Skoda: ಅಗ್ಗದ ಪ್ರೀಮಿಯಂ ಸ್ಕೋಡಾ ಕಾರಿಗೆ ಮುಗಿಬಿದ್ದ ಜನ: ಕೇವಲ 10 ದಿನಗಳಲ್ಲಿ 10,000 ಬುಕಿಂಗ್ಸ್!

ಭಾರತದಲ್ಲಿ ಸಬ್ -4 ಮೀಟರ್ ಕಾಂಪ್ಯಾಕ್ಟ್ ಎಸ್‌ಯುವಿಗಳಿಗೆ ಭಾರೀ ಬೇಡಿಕೆ ಇದೆ. ಈ ವಿಭಾಗದಲ್ಲಿ ಮಾರುತಿ ಸುಜುಕಿ ಅಗ್ರಸ್ಥಾನದಲ್ಲಿದ್ದು, ಉಳಿದಂತೆ ಟಾಟಾ ನೆಕ್ಸಾನ್, ಹ್ಯುಂಡೈ ವೆನ್ಯೂ, ಕಿಯಾ ಸೊನೆಟ್ ಮತ್ತು ಮಹೀಂದ್ರಾ ಎಕ್ಸ್‌ಯುವಿ 3 ಎಕ್ಸ್‌ಒ ಕಾರುಗಳು ಉತ್ತಮ ಮಾರಾಟದೊಂದಿಗೆ ಮುನ್ನುಗ್ಗುತ್ತಿವೆ. ಈ ವಿಭಾಗಕ್ಕೆ ಇದೀಗ ಪ್ರೀಮಿಯಂ ಬ್ರಾಂಡ್‌ ಆಗಿರುವ ಸ್ಕೋಡಾ ಎಂಟ್ರಿ ಕೊಟ್ಟಿದ್ದು, ಕೈಲಾಕ್ (Skoda Kylaq) ಎಂಬ ಹೊಸ ಸಬ್ -4 ಮೀಟರ್ ಕಾಂಪ್ಯಾಕ್ಟ್ ಎಸ್‌ಯುವಿಯನ್ನು ಇಳಿಸಿದೆ. ಈ ಕಾರು ಗ್ರಾಹಕರ ಮನಗೆದ್ದಿದ್ದು, ಭರ್ಜರಿ ಬುಕಿಂಗ್‌ಗಳನ್ನು ಗಳಿಸುತ್ತಿದೆ.

ಹೊಸ ಸ್ಕೋಡಾ ಕೈಲಾಕ್ 10 ದಿನಗಳಲ್ಲಿ ಬರೋಬ್ಬರಿ 10,000 ಕ್ಕೂ ಹೆಚ್ಚು ಬುಕಿಂಗ್‌ಗಳನ್ನು ಗಳಿಸಿದೆ. ಸ್ಕೋಡಾ ಡಿಸೆಂಬರ್ 2 ರಂದು ಕೈಲಾಕ್ ಕಾರಿಗಾಗಿ ಬುಕಿಂಗ್ ತೆರೆದಿತ್ತು. ಕಾರು ತಯಾರಕರು ಈಗಾಗಲೇ ಮೊದಲ 33,333 ಗ್ರಾಹಕರಿಗೆ ಸೀಮಿತ ಕೊಡುಗೆಯನ್ನು ಘೋಷಿಸಿದ್ದು, ಇದರಡಿ ಗ್ರಾಹಕರು ಕಾಂಪ್ಲಿಮೆಂಟರಿಯಾಗಿ 3 ವರ್ಷಗಳ ಸ್ಟ್ಯಾಂಡರ್ಡ್ ಮೆಂಟೆನೆನ್ಸ್ ಪ್ಯಾಕೇಜ್ (ಎಸ್ಎಂಪಿ) ಪಡೆಯಲಿದ್ದಾರೆ ಎಂದು ಕಂಪನಿ ತಿಳಿಸಿದೆ.

skoda-kylaq-garnered-more-than-10000-bookings-in-10-days

ಜೊತೆಗೆ ಹೊಸ ಸ್ಕೋಡಾ ಕೈಲಾಕ್ ಸಬ್ -4 ಮೀಟರ್ ಕಾಂಪ್ಯಾಕ್ಟ್ ಎಸ್‌ಯುವಿಯ ಮೊದಲ 33,333 ಗ್ರಾಹಕರಿಗೆ ಐದು ವರ್ಷಗಳವರೆಗೆ ಪ್ರತಿ ಕಿ.ಮೀ.ಗೆ 0.24 ರೂ.ಗಳಂತೆ ಅತ್ಯಂತ ಕಡಿಮೆ ನಿರ್ವಹಣಾ ವೆಚ್ಚವನ್ನು ಹೊಂದಿದೆ ಎಂದು ಹೇಳಲಾಗಿದೆ. ಹೊಸ ಸ್ಕೋಡಾ ಕೈಲಾಕ್ ಎಸ್‌ಯುವಿಯ ವಿತರಣೆಯು ಜನವರಿ 27 ರಿಂದ ಪ್ರಾರಂಭವಾಗಲಿದೆ.

ಗ್ರಾಹಕರೊಂದಿಗೆ ಸಂಪರ್ಕ ಸಾಧಿಸಲು, ಸ್ಕೋಡಾ ಕೈಲಾಕ್ ಜೊತೆಗೆ ಭಾರತದಾದ್ಯಂತ 'ಡ್ರೀಮ್ ಟೂರ್' ಅನ್ನು ಕಂಪನಿ ಪ್ರಾರಂಭಿಸಲಿದೆ. ಡಿಸೆಂಬರ್ 13 ರಂದು ಕಂಪನಿಯ ಚಕನ್ ಸ್ಥಾವರದಿಂದ ಮೂರು ಕೈಲಾಕ್ ಎಸ್‌ಯುವಿಗಳು 43 ದಿನಗಳಲ್ಲಿ 70 ನಗರಗಳನ್ನು ಒಳಗೊಂಡ ಮೂರು ವಿಭಿನ್ನ ಮಾರ್ಗಗಳಲ್ಲಿ ಹೊರಡಲಿವೆ. ಈ ಡ್ರೀಮ್ ಟೂರ್ ಪಶ್ಚಿಮ-ಉತ್ತರ ಮಾರ್ಗದಲ್ಲಿ ಮುಂಬೈ, ಸೂರತ್, ವಡೋದರಾ, ಅಹಮದಾಬಾದ್ ಮತ್ತು ದೆಹಲಿಯಂತಹ ನಗರಗಳನ್ನು ಪೂರ್ಣಗೊಳಿಸಲಿದೆ.

skoda-kylaq-garnered-more-than-10000-bookings-in-10-days

ಪಶ್ಚಿಮ-ದಕ್ಷಿಣ ಮಾರ್ಗದ ಮೂಲಕ ಪುಣೆ, ಕೊಲ್ಹಾಪುರ, ಪಣಜಿ, ಮಂಗಳೂರು, ಮೈಸೂರು, ಬೆಂಗಳೂರು ಮತ್ತು ಹೈದರಾಬಾದ್ ನಗರಗಳನ್ನು ಒಳಗೊಂಡಿದೆ. ಮೂರನೇ ಮಾರ್ಗವು ಪುಣೆಯಿಂದ ಪೂರ್ವಕ್ಕೆ ಹೋಗಲಿದ್ದು, ನಾಸಿಕ್, ನಾಗ್ಪುರ ಮತ್ತು ಕೋಲ್ಕತ್ತಾದಂತಹ ನಗರಗಳನ್ನು ಒಳಗೊಂಡಿರುತ್ತದೆ. ಈ ಡ್ರೀಮ್ ಟೂರ್ ಯಶಸ್ವಿಯಾಗಿ ಪೂರ್ಣಗೊಳಿಸುವುದಾಗಿ ಸ್ಕೋಡಾ ಆಟೋ ಇಂಡಿಯಾ ವಿಶ್ವಾಸ ವ್ಯಕ್ತಪಡಿಸಿದೆ.

ಸ್ಕೋಡಾ ಕೈಲಾಕ್ ವಿಶೇಷತೆಗಳು: ಹೊಸ ಸ್ಕೋಡಾ ಕೈಲಾಕ್ ಕಾಂಪ್ಯಾಕ್ಟ್ ಎಸ್‍ಯುವಿಯ ಆರಂಭಿಕ ಬೆಲೆಯು ರೂ.7.89 ಲಕ್ಷ (ಎಕ್ಸ್ ಶೋರೂಂ)ವಿದ್ದರೇ, ಟಾಪ್ ಎಂಡ್ ವೇರಿಯೆಂಟ್ ಬೆಲೆಯು ರೂ. 14.40 ಲಕ್ಷ (ಎಕ್ಸ್ ಶೋರೂಂ )ವಿದೆ. ಆರು ಏರ್‌ಬ್ಯಾಗ್‌ಗಳು, EBD ಜೊತೆಗೆ ABS, ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಕಂಟ್ರೋಲ್, ಎಲೆಕ್ಟ್ರಾನಿಕ್ ಡಿಫರೆನ್ಷಿಯಲ್ ಲಾಕ್ ಮತ್ತು ISOFIX ಚೈಲ್ಡ್ ಸೀಟ್ ಮೌಂಟ್‌ಗಳಂತಹ ಸೇಫ್ಟಿ ಫೀಚರ್ಸ್ ಹೊಂದಿದೆ.

skoda-kylaq-garnered-more-than-10000-bookings-in-10-days

ಹೊಸ ಸ್ಕೋಡಾ ಕೈಲಾಕ್ ಎಸ್‌ಯುವಿ ಫಿಚರ್ಸ್ ವಿಷಯಕ್ಕೆ ಬಂದರೆ, ಈ ಕಾರಿನಲ್ಲಿ ವೈರ್‌ಲೆಸ್ ಆಂಡ್ರಾಯ್ಡ್ ಆಟೋ/ಆಪಲ್ ಕಾರ್‌ಪ್ಲೇ, ಟೂ-ಸ್ಪೋಕ್ ಸ್ಟೀರಿಂಗ್ ವೀಲ್, 8-ಇಂಚಿನ ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್‌, ವೈರ್‌ಲೆಸ್ ಫೋನ್ ಚಾರ್ಜರ್, ಸಿಂಗಲ್ ಪೇನ್ ಸನ್‌ರೂಫ್‌ನೊಂದಿಗೆ 10-ಇಂಚಿನ ಟಚ್‌ಸ್ಕ್ರೀನ್, ಮುಂಭಾಗದ ಸೀಟ್ ವೆಂಟಿಲೇಶನ್‌ನಂತಹ ಫೀಚರ್ಸ್ ಇವೆ.

ಸ್ಕೋಡಾ ಕೈಲಾಕ್ ಎಂಜಿನ್ ವಿಷಯಕ್ಕೆ ಬಂದರೆ ಕುಶಾಕ್ ಮತ್ತು ಸ್ಲಾವಿಯಾ ಕಾರುಗಳಲ್ಲಿ ನೋಡುವ ಅದೇ 1.0-ಲೀಟರ್ TSI ಪೆಟ್ರೋಲ್ ಎಂಜಿನ್‌ ಅನ್ನು ಕೈಲಾಕ್ ಎಸ್‌ಯುವಿನಲ್ಲಿ ಬಳಸಲಾಗಿದೆ. ಈ ಎಂಜಿನ್ 6-ಸ್ಪೀಡ್ ಮ್ಯಾನುವಲ್ ಮತ್ತು 6-ಸ್ಪೀಡ್ ಟಾರ್ಕ್ ಕರ್ನವಾಟರ್ ಆಟೋಮ್ಯಾಟಿಕ್ ಗೇರ್ ಬಾಕ್ಸ್ ಆಯ್ಕೆಗಳೊಂದಿಗೆ ಬರುತ್ತದೆ. ಈ ಎಂಜಿನ್ 115 bhp ಪವರ್ ಮತ್ತು 178 Nm ಪೀಕ್ ಟಾರ್ಕ್ ಉತ್ಪಾದಿಸುತ್ತದೆ.

More from DriveSpark

Article Published On: Friday, December 13, 2024, 10:58 [IST]
English summary
Skoda kylaq garnered more than 10000 bookings in 10 days
Read more on skoda india
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+