Skoda: ಪ್ರತಿಸ್ಪರ್ಧಿಗಳಿಗೆ ನಡುಕ.. ಹೊಸ ಸ್ಕೋಡಾ ಕಾರಿನ ಹೆಸರು ಘೋಷಣೆ: ರೂ.8.5 ಲಕ್ಷ ಬೆಲೆ?
ಜರ್ಮನಿ ಮೂಲದ ಸ್ಕೋಡಾ (Skoda) ಜನಪ್ರಿಯ ವಾಹನ ತಯಾರಕ ಕಂಪನಿಯಾಗಿ ಗುರುತಿಸಿಕೊಂಡಿದೆ. ದೇಶೀಯ ಮಾರುಕಟ್ಟೆಯಲ್ಲಿ ಕುಶಾಕ್, ಸ್ಲಾವಿಯಾ ಸೇರಿದಂತೆ ವಿವಿಧ ಕಾರುಗಳನ್ನು ಯಶಸ್ವಿಯಾಗಿ ಮಾರಾಟ ಮಾಡುತ್ತಿದೆ. ಹೆಚ್ಚಿನ ಸಂಖ್ಯೆಯಲ್ಲಿ ಗ್ರಾಹಕರು ಕೂಡ ಇಷ್ಟಪಟ್ಟು ಖರೀದಿಸುತ್ತಿದ್ದಾರೆ. ಕಂಪನಿಯು ಹಲವು ತಿಂಗಳಿಂದ ಅತ್ಯಂತ ಕೈಗೆಟುಕುವ ಬೆಲೆಯಲ್ಲಿ ಹೊಚ್ಚ ಹೊಸ ಕಾರೊಂದನ್ನು ಬಿಡುಗಡೆಗೊಳಿಸಲು ತಯಾರಿ ನಡೆಸುತ್ತಿದೆ. ಇಂದು ನೂತನ ಕಾರಿನ ಹೆಸರನ್ನು ಅಧಿಕೃತವಾಗಿ ಘೋಷಣೆ ಮಾಡಿದೆ. ಆ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲಿದೆ.
ಹೊಸ ಕಾರಿನ ಹೆಸರೇನು: ಸ್ಕೋಡಾ ಕಂಪನಿಯು ನೂತನ ಕಾರಿಗೆ ಕೈಲಾಕ್ (Kylaq) ಎಂದು ನಾಮಕರಣ ಮಾಡಿದೆ. ಇದೊಂದು ಸಬ್ ಕಾಂಪ್ಯಾಕ್ಟ್ ಎಸ್‌ಯುವಿಯಾಗಿದೆ. ಈ ಹೆಸರನ್ನು ಸ್ಫಟಿಕ (Crystal) ಎಂಬ ಸಂಸ್ಕೃತ ಪದದಿಂದ ತೆಗೆದುಕೊಳ್ಳಲಾಗಿದೆ. ವಾಹನ ತಯಾರಕರು 'ನೇಮ್ ಯುವರ್ ಸ್ಕೋಡಾ' ಅಭಿಯಾನದಡಿ ಹೊಸ ಕಾರಿಗೆ ಹೆಸರು ಸೂಚಿಸುವಂತೆ ಜನರನ್ನು ಕೇಳಿದ್ದರು.

ಆ ಹೆಸರು ಇಂಗ್ಲಿಷ್ ಭಾಷೆಯ 'ಕೆ' ಅಕ್ಷರದಿಂದ ಆರಂಭವಾಗಿ 'ಕ್ಯೂ' ನಿಂದ ಮುಕ್ತಾಯಗೊಳ್ಳಬೇಕು ಎಂಬ ಸರಳವಾದ ಷರತ್ತನ್ನು ವಿಧಿಸಿದ್ದರು. ಜನರಿಂದ ಕೂಡ ಉತ್ತಮವಾದ ಸ್ಪಂದನೆ ವ್ಯಕ್ತವಾಗಿತ್ತು. ಸಾವಿರಾರು ವಿಶಿಷ್ಟವಾದ ಹೆಸರಗಳನ್ನು ಸಲಹೆ ರೂಪದಲ್ಲಿ ನೀಡಿದ್ದರು. ಕೈಲಾಕ್, ಕೈಮಾಕ್, ಕ್ವಿಕ್, ಕಾರಿಕ್, ಕೈರೋಕ್, ಕಾಸ್ಮಿಕ್, ಕೈಕ್, ಕಯಾಕ್, ಕ್ಲಿಕ್ ಮತ್ತು ಕಾರ್ಮಿಕ್ ಎಂಬ ಹೆಸರುಗಳನ್ನು ಒಳಗೊಂಡ ಕಿರುಪಟ್ಟಿಯೊಂದನ್ನು ತಯಾರಿಸಲಾಗಿತ್ತು. ಅಂತಿಮವಾಗಿ 'ಕೈಲಾಕ್' ಎಂದು ನಾಮಕರಣ ಮಾಡಲಾಗಿದೆ.
ವಿನ್ಯಾಸ (Design): ಹೊಸ ಸ್ಕೋಡಾ ಕೈಲಾಕ್ (Skoda Kylaq) ಎಸ್‌ಯುವಿ 2025ರ ವರ್ಷಾರಂಭದಲ್ಲಿ ಬಿಡುಗಡೆಯಾಗುವ ನಿರೀಕ್ಷೆಯಿದೆ. ಈಗಾಗಲೇ ಸಾಮಾಜಿಕ ಜಾಲತಾಣ ಖಾತೆಯಲ್ಲಿ ಹಂಚಿಕೊಳ್ಳಲಾದ ಟೀಸರ್ ಫೋಟೋಗಳು ಈ ಕಾರಿನ ವಿನ್ಯಾಸ ಹೇಗಿರಲಿದೆ ಎಂಬುದನ್ನು ಮೇಲ್ನೋಟಕ್ಕೆ ತಿಳಿಯುವಂತೆ ಮಾಡಿವೆ. ನೂತನ ಕಾರು ಸ್ಪ್ಲಿಟ್ ಹೆಡ್‌ಲೈಟ್‌ಗಳು, ಎಲ್ಇಡಿ ಡಿಆರ್‌ಎಲ್‌ಗಳು, ಎಲ್-ಆಕಾರಕ್ಕೆ ಹೋಲುವ ಎಲ್‌ಇಡಿ ಟೈಲ್‌ಲೈಟ್‌ಗಳು ಮತ್ತು ಅಲಾಯ್ ವೀಲ್‌ಗಳನ್ನು ಪಡೆದುಕೊಂಡಿರಲಿದೆ ಎಂಬ ಸುಳಿವನ್ನು ಸಹ ಆ ಫೋಟೋಗಳು ನೀಡುತ್ತವೆ.
ಕಾರ್ಯಕ್ಷಮತೆ (Performance): ಸ್ಕೋಡಾ ಕೈಲಾಕ್ ಕಾರು 1-ಲೀಟರ್ ಟಿಎಸ್ಐ ಟರ್ಬೊ-ಪೆಟ್ರೋಲ್ ಎಂಜಿನ್ ಒಳಗೊಂಡಿರುವ ಸಾಧ್ಯತೆಯಿದ್ದು, 115 ಪಿಎಸ್ ಗರಿಷ್ಠ ಶಕ್ತಿ (ಪವರ್) ಹಾಗೂ 178 ಎನ್ಎಂ ಪೀಕ್ ಟಾರ್ಕ್ ಉತ್ಪಾದಿಸಬಹುದು ಎಂದು ಅಂದಾಜಿಸಲಾಗಿದೆ. ಜೊತೆಗೆ 6-ಸ್ಪೀಡ್ ಮ್ಯಾನುವಲ್ ಮತ್ತು 6-ಸ್ಪೀಡ್ ಆಟೋಮೆಟಿಕ್ ಗೇರ್‌ಬಾಕ್ಸ್‌ನ್ನು ಪಡೆದಿರಬಹುದು ಎಂದು ತಿಳಿದುಬಂದಿದೆ.
ವೈಶಿಷ್ಟ್ಯಗಳು (Features): ಈ ಕಾರು ಹತ್ತಾರು ಅತ್ಯಾಧುನಿಕ ವೈಶಿಷ್ಟ್ಯಗಳನ್ನು ಒಳಗೊಂಡಿರುವ ನಿರೀಕ್ಷೆಯಿದೆ. 10.25-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್, ವೈರ್‌ಲೆಸ್ ಆಂಡ್ರಾಯ್ಡ್ ಆಟೋ, ಆಪಲ್ ಕಾರ್ ಪ್ಲೇ, ಫುಲ್ ಡಿಜಿಟಲ್ ಡ್ರೈವರ್ ಡಿಸ್ಪ್ಲೇ, ವೈರ್‌ಲೆಸ್ ಫೋನ್ ಚಾರ್ಜರ್, ಸನ್‌ರೂಫ್ ಹಾಗೂ ವೆಂಟಿಲೇಟೆಡ್ ಫ್ರಂಟ್ ಸೀಟ್‌ಗಳನ್ನು ಹೊಂದಿರಬಹುದು ಎನ್ನಲಾಗಿದೆ.
ಸುರಕ್ಷತಾ ವೈಶಿಷ್ಟ್ಯಗಳು (Safety Features): ಸ್ಕೋಡಾ ಕೈಲಾಕ್ ಎಸ್‌ಯುವಿ ಪ್ರಯಾಣಿಕರಿಗೆ ಗರಿಷ್ಠ ರಕ್ಷಣೆ ಒದಗಿಸಲಿದೆ ಎಂದು ಹೇಳಲಾಗಿದೆ. ಸುರಕ್ಷತೆಯ ದೃಷ್ಟಿಯಿಂದ 6-ಏರ್‌ಬ್ಯಾಗ್, ಇಎಸ್‌ಸಿ (ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಕಂಟ್ರೋಲ್), ಟಿಪಿಎಂಎಸ್ (ಟೈರ್ ಪ್ರೆಶರ್ ಮಾನಿಟರಿಂಗ್ ಸಿಸ್ಟಮ್), ಐಎಸ್ಒಎಫ್ಐಎಕ್ಸ್ ಚೈಲ್ಡ್ ಸೀಟ್ ಮೌಂಟ್‌ಗಳು ಮತ್ತು 360-ಡಿಗ್ರಿ ಕ್ಯಾಮೆರಾವನ್ನು ಹೊಂದಿರುವ ನಿರೀಕ್ಷೆಯಿದೆ.
ಬೆಲೆ (Price): ಸ್ಕೋಡಾ ಕೈಲಾಕ್ ಎಸ್‌ಯುವಿ ರೂ. 8.5 ಲಕ್ಷ (ಎಕ್ಸ್ ಶೋರೂಂ) ಆರಂಭಿಕ ದರವನ್ನು ಪಡೆದಿರುವ ಸಾಧ್ಯತೆಯಿದೆ. ಈ ಕಾರಿಗೆ ಟಾಟಾ ನೆಕ್ಸಾನ್, ಕಿಯಾ ಸೋನೆಟ್, ಹ್ಯುಂಡೈ ವೆನ್ಯೂ, ಮಹೀಂದ್ರಾ ಎಕ್ಸ್‌ಯುವಿ 3ಎಕ್ಸ್‌ಒ, ಮಾರುತಿ ಸುಜುಕಿ ಬ್ರೆಝಾ, ರೆನಾಲ್ಟ್ ಕಿಗರ್ ಮತ್ತು ನಿಸ್ಸಾನ್ ಮ್ಯಾಗ್ನೈಟ್‌ಗಳು ಪ್ರಬಲವಾದ ಪ್ರತಿಸ್ಪರ್ಧಿಯಾಗಲಿವೆ ಎಂದು ಹೇಳಲಾಗಿದೆ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications








