INRC ಚಾಂಪಿಯನ್ ಮನಗೆದ್ದಿದೆ ಪವರ್‌ಫುಲ್ ಸ್ಕೋಡಾ ಕುಶಾಕ್: ಕೂರ್ಗ್‌ನ ವಿಶೇಷ ವಿಡಿಯೋ ನೋಡಿ...

'ಸ್ಕೋಡಾ ಕುಶಾಕ್' ಇದು ಕೇವಲ ಕಾರು ಮಾತ್ರವಲ್ಲ, INRC ಚಾಂಪಿಯನ್ ಒಬ್ಬರ ಮನಗೆದ್ದಿರುವ ಅದ್ಬುತ ಎಸ್‌ಯುವಿ. ಇಂತಹ ಅದೆಷ್ಟೋ ಕಾರು ಉತ್ಸಾಹಿಗಳನ್ನು ತನ್ನತ್ತ ಸೆಳೆದು ಅವರ ದಣಿವರಿಸಿದ ಸ್ಕೋಡಾ ಕುಶಾಕ್ ಕುರಿತು ನಮ್ಮ ಡ್ರೈವ್‌ಸ್ಪಾರ್ಕ್ ತಂಡ ವಿಶೇಷ ವರದಿಯನ್ನು ಮಾಡಿದೆ. ಕಾರಿನ ಗುಣಮಟ್ಟ, ಪರ್ಫಾಮೆನ್ಸ್, ಸೇಫ್ಟಿ, ಆರಾಮದಾಯಕತೆ ಸೇರಿದಂತೆ ಎಲ್ಲಾ ವಿಷಯಗಳ ಕುರಿತಂತೆ ವಿವರವಾದ ಮಾಹಿತಿಯನ್ನು ಈ ವಿಡಿಯೋದಲ್ಲಿ ನೀಡಲಾಗಿದೆ. ಮೊದಲೇ ಹೇಳಿದಂತೆ 2019ರ INRC ಚಾಂಪಿಯನ್ ಆಗಿರುವ ಚೇತನ್ ಶಿವರಾಮ್ ಅವರ ಸ್ಕೋಡಾ ಕುಶಾಕ್ ಅನ್ನು ಕೂರ್ಗ್‌ನ ಆಫ್‌ರೋಡ್‌ ಸ್ಥಳಗಳಲ್ಲಿ ಓಡಿಸಿ ವಿಡಿಯೋ ಚಿತ್ರಿಸಲಾಗಿದೆ.

ಭಾರತೀಯ ಆಫ್‌ರೋಡ್‌ಗೆ ಸರಿಹೊಂದುವ ಪರಿಪೂರ್ಣ ಕಾರನ್ನು ಹುಡುಕುವುದು ತುಂಬಾ ಕಷ್ಟ. ಆದ್ರೆ ಚಿಂತಿಸಬೇಡಿ, ಸ್ಕೋಡಾ ಕುಶಾಕ್ ಇದ್ದಾಗ ಆ ಗೊಂದಲ ಬೇಕಿಲ್ಲ. ಇದನ್ನು ನಾವು ಹೇಳುತ್ತಿಲ್ಲ, 2019ರ INRC ಚಾಂಪಿಯನ್ ಚೇತನ್ ಶಿವರಾಮ್ ತಮ್ಮ ಸ್ವಂತ ಅನುಭವದೊಂದಿಗೆ ಖಚಿತಪಡಿಸಿದ್ದಾರೆ. ಅಷ್ಟಕ್ಕೂ ನಿಮಗೆ ಚೇತನ್ ಶಿವರಾಮ್ ಅವರ ಬಗ್ಗೆ ವಿವರವಾಗಿ ಹೇಳಲೇ ಇಲ್ಲ.

500 ಕ್ಕೂ ಹೆಚ್ಚು ಟ್ರೋಫಿಗಳು, 400 ಕ್ಕೂ ಈವೆಂಟ್‌ಗಳ ಜೊತೆಗೆ 26 ವರ್ಷಗಳ ಅನುಭವ ಮತ್ತು 270 ಮಂದಿಗೆ ತರಬೇತಿ ನೀಡಿದ ಮೋಟಾರ್‌ಸ್ಪೋರ್ಟ್ ಲೆಜೆಂಡ್ ಚೇತನ್ ಶಿವರಾಮ್. ಇಂತಹ ಅನುಭವಿ ಕಾರು ಉತ್ಸಾಹಿಯಾಗಿರುವ ಚೇತನ್ ಶಿವರಾಮ್ ಅವರಿಗೆ ಸ್ಕೋಡಾ ಕುಶಕ್ ಅಂದ್ರೆ ಬಲು ಇಷ್ಟ. ಇದರ ಪರ್ಫಾಮೆನ್ಸ್‌ಗೆ ಮನಸೋತಿರುವ ಅವರು, ನಮಗೆ ತಿಳಿಯದ ಅದೆಷ್ಟೋ ಮಾಹಿತಿ ಹಂಚಿಕೊಂಡಿದ್ದಾರೆ.

ದೇಶದಲ್ಲಿ ಎಲ್ಲೂ ಕಾಣಸಿಗದಂತಹ ಆಫ್‌ರೋಡ್‌ಗಳು ನಮ್ಮ ಕರ್ನಾಟಕದ ಕೂರ್ಗ್‌ನಲ್ಲಿವೆ. ಇದೇ ಸ್ಥಳದಲ್ಲಿ ಸುಮಾರು 26 ವರ್ಷಗಳ ಅನುಭವದೊಂದಿಗೆ ಆಫ್‌ರೋಡ್‌ ರ್ಯಾಲಿಗಳನ್ನು ಮಾಡಿರುವ ಚೇತನ್‌ ಶಿವರಾಮ್ ಅವರಿಗೆ ಸ್ಕೋಡಾ ಕುಶಾಕ್‌ನಲ್ಲಿನ ಗುಣಮಟ್ಟ, ಪರ್ಫಾಮೆನ್ಸ್, ಸೇಫ್ಟಿ, ಆರಾಮದಾಯಕತೆ ಬಗ್ಗೆ ಸ್ವತಃ ಅವರೇ ಅನುಭವವನ್ನು ಹಂಚಿಕೊಂಡಿದ್ದಾರೆ.

Skoda Kushaq Road Trip

ಕಾರು ಖರೀದಿಸಿ ಸುಮಾರು ಎರಡು ವರ್ಷಗಳಾಗಿವೆ. ಇಂದಿಗೂ ಯಾವುದೇ ಬೇಸರವಿಲ್ಲದೇ ನಾನು ಕಾರಿನಲ್ಲಿ ಬಹಳಷ್ಟು ಪ್ರಯಾಣಿಸುತ್ತೇನೆ. ಇದು ತುಂಬಾ ಆರಾಮದಾಯಕ ವಾಹನವಾಗಿದೆ. ಅಲ್ಲದೆ ವಾಹನವು ಮೂರು ಸಿಲಿಂಡರ್ ಟರ್ಬೊ ಎಂಜಿನ್ ಹೊಂದಿರುವ ಪವರ್‌ಫುಲ್ ಕಾರಾಗಿದೆ. ತುಂಬಾ ಆರಾಮವಾಗಿ ಓವರ್‌ಟೇಕ್ ಮಾಡುತ್ತೇನೆ. ಕಾರಿನಲ್ಲಿರುವ ಮತ್ತೊಂದು ಬೆಸ್ಟ್ ಫೀಚರ್ ಎಂದರೆ ಕ್ರೂಸ್ ಕಂಟ್ರೋಲ್ ಎಂದು ಹಲವು ವಿಷಯಗಳನ್ನು ಹಂಚಿಕೊಂಡಿದ್ದಾರೆ.

More from DriveSpark

Article Published On: Friday, September 27, 2024, 11:21 [IST]
English summary
Skoda kushaq road trip coorg special video
Read more on skoda india
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+