ಮಾರುತಿ ಬ್ರೆಝಾಗಿಂತ ಕಡಿಮೆ ಬೆಲೆ: ಹೊಸ ಸ್ಕೋಡಾ ಕೈಲಾಕ್‌ನಲ್ಲಿ 7 ಪ್ರೀಮಿಯಂ ಫೀಚರ್ಸ್

ಸ್ಕೋಡಾ ಬ್ರಾಂಡ್‌ ಇತ್ತೀಚೆಗೆ ಸಬ್-4 ಮೀಟರ್ ಎಸ್‌ಯುವಿ ವಿಭಾಗದಲ್ಲಿ ತನ್ನ ಹೊಸ ಕಾರನ್ನು ಬಿಡುಗಡೆ ಮಾಡಿದೆ. ಈ ವಿಭಾಗದಲ್ಲಿ ಹಲವು ಬ್ರಾಂಡ್‌ಗಳ ಕಾರುಗಳು ಉತ್ತಮ ಮಾರಾಟ ಕಾಣುತ್ತಿವೆ. ಅದರಲ್ಲಿಯೂ ಪ್ರಮುಖವಾಗಿ ಮಾರುತಿ ಸುಜುಕಿ ಬ್ರೆಝಾ ಭಾರೀ ಬೇಡಿಕೆಯನ್ನು ಪಡೆದುಕೊಂಡಿದೆ. ಇದು ಹೆಚ್ಚು ಸಂಖ್ಯೆಯಲ್ಲಿ ಮಾರಾಟ ಕಾಣುವ ಎಸ್‌ಯುವಿಯಾಗಿದ್ದರೂ, ಸ್ಕೋಡಾ ಕೈಲಾಕ್‌ನಂತೆ ಪ್ರೀಮಿಯಂ ಕ್ಯಾಬಿನ್ ಅನುಭವವನ್ನು ನೀಡುವುದಿಲ್ಲ. ಹೌದು ಮಾರುತಿ ಬ್ರೆಝಾದಲ್ಲಿ ಸಿಗದ 7 ಪ್ರಮುಖ ವೈಶಿಷ್ಟ್ಯಗಳನ್ನು ಸ್ಕೋಡಾ ಕೈಲಾಕ್‌ನಲ್ಲಿ ನೋಡಬಹುದು. ಅವುಗಳ ಬಗ್ಗೆ ವಿವರವಾಗಿ ನೋಡೋಣ.

ಸ್ಕೋಡಾ ತನ್ನ ಹೊಸ ಕೈಲಾಕ್ ಅನ್ನು 7.89 ಲಕ್ಷ ರೂ. (ಎಕ್ಸ್ ಶೋರೂಂ)ಆರಂಭಿಕ ಬೆಲೆಯಲ್ಲಿ ಬಿಡುಗಡೆ ಮಾಡಿದ್ದು, ಎಲ್ಲಾ ವೇರಿಯೆಂಟ್‌ಗಳ ಬೆಲೆಯನ್ನು ಡಿಸೆಂಬರ್ 2 ರಂದು ಪ್ರಕಟಿಸಲಿದೆ. ಅದೇ ದಿನಾಂಕದಿಂದ ನೀವು ಅಧಿಕೃತವಾಗಿ ಕೈಲಾಕ್ ಅನ್ನು ಬುಕ್ ಮಾಡಬಹುದು. ವಿತರಣೆಯು ಜನವರಿ 27, 2025 ರಿಂದ ಪ್ರಾರಂಭವಾಗಲಿದೆ. ಮತ್ತೊಂದೆಡೆ ಬ್ರೆಝಾ ಬೆಲೆಯು ರೂ. 8.34 ಲಕ್ಷದಿಂದ 14.14 ಲಕ್ಷ ರೂ.ವರೆಗೆ (ಎಕ್ಸ್‌ ಶೋರೂಂ)ಇದೆ.

skoda-kylaq-vs-maruti-suzuki-brezza-features-comparison

ಆರು ಏರ್ ಬ್ಯಾಗ್: ಸುರಕ್ಷತೆಗೆ ಸಂಬಂಧಿಸಿದಂತೆ, ಸ್ಕೋಡಾ ಕೈಲಾಕ್ ಎಲ್ಲಾ ರೂಪಾಂತರಗಳಲ್ಲಿ ಆರು ಏರ್‌ಬ್ಯಾಗ್‌ಗಳನ್ನು ಹೊಂದಿದೆ. ಆದ್ರೆ ಮಾರುತಿ ಬ್ರೆಝಾ ತನ್ನ ಟಾಪ್-ಸ್ಪೆಕ್ ಝಡ್ಎಕ್ಸ್ಐ ಪ್ಲಸ್‌ನಲ್ಲಿ ಮಾತ್ರ ಆರು ಏರ್‌ಬ್ಯಾಗ್‌ಗಳನ್ನು ಪಡೆದಿದೆ. ಎರಡೂ ಕಾರುಗಳು ಐಎಸ್ಒಫಿಕ್ಸ್ ಚೈಲ್ಡ್ ಸೀಟ್ ಆಂಕೋರೇಜ್‌ಗಳು, ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಕಂಟ್ರೋಲ್ ಮತ್ತು ಹಿಂಭಾಗದ ಪಾರ್ಕಿಂಗ್ ಸೆನ್ಸಾರ್‌ಗಳಂತಹ ಸುರಕ್ಷತಾ ಫೀಚರ್ಸ್ ಹೊಂದಿವೆ.

ಕಾರ್ನರಿಂಗ್ ಹೆಡ್ ಲೈಟ್: ಕೈಲಾಕ್ ಕಾರ್ನರಿಂಗ್ ಹೆಡ್ ಲೈಟ್‌ಗಳನ್ನು ಹೊಂದಿದೆ, ವಿಶೇಷವಾಗಿ ಕಡಿಮೆ ಗೋಚರತೆ ಸನ್ನಿವೇಶಗಳಲ್ಲಿ ಮತ್ತು ರಾತ್ರಿಯಲ್ಲಿ ಇದು ಮೂಲೆಗಳಲ್ಲಿಯೂ ಗೋಚರತೆಯನ್ನು ಸುಧಾರಿಸುತ್ತದೆ. ಆದರೆ ಬ್ರೆಝಾ, ಸಾಮಾನ್ಯ ಎಲ್ಇಡಿ ಪ್ರೊಜೆಕ್ಟರ್ ಹೆಡ್‌ಲೈಟ್‌ಗಳು ಮತ್ತು ಮುಂಭಾಗದ ಎಲ್ಇಡಿ ಫಾಗ್ ಲ್ಯಾಂಪ್‌ಗಳನ್ನು ಹೊಂದಿದೆ. ಎರಡೂ ಕಾರುಗಳು ಆಟೋಮ್ಯಾಟಿಕ್ ಹೆಡ್ ಲೈಟ್ ಫಂಕ್ಷನ್ ಹೊಂದಿವೆ.

skoda-kylaq-vs-maruti-suzuki-brezza-features-comparison

ದೊಡ್ಡ ಇನ್ಫೋಟೈನ್ಮೆಂಟ್: ಇನ್ಫೋಟೈನ್ಮೆಂಟ್ ಸಿಸ್ಟಂ ವಿಷಯಕ್ಕೆ ಬಂದರೆ, ಕೈಲಾಕ್ ಎಸ್‌ಯುವಿಯಲ್ಲಿ 10 ಇಂಚಿನ ಟಚ್ ಸ್ಕ್ರೀನ್ ಪಡೆದರೆ, ಬ್ರೆಝಾ 9 ಇಂಚಿನ ಸ್ಕ್ರೀನ್ ಹೊಂದಿದೆ. ಎರಡೂ ಸಿಸ್ಟಮ್‌ಗಳು ವೈರ್‌ಲೆಸ್ ಆಪಲ್ ಕಾರ್ಪ್ಲೇ ಮತ್ತು ಆಂಡ್ರಾಯ್ಡ್ ಆಟೋವನ್ನು ಸಪೋರ್ಟ್ ಮಾಡುತ್ತವೆ. ಹಾಗೆಯೇ ಎರಡರಲ್ಲೂ ಕನೆಕ್ಟೆಡ್ ಕಾರ್ ಟೆಕ್ ಅನ್ನು ಪಡೆಯಬಹುದು.

ಪವರ್ಡ್ ಫ್ರಂಟ್ ಸೀಟ್ಸ್: ಪವರ್ಡ್ ಸೀಟ್‌ಗಳ ಅನುಕೂಲವೆಂದರೆ, ಅವು ಸೀಟುಗಳನ್ನು ಸರಿಹೊಂದಿಸಲು ಹೆಚ್ಚಿನ ಅನುಕೂಲ ಮತ್ತು ಉತ್ತಮ ನಿಯಂತ್ರಣವನ್ನು ನೀಡುತ್ತವೆ. ಆದ್ರೆ ಬ್ರೆಝಾದಲ್ಲಿ ಮ್ಯಾನುವಲ್ಲಿ ಅಡ್ಜಸ್ಟ್ ಮಾಡಬಹುದಾದ ಸೀಟ್‌ ನೀಡಲಾಗಿದೆ, ಅದು ಕೂಡ ಡ್ರೈವರ್ ಸೀಟ್‌ಗೆ ಮಾತ್ರ. ಸ್ಕೋಡಾ ಕೈಲಾಕ್‌ನಲ್ಲಿ 6-ವೇ ಎಲೆಕ್ಟ್ರಿಕ್ ಆಗಿ ಅಡ್ಜಸ್ಟ್ ಮಾಡಬಹುದಾದ ಫ್ರಂಟ್ ಸೀಟುಗಳನ್ನು ನೀಡಲಾಗಿದೆ.

skoda-kylaq-vs-maruti-suzuki-brezza-features-comparison

ವೆಂಟಿಲೇಟೆಡ್ ಸೀಟ್‌ಗಳು: ಬೇಸಿಗೆಯಲ್ಲಿ ಈ ವೆಂಟಿಲೇಟೆಡ್ ಸೀಟ್‌ಗಳು ತುಂಬಾ ಉಪಯುಕ್ತವಾಗಿರುತ್ತವೆ. ಸ್ಕೋಡಾ ಕೈಲಾಕ್‌ನಲ್ಲಿನ ಮುಂಭಾಗದ ಪ್ರಯಾಣಿಕರು ವೆಂಟಿಲೇಟೆಡ್ ಸೀಟ್‌ಗಳನ್ನು ಪಡೆಯಬಹುದು. ಈ ಫೀಚರ್ ನಿಮಗೆ ಬ್ರೆಝಾದಲ್ಲಿ ಸಿಗುವುದಿಲ್ಲ. ಸ್ಕೋಡಾ ಈ ಆರಾಮ ಮತ್ತು ಅನುಕೂಲಕರ ವೈಶಿಷ್ಟ್ಯವನ್ನು ಎಸ್‌ಯುವಿಯ ಹೈ-ಸ್ಪೆಕ್ ವೇರಿಯೆಂಟ್‌ಗಳಲ್ಲಿ ಮಾತ್ರ ಒದಗಿಸುತ್ತದೆ.

ಫುಲ್ಲಿ ಡಿಜಿಟಲ್ ಇನ್ಸ್‌ಟ್ರೂಮೆಂಟ್ ಕ್ಲಸ್ಟರ್: ಬ್ರೆಝಾ ತನ್ನ ಇನ್ಸ್ಟ್ರುಮೆಂಟ್ ಕ್ಲಸ್ಟರ್‌ನಲ್ಲಿ ಅನಲಾಗ್ ಡಯಲ್‌ಗಳನ್ನು ಪಡೆಯುತ್ತದೆ. ಹೆಚ್ಚುವರಿ ಮಾಹಿತಿಗಾಗಿ ಮಧ್ಯದಲ್ಲಿ ಸಣ್ಣ ಮಲ್ಟಿ ಇನ್ಫೋ ಡಿಸ್ಪ್ಲೇ ಇದೆ. ಇತ್ತ ಸ್ಕೋಡಾ ಕೈಲಾಕ್ 8 ಇಂಚಿನ ಡಿಜಿಟಲ್ ಡ್ರೈವರ್ ಡಿಸ್ಪ್ಲೇಯನ್ನು ಹೊಂದಿದ್ದು ಆಧುನಿಕವಾಗಿ ಕಾಣುತ್ತದೆ.

Article Published On: Thursday, November 14, 2024, 20:02 [IST]
English summary
Skoda kylaq vs maruti suzuki brezza features comparison
Read more on auto news india
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+