ಸ್ಕೋಡಾ ಕಾರಿನ ಬುಕ್ಕಿಂಗ್ ಕಂಡು ಬೆಚ್ಚಿಬಿದ್ದ ಸ್ವದೇಶಿ ಕಾರುಗಳು: ಜನ ಮುಗಿಬಿದ್ದು ಖರೀದಿ!

ಭಾರತದಲ್ಲಿ ಸ್ಪೋರ್ಟ್ ಯುಟಿಲಿಟಿ ವಾಹನಗಳಿಗೆ (ಎಸ್‍ಯುವಿ) ಹೆಚ್ಚಿನ ಬೇಡಿಕೆ ಪಡೆಯುತ್ತಿರುವಾ ಸ್ಕೋಡಾ ತನ್ನ ಬಹುನಿರೀಕ್ಷಿತ ಸ್ಕೋಡಾ ಕೈಲಾಕ್ ಕಾಂಪ್ಯಾಕ್ಟ್ ಎಸ್‍ಯುವಿಯನ್ನು ಇತ್ತೀಚೆಗೆ ಬಿಡುಗಡೆಗೊಳಿಸಿತು. ಈ ಸ್ಕೋಡಾ ಕೈಲಾಕ್ ಎಸ್‍ಯುವಿಯ ಎಲ್ಲಾ ರೂಪಾಂತರಗಳ ಸಂಪೂರ್ಣ ಬೆಲೆ ವಿವರಗಳನ್ನು ಇತ್ತೀಚೆಗೆ ಬಹಿರಂಗಪಡಿಸಿತು. ಈ ಸ್ಕೋಡಾ ಕೈಲಾಕ್ (Skoda Kylaq) ಕಾಂಪ್ಯಾಕ್ಟ್ ಸ್ಪೋರ್ಟ್ ಯುಟಿಲಿಟಿ ವಾಹನವು ಸಾಮಾನ್ಯ ಜನರಿಗೆ ಕೈಗೆಟುಕುವಂತಿದೆ. ಸ್ಕೋಡಾ ನಿಜವಾಗಿಯೂ ಸಣ್ಣ ಎಸ್‌ಯುವಿ ವಿಭಾಗದಲ್ಲಿ ಹೊಸ ಸಂಚಲನ ಸೃಷ್ಟಿಸಿ ಎದುರಾಳಿ ಮಾರುತಿ ಸುಜುಕಿ, ಟಾಟಾ ಮೋಟಾರ್ಸ್, ಕಿಯಾ ಮತ್ತು ಹ್ಯುಂಡೈ ಕಂಪನಿಗಳಿಗೆ ನಡುಕ ಹುಟ್ಟಿಸಿದೆ.

ಬುಕ್ಕಿಂಗ್ ಆರಂಭವಾದ ಕೇವಲ 10 ದಿನಗಳಲ್ಲಿ ಸ್ಕೋಡಾದ ಎಂಟ್ರಿ ಲೆವೆಲ್ ಕಾರಿಗೆ 10,000 ಬುಕ್ಕಿಂಗ್ ಸಿಕ್ಕಿದೆ. ಈ ಬಹುತೇಕ ಬುಕ್ಕಿಂಗ್ ಬೇಸ್ ಕ್ಲಾಸಿಕ್ ರೂಪಾಂತರಕ್ಕೆ ಆಗಿದೆ. ಈ ಮಾದರಿಯು ಸ್ಕೋಡಾ ನಿರೀಕ್ಷಿಸಿದ್ದಕ್ಕಿಂತ ಹೆಚ್ಚಿನ ಬುಕಿಂಗ್‌ಗಳನ್ನು ಪಡೆದಿರುವುದರಿಂದ ಕಂಪನಿಗೆ ದುಪ್ಪಟ್ಟು ಸಂತೋಷವಾಗಿದೆ. ಮೂಲ ಕ್ಲಾಸಿಕ್ ರೂಪಾಂತರದ ಮೊದಲ ಬ್ಯಾಚ್ ಸಂಪೂರ್ಣವಾಗಿ ಮಾರಾಟವಾಗಿದೆ ಮತ್ತು ರೂಪಾಂತರಕ್ಕಾಗಿ ಬುಕಿಂಗ್ ಅನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ ಎಂದು ಸ್ಕೋಡಾ ಇಂಡಿಯಾ ಪ್ರಕಟಿಸಿದೆ.

Skoda Kylaq

ಸ್ಕೋಡಾ ಕೈಲಾಕ್ ಆರಂಭಿಕ ಬ್ಯಾಚ್ ಕೈಲಾಕ್‌ನ 33,000 ಯುನಿಟ್‌ಗಳಾಗಿರುತ್ತದೆ ಮತ್ತು ಮುಂದಿನ ಮೇ ವೇಳೆಗೆ ಎಸ್‌ಯುವಿಯ ವಿತರಣೆಗಳು ಪೂರ್ಣವಾಗುತ್ತದ ಪೂರ್ಣಗೊಳ್ಳಲಿವೆ ಎಂದು ಕಂಪನಿ ಹೇಳಿತ್ತು. ಮೊದಲ ಬ್ಯಾಚ್ ವಿತರಣೆ ಬಳಿಕ ಬುಕಿಂಗ್‌ಗಳು ಪುನರಾರಂಭಗೊಳ್ಳುತ್ತವೆ. ಗ್ರಾಹಕರ ಬೇಡಿಕೆಗೆ ಅನುಗುಣವಾಗಿ ರೂಪಾಂತರಗಳ ಉತ್ಪಾದನೆಯನ್ನು ಸರಿಹೊಂದಿಸಲು ಸ್ಕೋಡಾಗೆ ಸಾಧ್ಯವಾಗುತ್ತದೆ ಎಂದು ಹೇಳಿಕೊಂಡಿದೆ.

2025ರ ಜನವರಿ 27 ರಿಂದ ಹೆಚ್ಚಿನ ಶೋರೂಮ್‌ಗಳಲ್ಲಿ ಕೈಲಾಕ್ ಲಭ್ಯವಿರುತ್ತದೆ ಎಂದು ಸ್ಕೋಡಾ ಇಂಡಿಯಾ ಭರವಸೆ ನೀಡಿದೆ. ಸ್ಕೋಡಾ ಕೈಲಾಕ್ ಎಸ್‍ಯುವಿಯ ಎಂಟ್ರಿ ಲೆವೆಲ್ ಕ್ಲಾಸಿಕ್ ರೂಪಾಂತರದ ಬೆಲೆಯು ಎಕ್ಸ್ ಶೋರೂಂ ಪ್ರಕಾರ ರೂ.7.89 ಲಕ್ಷವಾದರೆ, ಟಾಪ್ ಸ್ಪೆಕ್ ಪ್ರೆಸ್ಟೀಜ್ ರೂಪಾಂತರದ ಬೆಲೆಯು ರೂ.14.40 ಲಕ್ಷವಾಗಿದೆ. ಈ ಸ್ಕೋಡಾ ಕೈಲಾಕ್ ಎಸ್‌ಯುವಿ ಕ್ಲಾಸಿಕ್, ಸಿಗ್ನೇಚರ್, ಸಿಗ್ನೇಚರ್+ ಮತ್ತು ಪ್ರೆಸ್ಟೀಜ್ ಎಂಬ ರೂಪಾಂತರಗಳಲ್ಲಿ ಲಭ್ಯವಿದೆ.

Skoda Kylaq

ಸ್ಕೋಡಾ ಮತ್ತು ಅದರ ಮೂಲ ಬ್ರ್ಯಾಂಡ್ ಫೋಕ್ಸ್‌ವ್ಯಾಗನ್‌ನಿಂದ ಕಾರುಗಳನ್ನು ಖರೀದಿಸಲು ಜನರು ಹಿಂಜರಿಯುವುದಕ್ಕೆ ಒಂದು ಕಾರಣವೆಂದರೆ ಆ ಕಾರುಗಳ ನಿರ್ವಹಣಾ ವೆಚ್ಚಗಳಿಂದಾಗಿ ಎಂದು ಹೇಳಬಹುದು. ಈ ವಿದೇಶಿ ಬ್ರಾಂಡ್ ಕಾರುಗಳಿಗೆ ನಿರ್ವಹಣಾ ವೆಚ್ಚ ದುಬಾರಿಯಾಗಿರುವುದರಿಂದ ಕಾರು ಪ್ರೇಮಿಗಳು ಕೂಡ ಎರಡೂ ಬಾರಿ ಯೋಚಿಸುತ್ತಾರೆ. ಆದರೆ ಇದೀಗ ಯಾವುದೇ ಟೆನ್ಷನ್ ಇಲ್ಲದೇ ಸ್ಕೋಡಾದ ಹೊಸ ಕಾರನ್ನು ತೆಗೆದುಕೊಳ್ಳಬಹುದು ಎಂದು ಕಂಪನಿ ಹೇಳಿದೆ.

ಈ ವಿಭಾಗದಲ್ಲಿ ಕೈಲಾಕ್ ಅತ್ಯಂತ ಕಡಿಮೆ ಬೆಲೆಯ ಕಾರು ಎಂದು ಸ್ಕೋಡಾ ಹೇಳಿಕೊಂಡಿದೆ. ಮೊದಲ 33,333 ಗ್ರಾಹಕರಿಗೆ 5 ವರ್ಷಗಳವರೆಗೆ ಪ್ರತಿ ಕಿ.ಮೀ.ಗೆ ನಿರ್ವಹಣಾ ವೆಚ್ಚ ರೂ 0.24 ಎಂದು ಸ್ಕೋಡಾ ಹೇಳಿಕೊಂಡಿದೆ. ಮೊದಲ 33333 ಗ್ರಾಹಕರು 3 ವರ್ಷಗಳ ಸ್ಟ್ಯಾಂಡರ್ಡ್ ಪ್ಯಾಕೇಜ್ ಅನ್ನು ಉಚಿತವಾಗಿ ಪಡೆಯುತ್ತಾರೆ. ಇದು ನಿರ್ವಹಣೆಯನ್ನು ಗಮನಾರ್ಹವಾಗಿ ಕಡಿಮೆ ಮಾಡಲು ಸಹಾಯ ಮಾಡುತ್ತದೆ.

Skoda Kylaq

800000 ಕಿಲೋಮೀಟರ್‌ಗಳ ಸಂಪೂರ್ಣವಾದ ಟೆಸ್ಟ್ ನಡೆಸಿ ಎಲ್ಲಾ ನ್ಯೂನತೆಗಳನ್ನು ಸರಿಪಡಿಸಿ ಸ್ಕೋಡಾ ಈ ಕಾರನ್ನು ಉತ್ತಮ ರೀತಿಯಲ್ಲಿ ಬಿಡುಗಡೆ ಮಾಡಿದೆ. ಇದು ಮುಖ್ಯವಾಗಿ ಭಾರತೀಯ ಮಾರುಕಟ್ಟೆಯನ್ನು ಗುರಿಯಾಗಿಸಿಕೊಂಡಿದೆ. ಇದಲ್ಲದೆ, ಈ ಕಾರಿನಲ್ಲಿ ಸ್ಥಳೀಯ ಘಟಕಗಳನ್ನು ಬಳಸಲಾಗುತ್ತದೆ. ಇದು ಬಿಡಿ ಭಾಗಗಳ ಲಭ್ಯತೆಯನ್ನು ಖಾತ್ರಿ ಪಡಿಸುತ್ತದೆ ಮತ್ತು ನಿರ್ವಹಣಾ ವೆಚ್ಚವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.

ಫೋಕ್ಸ್‌ವ್ಯಾಗನ್ ಗ್ರೂಪ್ ತನ್ನ ಇಂಡಿಯಾ 2.0 ಯೋಜನೆಯಡಿಯಲ್ಲಿ MQB A0 IN ಪ್ಲಾಟ್‌ಫಾರ್ಮ್‌ನೊಂದಿಗೆ ಗುರಿಯನ್ನು ಹೊಂದಿದೆ. ಸ್ಕೋಡಾ ಕೈಲಾಕ್ ಎಸ್‌ಯುವಿಯಲ್ಲಿ ಕುಶಾಕ್ ಮತ್ತು ಸ್ಲಾವಿಯಾದೊಂದಿಗೆ ಬಳಸಿದ ಅದೇ 1.0-ಲೀಟರ್ TSI ಪೆಟ್ರೋಲ್ ಎಂಜಿನ್‌ನಿಂದ ನಿಯಂತ್ರಿಸಲ್ಪಡುತ್ತದೆ. ಈ ಎಂಜಿನ್ 115 bhp ಪವರ್ ಮತ್ತು 178 Nm ಪೀಕ್ ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ.

ಈ ಎಂಜಿನ್ ಅನ್ನು 6-ಸ್ಪೀಡ್ ಮ್ಯಾನುವಲ್ ಮತ್ತು 6-ಸ್ಪೀಡ್ ಟಾರ್ಕ್ ಕರ್ನವಾಟರ್ ಆಟೋಮ್ಯಾಟಿಕ್ ಗೇರ್ ಬಾಕ್ಸ್ ಆಯ್ಕೆಗಳೊಂದಿಗೆ ಜೋಡಿಸಲಾಗುತ್ತದೆ. ಈ ಪ್ಲಾಟ್‌ಫಾರ್ಮ್ ಅನ್ನು ಬಳಸುವ ಮೂರನೇ ಸ್ಕೋಡಾ ಕಾರು ಕೈಲಾಕ್ ಅಗಿದೆ. ಇನ್ನು ಎಸ್‍ಯುವಿಯು ಆರು ಏರ್‌ಬ್ಯಾಗ್‌ಗಳು, EBD ಜೊತೆಗೆ ABS, ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಕಂಟ್ರೋಲ್, ಎಲೆಕ್ಟ್ರಾನಿಕ್ ಡಿಫರೆನ್ಷಿಯಲ್ ಲಾಕ್ ಮತ್ತು ISOFIX ಚೈಲ್ಡ್ ಸೀಟ್ ಮೌಂಟ್‌ಗಳು ಬೋರ್ಡ್‌ನಾದ್ಯಂತ ಸ್ಟ್ಯಾಂಡರ್ಡ್ ಸುರಕ್ಷತಾ ಫೀಚರ್ಸ್ ಗಳನ್ನು ಒಳಗೊಂಡಿವೆ.

More from DriveSpark

Article Published On: Monday, December 16, 2024, 13:42 [IST]
English summary
Skoda kylaq base variant classic sold out bookings closed temporarily details
Read more on skoda india
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+