ಭಾರತದ ಎಲೆಕ್ಟ್ರಿಕ್ ಅಖಾಡಕ್ಕೆ ಸ್ಕೋಡಾ ಎಂಟ್ರಿ: ಅಸಲಿ ಆಟ ಈಗ ಶುರು

ಭಾರತದಲ್ಲಿ ಎಲೆಕ್ಟ್ರಿಕ್ ಕಾರುಗಳು ಮಾರಾಟದ ಮೂಲಕ ಭಾರೀ ಸದ್ದು ಮಾಡುತ್ತಿದೆ. ಹಲವು ಜನಪ್ರಿಯ ಕಾರು ತಯಾರಕ ಕಂಪನಿಗಳು ಎಲೆಕ್ಟ್ರಿಕ್ ಕಾರುಗಳನ್ನು ಈಗಾಗಲೇ ಬಿಡುಗಡೆಗೊಳಿಸಿ ಮಾರಾಟ ಮಾಡುತ್ತಿದೆ. ಇದೀಗ ಸ್ಕೋಡಾ ತನ್ನ ಮೊದಲ ಎಲೆಕ್ಟ್ರಿಕ್ ಕಾರನ್ನು ಬಿಡುಗಡೆಗೊಳಿಸಲು ಸಜ್ಜಾಗಿದೆ. 2024ರ ಭಾರತ್ ಮೊಬಿಲಿಟಿ ಎಕ್ಸ್‌ಪೋದಲ್ಲಿ ಸಾರ್ವಜನಿಕ ಪ್ರದರ್ಶನ ನೀಡಲಿದೆ.

2024ರ ಭಾರತ್ ಮೊಬಿಲಿಟಿ ಎಕ್ಸ್‌ಪೋ ಫೆಬ್ರವರಿ 1 ರಿಂದ 3 ರವರೆಗೆ ನವದೆಹಲಿಯ ಪ್ರಗತಿ ಮೈದಾನದಲ್ಲಿ ನಡೆಯಲಿದೆ. ಈ ಹೊಸ ಸ್ಕೋಡಾ ಎನ್ಯಾಕ್ iV ಒಂದು ಅಥವಾ ಎರಡು ತಿಂಗಳೊಳಗೆ ಅನಾವರಣವಾಗಲಿದೆ ಎಂದು ಹೇಳಲಾಗುತ್ತಿದೆ. ಭಾರತೀಯ ಮಾರುಕಟ್ಟೆಯಲ್ಲಿ ಸ್ಕೋಡಾ ಎನ್ಯಾಕ್ iV (Skoda Enyaq iV) ಮಾದರಿಯು ಒಂದೇ, ಟಾಪ್-ಸ್ಪೆಕ್ 80X ರೂಪಾಂತರದಲ್ಲಿ ಲಭ್ಯವಿರುತ್ತದೆ. ಇದು 77kWh ಬ್ಯಾಟರಿ ಪ್ಯಾಕ್ ಮತ್ತು ಡ್ಯುಯಲ್ ಮೋಟಾರ್‌ಗಳನ್ನು ಪ್ರತಿ ಆಕ್ಸಲ್‌ನಲ್ಲಿ ಇರಿಸಲಾಗಿದೆ.

Skoda Enyaq iV

ಹೊಸ ಸ್ಕೋಡಾ ಎನ್ಯಾಕ್ iV ಎಲೆಕ್ಟ್ರಿಕ್ ಕಾರು 6.9 ಸೆಕೆಂಡುಗಳಲ್ಲಿ 0 ರಿಂದ 100 ಕಿ.ಮೀ ವೇಗವನ್ನು ಪಡೆದುಕೊಳ್ಳುತ್ತದೆ. ಈ ಹೊಸ ಎಲೆಕ್ಟ್ರಿಕ್ ಕಾರು ಸಿಂಗಲ್ ಚಾರ್ಜ್‌ನಲ್ಲಿ 513 ಕಿ.ಮೀ ರೇಂಜ್ ಅನ್ನು ನೀಡುತ್ತದೆ. ಮಾದರಿಯ ಸಂಯೋಜಿತ ಪವರ್ ಉತ್ಪಾದನೆಯು 265 bhp ಆಗಿದೆ. ಈ ಹೊಸ ಸ್ಕೋಡಾ ಎನ್ಯಾಕ್ iV ಎಲೆಕ್ಟ್ರಿಕ್ ಕಾರು ಬ್ಯಾಟರಿ ಪ್ಯಾಕ್ ಅನ್ನು 125kW DC ಫಾಸ್ಟ್ ಚಾರ್ಜರ್ ಬಳಸಿ ಚಾರ್ಜ್ ಮಾಡಬಹುದು.

ಗಮನಾರ್ಹವಾಗಿ, ಮುಂಬರುವ ಸ್ಕೋಡಾ ಎಲೆಕ್ಟ್ರಿಕ್ ಎಸ್‍ಯುವಿಯು AWD (ಆಲ್-ವೀಲ್ ಡ್ರೈವ್) ಸಿಸ್ಟಂ ಅನ್ನು ಸಂಯೋಜಿಸುತ್ತದೆ ಮತ್ತು 0.27 ರ ಡ್ರ್ಯಾಗ್ ಗುಣಾಂಕವನ್ನು ಹೊಂದಿದೆ. ಫೋಕ್ಸ್‌ವ್ಯಾಗನ್ ಗ್ರೂಪ್‌ನ MEB ಎಲೆಕ್ಟ್ರಿಕ್ ಆರ್ಕಿಟೆಕ್ಚರ್‌ನಲ್ಲಿ ವಿನ್ಯಾಸಗೊಳಿಸಲಾಗಿದೆ, ಇದು ವೋಕ್ಸ್‌ವ್ಯಾಗನ್ iD4 ಮತ್ತು Audi Q4 ಇ-ಟ್ರಾನ್‌ಗೆ ಆಧಾರವಾಗಿದೆ.

ಹೊಸ ಸ್ಕೋಡಾ ಎನ್ಯಾಕ್ iV ಪ್ಲಾಟ್‌ಫಾರ್ಮ್ ಸಿಂಗಲ್ ಮೋಟಾರ್, RWD ಮತ್ತು ಡ್ಯುಯಲ್ ಮೋಟಾರ್ AWD ಸೆಟಪ್‌ಗಳನ್ನು ಬೆಂಬಲಿಸುತ್ತದೆ. ಈ ಹೊಸ ಸ್ಕೋಡಾ ಎನ್ಯಾಕ್ ಎಲೆಕ್ಟ್ರಿಕ್ ಎಸ್‍ಯುವಿಯ ಆಯಾಮಗಳ ಬಗ್ಗೆ ಹೇಳುವುದಾದರೆ, 4648 mm ಉದ್ದ, 1879 mm ಅಗಲ ಮತ್ತು 1616 mm ಎತ್ತರವನ್ನು ಹೊಂದಿದೆ. ಇನ್ನು ಇದು 2765 mm ಉದ್ದದ ವ್ಹೀಲ್‌ಬೇಸ್‌ ಅನ್ನು ಒಳಗೊಂಡಿದೆ.

ಸ್ಕೋಡಾ ಎನ್ಯಾಕ್ iV ನ ಒಳಭಾಗವು ಪ್ರೀಮಿಯಂ ಆಗಿದೆ. ಈ ಹೊಸ ಎಲೆಕ್ಟ್ರಿಕ್ ಎಸ್‍ಯುವಿಯು 13-ಇಂಚಿನ ಟಚ್‌ಸ್ಕ್ರೀನ್ ಸಂಪರ್ಕಿತ ಕಾರ್ಯಗಳು, ಗೆಸ್ಚರ್ ಕಂಟ್ರೋಲ್ ಮತ್ತು ವಾಯ್ಸ್ ಅಸಿಸ್ಟ್ ಇ-ಸಿಮ್ ಅನ್ನು ಬೆಂಬಲಿಸುತ್ತದೆ. ಒಳಾಂಗಣವು ನಾಲ್ಕು ವಿಭಿನ್ನ ವಿನ್ಯಾಸಗಳೊಂದಿಗೆ 5.3-ಇಂಚಿನ ಡಿಜಿಟಲ್ ಇನ್ಸ್ ಟ್ರೂಮೆಂಟ್ ಕ್ಲಸ್ಟರ್ ಅನ್ನು ಸಹ ಹೊಂದಿದೆ.

ಇನ್ನು ಪ್ರಮುಖ ಅಂಶಗಳೆಂದರೆ ಲೆದರ್ ಸುತ್ತಿದ ಸ್ಟೀರಿಂಗ್ ವೀಲ್, ಆಂಬಿಯೆಂಟ್ ಲೈಟಿಂಗ್, ಲೆದರ್ ಮತ್ತು ಮೈಕ್ರೋಫೈಬರ್ ಫ್ಯಾಬ್ರಿಕ್‌ನ ಮಿಶ್ರಣದೊಂದಿಗೆ ಸಜ್ಜು, 19-ಇಂಚಿನ ಪ್ರೋಟಿಯಸ್ ಅಲಾಯ್ ವ್ಹೀಲ್ ಗಳು, LED ಹೆಡ್‌ಲ್ಯಾಂಪ್‌ಗಳು ಮತ್ತು ಟೈಲ್‌ಲ್ಯಾಂಪ್‌ಗಳು ಮತ್ತು ಐಚ್ಛಿಕ LED ಬ್ಯಾಕ್‌ಲಿಟ್ ಗ್ರಿಲ್ ಜೊತೆಗೆ ಕಮಿಂಗ್/ಲೀವಿಂಗ್ ಹೋಮ್ ಅನಿಮೇಷನ್ ಅನ್ನು ಹೊಂದಿದೆ.

ಇನ್ನು ಸ್ಕೋಡಾ ಕೂಡ ತನ್ನ ಮೊದಲ ಎಲೆಕ್ಟ್ರಿಕ್ ಕಾರನ್ನು ಪರಿಚಯಿಸಿ ಅದೃಷ್ಟವನ್ನು ಪರೀಕ್ಷಿಸಿಕೊಳ್ಳಲಿದೆ. ಇದನ್ನು ಕೂಡ ಮೇಲೆ ತಿಳಿಸಿದಂತೆ ಈ ವರ್ಷದ ದ್ವಿತಿಯಾರ್ಧದಲ್ಲಿ ಪರಿಚಯಿಸಲಿದೆ. ಈಗಿರುವ ಪರಿಸ್ಥಿತಿಗಳಿಗೆ ಅನುಗುಣವಾಗಿ ಸ್ಪರ್ಧಾತ್ಮಕ ಬೆಲೆಯಲ್ಲಿ ಎಸ್‌ಯುವಿಯನ್ನು ಬಿಡುಗಡೆ ಮಾಡಲು ನೋಡುತ್ತಿದೆ. ಈ ಕುರಿತು ಹೆಚ್ಚಿನ ವಿವರಗಳನ್ನು ಶೀಘ್ರದಲ್ಲೇ ಬಹಿರಂಗಪಡಿಸಲಿದೆ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತ ಆಟೋಮೊಬೈಲ್ ಸುದ್ದಿಗಳನ್ನು ಒದಗಿಸುತ್ತದೆ, ಎಲ್ಲಾ ಸಾಮಾಜಿಕ ಮಾಧ್ಯಮಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಹಂಚಿಕೊಳ್ಳುತ್ತದೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್ ಮತ್ತು ಯೂಟ್ಯೂಬ್ ಪೇಜ್‌ಗಳೊಂದಿಗೆ ಸಂಪರ್ಕದಲ್ಲಿರಿ. ನಿಮಗೆ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

More from DriveSpark

Article Published On: Wednesday, January 31, 2024, 11:50 [IST]
English summary
Skoda enyaq iv electric suv india debut soon details
Read more on ಸ್ಕೋಡಾ skoda
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+