬ್ಯಾಂಕ್ ಹಾಗೂ ಹಣಕಾಸು ಸಂಸ್ಥೆಗಳು ಸೆಕೆಂಡ್ ಹ್ಯಾಂಡ್ ಕಾರುಗಳಿಗೂ (Second Hand Cars) ಸಾಲ ಸೌಲಭ್ಯ ಒದಗಿಸುತ್ತವೆ. ನಾವಿಲ್ಲಿ ಅಂತಹ ಸಂಸ್ಥೆಗಳು ಹಾಗೂ ಯಾವ ಯೂಸ್ಡ್ ಕಾರು ಬಳಕೆಗೆ ಹೆಚ್ಚು ಉತ್ತಮ ಎಂಬುದರ ಬಗ್ಗೆ ಸಂಕ್ಷಿಪ್ತವಾಗಿ ತಿಳಿಸಿಕೊಟ್ಟದ್ದೇವೆ.
ಸದ್ಯ ಸೆಕೆಂಡ್ ಹ್ಯಾಂಡ್ ಕಾರುಗಳಿಗೆ ಟಾಟಾ ಕ್ಯಾಪಿಟಲ್, ಆಕ್ಸಿಸ್ ಬ್ಯಾಂಕ್, ಮಹೀಂದ್ರಾ ಫೈನಾನ್ಸ್, ಹೆಚ್‌ಡಿಎಫ್‌ಸಿ ಬ್ಯಾಂಕ್, ಬಜಾಜ್ ಫಿನ್‌ಸರ್ವ್, ಕೋಟಕ್ ಮಹೀಂದ್ರಾ ಬ್ಯಾಂಕ್, ಕರೂರ್ ವೈಶ್ಯ ಬ್ಯಾಂಕ್, ಫೆಡರಲ್ ಬ್ಯಾಂಕ್, ಪಂಜಾಬ್ ನ್ಯಾಷನಲ್ ಬ್ಯಾಂಕ್ ಮತ್ತು ಐಸಿಐಸಿಐ ಬ್ಯಾಂಕ್ ಒಳಗೊಂಡಂತೆ ವಿವಿಧ ಹಣಕಾಸು ಸಂಸ್ಥೆಗಳು ಸಾಲವನ್ನು ನೀಡುತ್ತೇವೆ.

ಯಾವುದೇ ಕಾರು ದಿನದಿಂದ ದಿನಕ್ಕೆ ತನ್ನ ಮೌಲ್ಯವನ್ನು ಕಳೆದುಕೊಳ್ಳುತ್ತದೆ. ಕೆಲವೊಮ್ಮೆ ಸಾಲ ಮಾಡಿ ಹೊಸ ಕಾರು ಖರೀದಿಸಿ, ಅದನ್ನು ಮರುಪಾವತಿ ಮಾಡಲು ಕೆಲವು ಗ್ರಾಹಕರು ವಿಫಲರಾಗುತ್ತಾರೆ. ಆ ವೇಳೆ, ಸಂಬಂಧಪಟ್ಟ ಹಣಕಾಸು ಸಂಸ್ಥೆ ಆ ಕಾರನ್ನು ತನ್ನ ವಶಕ್ಕೆ ಪಡೆದುಕೊಂಡು ಹರಾಜು ಹಾಕಿ ಸಾಲದ ಹಣವನ್ನು ಕಟ್ಟಿಸಿಕೊಳ್ಳಲಾಗುತ್ತದೆ.
ಆದರೆ, ಹಳೆಯ ಕಾರುಗಳ ವಿಚಾರದಲ್ಲಿ ಹಾಗೇ ಮಾಡಲು ಸಾಧ್ಯವಾಗುವುದಿಲ್ಲ. ಆ ಕಾರಣಕ್ಕೆ ಹಲವು ಹಣಕಾಸು ಸಂಸ್ಥೆಗಳು ಗರಿಷ್ಠ ಪ್ರಮಾಣದಲ್ಲಿ ಸಾಲವನ್ನು ನೀಡುವುದಿಲ್ಲ. ಬದಲಾಗಿ ಶೇಕಡ 70% ವರೆಗೆ ಮಾತ್ರ ಸಾಲ ಕೊಡುತ್ತವೆ. ಅದಕ್ಕೂ ಹೆಚ್ಚಿನ ಬಡ್ಡಿ ಹಾಕಲಾಗುತ್ತದೆ. ಈ ಸಾಲ ಸೌಲಭ್ಯಗಳನ್ನು ನಿರ್ದಿಷ್ಟ ಮಾನದಂಡಗಳ ಅನ್ವಯ ಎಲ್ಲ ದಾಖಲಾತಿಗಳನ್ನು ಪರಿಶೀಲಿಸಿದ ಬಳಿಕವೇ ಒದಗಿಸಲಾಗುತ್ತದೆ

ಈ ಸೆಕೆಂಡ್ ಹ್ಯಾಂಡ್ ಕಾರುಗಳಿಗೆ ಭಾರೀ ಬೇಡಿಕೆ: ಮಾರುತಿ ಸುಜುಕಿ ಸ್ವಿಫ್ಟ್, ವ್ಯಾಗನ್ ಆರ್ ಮತ್ತು ಟಾಟಾ ನೆಕ್ಸಾನ್ ಕಾರುಗಳನ್ನು ಹೆಚ್ಚಿನ ಸಂಖ್ಯೆಯ ಗ್ರಾಹಕರು ಇಷ್ಟಪಟ್ಟು ಖರೀದಿ ಮಾಡುತ್ತಾರೆ. ಅದರಲ್ಲೂ ಸೆಕೆಂಡ್ ಹ್ಯಾಂಡ್ ಕಾರು ಮಾರುಕಟ್ಟೆಯಲ್ಲಿ ಫುಲ್ ಡಿಮ್ಯಾಂಡ್ ಹೊಂದಿವೆ. ಇವುಗಳನ್ನು ಹೊಸದಾಗಿ ಖರೀದಿ ಮಾಡುವಾಗಲೇ ಕೈಗೆಟುಕುವ ಬೆಲೆಯಲ್ಲಿ ಸಿಗುತ್ತವೆ. ಇನ್ನೂ ಸೆಕೆಂಡ್ ಹ್ಯಾಂಡ್ ಆಗಿ ತೆಗೆದುಕೊಂಡರೆ, ಮತ್ತಷ್ಟು ಅಗ್ಗದ ದರಕ್ಕೆ ಲಭ್ಯವಾಗುತ್ತವೆ.
ನೂತನ ಮಾರುತಿ ಸುಜುಕಿ ಸ್ವಿಫ್ಟ್ (Maruti Suzuki Swift) ಹ್ಯಾಚ್‌ಬ್ಯಾಕ್ ಬಗ್ಗೆ ಹೇಳುವುದಾದರೆ, ಇದು ರೂ.6.49 ಲಕ್ಷದಿಂದ ರೂ.9.60 ಲಕ್ಷ ಎಕ್ಸ್ ಶೋರೂಂ ಬೆಲೆಯನ್ನು ಹೊಂದಿದೆ. ಪೆಟ್ರೋಲ್ ಹಾಗೂ ಸಿಎನ್‌ಜಿ ಎಂಜಿನ್ ಆಯ್ಕೆಯನ್ನು ಪಡೆದಿದೆ. 24.80 ರಿಂದ 32.85 ಕೆಎಂಪಿಎಲ್‌ವರೆಗೆ ಮೈಲೇಜ್ ನೀಡುತ್ತದೆ. ಇದರಲ್ಲಿ 5 ಜನರು ಸುಲಭವಾಗಿ ಓಡಾಟ ನಡೆಸಬಹುದು.

ಹೊಸ ಮಾರುತಿ ಸುಜುಕಿ ವ್ಯಾಗನ್ಆರ್ (Maruti Suzuki Wagon R) ಜನಪ್ರಿಯ ಹ್ಯಾಚ್‌ಬ್ಯಾಕ್ ಆಗಿದೆ. ಈ ಕಾರು, ರೂ.5.54 ಲಕ್ಷದಿಂದ ರೂ.7 ಲಕ್ಷ ಎಕ್ಸ್ ಶೋರೂಂ ದರದಲ್ಲಿ ಸಿಗುತ್ತದೆ. ಪೆಟ್ರೋಲ್ ಮತ್ತು ಸಿಎನ್‌ಜಿ ಎಂಜಿನ್ ಒಳಗೊಂಡಿದ್ದು, 24.35 ರಿಂದ 33.48 ಕೆಎಂಪಿಎಲ್‌ವರೆಗೆ ಮೈಲೇಜ್ ಕೊಡುತ್ತದೆ. ಟಚ್‌ಸ್ಕ್ರೀನ್ ಇನ್ಫೋಟೈನ್ಮೆಂಟ್ ಡಿಸ್‌ಪ್ಲೇ ಸೇರಿದಂತೆ ವಿವಿಧ ವೈಶಿಷ್ಟ್ಯಗಳನ್ನು ಒಳಗೊಂಡಿದೆ.
ನೂತನ ಟಾಟಾ ನೆಕ್ಸಾನ್ (Tata Nexon) ಎಸ್‌ಯುವಿಗೂ ಉತ್ತಮವಾದ ಬೇಡಿಕೆಯಿದೆ. ಇದು ರೂ.8 ಲಕ್ಷದಿಂದ ರೂ.15.60 ಲಕ್ಷ ಎಕ್ಸ್ ಶೋರೂಂ ಬೆಲೆಯಲ್ಲಿ ಖರೀದಿಗೆ ದೊರೆಯುತ್ತದೆ. ಪೆಟ್ರೋಲ್ & ಸಿಎನ್‌ಜಿ ಎಂಜಿನ್‌ನ್ನು ಹೊಂದಿದ್ದು, 17.18 ರಿಂದ 24.08 ಕೆಎಂಪಿಎಲ್‌ವರೆಗೆ ಮೈಲೇಜ್ ನೀಡುತ್ತದೆ. ಇದರಲ್ಲಿಯೂ 5 ಮಂದಿ ಪ್ರಯಾಣಿಸಬಹುದು.
ನಿಮ್ಮ ಗಮನಕ್ಕೆ.. ಸೆಕೆಂಡ್ ಹ್ಯಾಂಡ್ ಕಾರು ಖರೀದಿ ಮಾಡಬೇಕು ಅಂದುಕೊಂಡಿದ್ದರೆ, ಅದರ ದಾಖಲೆಗಳು, ಇನ್ಸೂರೆನ್ಸ್ & ಡೆಂಟ್ ಆಗಿರುವುದು ಒಳಗೊಂಡಂತೆ ವಿವಿಧ ಅಂಶಗಳನ್ನು ನುರಿತವರ ಮಾರ್ಗದರ್ಶನದಲ್ಲಿ ಪರಿಶೀಲನೆ ಮಾಡಬೇಕು.


Click it and Unblock the Notifications