ಲಕ್ಷುರಿ ಫೀಚರ್ಸ್‌ನ ಸ್ಕೋಡಾ ಕೈಲಾಕ್ ಬೆಲೆಗೆಳು ಬಹಿರಂಗ: ಬೆಲೆ ಇಷ್ಟೇನಾ?
ಭಾರತೀಯ ಮಾರುಕಟ್ಟೆಯಲ್ಲಿ ಸ್ಪೋರ್ಟ್ ಯುಟಿಲಿಟಿ ವಾಹನಗಳಿಗೆ (ಎಸ್‍ಯುವಿ) ಹೆಚ್ಚಿನ ಬೇಡಿಕೆ ಪಡೆಯುತ್ತಿರುವಾ ಸ್ಕೋಡಾ ತನ್ನ ಬಹುನಿರೀಕ್ಷಿತ ಸ್ಕೋಡಾ ಕೈಲಾಕ್ ಕಾಂಪ್ಯಾಕ್ಟ್ ಎಸ್‍ಯುವಿಯನ್ನು ಇತ್ತೀಚೆಗೆ ಬಿಡುಗಡೆಗೊಳಿಸಿತು. ಇದೀಗ ಈ ಸ್ಕೋಡಾ ಕೈಲಾಕ್ (Skoda Kylaq) ಎಸ್‍ಯುವಿಯ ಎಲ್ಲಾ ರೂಪಾಂತರಗಳ ಸಂಪೂರ್ಣ ಬೆಲೆ ವಿವರಗಳನ್ನು ಬಹಿರಂಗಪಡಿಸಿದೆ. ಸ್ಕೋಡಾ ಕೈಲಾಕ್ ಎಸ್‍ಯುವಿಯ ಎಂಟ್ರಿ ಲೆವೆಲ್ ಕ್ಲಾಸಿಕ್ ರೂಪಾಂತರದ ಬೆಲೆಯು ಎಕ್ಸ್ ಶೋರೂಂ ಪ್ರಕಾರ ರೂ.7.89 ಲಕ್ಷವಾದರೆ, ಟಾಪ್ ಸ್ಪೆಕ್ ಪ್ರೆಸ್ಟೀಜ್ ರೂಪಾಂತರದ ಬೆಲೆಯು ರೂ.14.40 ಲಕ್ಷವಾಗಿದೆ.
ಸ್ಕೋಡಾ ಕೈಲಾಕ್ ಎಸ್‍ಯುವಿಗಾಗಿ ಅಧಿಕೃತವಾಗಿ ಬುಕಿಂಗ್‌ಗಳನ್ನು ಸ್ವೀಕರಿಸಲು ಪ್ರಾರಂಭಿಸುತ್ತದೆ. ಹೊಸ ಸ್ಕೋಡಾ ಕೈಲಾಕ್ ಎಸ್‍ಯುವಿಯು ಭಾರತದಲ್ಲಿ ಟಾಟಾ ನೆಕ್ಸಾನ್, ಮಹೀಂದ್ರಾ ಎಕ್ಸ್‌ಯುವಿ 3 ಎಕ್ಸ್‌ಒ, ಮಾರುತಿ ಬ್ರೆಝಾ, ಹ್ಯುಂಡೈ ವೆನ್ಯೂ ಮತ್ತು ಕಿಯಾ ಸೊನೆಟ್ ಎಸ್‍ಯುವಿಗಳಿಗೆ ಪೈಪೋಟಿ ನೀಡುತ್ತದೆ. ಈ ಸ್ಕೋಡಾ ಕೈಲಾಕ್ ಎಸ್‌ಯುವಿ ಕ್ಲಾಸಿಕ್, ಸಿಗ್ನೇಚರ್, ಸಿಗ್ನೇಚರ್+ ಮತ್ತು ಪ್ರೆಸ್ಟೀಜ್ ಎಂಬ ರೂಪಾಂತರಗಳಲ್ಲಿ ಲಭ್ಯವಿದೆ.

ಈ ಸ್ಕೋಡಾ ಕೈಲಾಕ್ ಹೊಸ ಎಸ್‍ಯುವಿಯು ಸ್ಕೋಡಾ ಬ್ರ್ಯಾಂಡ್‌ನ ಇತ್ತೀಚಿನ 'ಮಾಡರ್ನ್ ಸಾಲಿಡ್' ವಿನ್ಯಾಸ ಭಾಷೆಯ ಅಂಶಗಳನ್ನು ಒಳಗೊಂಡಿದೆ. ಕೈಲಾಕ್ ಕ್ಲೀನ್ ಲೈನ್‌ಗಳ ಜೊತೆ ಮುಂಭಾಗದ ಲ್ಯಾಂಪ್ ಗಳೊಂದಿಗೆ ಕುಶಾಕ್‌ನಂತೆ ಸ್ವಲ್ಪ ಕಾಣಿಸುತ್ತದೆ. ಈ ಎಸ್‍ಯುವಿಯ ಟ್ರೆಂಡಿಂಗ್ ಸ್ಪ್ಲಿಟ್ ಹೆಡ್‌ಲ್ಯಾಂಪ್ ಸೆಟಪ್ ಎಲ್ಇಡಿ ಡಿಆರ್ಎಲ್ ಅರೇಂಜ್ಮೆಂಟ್ ಅಪ್ ಟಾಪ್ ಮತ್ತು ಎಲ್ಇಡಿ ಪ್ರೊಜೆಕ್ಟರ್ ಹೆಡ್‌ಲ್ಯಾಂಪ್‌ಗಳನ್ನು ಕೆಳ ಭಾಗದಲ್ಲಿ ಇದೆ.
| Kylaq | Manual | Automatic |
| Classic | ₹7.89 Lakh | NA |
| Signature | ₹9.59 Lakh | ₹10.59 Lakh |
| Signature Plus | ₹11.40 Lakh | ₹12.40 Lakh |
| Prestige | ₹13.35 Lakh | ₹14.40 Lakh |
ಇದರೊಂದಿಗೆ ಅಲ್ಯೂಮಿನಿಯಂ-ಲುಕ್ ಸ್ಪಾಯ್ಲರ್‌ನೊಂದಿಗೆ ಎರಡು-ಟೋನ್ ಬಂಪರ್ ಸೇರಿವೆ. ಇನ್ನು ಈ ಕೈಲಾಕ್ ಎಸ್‍ಯುವಿಯ ಇಂಟಿರಿಯರ್ ನಲ್ಲಿ ಟೂ-ಸ್ಪೋಕ್ ಸ್ಟೀರಿಂಗ್ ವೀಲ್ ಮತ್ತು 8-ಇಂಚಿನ ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್‌ನಂತಹ ಅನೇಕ ಅಂಶಗಳನ್ನು ಹಂಚಿಕೊಳ್ಳುತ್ತದೆ. ಇದು ನವೀಕರಿಸಿದ OS, ವೈರ್‌ಲೆಸ್ ಆಂಡ್ರಾಯ್ಡ್ ಆಟೋ/ಆಪಲ್ ಕಾರ್‌ಪ್ಲೇ, ವೈರ್‌ಲೆಸ್ ಫೋನ್ ಚಾರ್ಜರ್ ಮತ್ತು ಸಿಂಗಲ್ ಪೇನ್ ಸನ್‌ರೂಫ್‌ನೊಂದಿಗೆ 10-ಇಂಚಿನ ಟಚ್‌ಸ್ಕ್ರೀನ್ ಅನ್ನು ಸಹ ಒಳಗೊಂಡಿದೆ.

ಹೊಸ ಸ್ಕೋಡಾ ಕೈಲಾಕ್ ಎಸ್‍ಯುವಿಯಲ್ಲಿ ಸನ್‌ರೂಫ್ (ಸಿಂಗಲ್-ಪೇನ್), ಕೀಲೆಸ್ ಎಂಟ್ರಿ, ವೈರ್‌ಲೆಸ್ ಫೋನ್ ಚಾರ್ಜರ್, ವೈರ್‌ಲೆಸ್ ಆಂಡ್ರಾಯ್ಡ್ ಆಟೋ ಮತ್ತು ಆಪಲ್ ಕಾರ್ಪ್ಲೇ, ಮುಂಭಾಗದ ಸೀಟ್ ವೆಂಟಿಲೇಶನ್ ಮತ್ತು ಲೆಥೆರೆಟ್ ಅಪ್ಹೋಲ್‌ಸ್ಟರಿಗಳನ್ನು ಒಳಗೊಂಡಿದೆ. ಈ ಕೈಲಾಕ್ ಎಸ್‌ಯುವಿ 446 ಲೀಟರ್ ಬೂಟ್ ಸ್ಪೇಸ್ ಸಾಮರ್ಥ್ಯವನ್ನು ಹೊಂದಿದ್ದು, ಈ ಎಸ್‍ಯುವಿಯ ಸೀಟುಗಳನ್ನು ಮಡಚಿದರೆ 1,265 ಲೀಟರ್‌ಗೆ ಬೂಟ್ ಸ್ಪೇಸ್ ಅನ್ನು ವಿಸ್ತರಿಸಬಹುದು.
ಕೈಲಾಕ್ ಚಾಲಕನಿಗೆ ಮಾತ್ರವಲ್ಲದೆ ಮುಂಭಾಗದ ಪ್ರಯಾಣಿಕರಿಗೂ ಫಾರ್ವಡ್ ಸೀಟ್ ಹೊಂದಾಣಿಕೆಯನ್ನು ಹೊಂದಿದೆ. ಇನ್ನು ಈ ಎಸ್‍ಯುವಿಯು ಆರು ಏರ್‌ಬ್ಯಾಗ್‌ಗಳು, EBD ಜೊತೆಗೆ ABS, ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಕಂಟ್ರೋಲ್, ಎಲೆಕ್ಟ್ರಾನಿಕ್ ಡಿಫರೆನ್ಷಿಯಲ್ ಲಾಕ್ ಮತ್ತು ISOFIX ಚೈಲ್ಡ್ ಸೀಟ್ ಮೌಂಟ್‌ಗಳು ಬೋರ್ಡ್‌ನಾದ್ಯಂತ ಸ್ಟ್ಯಾಂಡರ್ಡ್ ಸುರಕ್ಷತಾ ಫೀಚರ್ಸ್ ಗಳನ್ನು ಒಳಗೊಂಡಿವೆ.

ಸ್ಕೋಡಾ ಕೈಲಾಕ್ ಎಸ್‌ಯುವಿಯಲ್ಲಿ ಕುಶಾಕ್ ಮತ್ತು ಸ್ಲಾವಿಯಾದೊಂದಿಗೆ ಬಳಸಿದ ಅದೇ 1.0-ಲೀಟರ್ TSI ಪೆಟ್ರೋಲ್ ಎಂಜಿನ್‌ನಿಂದ ನಿಯಂತ್ರಿಸಲ್ಪಡುತ್ತದೆ. ಈ ಎಂಜಿನ್ 115 bhp ಪವರ್ ಮತ್ತು 178 Nm ಪೀಕ್ ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. ಈ ಎಂಜಿನ್ ಅನ್ನು 6-ಸ್ಪೀಡ್ ಮ್ಯಾನುವಲ್ ಮತ್ತು 6-ಸ್ಪೀಡ್ ಟಾರ್ಕ್ ಕರ್ನವಾಟರ್ ಆಟೋಮ್ಯಾಟಿಕ್ ಗೇರ್ ಬಾಕ್ಸ್ ಆಯ್ಕೆಗಳೊಂದಿಗೆ ಜೋಡಿಸಲಾಗುತ್ತದೆ.
ಈ ಹೊಸ ಸ್ಕೋಡಾ ಕೈಲಾಕ್ ಎಸ್‍ಯುವಿಯು 10.5 ಸೆಕೆಂಡುಗಳಲ್ಲಿ 0 ದಿಂದ 100 ಕಿ.ಮೀ ವರೆಗೆ ವೇಗವನ್ನು ಪಡೆದುಕೊಳ್ಳುತ್ತದೆ. QB-A0-IN ಪ್ಲಾಟ್‌ಫಾರ್ಮ್‌ನಿಂದ ಆಧಾರವಾಗಿರುವ ಕುಶಾಕ್ ಮತ್ತು ಸ್ಲಾವಿಯಾದಂತಹ ಜನಪ್ರಿಯ ಮಾದರಿಗಳನ್ನು ಸ್ಕೋಡಾ ಈಗಾಗಲೇ ಹೊಂದಿದೆ. ಈ ಪ್ಲಾಟ್‌ಫಾರ್ಮ್ ಅನ್ನು ಬಳಸುವ ಮೂರನೇ ಸ್ಕೋಡಾ ಕಾರು ಕೈಲಾಕ್ ಅಗಿದೆ. ಈ ಎಸ್‍ಯುವಿ 189mm ಗ್ರೌಂಡ್ ಕ್ಲಿಯರೆನ್ಸ್ ಅನ್ನು ಹೊಂದಿದೆ.


Click it and Unblock the Notifications