8 ಲಕ್ಷ ಬೆಲೆಗೆ ಹೊಸ ಎಸ್‍ಯುವಿ? ಮಾರುತಿ, ಟಾಟಾಗೆ ಎದುರಾಳಿ ಸ್ಕೋಡಾದ ಹೊಸ ಬ್ರಹ್ಮಾಸ್ತ್ರ
ಸ್ಕೋಡಾ ಭಾರತದಲ್ಲಿ ವಿಶೇಷ ಅಭಿಮಾನಿಗಳನ್ನು ಹೊಂದಿರುವ ಜನಪ್ರಿಯ ಕಾರು ತಯಾರಕ ಕಂಪನಿಯಾಗಿದೆ. ಈ ಸ್ಕೋಡಾ ಕಂಪನಿಯು ಕುಶಾಕ್ ಮತ್ತು ಸ್ಲಾವಿಯಾ ಕಾರುಗಳನ್ನು ಭರ್ಜರಿಯಾಗಿ ಮಾರಾಟ ಮಾಡುತ್ತಿದ್ದಾರೆ. ಇದೀಗ ಸ್ಕೋಡಾ ಆಟೋ ಭಾರತದಲ್ಲಿ ತನ್ನ ಮುಂಬರುವ ಹೊಸ ಎಸ್‍ಯುವಿಯ ಹೆಸರನ್ನು ಬಹಿರಂಗಪಡಿಸಲು ಸಿದ್ಧವಾಗಿದೆ. ಈ ಹೊಸ ಸಬ್-ಕಾಂಪ್ಯಾಕ್ಟ್ ಎಸ್‍ಯುವಿಯ ಹೆಸರನ್ನು ಆಗಸ್ಟ್ 21ಕ್ಕೆ (ನಾಳೆ) ಬಹಿರಂಗಪಡಿಸಲಿದೆ. ಈ ಹೊಸ ಎಸ್‍ಯುವಿಯ ಹಲವಾರು ರೇಖಾಚಿತ್ರಗಳನ್ನು ಬಿಡುಗಡೆಗೊಳಿಸಿದ್ದಾರೆ. ಈ ವರ್ಷದ ಕೊನೆಯಲ್ಲಿ ಹೊಸ ಸ್ಕೋಡಾ ಎಸ್‍ಯುವಿಯು ಬಿಡುಗಡೆಯಾಗಬಹುದು ಎಂದು ನಿರೀಕ್ಷಿಸುತ್ತೇವೆ. ಇದು ದೇಶದಲ್ಲಿ ತೀವ್ರ ಸ್ಪರ್ಧಾತ್ಮಕ ಉಪ-ಕಾಂಪ್ಯಾಕ್ಟ್ ಎಸ್‍ಯುವಿ ವಿಭಾಗಕ್ಕೆ ಪದಾರ್ಪಣೆ ಮಾಡಲಿದೆ.
ಈ ವರ್ಷದ ಏಪ್ರಿಲ್‌ನಲ್ಲಿ, ಸ್ಕೋಡಾ ಎಸ್‍ಯುವಿಗಾಗಿ ಹೆಸರುಗಳನ್ನು ಶಾರ್ಟ್‌ಲಿಸ್ಟ್ ಮಾಡಿದೆ. ಸ್ವೀಕರಿಸಿದ ಸಾವಿರಾರು ಹೆಸರುಗಳಿಂದ ಶಾರ್ಟ್‌ಲಿಸ್ಟ್ ಮಾಡಿದೆ. ಈ 10 ಹೆಸರುಗಳು ಕೈಲಾಕ್, ಕೈಮಾಕ್, ಕ್ವಿಕ್, ಕಾರಿಕ್, ಕೈರೋಕ್, ಕಾಸ್ಮಿಕ್, ಕೈಕ್, ಕಯಾಕ್, ಕ್ಲಿಕ್ ಮತ್ತು ಕಾರ್ಮಿಕ್ ಆಗಿದೆ. ಸುಮಾರು ಐದು ತಿಂಗಳ ನಂತರ, ಎಸ್‍ಯುವಿಗಾಗಿ ಸ್ಕೋಡಾ ಐದು ಹೆಸರುಗಳನ್ನು ಶಾರ್ಟ್‌ಲಿಸ್ಟ್ ಮಾಡಿದೆ.

ಆ ಐದು ಹೆಸರುಗಳು ಸ್ಕೋಡಾ ಕ್ವಿಕ್, ಸ್ಕೋಡಾ ಕೈಲಾಕ್, ಸ್ಕೋಡಾ ಕಾಸ್ಮಿಕ್, ಸ್ಕೋಡಾ ಕಯಾಕ್ ಮತ್ತು ಸ್ಕೋಡಾ ಕ್ಲಿಕ್ ಆಗಿದೆ. ಬಿಡುಗಡೆಯಾಗಲಿರುವ ಸ್ಕೋಡಾ (Skoda) ಎಸ್‌ಯುವಿ ಮಾದರಿಯು ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಯಾದ ಬಳಿಕ ಮಾರುತಿ ಬ್ರೆಝಾ, ಟಾಟಾ ನೆಕ್ಸನ್‌ನಂತಹ ಎಸ್‍ಯುವಿಗಳಿಗೆ ಪೈಪೋಟಿ ನೀಡುತ್ತದೆ. ಈ ಹೊಸ ಸ್ಕೋಡಾ ಕುಶಾಕ್‌ನಂತಹ ಮಾದರಿಗಳೊಂದಿಗೆ ಪರಿಚಯಿಸಿದ ಅದೇ MQB A0 IN ಪ್ಲಾಟ್‌ಫಾರ್ಮ್ ಅನ್ನು ಆಧರಿಸಿದೆ.
ಈ ಹೊಸ ಕಾಂಪ್ಯಾಕ್ಟ್ ಎಸ್‍ಯುವಿಗಾಗಿ ತನ್ನ ಉತ್ಪಾದನಾ ಸಾಮರ್ಥ್ಯವನ್ನು ಶೇಕಡಾ 30 ರಷ್ಟು ಹೆಚ್ಚಿಸುವುದಾಗಿ ಕಾರು ತಯಾರಕರು ಹೇಳಿದ್ದಾರೆ. ಸ್ಕೋಡಾ ಒಂದು ವರ್ಷದಲ್ಲಿ ಬ್ರೆಝಾ, ನೆಕ್ಸಾನ್ ಪ್ರತಿಸ್ಪರ್ಧಿಯ ಒಂದು ಲಕ್ಷ ಯುನಿಟ್‌ಗಳನ್ನು ಮಾರಾಟ ಮಾಡುವ ಗುರಿ ಹೊಂದಿದೆ. ಸ್ಕೋಡಾ ಹಂಚಿಕೊಂಡಿರುವ ರೇಖಾಚಿತ್ರಗಳು ಮುಂಬರುವ ಎಸ್‍ಯುವಿ ಹೇಗಿರುತ್ತದೆ ಎಂಬ ಕಲ್ಪನೆಯನ್ನು ನೀಡುತ್ತದೆ. ಎಸ್‌ಯುವಿ ವಿನ್ಯಾಸದ ಪ್ರಮುಖ ಭಾಗವು ಕುಶಾಕ್‌ನಿಂದ ಪ್ರಭಾವಿತವಾಗಿರುತ್ತದೆ.
ಟೀಸರ್ ಚಿತ್ರಗಳು ಸ್ಪ್ಲಿಟ್ ಹೆಡ್‌ಲೈಟ್ ಸೆಟಪ್ ಜೊತೆಗೆ ಅದರ ಮೇಲಿರುವ LED DRL ಸ್ಟ್ರಿಪ್‌ಗಳನ್ನು ತೋರಿಸುತ್ತವೆ. ಭಾರತದಲ್ಲಿನ ಇತರ ಸ್ಕೋಡಾ ಮಾದರಿಗಳಲ್ಲಿ ಕಂಡುಬರುವಂತೆ ಈ ಎಸ್‍ಯುವಿಯ ಗ್ರಿಲ್ ಸಾಂಪ್ರದಾಯಿಕ ಟ್ರಿಟ್ ಮೆಂಟ್ ಅನ್ನು ಪಡೆಯುವ ಸಾಧ್ಯತೆಯಿದೆ. ಹಿಂಭಾಗದಲ್ಲಿ, ತೀಕ್ಷ್ಣವಾದ LED ಟೈಲ್‌ಲೈಟ್ ಯುನಿಟ್ ಮತ್ತು ಹಿಂಭಾಗದಲ್ಲಿ ದಪ್ಪವಾದ ಬಂಪರ್ ಕುಶಾಕ್‌ಗೆ ಹೋಲಿಕೆಯನ್ನು ಹೊಂದಿದೆ. ಈ ಎಸ್‍ಯುವಿಯ ರೂಫ್ ರೈಲ್ ಗಳು ಮತ್ತು ಅಲಾಯ್ ವ್ಹೀಲ್ ಗಳನ್ನು ಪಡೆಯುವ ನಿರೀಕ್ಷೆಯಿದೆ.
ಸ್ಕೋಡಾ ಹೊಸ ಎಸ್‌ಯುವಿಯನ್ನು 1.0-ಲೀಟರ್ ಪೆಟ್ರೋಲ್ ಎಂಜಿನ್‌ನೊಂದಿಗೆ ನೀಡುವ ಸಾಧ್ಯತೆಯಿದೆ. ಈ TSI ಪೆಟ್ರೋಲ್ ಎಂಜಿನ್ 6-ಸ್ಪೀಡ್ ಮ್ಯಾನುವಲ್ ಗೇರ್‌ಬಾಕ್ಸ್ ಅಥವಾ 6-ಸ್ಪೀಡ್ ಟಾರ್ಕ್ ಕರ್ನವಾಟರ್ ಆಟೋಮ್ಯಾಟಿಕ್ ಗೇರ್ ಬಾಕ್ಸ್ ನೊಂದಿಗೆ ಜೋಡಿಸಲಾಗಿದೆ. ಈ ಎಂಜಿನ್ 113 bhp ಪವರ್ ಮತ್ತು 178 Nm ಗರಿಷ್ಠ ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ.
ಹೊಸ ಕಾಂಪ್ಯಾಕ್ಟ್ ಎಸ್‍ಯುವಿಗಾಗಿ 30 ಪ್ರತಿಶತದಷ್ಟು ಉತ್ಪಾದನಾ ಸಾಮರ್ಥ್ಯವನ್ನು ಹೆಚ್ಚಿಸುವುದಾಗಿ ಸ್ಕೋಡಾ ಘೋಷಿಸಿದೆ. ಒಂದು ವರ್ಷದೊಳಗೆ 1 ಲಕ್ಷ ಯೂನಿಟ್‌ಗಳನ್ನು ಮಾರಾಟ ಮಾಡುವ ಗುರಿಯನ್ನು ಸ್ಕೋಡಾ ಹೊಂದಿದೆ. ಈ ಹೊಸ ಎಸ್‍ಯುವಿಯ ಬೆಲೆ ಸುಮಾರು 8 ಲಕ್ಷದಿಂದ ಪ್ರಾರಂಭವಾದರೆ, ಈ ಗುರಿಯನ್ನು ಇನ್ನೂ ವೇಗವಾಗಿ ಸಾಧಿಸಬಹುದು.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊ ಗಳನ್ನು ಪಡೆಯಲು ನಮ್ಮ ಫೇಸ್ ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications








