ಲಕ್ಷುರಿ ಫೀಚರ್ಸ್, ಆಕರ್ಷಕ ವಿನ್ಯಾಸದ ಸ್ಕೋಡಾ ಕೈಲಾಕ್ ಬಿಡುಗಡೆ: ಬೆಲೆ ಇಷ್ಟೇನಾ?

ಭಾರತೀಯ ಮಾರುಕಟ್ಟೆಯಲ್ಲಿ ಸ್ಪೋರ್ಟ್ ಯುಟಿಲಿಟಿ ವಾಹನಗಳಿಗೆ (ಎಸ್‍ಯುವಿ) ಹೆಚ್ಚಿನ ಬೇಡಿಕೆ ಪಡೆಯುತ್ತಿರುವಾಗ, ಸ್ಕೋಡಾ ಸೆಡಾನ್‌ಗಳನ್ನು ಬದಿಗಿಟ್ಟು ಎಸ್‍ಯುವಿಗಳಿಗೆ ಪ್ರಾಮುಖ್ಯತೆಯನ್ನು ನೀಡಲು ಪ್ರಾರಂಭಿಸಿದು. ಇದರ ಭಾಗವಾಗಿ ಸ್ಕೋಡಾ ತನ್ನ ಬಹುನಿರೀಕ್ಷಿತ ಸ್ಕೋಡಾ ಕೈಲಾಕ್ ಕಾಂಪ್ಯಾಕ್ಟ್ ಎಸ್‍ಯುವಿಯನ್ನು ಬಿಡುಗಡೆಗೊಳಿಸಿದೆ. ಈ ಹೊಸ ಸ್ಕೋಡಾ ಕೈಲಾಕ್ (Skoda Kylaq) ಕಾಂಪ್ಯಾಕ್ಟ್ ಎಸ್‍ಯುವಿ ಬೆಲೆಯು ಎಕ್ಸ್ ಶೋರೂಂ ಪ್ರಕಾರ ರೂ.7.89 ಲಕ್ಷವಾಗಿದೆ. MQB-A0-IN ಪ್ಲಾಟ್‌ಫಾರ್ಮ್‌ನಿಂದ ಆಧಾರವಾಗಿರುವ ಕುಶಾಕ್ ಮತ್ತು ಸ್ಲಾವಿಯಾದಂತಹ ಜನಪ್ರಿಯ ಮಾದರಿಗಳನ್ನು ಸ್ಕೋಡಾ ಈಗಾಗಲೇ ಹೊಂದಿದೆ . ಈ ಪ್ಲಾಟ್‌ಫಾರ್ಮ್ ಅನ್ನು ಬಳಸುವ ಮೂರನೇ ಸ್ಕೋಡಾ ಕಾರು ಕೈಲಾಕ್ ಅಗಿದೆ.

ಸ್ಕೋಡಾ ಈ ವರ್ಷದ ಫೆಬ್ರವರಿಯಲ್ಲಿ 'ನೇಮ್ ಯುವರ್ ಸ್ಕೋಡಾ' ಅಭಿಯಾನವನ್ನು ಪ್ರಾರಂಭಿಸಿದ್ದರು. ಇಂಗ್ಲಿಷ್ ವರ್ಣಮಾಲೆಯಲ್ಲಿ K ಯಿಂದ ಪ್ರಾರಂಭವಾಗುವ ಮತ್ತು Q ನೊಂದಿಗೆ ಕೊನೆಗೊಳ್ಳುವ ಹೆಸರನ್ನು ಸೂಚಿಸಲು ಕಂಪನಿಯನ್ನು ಕೇಳಲಾಯಿತು. ಈ ಅಭಿಯಾನದ ಭಾಗವಾಗಿ 2,00,000 ನಮೂನೆಗಳನ್ನು ಸ್ವಿಕರಿಸಿದರು. ಕೊನೆಗೆ ಕಾಸರಗೋಡು ಮೂಲದ ಮೊಹಮ್ಮದ್ ಜಿಯಾದ್ ಅವರು ನೀಡಿದ 'ಕೈಲಾಕ್' ಹೆಸರೇ ಆಯ್ಕೆಯಾಗಿರುವುದು.

Skoda Kylaq

ಸ್ಕೋಡಾ ಕೈಲಾಕ್ ಹೊಸ ಎಸ್‍ಯುವಿಯು ಸ್ಕೋಡಾ ಬ್ರ್ಯಾಂಡ್‌ನ ಇತ್ತೀಚಿನ 'ಮಾಡರ್ನ್ ಸಾಲಿಡ್' ವಿನ್ಯಾಸ ಭಾಷೆಯ ಅಂಶಗಳನ್ನು ಒಳಗೊಂಡಿದೆ. ಎಸ್‍ಯುವಿಯ ಕ್ಲೀನ್ ಲೈನ್‌ಗಳ ಜೊತೆ ಮುಂಭಾಗದ ಲ್ಯಾಂಪ್ ಗಳೊಂದಿಗೆ ಕುಶಾಕ್‌ನಂತೆ ಸ್ವಲ್ಪ ಕಾಣಿಸುತ್ತದೆ. ಈ ಎಸ್‍ಯುವಿಯ ಟ್ರೆಂಡಿಂಗ್ ಸ್ಪ್ಲಿಟ್ ಹೆಡ್‌ಲ್ಯಾಂಪ್ ಸೆಟಪ್ ಅನ್ನು ಎಲ್ಇಡಿ ಡಿಆರ್ಎಲ್ ಅರೇಂಜ್ಮೆಂಟ್ ಅಪ್ ಟಾಪ್ ಮತ್ತು ಎಲ್ಇಡಿ ಪ್ರೊಜೆಕ್ಟರ್ ಹೆಡ್‌ಲ್ಯಾಂಪ್‌ಗಳನ್ನು ಕೆಳ ಭಾಗದಲ್ಲಿ ನೀಡಲಾಗಿದೆ. ಇದರೊಂದಿಗೆ ಅಲ್ಯೂಮಿನಿಯಂ-ಲುಕ್ ಸ್ಪಾಯ್ಲರ್‌ನೊಂದಿಗೆ ಎರಡು-ಟೋನ್ ಬಂಪರ್ ಸೇರಿವೆ.

ಈ ಕೈಲಾಕ್ ಎಸ್‍ಯುವಿಯ ಒಳಭಾಗದಲ್ಲಿ ಟೂ-ಸ್ಪೋಕ್ ಸ್ಟೀರಿಂಗ್ ವೀಲ್ ಮತ್ತು 8-ಇಂಚಿನ ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್‌ನಂತಹ ಅನೇಕ ಅಂಶಗಳನ್ನು ಹಂಚಿಕೊಳ್ಳುತ್ತದೆ. ಇದು ನವೀಕರಿಸಿದ OS, ವೈರ್‌ಲೆಸ್ ಆಂಡ್ರಾಯ್ಡ್ ಆಟೋ/ಆಪಲ್ ಕಾರ್‌ಪ್ಲೇ, ವೈರ್‌ಲೆಸ್ ಫೋನ್ ಚಾರ್ಜರ್ ಮತ್ತು ಸಿಂಗಲ್ ಪೇನ್ ಸನ್‌ರೂಫ್‌ನೊಂದಿಗೆ 10-ಇಂಚಿನ ಟಚ್‌ಸ್ಕ್ರೀನ್ ಅನ್ನು ಸಹ ಒಳಗೊಂಡಿದೆ.

Skoda Kylaq

ಈ ಕೈಲಾಕ್ ಎಸ್‍ಯುವಿಯಲ್ಲಿ ಸನ್‌ರೂಫ್ (ಸಿಂಗಲ್-ಪೇನ್), ಕೀಲೆಸ್ ಎಂಟ್ರಿ, ವೈರ್‌ಲೆಸ್ ಫೋನ್ ಚಾರ್ಜರ್, ವೈರ್‌ಲೆಸ್ ಆಂಡ್ರಾಯ್ಡ್ ಆಟೋ ಮತ್ತು ಆಪಲ್ ಕಾರ್ಪ್ಲೇ, ಮುಂಭಾಗದ ಸೀಟ್ ವೆಂಟಿಲೇಶನ್ ಮತ್ತು ಲೆಥೆರೆಟ್ ಅಪ್ಹೋಲ್‌ಸ್ಟರಿಗಳನ್ನು ಒಳಗೊಂಡಿದೆ. ಕೈಲಾಕ್ ಚಾಲಕನಿಗೆ ಮಾತ್ರವಲ್ಲದೆ ಮುಂಭಾಗದ ಪ್ರಯಾಣಿಕರಿಗೂ ಪವರ್ಡ್ ಸೀಟ್ ಹೊಂದಾಣಿಕೆಯನ್ನು ನೀಡುವ ಮೂಲಕ ಪ್ರತಿಸ್ಪರ್ಧಿಗಳಿಂದ ಒಂದು ಹೆಜ್ಜೆ ಮುಂದಿದೆ.

ಈ ಸ್ಕೋಡಾ ಎಸ್‍ಯುವಿಯ ಕ್ಯಾಬಿನ್ ಪ್ರತಿಯೊಂದು ಡೋರ್ ಮೇಲೆ ಬಾಟಲ್ ಹೋಲ್ಡರ್‌ಗಳು, ಗಾತ್ರದ ಗ್ಲೋವ್‌ಬಾಕ್ಸ್ಮತ್ತು ಸುಲಭ ಪ್ರವೇಶದೊಂದಿಗೆ ಕಪ್‌ಹೋಲ್ಡರ್‌ಗಳೊಂದಿಗೆ ಚೆನ್ನಾಗಿ ಯೋಚಿಸಿದ ಸ್ಥಳವಾಗಿದೆ. ಇನ್ನು ಈ ಎಸ್‍ಯುವಿಯಲ್ಲಿ ಆರು ಏರ್‌ಬ್ಯಾಗ್‌ಗಳು, EBD ಜೊತೆಗೆ ABS, ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಕಂಟ್ರೋಲ್, ಎಲೆಕ್ಟ್ರಾನಿಕ್ ಡಿಫರೆನ್ಷಿಯಲ್ ಲಾಕ್ ಮತ್ತು ISOFIX ಚೈಲ್ಡ್ ಸೀಟ್ ಮೌಂಟ್‌ಗಳು ಬೋರ್ಡ್‌ನಾದ್ಯಂತ ಸ್ಟ್ಯಾಂಡರ್ಡ್ ಸುರಕ್ಷತಾ ಫೀಚರ್ಸ್ ಗಳನ್ನು ಹೊಂದಿವೆ.

Skoda Kylaq

ಸ್ಕೋಡಾ ಕೈಲಾಕ್ ಎಸ್‌ಯುವಿಯಲ್ಲಿ ಕುಶಾಕ್ ಮತ್ತು ಸ್ಲಾವಿಯಾದೊಂದಿಗೆ ಬಳಸಿದ ಅದೇ 1.0-ಲೀಟರ್ TSI ಪೆಟ್ರೋಲ್ ಎಂಜಿನ್‌ನಿಂದ ನಿಯಂತ್ರಿಸಲ್ಪಡುತ್ತದೆ. ಈ ಎಂಜಿನ್ 115 bhp ಪವರ್ ಮತ್ತು 178 Nm ಪೀಕ್ ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. ಈ ಎಂಜಿನ್ ಅನ್ನು 6-ಸ್ಪೀಡ್ ಮ್ಯಾನುವಲ್ ಮತ್ತು 6-ಸ್ಪೀಡ್ ಟಾರ್ಕ್ ಕರ್ನವಾಟರ್ ಆಟೋಮ್ಯಾಟಿಕ್ ಗೇರ್ ಬಾಕ್ಸ್ ಆಯ್ಕೆಗಳೊಂದಿಗೆ ಜೋಡಿಸಲಾಗುತ್ತದೆ.

ಈ ಕೈಲಾಕ್ ಎಸ್‍ಯುವಿಯು 10.5 ಸೆಕೆಂಡುಗಳಲ್ಲಿ 0-100 ಕಿ.ಮೀ ವೇಗವನ್ನು ಪಡೆದುಕೊಳ್ಳುತ್ತದೆ. ಈ ಹೊಸ ಸ್ಕೋಡಾ ಕೈಲಾಕ್ ಎಸ್‍ಯುವಿಯು ಭಾರತೀಯ ಮಾರುಕಟ್ಟೆಯಲ್ಲಿ ಟಾಟಾ ನೆಕ್ಸಾನ್, ಮಹೀಂದ್ರಾ ಎಕ್ಸ್‌ಯುವಿ 3 ಎಕ್ಸ್‌ಒ, ಮಾರುತಿ ಬ್ರೆಝಾ, ಹ್ಯುಂಡೈ ವೆನ್ಯೂ ಮತ್ತು ಕಿಯಾ ಸೊನೆಟ್ ಎಸ್‍ಯುವಿಗಳಿಗೆ ಪೈಪೋಟಿ ನೀಡುತ್ತದೆ.

More from DriveSpark

Article Published On: Wednesday, November 6, 2024, 13:39 [IST]
English summary
Skoda kylaq suv launched price engine features details
Read more on skoda india
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+