ಭಾರತದಲ್ಲಿ ಸ್ಕೋಡಾ ಆಟೋ ಫೋಕ್ಸ್‌ವ್ಯಾಗನ್‌ಗೆ ಮರೆಯಲಾಗದ ಮೈಲಿಗಲ್ಲು

ಸ್ಕೋಡಾ ಆಟೋ ವೋಕ್ಸ್‌ವ್ಯಾಗನ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ (SAVWIPL) ಭಾರತದ ಚಕನ್‌ನಲ್ಲಿರುವ ತನ್ನ ಅತ್ಯಾಧುನಿಕ ವಾಹನ ಮತ್ತು ಎಂಜಿನ್ ಉತ್ಪಾದನಾ ಘಟಕದಲ್ಲಿ ಗಮನಾರ್ಹ ಮೈಲಿಗಲ್ಲನ್ನು ಸಾಧಿಸಿದೆ. ಕಂಪನಿಯು 1.5 ಮಿಲಿಯನ್ (15 ಲಕ್ಷ) ವಾಹನಗಳನ್ನು ಉತ್ಪಾದಿಸುವ ಮೂಲಕ ಸಾಧನೆ ಮಾಡಿದೆ. ಹೆಚ್ಚಿನ ವಿವರಗಳನ್ನು ಇಲ್ಲಿ ನೋಡೋಣ.

2009 ರಲ್ಲಿ ಈ ಉತ್ಪಾದನಾ ಘಟಕದಿಂದ ಸ್ಕೋಡಾ ಫ್ಯಾಬಿಯಾವನ್ನು ಮೊದಲ ಕಾರಾಗಿ ಹೊರತರಲಾಯಿತು. ನಂತರ ಸಾಲಾಗಿ ಫೋಕ್ಸ್‌ವ್ಯಾಗನ್ ವೆಂಟೊ ಮತ್ತು ಪೊಲೊ, ಸ್ಕೋಡಾ ಫ್ಯಾಬಿಯಾ ಮತ್ತು ರಾಪಿಡ್‌ನಂತಹ ವೋಕ್ಸ್‌ವ್ಯಾಗನ್ ಗ್ರೂಪ್‌ನ ಐಕಾನಿಕ್ ಮಾಡೆಲ್‌ಗಳನ್ನು ಹೊರತರಲಾಯಿತು. ಜೊತೆಗೆ ಪ್ರಸಿದ್ಧ MQB-A0-IN ಪ್ಲಾಟ್‌ಫಾರ್ಮ್ ಅನ್ನು ಆಧರಿಸಿದ ಇತ್ತೀಚಿನ ಹೊಸ ಮಾದರಿಗಳಾದ VW ಟೈಗುನ್ ಮತ್ತು ವರ್ಟಸ್, ಸ್ಕೋಡಾ ಕುಶಾಕ್ ಮತ್ತು ಸ್ಲಾವಿಯಾದಂತಹ ಕಾರುಗಳನ್ನು ಹೊರತರಲಾಗಿದೆ. ಕಳೆದ ವರ್ಷ, ಚಕನ್ ಸೌಲಭ್ಯದಲ್ಲಿರುವ ಎಂಜಿನ್ ಶಾಪ್, ಫೋಕ್ಸ್‌ವ್ಯಾಗನ್ ಗ್ರೂಪ್‌ಗಾಗಿ 3,00,000 ಕ್ಕಿಂತ ಹೆಚ್ಚು ವಿಶ್ವ ದರ್ಜೆಯ ಎಂಜಿನ್‌ಗಳನ್ನು ಉತ್ಪಾದಿಸಿದೆ.

skoda-auto-volkswagen-india-celebrates-engine-vehicle-production-milestones

ಈ ಸಾಧನೆಯನ್ನು SAVWIPL ದೇಶೀಯ ಸೋರ್ಸಿಂಗ್‌ಗೆ ಸಮರ್ಪಿಸುವ ಮೂಲಕ ಮತ್ತಷ್ಟು ಬಲಪಡಿಸಲಾಗಿದೆ. 1.0L TSI ಎಂಜಿನ್‌ಗಳು ಭಾರತದೊಳಗೆ ತಯಾರಿಸಲಾದ ಘಟಕಗಳ ಮೇಲೆ ಹೆಚ್ಚು ಅವಲಂಬಿತವಾಗಿದೆ. ಈ ಬದ್ಧತೆಯು ರಾಷ್ಟ್ರದ 'ಮೇಕ್ ಇನ್ ಇಂಡಿಯಾ' ಉಪಕ್ರಮದೊಂದಿಗೆ ಸಂಪೂರ್ಣವಾಗಿ ಹೊಂದಿಕೊಳ್ಳುತ್ತದೆ. ಜೊತೆಗೆ ಕೌಶಲ್ಯ ಭಾರತ' ಆಂದೋಲನವನ್ನು ಮತ್ತಷ್ಟು ಹೆಚ್ಚಿಸಲು ಸ್ಥಳೀಯ ಪ್ರತಿಭೆಗಳನ್ನು ಅಭಿವೃದ್ಧಿಪಡಿಸುವುದನ್ನು ಮುಂದುವರೆಸಲಾಗುತ್ತಿದೆ ಎಂದು ಕಂಪನಿ ಹೇಳಿಕೊಂಡಿದೆ.

ಸ್ಕೋಡಾ ಆಟೋ ವೋಕ್ಸ್‌ವ್ಯಾಗನ್ ಇಂಡಿಯಾವು, ಇಂಡಿಯಾ 2.0 ಕಾರು ಶ್ರೇಣಿಗಾಗಿ 3,00,000 ಯುನಿಟ್ ಉತ್ಪಾದನಾ ಮೈಲಿಗಲ್ಲನ್ನು ಇತ್ತೀಚೆಗೆ ಆಚರಿಸಿತು. ಇದರಲ್ಲಿ VW ಟೈಗುನ್ ಮತ್ತು ವರ್ಟಸ್, ಸ್ಕೋಡಾ ಕುಶಾಕ್ ಮತ್ತು ಸ್ಲಾವಿಯಾ ಸೇರಿವೆ. ಇವುಗಳನ್ನು ಭಾರತದಲ್ಲಿ ಎಂಜಿನಿಯರ್ ಮಾಡಲಾಗಿದ್ದು, ಭಾರತ ಮತ್ತು ಪ್ರಪಂಚಕ್ಕಾಗಿ ಇವು ಸುರಕ್ಷಿತ ಮೇಡ್-ಇನ್-ಇಂಡಿಯಾ ಕಾರುಗಳಲ್ಲಿ ಒಂದಾಗಿವೆ. ಗ್ಲೋಬಲ್ NCAP ಯಿಂದ 5-ಸ್ಟಾರ್ ಸುರಕ್ಷತಾ ರೇಟಿಂಗ್ ಅನ್ನು ಸಾಧಿಸಿವೆ.

skoda-auto-volkswagen-india-celebrates-engine-vehicle-production-milestones

ದೇಶೀಯ ಉತ್ಪಾದನೆಯನ್ನು ಮೀರಿ ನೋಡಿದರೆ, SAVWIPL ಉತ್ಪಾದನಾ ಕೇಂದ್ರವಾಗಿ ಭಾರತದ ಜಾಗತಿಕ ಉಪಸ್ಥಿತಿಗೆ ಸಕ್ರಿಯವಾಗಿ ಕೊಡುಗೆ ನೀಡುತ್ತಿದೆ. ಕಂಪನಿಯು ಹೆಮ್ಮೆಯಿಂದ ತನ್ನ ಕಾರು ಉತ್ಪಾದನೆಯ ಶೇ30 ಕ್ಕಿಂತ ಹೆಚ್ಚು ರಫ್ತು ಮಾಡುತ್ತದೆ, ಅಂತರರಾಷ್ಟ್ರೀಯ ವೇದಿಕೆಯಲ್ಲಿ ಭಾರತೀಯ ಸಾಮರ್ಥ್ಯಗಳು ಮತ್ತು ಗುಣಮಟ್ಟದ ಮಾನದಂಡಗಳನ್ನು ಪ್ರದರ್ಶಿಸುತ್ತಿದೆ. 40 ಕ್ಕೂ ಹೆಚ್ಚು ದೇಶಗಳಿಗೆ ಇಲ್ಲಿಂದ ರಫ್ತು ಮಾಡುತ್ತಿದೆ. ಭಾರತ-ನಿರ್ಮಿತ ಕಾರುಗಳ ಅಗ್ರ ನಾಲ್ಕು ರಫ್ತುದಾರರಲ್ಲಿ ಒಂದಾಗಿದೆ. ಜಾಗತಿಕ ಆಟೋಮೊಬೈಲ್ ರಂಗದಲ್ಲಿ ಸ್ಕೋಡಾ ಆಟೋದ ಉತ್ಪಾದನಾ ಸಾಮರ್ಥ್ಯಕ್ಕೆ ಭಾರತವು ಪ್ರಮುಖ ಕೊಡುಗೆದಾರನಾಗಿ ಹೊರಹೊಮ್ಮಿದೆ ಎಂದು ಕಂಪನಿ ಹೇಳಿದೆ.

"1.5 ಮಿಲಿಯನ್ ಉತ್ಪಾದನಾ ಮೈಲಿಗಲ್ಲನ್ನು ಸಾಧಿಸುವುದು ನಮ್ಮ ಭಾರತೀಯ ಉತ್ಪಾದನಾ ಸೌಲಭ್ಯದ ಅಸಾಧಾರಣ ಎಂಜಿನಿಯರಿಂಗ್ ಸಾಮರ್ಥ್ಯಗಳಿಗೆ ಸಾಕ್ಷಿಯಾಗಿದೆ. ಭಾರತದಲ್ಲಿನ ನಮ್ಮ ಉನ್ನತ ದರ್ಜೆಯ R&D ಕೇಂದ್ರವು ನಾವೀನ್ಯತೆ ಮತ್ತು ಉತ್ಕೃಷ್ಟತೆಯನ್ನು ಚಾಲನೆ ಮಾಡುವಲ್ಲಿ ನಿರ್ಣಾಯಕ ಪಾತ್ರವನ್ನು ವಹಿಸಿದೆ ಎಂದು ಸ್ಕೋಡಾ ಆಟೋ ಎ.ಎಸ್. ತಾಂತ್ರಿಕ ಅಭಿವೃದ್ಧಿ ಮಂಡಳಿಯ ಸದಸ್ಯ ಡಾ ಜೋಹಾನ್ಸ್ ನೆಫ್ಟ್ ಹೇಳಿದರು.

skoda-auto-volkswagen-india-celebrates-engine-vehicle-production-milestones

ಜಾಗತಿಕ ತಂಡವು ಒಳನೋಟಗಳು ಮತ್ತು ಪರಿಣತಿಯನ್ನು ಬಹಳವಾಗಿ ಗೌರವಿಸುತ್ತದೆ. ಭಾರತ ಮತ್ತು ಜಗತ್ತಿಗೆ ಹೊಸ, ಅತ್ಯಾಧುನಿಕ ಉತ್ಪನ್ನಗಳನ್ನು ಅಭಿವೃದ್ಧಿಪಡಿಸಲು ಈ ಕೊಡುಗೆಗಳು ಅವಿಭಾಜ್ಯವಾಗಿವೆ. ಇದು ನಮ್ಮ ಭಾರತೀಯ ಕಾರ್ಯಾಚರಣೆಗಳ ಶಕ್ತಿ ಮತ್ತು ಜಾಣ್ಮೆಯನ್ನು ಎತ್ತಿ ತೋರಿಸುತ್ತದೆ, ವಿಶ್ವದಾದ್ಯಂತ ವಾಹನ ನಾವೀನ್ಯತೆಯಲ್ಲಿ ಮುಂಚೂಣಿಯಲ್ಲಿದೆ ಎಂದರು.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋ ಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊ ಗಳನ್ನು ಪಡೆಯಲು ನಮ್ಮ ಫೇಸ್‌ ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

More from DriveSpark

Article Published On: Monday, May 27, 2024, 16:28 [IST]
English summary
Skoda auto volkswagen india celebrates engine vehicle production milestones
Read more on skoda india
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+