Skoda: ಸ್ಕೋಡಾ ಗ್ರಾಹಕರಿಗೆ ಸಡನ್ ಶಾಕ್ ಕೊಟ್ಟ ಕಂಪನಿ: ಹೊಸ ವರ್ಷಕ್ಕೆ ಕಹಿ ಸುದ್ದಿ... ಏನದು?

ಭಾರತದಲ್ಲಿ ಆಟೋ ಉದ್ಯಮವು ವೇಗವಾಗಿ ಬೆಳೆಯುತ್ತಿದ್ದು, ಅಗ್ಗದ ಬೆಲೆಗೆ ಅತ್ಯುತ್ತಮ ಕಾರುಗಳನ್ನು ನೀಡುವ ಮೂಲಕ ಬ್ರಾಂಡ್‌ಗಳು ದೇಶೀಯ ಮಾರಾಟದಲ್ಲಿ ಉತ್ತಮ ಲಾಭ ಗಳಿಸುತ್ತಿವೆ. ಆದರೆ ಮತ್ತೊಂದೆಡೆ ಹೆಚ್ಚುತ್ತಿರುವ ಇನ್‌ಪುಟ್ ಮತ್ತು ಕಾರ್ಯಾಚರಣೆಯ ವೆಚ್ಚಗಳಿಂದ ಬಹುತೇಕ ಕಂಪನಿಗಳು 2025 ರ ಜನವರಿಯಿಂದ ತಮ್ಮ ವಾಹನಗಳ ಬೆಲೆ ಏರಿಕೆಯನ್ನು ಘೋಷಿಸಿವೆ. ಇದೀಗ ಈ ಸಾಲಿಗೆ ಸ್ಕೋಡಾ (Skoda) ಕೂಡ ಎಂಟ್ರಿಕೊಟ್ಟಿದೆ. ತನ್ನ ವಾಹನ ಶ್ರೇಣಿಯಾದ್ಯಂತ ಬೆಲೆ ಏರಿಕೆ ಮಾಡುವುದಾಗಿ ಘೋಷಿಸಿದ್ದು, ಮುಂದಿನ ತಿಂಗಳಿನಿಂದ ಬೆಲೆ ಏರಿಕೆ ಆಗಲಿದೆ ಎಂದು ತಿಳಿಸಿದೆ.

ಸ್ಕೋಡಾ ಆಟೋ ಇಂಡಿಯಾ ತನ್ನ ವಾಹನಗಳ ಶ್ರೇಣಿಯಾದ್ಯಂತ ಶೇ3 ವರೆಗೆ ಬೆಲೆ ಏರಿಕೆಯನ್ನು ಘೋಷಿಸಿದೆ. ಇದು ಜನವರಿ 1, 2025 ರಿಂದ ಜಾರಿಗೆ ಬರಲಿದೆ. ಬೆಲೆ ಹೆಚ್ಚಳವು ಬ್ರಾಂಡ್‌ನ ಪ್ರಮುಖ ಮಾದರಿಗಳಾದ ಕುಶಾಕ್ (Kushak), ಸ್ಲಾವಿಯಾ (Slavia), ಸುಪರ್ಬ್ (Superb‍) ಮತ್ತು ಕೊಡಿಯಾಕ್ (Kodiak) ಸೇರಿದಂತೆ ಸ್ಕೋಡಾ ಆಟೋ ಇಂಡಿಯಾದ ಸಂಪೂರ್ಣ ಪೋರ್ಟ್‌ಫೋಲಿಯೊಗೆ ಅನ್ವಯಿಸುತ್ತದೆ.

skoda-auto-india-to-hike-prices-up-to-3-percent-in-2025

ಕೈಲಾಕ್‌ಗೆ ಇಲ್ಲ: ಇತ್ತೀಚೆಗೆ ಬಿಡುಗಡೆಯಾದ ಕೈಲಾಕ್ 33,333 ಬುಕಿಂಗ್‌ಗಳ ಮೈಲಿಗಲ್ಲನ್ನು ತಲುಪುವವರೆಗೆ ಈ ಬೆಲೆ ಏರಿಕೆ ಅನ್ವಯಿಸುವುದಿಲ್ಲ. ಹೊಸ ಸ್ಕೋಡಾ ಕೈಲಾಕ್‌ಗೆ ಬುಕಿಂಗ್‌ಗಳು ವೇಗವಾಗಿ ಭರ್ತಿಯಾಗುತ್ತಿದ್ದು, ಗ್ರಾಹಕರಿಗೆ ಅದರ ಪರಿಚಯಾತ್ಮಕ ಬೆಲೆಯಲ್ಲಿ ಹೆಚ್ಚು ನಿರೀಕ್ಷಿತ SUV ಅನ್ನು ಹೊಂದಲು ವಿಸ್ತೃತ ಅವಕಾಶವನ್ನು ಒದಗಿಸುತ್ತಿರುವುದಾಗಿ ಸ್ಕೋಡಾ ಇಂಡಿಯಾ ತಿಳಿಸಿದೆ.

ಒಮ್ಮೆ ಹೊಸ ಸ್ಕೋಡಾ ಕೈಲಾಕ್‌ಗೆ 33,333 ಬುಕಿಂಗ್‌ಗಳು ಪೂರ್ತಿಯಾದ ಬಳಿಕ ಈ ಎಸ್‌ಯುವಿಗೂ ಬೆಲೆ ಹೆಚ್ಚಳ ಅನ್ವಯಿಸುತ್ತದೆ. ಹೆಚ್ಚುತ್ತಿರುವ ಇನ್‌ಪುಟ್ ಮತ್ತು ಕಾರ್ಯಾಚರಣೆಯ ವೆಚ್ಚಗಳಿಂದ ಈ ಹೊಂದಾಣಿಕೆಯು ಅಗತ್ಯವಾಗಿದೆ, ಕಂಪನಿಯು ತನ್ನ ಗ್ರಾಹಕರಿಗೆ ಉತ್ತಮ ಗುಣಮಟ್ಟದ, ಪ್ರೀಮಿಯಂ ವಾಹನಗಳು ಮತ್ತು ಸೇವೆಗಳನ್ನು ತಲುಪಿಸುವುದನ್ನು ಮುಂದುವರೆಸುವುದಾಗಿ ಹೇಳಿಕೊಂಡಿದೆ.

skoda-auto-india-to-hike-prices-up-to-3-percent-in-2025

ಹೊಸ ಸ್ಕೋಡಾ ಕೈಲಾಕ್ 10 ದಿನಗಳಲ್ಲಿ ಬರೋಬ್ಬರಿ 10,000 ಕ್ಕೂ ಹೆಚ್ಚು ಬುಕಿಂಗ್‌ಗಳನ್ನು ಗಳಿಸಿದೆ. ಸ್ಕೋಡಾ ಡಿಸೆಂಬರ್ 2 ರಂದು ಕೈಲಾಕ್ ಕಾರಿಗಾಗಿ ಬುಕಿಂಗ್ ತೆರೆದಿತ್ತು. ಕಾರು ತಯಾರಕರು ಈಗಾಗಲೇ ಮೊದಲ 33,333 ಗ್ರಾಹಕರಿಗೆ ಸೀಮಿತ ಕೊಡುಗೆಯನ್ನು ಘೋಷಿಸಿದ್ದು, ಇದರಡಿ ಗ್ರಾಹಕರು ಕಾಂಪ್ಲಿಮೆಂಟರಿಯಾಗಿ 3 ವರ್ಷಗಳ ಸ್ಟ್ಯಾಂಡರ್ಡ್ ಮೆಂಟೆನೆನ್ಸ್ ಪ್ಯಾಕೇಜ್ (ಎಸ್ಎಂಪಿ) ಪಡೆಯಲಿದ್ದಾರೆ.

ಹೊಸ ಸ್ಕೋಡಾ ಕೈಲಾಕ್ ವಿಶೇಷತೆಗಳು: ಹೊಸ ಸ್ಕೋಡಾ ಕೈಲಾಕ್ ಕಾಂಪ್ಯಾಕ್ಟ್ ಎಸ್‍ಯುವಿಯ ಆರಂಭಿಕ ಬೆಲೆಯು ರೂ.7.89 ಲಕ್ಷ (ಎಕ್ಸ್ ಶೋರೂಂ)ವಿದ್ದರೇ, ಟಾಪ್ ಎಂಡ್ ವೇರಿಯೆಂಟ್ ಬೆಲೆಯು ರೂ. 14.40 ಲಕ್ಷ (ಎಕ್ಸ್ ಶೋರೂಂ )ವಿದೆ. ಆರು ಏರ್‌ಬ್ಯಾಗ್‌ಗಳು, EBD ಜೊತೆಗೆ ABS, ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಕಂಟ್ರೋಲ್, ಎಲೆಕ್ಟ್ರಾನಿಕ್ ಡಿಫರೆನ್ಷಿಯಲ್ ಲಾಕ್ ಮತ್ತು ISOFIX ಚೈಲ್ಡ್ ಸೀಟ್ ಮೌಂಟ್‌ಗಳಂತಹ ಸೇಫ್ಟಿ ಫೀಚರ್ಸ್ ಹೊಂದಿದೆ.

skoda-auto-india-to-hike-prices-up-to-3-percent-in-2025

ಹೊಸ ಸ್ಕೋಡಾ ಕೈಲಾಕ್ ಎಸ್‌ಯುವಿ ಫಿಚರ್ಸ್ ವಿಷಯಕ್ಕೆ ಬಂದರೆ, ಈ ಕಾರಿನಲ್ಲಿ ವೈರ್‌ಲೆಸ್ ಆಂಡ್ರಾಯ್ಡ್ ಆಟೋ/ಆಪಲ್ ಕಾರ್‌ಪ್ಲೇ, ಟೂ-ಸ್ಪೋಕ್ ಸ್ಟೀರಿಂಗ್ ವೀಲ್, 8-ಇಂಚಿನ ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್‌, ವೈರ್‌ಲೆಸ್ ಫೋನ್ ಚಾರ್ಜರ್, ಸಿಂಗಲ್ ಪೇನ್ ಸನ್‌ರೂಫ್‌ನೊಂದಿಗೆ 10-ಇಂಚಿನ ಟಚ್‌ಸ್ಕ್ರೀನ್, ಮುಂಭಾಗದ ಸೀಟ್ ವೆಂಟಿಲೇಶನ್‌ನಂತಹ ಫೀಚರ್ಸ್ ಇವೆ.

ಸ್ಕೋಡಾ ಕೈಲಾಕ್ ಎಂಜಿನ್ ವಿಷಯಕ್ಕೆ ಬಂದರೆ ಕುಶಾಕ್ ಮತ್ತು ಸ್ಲಾವಿಯಾ ಕಾರುಗಳಲ್ಲಿ ನೋಡುವ ಅದೇ 1.0-ಲೀಟರ್ TSI ಪೆಟ್ರೋಲ್ ಎಂಜಿನ್‌ ಅನ್ನು ಕೈಲಾಕ್ ಎಸ್‌ಯುವಿನಲ್ಲಿ ಬಳಸಲಾಗಿದೆ. ಈ ಎಂಜಿನ್ 6-ಸ್ಪೀಡ್ ಮ್ಯಾನುವಲ್ ಮತ್ತು 6-ಸ್ಪೀಡ್ ಟಾರ್ಕ್ ಕರ್ನವಾಟರ್ ಆಟೋಮ್ಯಾಟಿಕ್ ಗೇರ್ ಬಾಕ್ಸ್ ಆಯ್ಕೆಗಳೊಂದಿಗೆ ಬರುತ್ತದೆ. ಈ ಎಂಜಿನ್ 115 bhp ಪವರ್ ಮತ್ತು 178 Nm ಪೀಕ್ ಟಾರ್ಕ್ ಉತ್ಪಾದಿಸುತ್ತದೆ.

More from DriveSpark

Article Published On: Wednesday, December 18, 2024, 12:06 [IST]
English summary
Skoda auto india to hike prices up to 3 percent in 2025
Read more on skoda india
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+