ಭರ್ಜರಿ ಸಿಹಿಸುದ್ದಿ: ಸ್ಕೋಡಾ ಕೊಡಿಯಾಕ್ ಎಸ್‍ಯುವಿಯ ಮೇಲೆ ಭರ್ಜರಿ ಡಿಸ್ಕೌಂಟ್
ಜನಪ್ರಿಯ ಕಾರು ತಯಾರಕ ಕಂಪನಿಯಾದ ಸ್ಕೋಡಾ ಆಟೋ ಇಂಡಿಯಾ ತನ್ನ ಪ್ರಮುಖ ಎಸ್‍ಯುವಿಯಾದ ಕೊಡಿಯಾಕ್ ಅನ್ನು ಭಾರತೀಯ ಮಾರುಕಟ್ಟೆಯಲ್ಲಿ ಕಳೆದ ವರ್ಷ ಬಿಡುಗಡೆಗೊಳಿಸಿತ್ತು. ಈ ಹೊಸ ಸ್ಕೋಡಾ ಕೊಡಿಯಾಕ್ (Skoda Kodiaq) 7-ಜನರು ಕುಳಿತುಕೊಳ್ಳಬಹುದಾದ ಫುಲ್ ಸೈಜ್ ಎಸ್‍ಯುವಿಯಾಗಿದೆ. ಈ ಎಸ್‍ಯುವಿಯನ್ನು ಮೊದಲ ಬಾರಿಗೆ 2017 ರಲ್ಲಿ ಪರಿಚಯಿಸಲಾಗಿತ್ತು
ಈ ಸ್ಕೋಡಾ ಕೊಡಿಯಾಕ್ ಬ್ರ್ಯಾಂಡ್‌ನ ಪ್ರಮುಖ ಮೂರು-ಸಾಲಿನ ಎಸ್‍ಯುವಿಯಾಗಿದೆ. ಈ ಹೊಸ ಸ್ಕೋಡಾ ಕೊಡಿಯಾಕ್ ಎಸ್‍ಯುವಿಯ ಮೇಲೆ ಭರ್ಜರಿ ಡಿಸ್ಕೌಂಟ್ ಅನ್ನು ನೀಡಿದೆ. ಸ್ಕೋಡಾ ಕೊಡಿಯಾಕ್ (Skoda Kodiaq) ಎಲ್ & ಕೆ ಎಸ್‍ಯುವಿಯ ಮೇಲೆ ರೂ.2.40 ಲಕ್ಷವರೆಗೆ ರಿಯಾಯಿತಿ ನೀಡಲಾಗಿದೆ. ಈ ಎಸ್‍ಯುವಿಯ ಮೂಲ ಬೆಲೆಯು ಎಕ್ಸ್ ಶೋರೂಂ ಪ್ರಕಾರ ರೂ. 39.99 ಲಕ್ಷವಾಗಿದೆ.

ಇದರೊಂದಿಗೆ ಈ ಎಸ್‍ಯುವಿಯ ಮೇಲೆ ಐದು ವರ್ಷಗಳ ವಿಸ್ತೃತ ವಾರಂಟಿ ಮತ್ತು ಎರಡು ವರ್ಷಗಳ ಸರ್ವಿಸ್ ರ್ವಹಣೆ ಪ್ಯಾಕೇಜ್ (SMP) ಅನ್ನು ಒಳಗೊಂಡಿದೆ. ಈ ಹೊಸ ಸ್ಕೋಡಾ ಕೊಡಿಯಾಕ್ ಎಸ್‍ಯುವಿ ಖರೀದಿಸಲು ಬಯಸುವ ಗ್ರಾಹಕರು ರೂ.40,000 ಪಾವತಿಸಿ ಬುಕ್ಕಿಂಗ್ ಮಾಡಿಕೊಳ್ಳಬಹುದು. ಈ ಹಿಂದೆ ಸ್ಕೋಡಾ ಕೊಡಿಯಾಕ್ ಎಸ್‍ಯುವಿಯು ಸ್ಟೈಲ್, ಸ್ಪೋರ್ಟ್‌ಲೈನ್ ಮತ್ತು L&K ರೂಪಾಂತರಗಳಲ್ಲಿ ಲಭ್ಯವಿತ್ತು.
ಇದೀಗ ಈ ಸ್ಕೋಡಾ ಕೊಡಿಯಾಕ್ ಎಸ್‍ಯುವಿಯು L&K ಎಂಬ ಒಂದೇ ರೂಪಾಂತರದಲ್ಲಿ ಲಭ್ಯವಿರುತ್ತದೆ. ಕೊಡಿಯಾಕ್ ಕೇವಲ 7.8 ಸೆಕೆಂಡ್‌ಗಳಲ್ಲಿ 0-100 ಕಿ.ಮೀ ವೇಗವನ್ನು ಪಡೆದುಕೊಳ್ಳುತ್ತದೆ. ಈ ಹೊಸ ಸ್ಕೋಡಾ ಕೊಡಿಯಾಕ್ ಎಸ್‍ಯುವಿಯು ಇಕೋ, ಕಂಫರ್ಟ್, ನಾರ್ಮಲ್, ಸ್ಪೋರ್ಟ್, ಇಂಡಿವಿಜುವಲ್ ಮತ್ತು ಸ್ನೋ.ಎಂಬ ಆರು ಡ್ರೈವಿಂಗ್ ಮೋಡ್‌ಗಳನ್ನು ಹೊಂದಿವೆ. ಸ್ಕೋಡಾ ಕೊಡಿಯಾಕ್ ಡೋರ್-ಎಡ್ಜ್ ಪ್ರೊಟೆಕ್ಟರ್‌ಗಳೊಂದಿಗೆ ಬರುತ್ತದೆ.

ಇನ್ನು ಏರ್ ವೆಂಟ್ ಅನ್ನು ಸುಧಾರಿಸುವ ಹಿಂಭಾಗದ ಸ್ಪಾಯ್ಲರ್, ಪ್ರಯಾಣಿಕರು ತಮ್ಮ ಪಾದಗಳನ್ನು ವಿಶ್ರಾಂತಿ ಮಾಡಲು ವಿಶ್ರಾಂತಿ ಹಂತವನ್ನು ಪಡೆಯುತ್ತಾರೆ ಮತ್ತು 2ನೇ ಸಾಲಿನಲ್ಲಿ ಹೆಡ್‌ರೆಸ್ಟ್‌ಗಳಿವೆ. ಈ ಹೊಸ ಸ್ಕೋಡಾ ಕೊಡಿಯಾಕ್ ಎಸ್‍ಯುವಿಯು ಸ್ಟೀರಿಂಗ್, ಡೈನಾಮಿಕ್ ಚಾಸಿಸ್ ಕಂಟ್ರೋಲ್ ಅನ್ನು ಹೊಂದಿದೆ ಮತ್ತು ಸಸ್ಪೆನ್ಶನ್ ಅನ್ನು 15 ಎಂಎಂ ಹೆಚ್ಚಿಸಬಹುದು ಅಥವಾ ಕಡಿಮೆ ಮಾಡಬಹುದು ಮತ್ತು ಆಫ್-ರೋಡ್ ಮೋಡ್ ಹೊಂದಿದೆ.
ಈ ಸ್ಕೋಡಾ ಕೊಡಿಯಾಕ್ ಎಸ್‍ಯುವಿ 3 ಅಥವಾ 2-ಸ್ಪೋಕ್ ಸ್ಟೀರಿಂಗ್ ವೀಲ್, ಆಂಬಿಯೆಂಟ್ ಲೈಟಿಂಗ್, ಕ್ಯಾಂಟನ್ 625 W 12-ಸ್ಪೀಕರ್ ಆಡಿಯೋ ಸಿಸ್ಟಮ್ ಜೊತೆಗೆ ಸಬ್ ವೂಫರ್ ಅನ್ನು ಹೊಂದಿದೆ. ಇದಲ್ಲದೆ, ಗ್ರಾಹಕರು ವಿಂಡೋಗಳು, ಡೋರ್ ಮೀರರ್ಸ್ ಮತ್ತು ಪನರೊಮಿಕ್ ಸನ್‌ರೂಫ್ ಅನ್ನು ದೂರದಿಂದಲೇ ತೆರೆಯಬಹುದು ಮತ್ತು ಮುಚ್ಚಬಹುದಾಗಿದೆ.

ಸ್ಕೋಡಾ ಕೊಡಿಯಾಕ್ 7 ಸೀಟರ್ ಎಸ್‍ಯುವಿಯು ಹೆಚ್ಚಿನ ಸುರಕ್ಷತೆ, ಐಷಾರಾಮಿ ಮತ್ತು ಆಫ್-ರೋಡ್ ಸಾಮರ್ಥ್ಯದೊಂದಿಗೆ ಉತ್ತಮವಾದ ಮೌಲ್ಯವನ್ನು ಬೇಡಿಕೆಯಿರುವ ಹೆಚ್ಚಿನ ಎಸ್‍ಯುವಿ ಗ್ರಾಹಕರು ಈಗ ಕೊಡಿಯಾಕ್ ಅನ್ನು ಆನಂದಿಸಬಹುದು.ಸ್ಕೋಡಾ ಕೊಡಿಯಾಕ್ ಎಸ್‍ಯುವಿಯು 18-ಇಂಚಿನ ಅಲಾಯ್ ವ್ಹೋಲ್ ಗಳೊಂದಿಗೆ ಬರುತ್ತದೆ. ಟಾಪ್-ಎಂಡ್ ಲಾರಿನ್ ಮತ್ತು ಕ್ಲೈಮೆಂಟ್ ರೂಪಾಂತರವು ಸ್ಟೋನ್ ಬೀಜ್ ಲೆದರ್ ಡ್ಯುಯಲ್-ಟೋನ್ ಅಪ್ಹೋಲ್ಸ್ಟರಿಯನ್ನು ಪಡೆದಿದೆ.
ಈ ಎಸ್‍ಯುವಿಯಲ್ಲಿ ಇನ್ ಬಿಲ್ಟ್ ಕೂಲಿಂಗ್ ಮತ್ತು ಹೀಟಿಂಗ್‌ನೊಂದಿಗೆ ಮುಂಭಾಗದಲ್ಲಿ 12-ವೇ ಹೊಂದಾಣಿಕೆ ಮಾಡಬಹುದಾದ ಎಲೆಕ್ಟ್ರಿಕ್ ಸೀಟ್‌ಗಳನ್ನು ಹೊಂದಿವೆ. ಈ ಸ್ಕೋಡಾ ಕೊಡಿಯಾಕ್ ಎಸ್‍ಯುವಿ ಈಗ BS6 ಹಂತ 2 ಕಂಪ್ಲೈಂಟ್ ಆಗಿದೆ. ಈ ಎಸ್‍ಯುವಿಯು 2.0-ಲೀಟರ್ TSI EVO ಟರ್ಬೊ-ಪೆಟ್ರೋಲ್ ಎಂಜಿನ್ ಹೊಂದಿದ್ದು. ಈ ಎಂಜಿನ್ 187 bhp ಮತ್ತು 320 Nm ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ.
ಈ ಎಂಜಿನ್ ನೊಂದಿಗೆ 7-ಸ್ಪೀಡ್ DSG ಆಟೋಮ್ಯಾಟಿಕ್ ಗೇರ್ ಬಾಕ್ಸ್ ಅನ್ನು ನೀಡಲಾಗಿದೆ. ಕೊಡಿಯಾಕ್ ಯಾವಾಗಲೂ ಅದರ ಉನ್ನತ ದರ್ಜೆಯ ನಿರ್ಮಾಣ ಗುಣಮಟ್ಟ, ವೈಶಿಷ್ಟ್ಯ-ಸಮೃದ್ಧ ಕ್ಯಾಬಿನ್ ಮತ್ತು ಆರಾಮದಾಯಕವಾದ ಸವಾರಿ ಅನುಭವ ನೀಡುತ್ತದೆ. ಪ್ರಸ್ತುತ ತಲೆಮಾರಿನ ಸ್ಕೋಡಾ ಕೊಡಿಯಾಕ್ ಸ್ವಲ್ಪ ಸಮಯದವರೆಗೆ ಅಸ್ತಿತ್ವದಲ್ಲಿದೆ ಮತ್ತು ಸ್ಕೋಡಾ ಈಗಾಗಲೇ ನ್ಯೂ ಜನರೇಷನ್ ಮಾದರಿಯನ್ನು ಜಾಗತಿಕವಾಗಿ ಅನಾವರಣಗೊಳಿಸಿದೆ. ನ್ಯೂ ಜನರೇಷನ್ ಮಾದರಿಯು 2025ರಲ್ಲಿ ಭಾರತಕ್ಕೆ ಆಗಮಿಸುವ ನಿರೀಕ್ಷೆಯಿದೆ .


Click it and Unblock the Notifications








