ಟಾಟಾಗೆ ರಣಭೀಕರ ಪೈಪೋಟಿ: ಅಗ್ಗದ ಬೆಲೆಯಲ್ಲಿ ಸ್ಕೋಡಾ ಕಾರು ಬಿಡುಗಡೆ: ಯಾವುದು ಬೆಸ್ಟ್?
Skoda Kylaq vs Tata Nexon: ಟಾಟಾ ಮೋಟಾರ್ಸ್ ನೀಡುವ ಅತ್ಯಂತ ಸುರಕ್ಷಿತ ಕಾರುಗಳಲ್ಲಿ ನೆಕ್ಸಾನ್ (Tata Nexon) ಕೂಡ ಒಂದು, ಸುರಕ್ಷತಾ ವೈಶಿಷ್ಟ್ಯಗಳು ಸೇರಿದಂತೆ ಸಮಗ್ರ ವೈಶಿಷ್ಟ್ಯಗಳನ್ನು ಹೊಂದಿದೆ. ಟಾಟಾ ಕಾರುಗಳಂತೆಯೇ ಸುರಕ್ಷತೆ ಹಾಗೂ ಉತ್ತಮ ಪರ್ಫಾಮೆನ್ಸ್ ನೀಡುವ ಕಾರುಗಳಾಗಿ ಸ್ಕೋಡಾ ವಾಹನಗಳು ಜನಪ್ರಿಯತೆ ಪಡೆದಿವೆ. ಆದ್ರೆ ಸ್ಕೋಡಾ ಕಾರುಗಳು ತುಸು ದುಬಾರಿಯಾಗಿರುತ್ತವೆ. ಈಗ ಇತರ ಭಾರತೀಯ ಅಗ್ಗದ ವಾಹನಗಳಿಗೆ ಪೈಪೋಟಿ ನೀಡಲು ಸ್ಕೋಡಾ ತನ್ನ ಬ್ರಹ್ಮಾಸ್ತ್ರವಾದ ಕೈಲಾಕ್ (Skoda Kylaq) ಎಂಬ ಹೊಸ ಕಾರನ್ನು ಅಗ್ಗವಾಗಿ ಬಿಡುಗಡೆ ಮಾಡಿದೆ. ಈ ಕಾರನ್ನು ಟಾಟಾದ ಜನಪ್ರಿಯ ನೆಕ್ಸಾನ್‌ಗೆ ಹೋಲಿಕೆ ಮಾಡಿ ಯಾವುದು ಬೆಸ್ಟ್ ಎಂಬುದನ್ನು ಇಲ್ಲಿ ನೋಡೋಣ.
ಬೆಲೆ: ಟಾಟಾ ನೆಕ್ಸಾನ್ ಬೇಸ್ ಮಾಡೆಲ್ ಪೆಟ್ರೋಲ್-ಮ್ಯಾನುವಲ್ ಬೆಲೆಯು ರೂ.8 ಲಕ್ಷಗಳಿಂದ (ಎಕ್ಸ್ ಶೋರೂಂ) ಪ್ರಾರಂಭವಾಗುತ್ತದೆ. ಟಾಪ್-ಎಂಡ್ ಡೀಸೆಲ್-ಆಟೋಮ್ಯಾಟಿಕ್ ವೇರಿಯೆಂಟ್ ಬೆಲೆಯು ರೂ.15.80 ಲಕ್ಷಗಳವರೆಗೆ (ಎಕ್ಸ್ ಶೋರೂಂ) ಇದೆ. ಇತ್ತ ಹೊಸ ಸ್ಕೋಡಾ ಕೈಲಾಕ್ ಬೆಲೆಯು ಎಕ್ಸ್ ಶೋರೂಂ ಪ್ರಕಾರ ರೂ.7.89 ಲಕ್ಷವಾಗಿದ್ದು, ಟಾಪ್ ಎಂಡ್ ಮಾದರಿಯ ಬೆಲೆಯನ್ನು ಇನ್ನು ಬಹಿರಂಗಪಡಿಸಿಲ್ಲ.

ವೈಶಿಷ್ಟ್ಯಗಳು: ಸ್ಕೋಡಾ ಕೈಲಾಕ್ ಎಸ್‍ಯುವಿಯ ಒಳಭಾಗದಲ್ಲಿ ಟೂ-ಸ್ಪೋಕ್ ಸ್ಟೀರಿಂಗ್ ವೀಲ್ ಮತ್ತು 8-ಇಂಚಿನ ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್ ನೀಡಲಾಗಿದೆ. ಇದು ನವೀಕರಿಸಿದ OS, ವೈರ್‌ಲೆಸ್ ಆಂಡ್ರಾಯ್ಡ್ ಆಟೋ/ಆಪಲ್ ಕಾರ್‌ಪ್ಲೇ, ವೈರ್‌ಲೆಸ್ ಫೋನ್ ಚಾರ್ಜರ್ ಮತ್ತು ಸಿಂಗಲ್ ಪೇನ್ ಸನ್‌ರೂಫ್‌ನೊಂದಿಗೆ 10-ಇಂಚಿನ ಟಚ್‌ಸ್ಕ್ರೀನ್ ಇನ್‌ಫೋಟೈನ್‌ಮೆಂಟ್, ಕೀಲೆಸ್ ಎಂಟ್ರಿ, ಮುಂಭಾಗದ ಸೀಟ್ ವೆಂಟಿಲೇಶನ್ ಮತ್ತು ಲೆಥೆರೆಟ್ ಅಪ್ಹೋಲ್‌ಸ್ಟರಿಯನ್ನು ಒಳಗೊಂಡಿದೆ.
ಟಾಟಾ ನೆಕ್ಸಾನ್‌ನಲ್ಲಿ ಡ್ಯುಯಲ್ 10.25-ಇಂಚಿನ ಡಿಸ್ಪ್ಲೇಗಳು (ಒಂದು ಇನ್ಫೋಟೈನ್ಮೆಂಟ್ ಸಿಸ್ಟಮ್ ಮತ್ತು ಇನ್ನೊಂದು ಇನ್ಸ್ಟ್ರುಮೆಂಟ್ ಕ್ಲಸ್ಟರ್), ವೈರ್‌ಲೆಸ್ ಆಂಡ್ರಾಯ್ಡ್ ಆಟೋ ಮತ್ತು ಆಪಲ್ ಕಾರ್ಪ್ಲೇ, ಕನೆಕ್ಟೆಡ್ ಕಾರ್ ಟೆಕ್ನಾಲಜಿ, ಹಿಂಭಾಗದ ಎಸಿ ವೆಂಟ್‌ಗಳೊಂದಿಗೆ ಆಟೋ ಎಸಿ, ವೈರ್‌ಲೆಸ್ ಫೋನ್ ಚಾರ್ಜಿಂಗ್, ವೆಂಟಿಲೇಟೆಡ್ ಫ್ರಂಟ್ ಸೀಟ್‌ಗಳು, ಸನ್ ರೂಫ್ ಸಹ ನೀಡಲಾಗಿದೆ.

ಸುರಕ್ಷತೆ: ಟಾಟಾ ನೆಕ್ಸಾನ್‌ನಲ್ಲಿ 6 ಏರ್‌ಬ್ಯಾಗ್‌ಗಳು, ರಿಯರ್ ಪಾರ್ಕಿಂಗ್ ಸೆನ್ಸಾರ್, ಹಿಲ್ ಹೋಲ್ಡ್ ಕಂಟ್ರೋಲ್, ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಕಂಟ್ರೋಲ್, ಎಬಿಎಸ್ ಜೊತೆಗೆ ಇಬಿಡಿ, ಐಎಸ್‌ಒಫಿಕ್ಸ್ ಚೈಲ್ಡ್ ಸೀಟ್ ಆಂಕೋರೇಜ್ ಇವೆ. ಹೈ ಸ್ಪೆಕ್ ವೇರಿಯೆಂಟ್‌ಗಳು ಬ್ಲೈಂಡ್ ವ್ಯೂ ಮಾನಿಟರ್, ಫ್ರಂಟ್ ಪಾರ್ಕಿಂಗ್ ಸೆನ್ಸಾರ್ ಮತ್ತು ಟೈರ್ ಪ್ರೆಶರ್ ಮಾನಿಟರಿಂಗ್ ಸಿಸ್ಟಮ್ (ಟಿಪಿಎಂಎಸ್) ನೊಂದಿಗೆ 360-ಡಿಗ್ರಿ ಕ್ಯಾಮೆರಾವನ್ನು ಸಹ ಪಡೆಯುತ್ತವೆ.
ಈ ಸ್ಕೋಡಾ ಎಸ್‍ಯುವಿಯಲ್ಲಿ ಆರು ಏರ್‌ಬ್ಯಾಗ್‌ಗಳು, EBD ಜೊತೆಗೆ ABS, ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಕಂಟ್ರೋಲ್, ಎಲೆಕ್ಟ್ರಾನಿಕ್ ಡಿಫರೆನ್ಷಿಯಲ್ ಲಾಕ್ ಮತ್ತು ISOFIX ಚೈಲ್ಡ್ ಸೀಟ್ ಮೌಂಟ್ ಬೋರ್ಡ್‌ನಾದ್ಯಂತ ಸ್ಟ್ಯಾಂಡರ್ಡ್ ಸುರಕ್ಷತಾ ಫೀಚರ್ಸ್ ಗಳನ್ನು ಹೊಂದಿದೆ. ಕೈಲಾಕ್ ಕಾರಿನಲ್ಲಿ ಚಾಲಕನಿಗೆ ಮಾತ್ರವಲ್ಲದೆ ಮುಂಭಾಗದ ಪ್ರಯಾಣಿಕರಿಗೂ ಪವರ್ಡ್ ಸೀಟ್ ಹೊಂದಾಣಿಕೆಯನ್ನು ನೀಡುವ ಮೂಲಕ ಪ್ರತಿಸ್ಪರ್ಧಿಗಳಿಂದ ಒಂದು ಹೆಜ್ಜೆ ಮುಂದಿದೆ.
ಎಂಜಿನ್: ಟಾಟಾ ನೆಕ್ಸಾನ್‌ನಲ್ಲಿ ಎರಡು ಎಂಜಿನ್ ಆಯ್ಕೆಗಳನ್ನು ನೀಡಲಾಗಿದ್ದು, ಮೊದಲನೇಯದು 1.2-ಲೀಟರ್ ಟರ್ಬೊ-ಪೆಟ್ರೋಲ್ ಎಂಜಿನ್ 5-ಸ್ಪೀಡ್ ಮ್ಯಾನುವಲ್ ಟ್ರಾನ್ಸ್ ಮಿಷನ್ ಜೊತೆಗೆ 6-ಸ್ಪೀಡ್ ಮ್ಯಾನುವಲ್ ಟ್ರಾನ್ಸ್ ಮಿಷನ್ ಕೂಡ ಹೊಂದಿದೆ. ಎರಡನೇಯದು 1.5 - ಲೀಟರ್ ಡೀಸೆಲ್ ಡೀಸೆಲ್ ಎಂಜಿನ್ ಆಗಿದ್ದು, 6-ಸ್ಪೀಡ್ ಮ್ಯಾನುವಲ್ ಅಥವಾ 6-ಸ್ಪೀಡ್ ಎಎಂಟಿಯೊಂದಿಗೆ ಬರುತ್ತದೆ.
ಸ್ಕೋಡಾ ಕೈಲಾಕ್ ಎಸ್‌ಯುವಿಯಲ್ಲಿ ಕುಶಾಕ್ ಮತ್ತು ಸ್ಲಾವಿಯಾಸದಲ್ಲಿ ಬಳಸಿದ ಅದೇ 1.0-ಲೀಟರ್ TSI ಪೆಟ್ರೋಲ್ ಎಂಜಿನ್ ನೀಡಲಾಗಿದೆ. ಈ ಎಂಜಿನ್ ಅನ್ನು 6-ಸ್ಪೀಡ್ ಮ್ಯಾನುವಲ್ ಮತ್ತು 6-ಸ್ಪೀಡ್ ಟಾರ್ಕ್ ಕರ್ನವಾಟರ್ ಆಟೋಮ್ಯಾಟಿಕ್ ಗೇರ್ ಬಾಕ್ಸ್ ಆಯ್ಕೆಗಳೊಂದಿಗೆ ಬರುತ್ತದೆ. ಈ ಎರಡೂ ಕಾರುಗಳಲ್ಲಿ ನಿಮಗೆ ಯಾವುದು ಬೆಸ್ಟ್ ಎನಿಸಿದೆ ಎಂಬುದನ್ನು ಕಮೆಂಟ್ ಮಾಡಿ.


Click it and Unblock the Notifications