ಉತ್ತಮ ಫೀಚರ್ಸ್, ಬೆಸ್ಟ್ ಡಿಸೈನ್, ಆಧುನಿಕ ತಂತ್ರಜ್ಞಾನ: ಖರೀದಿಗೆ ಬೆಸ್ಟ್, ಮಾರಾಟದಲ್ಲಿ ಕುಸಿತ!

ಜನಪ್ರಿಯ ಕಾರು ತಯಾರಕ ಕಂಪನಿಯಾದ ಸ್ಕೋಡಾ ಆಟೋ ಇಂಡಿಯಾ ತನ್ನ ಕುಶಾಕ್ ಮಿಡ್ ಎಸ್‍ಯುವಿಯನ್ನು ಭರ್ಜರಿಯಾಗಿ ಮಾರಾಟವಾಗುತ್ತಿದೆ. ಈ ಸ್ಕೋಡಾ ಕುಶಾಕ್ ಭಾರತೀಯ ಮಾರುಕಟ್ಟೆಯಲ್ಲಿ ಜನಪ್ರಿಯ ಎಸ್‍ಯುವಿಗಳಲ್ಲಿ ಒಂದಾಗಿದೆ. ಕಳೆದ ತಿಂಗಳಿನಲ್ಲಿ ಈ ಜನಪ್ರಿಯ ಸ್ಕೋಡಾ ಕುಶಾಕ್ ಎಸ್‍ಯುವಿಯ ಮಾರಾಟದ ಬಗ್ಗೆ ಮಾಹಿತಿ ಇಲ್ಲಿದೆ.

2024ರ ಏಪ್ರಿಲ್ ತಿಂಗಳಿನಲ್ಲಿ ಸ್ಕೋಡಾ ಕುಶಾಕ್ ಮಾದರಿಯ 1,159 ಯುನಿಟ್‌ಗಳು ಮಾರಾಟವಾಗಿವೆ. 2023ರ ಪ್ರಿಲ್ ತಿಂಗಳಿನಲ್ಲಿ ಕುಶಾಕ್‌ನ 2,162 ಯುನಿಟ್‌ಗಳನ್ನು ಮಾರಾಟ ಮಾಡಲಾಗಿತ್ತು. ಇದನ್ನು ಕಳೆದ ತಿಂಗಳ ಮಾರಾಟಕ್ಕೆ ಹೋಲಿಸಿದರೆ ವರ್ಷದಿಂದ ವರ್ಷಕ್ಕೆ ಕುಸಿತ ಕಂಡಿದೆ. ಇನ್ನು 2024ರ ಮಾರ್ಚ್ ತಿಂಗಳಿನಲ್ಲಿ ಕುಶಾಕ್‌ನ 1,293 ಯುನಿಟ್‌ಗಳು ಮಾರಾಟವಾಗಿತ್ತು. ಇದನ್ನು ಕಳೆದ ತಿಂಗಳ ಮಾರಾಟಕ್ಕೆ ಹೋಲಿಸಿದರೆ ತಿಂಗಳಿನಿಂದ ತಿಂಗಳ ಮಾರಾಟದಲ್ಲಿ ಕುಸಿತ ಕಂಡಿದೆ.

Skoda Kushaq

ಸ್ಕೋಡಾ ಕುಶಾಕ್ (Skoda Kushaq) ಹೆಚ್ಚು ಪ್ರೀಮಿಯಂ ವೈಶಿಷ್ಟ್ಯಗಳು ಮತ್ತು ಹೆಚ್ಚಿನ ಮೈಲೇಜ್ ಹೊಂದಿರುವ ಕಾರು ಮಾದರಿಯಾಗಿದೆ. ಇದಲ್ಲದೆ, ಗುಶಾಕ್ ಹೆಚ್ಚಿನ ಸುರಕ್ಷತಾ ವೈಶಿಷ್ಟ್ಯಗಳನ್ನು ಕೂಡ ಹೊಂದಿದೆ. ಇನ್ನು 2024ರ ಮೇ ತಿಂಗಳಿನಲ್ಲಿ ಕುಶಾಕ್ ಒಟ್ಟು ರಿಯಾಯಿತಿಯು ರೂ. 2.5 ಲಕ್ಷಗಳವರೆಗೆ ಆಗಿದೆ. ಈ ಎಸ್‍ಯುವಿಯು ಆರಂಬಿಕ ಬೆಲೆಯು ಎಕ್ಸ್ ಶೋರೂಂ ಪ್ರಕಾರ ರೂ.11.99 ಲಕ್ಷವಾಗಿದೆ.

ಈ ಸ್ಕೋಡಾ ಕುಶಾಕ್ ಎಸ್‍ಯುವಿ ಸೌಂದರ್ಯದ ನವೀಕರಣಗಳನ್ನು ಒಳಗೊಂಡಿರುವ ಹೈ-ಸ್ಪೆಕ್ ಮಾಂಟೆ ಕಾರ್ಲೋ ಟ್ರಿಮ್‌ಗಳನ್ನು ಒಳಗೊಂಡಿದೆ. ಸ್ಕೋಡಾ ಕುಶಾಕ್ ಎಸ್‍ಯುವು ಎರಡು ಎಂಜಿನ್ ಆಯ್ಕೆಗಳೊಂದಿಗೆ ಬರುತ್ತದೆ. ಮೂಲ ಪವರ್‌ಟ್ರೇನ್ ಯುನಿಟ್ 1.0-ಲೀಟರ್, 3-ಸಿಲಿಂಡರ್ ಎಂಜಿನ್ ಆಗಿದ್ದು, ಇದು 115 ಬಿಹೆಚ್‍ಪಿ ಪವರ್ ಮತ್ತು 178 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ.

Skoda Kushaq

ಮತ್ತೊಂದೆಡೆ, ಹೆಚ್ಚು ಶಕ್ತಿಶಾಲಿ 1.5-ಲೀಟರ್ TSI ಎಂಜಿನ್ 150 ಬಿಹೆಚ್‍ಪಿ ಪವರ್ ಮತ್ತು 250 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. ಈ ಎರಡೂ ಎಂಜಿನ್‌ಗಳನ್ನು ಮ್ಯಾನ್ಯುವಲ್ ಮತ್ತು ಆಟೋಮ್ಯಾಟಿಕ್ ಗೇರ್‌ಬಾಕ್ಸ್ ಆಯ್ಕೆಗಳೊಂದಿಗೆ ನೀಡಲಾಗುತ್ತದೆ ಎಂದು ನಮೂದಿಸುವುದು ಯೋಗ್ಯವಾಗಿದೆ. ಆದರೆ 1.0 TSI ಎಂಜಿನ್ 1.5 TSI ರೂಪಾಂತರದಲ್ಲಿ ಕಂಡುಬರುವ 7-ಸ್ಪೀಡ್ DCT ಗೇರ್‌ಬಾಕ್ಸ್ ಬದಲಿಗೆ 6-ಸ್ಪೀಡ್ ಆಟೋಮ್ಯಾಟಿಕ್ ಗೇರ್‌ಬಾಕ್ಸ್ ಅನ್ನು ಒಳಗೊಂಡಿದೆ.

ಸ್ಕೋಡಾ ಕುಶಾಕ್, ಐದು ಸೀಟುಗಳನ್ನು ಹೊಂದಿರುವ ಎಸ್‌ಯುವಿ ಆಗಿದ್ದು, 19.2 ಕಿ.ಮೀ ಮೈಲೇಜ್ ನೀಡಲಿದ್ದು, FWD (ಫ್ರಂಟ್ ವೀಲ್ ಡ್ರೈವ್) ತಂತ್ರಜ್ಞಾನವನ್ನು ಹೊಂದಿದೆ. ಜೊತೆಗೆ ಹಲವು ವೈಶಿಷ್ಟ್ಯಗಳನ್ನು ಹೊಂದಿದೆ. ಅವುಗಳೆಂದರೆ, 8 ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್, ಆಕರ್ಷಕ ಸನ್‌ರೂಫ್, ವೆಂಟಿಲೇಟೆಡ್ ಫ್ರಂಟ್ ಸೀಟ್ಸ್, ಸಬ್ ವೂಫರ್, ವೈರ್‌ಲೆಸ್ ಫೋನ್ ಚಾರ್ಜಿಂಗ್‌ ಹಾಗೂ 6 ಸ್ಪೀಕರ್ ಸೌಂಡ್ ಸಿಸ್ಟಮ್ ಅನ್ನು ಪಡೆದಿದೆ.

Skoda Kushaq

ಇನ್ನು ಸುರಕ್ಶತೆಯ ದೃಷ್ಟಿಯಿಂದಲ್ಲೂ ಸ್ಕೋಡಾ ಕುಶಾಕ್ ಅತ್ಯುತ್ತಮ ಎಸ್‌ಯುವಿಯಾಗಿದ್ದು, ABS (ಆಂಟಿಲಾಕ್ ಬ್ರೇಕಿಂಗ್ ಸಿಸ್ಟಮ್) EBD (ಎಲೆಕ್ಟ್ರಾನಿಕ್ ಬ್ರೇಕ್‌ಫೋರ್ಸ್ ಡಿಸ್ಟ್ರಿಬ್ಯೂಷನ್), ESC (ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಕಂಟ್ರೋಲ್), TPMS (ಟೈರ್ ಪ್ರೆಶರ್ ಮಾನಿಟರಿಂಗ್ ಸಿಸ್ಟಮ್), ರೇರ್ ವ್ಯೂ ಕ್ಯಾಮರಾವನ್ನು ಪಡೆದಿದೆ. ಸ್ಕೋಡಾ ಕುಶಾಕ್ ಮಾದರಿಯು ಹ್ಯುಂಡೈ ಕ್ರೆಟಾ, ಕಿಯಾ ಸೆಲ್ಟೋಸ್ ಮತ್ತು ಮಾರುತಿ ಸುಜುಕಿ ಗ್ರ್ಯಾಂಡ್ ವಿಟಾರಾ ಎಸ್‌ಯುವಿಗಳಿಗೆ ಪೈಪೋಟಿ ನೀಡುತ್ತದೆ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

More from DriveSpark

Article Published On: Monday, May 20, 2024, 16:18 [IST]
English summary
Skoda kushaq suv sales in april 2024 details
Read more on ಸ್ಕೋಡಾ skoda
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+