ಎಸ್‍ಯುವಿ ಖರೀದಿಸಲು ಪ್ಲಾನ್ ಇದೆಯಾ? ನಿಮಗಿಲ್ಲಿದೆ ಖುಷಿ ಸುದ್ದಿ... ಸ್ಕೋಡಾ ಕೊಡಿಯಾಕ್ ಮೇಲೆ ಡಿಸ್ಕೌಂಟ್
ಜನಪ್ರಿಯ ಕಾರು ತಯಾರಕ ಕಂಪನಿಯಾದ ಸ್ಕೋಡಾ ಆಟೋ ಇಂಡಿಯಾ (Skoda Auto India) ತನ್ನ ಪ್ರಮುಖ ಎಸ್‍ಯುವಿಯಾದ ಕೊಡಿಯಾಕ್ ಅನ್ನು ಭಾರತೀಯ ಮಾರುಕಟ್ಟೆಯಲ್ಲಿ ಕಳೆದ ವರ್ಷ ಬಿಡುಗಡೆಗೊಳಿಸಿತ್ತು. ಈ ಹೊಸ ಸ್ಕೋಡಾ ಕೊಡಿಯಾಕ್ (Skoda Kodiaq) 7-ಜನರು ಕುಳಿತುಕೊಳ್ಳಬಹುದಾದ ಫುಲ್ ಸೈಜ್ ಎಸ್‍ಯುವಿಯಾಗಿದೆ. ಈ ಎಸ್‍ಯುವಿಯನ್ನು ಮೊದಲ ಬಾರಿಗೆ 2017 ರಲ್ಲಿ ಪರಿಚಯಿಸಲಾಗಿತ್ತು. ಈ ಸ್ಕೋಡಾ ಕೊಡಿಯಾಕ್ ಬ್ರ್ಯಾಂಡ್‌ನ ಪ್ರಮುಖ ಮೂರು-ಸಾಲಿನ ಎಸ್‍ಯುವಿಯಾಗಿದೆ. ಭಾರತದಲ್ಲಿ ಸ್ಕೋಡಾ ಕೊಡಿಯಾಕ್ ಬಿಡುಗಡೆಯಾಗಿ 7 ವರ್ಷಗಳ ಸಂಭ್ರಮದ ಭಾಗವಾಗಿ ಭರ್ಜರಿ ಆಫರ್ ಅನ್ನು ಘೋಷಿಸಿದ್ದಾರೆ.
ಸ್ಕೋಡಾ ಕೊಡಿಯಾಕ್ 2023ರ ಮತ್ತು 2024ರ ಎರಡೂ ಮಾಡೆಲ್ ಗಳಲ್ಲಿ ಈ ಆಫರ್ ಲಭ್ಯವಿದೆ. ಕೊಡಿಯಾಕ್ ಎಸ್‍ಯುವಿಯು ಖರೀದಿಸಿದ ಗ್ರಾಹಕರು 2.5 ಲಕ್ಷದವರೆಗೆ ಉಳಿಸಬಹುದು ಮತ್ತು ಒಟ್ಟು ಪ್ರಯೋಜನಗಳ ಜೊತೆಗೆ, ಸ್ಕೋಡಾ ಯಾವುದೇ ಹೆಚ್ಚುವರಿ ವೆಚ್ಚವಿಲ್ಲದೆ ಸ್ಟ್ಯಾಂಡರ್ಡ್ ಸರ್ವಿಸ್ ಪ್ಯಾಕೇಜ್ ಮತ್ತು 5ನೇ ವರ್ಷದ ವಿಸ್ತೃತ ವಾರಂಟಿಯನ್ನು ಸಹ ನೀಡುತ್ತಿದೆ. ಈ ಆಫರ್ ಗಳು 2024ರ ಜುಲೈ ತಿಂಗಳವರೆಗೆ ಲಭ್ಯವಿರುತ್ತದೆ.

ಈ ಹಿಂದೆ ಸ್ಕೋಡಾ ಕೊಡಿಯಾಕ್ ಎಸ್‍ಯುವಿಯು ಸ್ಟೈಲ್, ಸ್ಪೋರ್ಟ್‌ಲೈನ್ ಮತ್ತು L&K ರೂಪಾಂತರಗಳಲ್ಲಿ ಲಭ್ಯವಿತ್ತು. ಇದೀಗ ಈ ಸ್ಕೋಡಾ ಕೊಡಿಯಾಕ್ ಎಸ್‍ಯುವಿಯು L&K ಎಂಬ ಒಂದೇ ರೂಪಾಂತರದಲ್ಲಿ ಲಭ್ಯವಿರುತ್ತದೆ. ಕೊಡಿಯಾಕ್ ಕೇವಲ 7.8 ಸೆಕೆಂಡ್‌ಗಳಲ್ಲಿ 0-100 ಕಿ.ಮೀ ವೇಗವನ್ನು ಪಡೆದುಕೊಳ್ಳುತ್ತದೆ. ಈ ಹೊಸ ಸ್ಕೋಡಾ ಕೊಡಿಯಾಕ್ ಎಸ್‍ಯುವಿಯು ಇಕೋ, ಕಂಫರ್ಟ್, ನಾರ್ಮಲ್, ಸ್ಪೋರ್ಟ್, ಇಂಡಿವಿಜುವಲ್ ಮತ್ತು ಸ್ನೋ.ಎಂಬ ಆರು ಡ್ರೈವಿಂಗ್ ಮೋಡ್‌ಗಳನ್ನು ಹೊಂದಿವೆ.
ಸ್ಕೋಡಾ ಕೊಡಿಯಾಕ್ ಡೋರ್-ಎಡ್ಜ್ ಪ್ರೊಟೆಕ್ಟರ್‌ಗಳೊಂದಿಗೆ ಬರುತ್ತದೆ.ಇನ್ನು ಏರ್ ವೆಂಟ್ ಅನ್ನು ಸುಧಾರಿಸುವ ಹಿಂಭಾಗದ ಸ್ಪಾಯ್ಲರ್, ಪ್ರಯಾಣಿಕರು ತಮ್ಮ ಪಾದಗಳನ್ನು ವಿಶ್ರಾಂತಿ ಮಾಡಲು ವಿಶ್ರಾಂತಿ ಹಂತವನ್ನು ಪಡೆಯುತ್ತಾರೆ ಮತ್ತು 2ನೇ ಸಾಲಿನಲ್ಲಿ ಹೆಡ್‌ರೆಸ್ಟ್‌ಗಳಿವೆ. ಈ ಹೊಸ ಸ್ಕೋಡಾ ಕೊಡಿಯಾಕ್ ಎಸ್‍ಯುವಿಯು ಸ್ಟೀರಿಂಗ್, ಡೈನಾಮಿಕ್ ಚಾಸಿಸ್ ಕಂಟ್ರೋಲ್ ಅನ್ನು ಹೊಂದಿದೆ ಮತ್ತು ಸಸ್ಪೆನ್ಶನ್ ಅನ್ನು 15 ಎಂಎಂ ಹೆಚ್ಚಿಸಬಹುದು ಅಥವಾ ಕಡಿಮೆ ಮಾಡಬಹುದು ಮತ್ತು ಆಫ್-ರೋಡ್ ಮೋಡ್ ಹೊಂದಿದೆ.

ಇನ್ನು ಸ್ಕೋಡಾ ಕೊಡಿಯಾಕ್ ಎಸ್‍ಯುವಿ 3 ಅಥವಾ 2-ಸ್ಪೋಕ್ ಸ್ಟೀರಿಂಗ್ ವೀಲ್, ಆಂಬಿಯೆಂಟ್ ಲೈಟಿಂಗ್, ಕ್ಯಾಂಟನ್ 625 W 12-ಸ್ಪೀಕರ್ ಆಡಿಯೋ ಸಿಸ್ಟಮ್ ಜೊತೆಗೆ ಸಬ್ ವೂಫರ್ ಅನ್ನು ಹೊಂದಿದೆ. ಇದಲ್ಲದೆ, ಗ್ರಾಹಕರು ವಿಂಡೋಗಳು, ಡೋರ್ ಮೀರರ್ಸ್ ಮತ್ತು ಪನರೊಮಿಕ್ ಸನ್‌ರೂಫ್ ಅನ್ನು ದೂರದಿಂದಲೇ ತೆರೆಯಬಹುದು ಮತ್ತು ಮುಚ್ಚಬಹುದಾಗಿದೆ.
ಈ ಕೊಡಿಯಾಕ್ 7 ಸೀಟರ್ ಎಸ್‍ಯುವಿಯು ಹೆಚ್ಚಿನ ಸುರಕ್ಷತೆ, ಐಷಾರಾಮಿ ಮತ್ತು ಆಫ್-ರೋಡ್ ಸಾಮರ್ಥ್ಯದೊಂದಿಗೆ ಉತ್ತಮವಾದ ಮೌಲ್ಯವನ್ನು ಬೇಡಿಕೆಯಿರುವ ಹೆಚ್ಚಿನ ಎಸ್‍ಯುವಿ ಗ್ರಾಹಕರು ಈಗ ಕೊಡಿಯಾಕ್ ಅನ್ನು ಆನಂದಿಸಬಹುದು.ಸ್ಕೋಡಾ ಕೊಡಿಯಾಕ್ ಎಸ್‍ಯುವಿಯು 18-ಇಂಚಿನ ಅಲಾಯ್ ವ್ಹೋಲ್ ಗಳೊಂದಿಗೆ ಬರುತ್ತದೆ. ಟಾಪ್-ಎಂಡ್ ಲಾರಿನ್ ಮತ್ತು ಕ್ಲೈಮೆಂಟ್ ರೂಪಾಂತರವು ಸ್ಟೋನ್ ಬೀಜ್ ಲೆದರ್ ಡ್ಯುಯಲ್-ಟೋನ್ ಅಪ್ಹೋಲ್ಸ್ಟರಿಯನ್ನು ಪಡೆದಿದೆ.

ಈ ಕೊಡಿಯಾಕ್ ಎಸ್‍ಯುವಿಯಲ್ಲಿ ಇನ್ ಬಿಲ್ಟ್ ಕೂಲಿಂಗ್ ಮತ್ತು ಹೀಟಿಂಗ್‌ನೊಂದಿಗೆ ಮುಂಭಾಗದಲ್ಲಿ 12-ವೇ ಹೊಂದಾಣಿಕೆ ಮಾಡಬಹುದಾದ ಎಲೆಕ್ಟ್ರಿಕ್ ಸೀಟ್‌ಗಳನ್ನು ಹೊಂದಿವೆ. ಈ ಸ್ಕೋಡಾ ಕೊಡಿಯಾಕ್ ಎಸ್‍ಯುವಿ ಈಗ BS6 ಹಂತ 2 ಕಂಪ್ಲೈಂಟ್ ಆಗಿದೆ. ಈ ಎಸ್‍ಯುವಿಯು 2.0-ಲೀಟರ್ TSI EVO ಟರ್ಬೊ-ಪೆಟ್ರೋಲ್ ಎಂಜಿನ್ ಹೊಂದಿದ್ದು. ಈ ಎಂಜಿನ್ 187 bhp ಮತ್ತು 320 Nm ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ.
ಈ ಎಂಜಿನ್ ನೊಂದಿಗೆ 7-ಸ್ಪೀಡ್ DSG ಆಟೋಮ್ಯಾಟಿಕ್ ಗೇರ್ ಬಾಕ್ಸ್ ಅನ್ನು ನೀಡಲಾಗಿದೆ. ಕೊಡಿಯಾಕ್ ಯಾವಾಗಲೂ ಅದರ ಉನ್ನತ ದರ್ಜೆಯ ನಿರ್ಮಾಣ ಗುಣಮಟ್ಟ, ವೈಶಿಷ್ಟ್ಯ-ಸಮೃದ್ಧ ಕ್ಯಾಬಿನ್ ಮತ್ತು ಆರಾಮದಾಯಕವಾದ ಸವಾರಿ ಅನುಭವ ನೀಡುತ್ತದೆ. ಪ್ರಸ್ತುತ ತಲೆಮಾರಿನ ಸ್ಕೋಡಾ ಕೊಡಿಯಾಕ್ ಸ್ವಲ್ಪ ಸಮಯದವರೆಗೆ ಅಸ್ತಿತ್ವದಲ್ಲಿದೆ ಮತ್ತು ಸ್ಕೋಡಾ ಈಗಾಗಲೇ ನ್ಯೂ ಜನರೇಷನ್ ಮಾದರಿಯನ್ನು ಜಾಗತಿಕವಾಗಿ ಅನಾವರಣಗೊಳಿಸಿದೆ. ನ್ಯೂ ಜನರೇಷನ್ ಮಾದರಿಯು 2025ರಲ್ಲಿ ಭಾರತಕ್ಕೆ ಆಗಮಿಸುವ ನಿರೀಕ್ಷೆಯಿದೆ .


Click it and Unblock the Notifications








