Skoda: ಕೇವಲ 7.89 ಲಕ್ಷಕ್ಕೆ ಸ್ಕೋಡಾ ಕಾರು ಬಿಡುಗಡೆಯಾಗಿದೆ: ಫುಲ್ ಡಿಮ್ಯಾಂಡ್, ವಿಶೇಷತೆಗಳೇನು?

ಕಳೆದ ಹಲವು ದಿನಗಳಿಂದ ಭಾರತದಲ್ಲಿ ಬಿಡುಗಡೆಗೆ ಕಾಯುತ್ತಿದ್ದ ಸ್ಕೋಡಾ ಅಭಿಮಾನಿಗಳಿಗೆ ಕೊನೆಗೂ ಕಂಪನಿ ಸಿಹಿಸುದ್ದಿ ಕೊಟ್ಟಿದೆ. ಹೊಸ ಸ್ಕೋಡಾ ಕೈಲಾಕ್ ಅನ್ನು ಕೇವಲ 7.89 ಲಕ್ಷ ರೂ. (ಎಕ್ಸ್ ಶೋರೂಂ) ಆರಂಭಿಕ ಬೆಲೆಗಳೊಂದಿಗೆ ಬಿಡುಗಡೆ ಮಾಡಲಾಗಿದೆ. ಸ್ಕೋಡಾ ಕೈಲಾಕ್ ಅನ್ನು ಕ್ಲಾಸಿಕ್, ಸಿಗ್ನೇಚರ್, ಸಿಗ್ನೇಚರ್ ಪ್ಲಸ್ ಮತ್ತು ಪ್ರೆಸ್ಟೀಜ್ ಎಂಬ ನಾಲ್ಕು ವೇರಿಯೆಂಟ್‌ಗಳಲ್ಲಿ ನೀಡಲಾಗುತ್ತಿದೆ. ಮುಂದಿನ ತಿಂಗಳು ಬುಕಿಂಗ್ ಆರಂಭವಾಗಲಿದ್ದು, ಡೆಲಿವರಿಗಳನ್ನು ಮುಂದಿನ ವರ್ಷ ನೀಡಲು ಯೋಜಿಸಲಾಗಿ. ಸದ್ಯ ಬೇಡಿಕೆಯನ್ನು ಆಧರಿಸಿ ಕಾರನ್ನು ಡೀಲರ್‌ಗಳಿಗೆ ತಲುಪಿಸಲು ಕಂಪನಿ ಪ್ಲಾನ್ ಮಾಡಿದೆ.

ಕಂಪನಿಯು ಬುಕಿಂಗ್ ಡಿಸೆಂಬರ್ 2, 2024 ರಂದು ಪ್ರಾರಂಭಿಸಲಿದೆ, ಗ್ರಾಹಕರಿಗೆ ಡೆಲಿವರಿಗಳನ್ನು ಜನವರಿ 27, 2025 ರಿಂದ ಪ್ರಾರಂಭಿಸಲಾಗುವುದು. ಸ್ಕೋಡಾ ಕೈಲಾಕ್‌ನ ಎಲ್ಲಾ ವೇರಿಯೆಂಟ್‌ಗಳ ಸಂಪೂರ್ಣ ಬೆಲೆ ಪಟ್ಟಿಯನ್ನು ಇನ್ನೂ ಬಹಿರಂಗಪಡಿಸಿಲ್ಲ. ಆದರೂ ನಮ್ಮ ಪ್ರಕಾರ ಈ ಕೈಲಾಕ್ ಕಾರು ಮಹೀಂದ್ರಾ ಎಕ್ಸ್‌ಯುವಿ 3ಎಕ್ಸ್‌ಒ, ಟಾಟಾ ನೆಕ್ಸಾನ್, ಮಾರುತಿ ಬ್ರೆಝಾ ಮತ್ತು ರೆನಾಲ್ಟ್ ಕಿಗರ್ ಕಾರುಗಳಿಗೆ ಪೈಪೋಟಿ ನೀಡುತ್ತದೆ.

skoda-kylaq-price-features-design-engine-details

ಸ್ಕೋಡಾ ಕಂಪನಿಯು ಈ ಕಾರಿನಲ್ಲಿ ಆಕರ್ಷಕ ಫೀಚರ್‌ಗಳನ್ನು ಸಹ ನೀಡಿದೆ. ಕೈಲಾಕ್ ಸಿಂಗಲ್-ಪ್ಯಾನ್ ಸನ್ ರೂಫ್ ಮತ್ತು 6-ವೇ ಫ್ರಂಟ್ ಫಂಕ್ಷನಲ್ ಸೀಟ್‌ಗಳನ್ನು ಹೊಂದಿದೆ. 10.1 ಇಂಚಿನ ಟಚ್ ಸ್ಕ್ರೀನ್, 8 ಇಂಚಿನ ಡಿಜಿಟಲ್ ಡ್ರೈವರ್ ಡಿಸ್ಪ್ಲೇ ಮತ್ತು ವೈರ್ ಲೆಸ್ ಫೋನ್ ಚಾರ್ಜರ್, ಆರು ಏರ್‌ಬ್ಯಾಗ್, ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಕಂಟ್ರೋಲ್, ಟ್ರಾಕ್ಷನ್ ಕಂಟ್ರೋಲ್ ಮತ್ತು ಮಲ್ಟಿ-ಕೊಲಿಷನ್ ಬ್ರೇಕಿಂಗ್ ಹೊಂದಿದೆ.

ಇಂಟೀರಿಯರ್ ಹೇಗಿದೆ?: ಸ್ಕೋಡಾ ಕೈಲಾಕ್‌ನಲ್ಲಿ 2-ಸ್ಪೋಕ್ ಸ್ಟೀರಿಂಗ್ ವೀಲ್ ಮತ್ತು ಸೆಮಿ-ಲೆದರ್ ಸೀಟ್ ಅಪ್ ಹೋಲ್ಸ್ಟರಿಯನ್ನು ನೀಡಲಾಗಿದೆ. ಕ್ಯಾಬಿನ್ ಸುತ್ತಲೂ ಸಿಲ್ವರ್ ಮತ್ತು ಕ್ರೋಮ್ ಅಕ್ಸೆಂಟ್‌ಗಳೊಂದಿಗೆ ಬ್ಲಾಕ್ ಮತ್ತು ಗ್ರೇ ಬಣ್ಣದ ಕ್ಯಾಬಿನ್ ಥೀಮ್ ಹೊಂದಿದೆ. ಸೆಂಟರ್ ಎಸಿ ವೆಂಟ್‌ಗಳ ಕೆಳಗೆ, ನೀವು ಕ್ಲೈಮೆಟ್ ಕಂಟ್ರೋಲ್‌ಗಳ ಪ್ಯಾನಲ್ ಕಾಣಬಹುದು, ಇದು ಸ್ಕೋಡಾ ಕುಶಾಕ್‌ನಲ್ಲಿ ಕಾಣುವಂತೆಯೇ ಇದೆ.

skoda-kylaq-price-features-design-engine-details

ಎಂಜಿನ್: ಸ್ಕೋಡಾ ಕುಶಾಕ್ ಮತ್ತು ಸ್ಲಾವಿಯಾದಂತಹ ಕಾರುಗಳಲ್ಲಿ ಕಾಣುವ ಅದೇ 1 - ಲೀಟರ್ ಟರ್ಬೊ -ಪೆಟ್ರೋಲ್ ಎಂಜಿನ್ ಕೈಲಾಕ್‌ನಲ್ಲಿ ನೀಡಲಾಗಿದೆ. ಇದು 115 ಪಿಎಸ್ ಪವರ್ ಹಾಗೂ 178 ಎನ್ಎಂ ಟಾರ್ಕ್ ಉತ್ಪಾದಿಸುತ್ತದೆ. ಈ ಎಂಜಿನ್ 6-ಸ್ಪೀಡ್ ಮ್ಯಾನುವಲ್ ಮತ್ತು 6-ಸ್ಪೀಡ್ ಟಾರ್ಕ್ ಕನ್ವರ್ಟರ್ ಆಟೋಮ್ಯಾಟಿಕ್ ಟ್ರಾನ್ಸ್‌ಮಿಷನ್‌ನೊಂದಿಗೆ ಬರುತ್ತದೆ.

ಡಿಸೈನ್: ಹೊರಭಾಗದ ಡಿಸೈನ್ ವಿಷಯಕ್ಕೆ ಬಂದರೆ, ಇತರ ಸ್ಕೋಡಾ ಕಾರುಗಳಲ್ಲಿ ಕಂಡುಬರುವಂತೆ ಚಿಟ್ಟೆ ಆಕಾರದ ಗ್ರಿಲ್ ಹೊಂದಿದೆ. ಮುಖ್ಯವಾಗಿ ಸ್ಕೋಡಾ ಕುಶಾಕ್‌ನಂತೆಯೇ ಕೈಲಾಕ್ ಕೂಡ ಸ್ಪ್ಲಿಟ್ - ಎಲ್ಇಡಿ ಹೆಡ್ ಲೈಟ್ ವಿನ್ಯಾಸವನ್ನು ಹೊಂದಿದ್ದು, ಎಲ್ಇಡಿ ಡಿಆರ್‌ಎಲ್‌ಗಳು ಬಾನೆಟ್ ಲೈನ್ ಕೆಳಗೆ ಮತ್ತು ಎಲ್ಇಡಿ ಪ್ರೊಜೆಕ್ಟರ್ ಹೆಡ್ ಲೈಟ್‌ಗಳನ್ನು ಬಂಪರ್ ಮೇಲೆ ನೀಡಲಾಗಿದೆ.

skoda-kylaq-price-features-design-engine-details

ಸ್ಕೋಡಾದ ಕೈಲಾಕ್‌ನಲ್ಲಿ ರೂಫ್ ರೈಲ್ ಗಳು, 17 ಇಂಚಿನ ಡ್ಯುಯಲ್ ಟೋನ್ ಅಲಾಯ್ ಚಕ್ರಗಳು, ಒಆರ್‌ವಿಎಂ - ಮೌಂಟೆಡ್ ಟರ್ನ್ ಇಂಡಿಕೇಟರ್, ಹಿಂಭಾಗದಲ್ಲಿ, ಎಲ್ಇಡಿ ಟೈಲ್‌ಲೈಟ್, ಟೈಲ್‌ಗೇಟ್ ಕೆಳಭಾಗದ ಎಡಭಾಗದಲ್ಲಿ 'ಕೈಲಾಕ್' ಬ್ಯಾಡ್ಜ್ ಮತ್ತು ಆಕರ್ಷಕ ಸ್ಕಿಡ್ ಪ್ಲೇಟ್ ಹೊಂದಿರುವ ಎತ್ತರದ ಬಂಪರ್ ಅನ್ನು ನೀಡಲಾಗಿದೆ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊ ಗಳನ್ನು ಪಡೆಯಲು ನಮ್ಮ ಫೇಸ್‌ ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

More from DriveSpark

Article Published On: Friday, November 8, 2024, 15:13 [IST]
English summary
Skoda kylaq price features design engine details
Read more on skoda india
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+