ಕಡಿಮೆ ಬೆಲೆಗೆ ಲಕ್ಷುರಿ ಸೆಡಾನ್ ಬೇಕೆ?: SKODA SLAVIA ಡೌನ್ ಪೇಮೆಂಟ್, EMI ಸಂಪೂರ್ಣ ಮಾಹಿತಿ!
ಭಾರತದಲ್ಲಿ ಅತೀ ಹೆಚ್ಚು ಜನ ಇಷ್ಟ ಪಡುವುದು ಲಕ್ಷುರಿ ಕಾರುಗಳನ್ನು. ಇಂತಹ ಸಂಧರ್ಭದಲ್ಲಿ ಕಡಿಮೆ ಬೆಲೆಗೆ ಲಕ್ಷುರಿ ಫೀಚರ್‌ಗಳಿರುವ ಒಂದು ಪ್ರೀಮಿಯಂ ಕಾರೆಂದರೆ ಅದು ಸ್ಕೋಡಾ ಕಂಪನಿಯ ಸ್ಲಾವಿಯಾ. ಇಂದಿನ ಲೇಖನದಲ್ಲಿ ಈ ಸುಂದರವಾದ ಕಾರಿನ ಲೋನ್, ಡೌನ್‌ಪೇಮೆಂಟ್ ಮತ್ತು ಇಎಂಐ ಕುರಿತಾಗಿ ನೋಡಲಿದ್ದೇವೆ.
ಮೊದಲಿಗೆ ಈ ಕಾರಿನ ಎಕ್ಸ್ ಶೋ ರೂಮ್ ಬೆಲೆ ನೋಡುವುದಾದರೆ, 11,53,400 ಲಕ್ಷ ರೂಗಳಿಗೆ ಸಿಗುತ್ತದೆ. ಇದಕ್ಕೆ ಇನ್ಸುರೆನ್ಸ್ ಮತ್ತು ಆರ್‌ಟಿಒ ಟ್ಯಾಕ್ಸ್ ಸೇರಿ 14,30,276 ಲಕ್ಷ ರೂಗಳಿಗೆ ಬೆಂಗಳೂರಿನಲ್ಲಿ ಸಿಗುತ್ತದೆ. ಇದರಲ್ಲಿ ಆರ್‌ಟಿಒ ಟ್ಯಾಕ್ಸ್ 2,20,349 ಮತ್ತು ಇನ್ಸುರೆನ್ಸ್ 44,393 ರೂಗಳ ರೂಪದಲ್ಲಿ ಸೇರಿಕೊಂಡಿದೆ.

ಇನ್ನು ಇದರ ಡೌನ್‌ಪೇಮೆಂಟ್ ಮತ್ತು ಇಎಂಐ ಕುರಿತಾಗಿ ನೋಡಿದರೆ, ಈ ಕಾರು ಕೊಳ್ಳಲು ನೀವು ಕಡಿಮೆ ಎಂದರೂ 2,50,000 ರೂ ಮಾಡಿದರೆ ನಿಮಗೆ 9.8 % ಬಡ್ಡಿದರದಲ್ಲಿ 7 ವರ್ಷಗಳವರೆಗೆ ಲೋನ್ ಮಾಡಬಹುದು. ಏಳು ವರ್ಷ ಕಾಲಾವಧಿಯ ಲೋನ್ ಅವಧಿಯಲ್ಲಿ ನೀವು ಪ್ರತೀ ತಿಂಗಳು ಸುಮಾರು 19,472 ರೂಗಳನ್ನು ಇಎಂಐ ರೂಪದಲ್ಲಿ ಕಟ್ಟಬೇಕಾಗುತ್ತದೆ.
ಇನ್ನು ಸ್ಕೋಡಾ ಕಾರಿನ ಬಗ್ಗೆ ನೋಡುವುದಾದರೆ, ಹೊಸ ಸ್ಕೋಡಾ ಸ್ಲಾವಿಯಾ (Skoda Slavia) ಸ್ಟೈಲ್ ಎಡಿಷನ್ ಮಾದರಿಯಲ್ಲಿ 1.5-ಲೀಟರ್ 4-ಸಿಲಿಂಡರ್ ಟರ್ಬೋಚಾರ್ಜ್ಡ್ ಪೆಟ್ರೋಲ್ ಎಂಜಿನ್ ಅನ್ನು ಅಳವಡಿಸಲಾಗಿದೆ. ಈ ಎಂಜಿನ್ 150 PS ಪವರ್ ಮತ್ತು 250 Nm ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. ಈ ಎಂಜಿನ್ ಅನ್ನು 7-ಸ್ಫೀಡ್ DSG ಮತ್ತು ಡ್ಯುಯಲ್-ಕ್ಲಚ್ ಆಟೋಮ್ಯಾಟಿಕ್ ಗೇರ್‌ಬಾಕ್ಸ್ ಮೂಲಕ ಮುಂಭಾಗದ ವ್ಹೀಲ್ ಗಳಿಗೆ ಪವರ್ ರವಾನಿಸುತ್ತದೆ.

ಹೊಸ ಸ್ಕೋಡಾ ಸ್ಲಾವಿಯಾ ಸ್ಟೈಲ್ ಎಡಿಷನ್ ಕ್ಯಾಂಡಿ ವೈಟ್, ಬ್ರಿಲಿಯಂಟ್ ಸಿಲ್ವರ್ ಮತ್ತು ಟೊರ್ನಾಡೋ ರೆಡ್ ಬಣ್ಣಗಳ ಆಯ್ಕೆಗಳಲ್ಲಿ ಲಭ್ಯವಿದೆ. ಈ ಸೆಡಾನ್ ಡ್ಯುಯಲ್ ಡ್ಯಾಶ್ ಕ್ಯಾಮೆರಾ, ಸ್ಲಾವಿಯಾ ಸ್ಕಫ್ ಪ್ಲೇಟ್, ಎಲೆಕ್ಟ್ರಿಕಲಿ ಅಡ್ಜಸ್ಟಬಲ್ ಮತ್ತು ವೆಂಟಿಲೇಟೆಡ್ ಫ್ರಂಟ್ ಸೀಟ್‌ಗಳು ಮತ್ತು ಇತರವುಗಳನ್ನು ಒಳಗೊಂಡಂತೆ ಹಲವಾರು ಹೊಸ ವೈಶಿಷ್ಟ್ಯಗಳನ್ನು ಹೊಂದಿದೆ.
ಹೊಸ ಸ್ಕೋಡಾ ಸ್ಲಾವಿಯಾ ಸ್ಟೈಲ್ ಎಡಿಷನ್ ಕಾರಿನಲ್ಲಿ Apple CarPlay ಮತ್ತು Android Auto ಜೊತೆಗೆ 10-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸ್ಕ್ರೀನ್, ಡಿಜಿಟಲ್ ಇನ್ಸ್ಟ್ರುಮೆಂಟ್ ಕನ್ಸೋಲ್, ಆರು ಏರ್‌ಬ್ಯಾಗ್‌ಗಳು, ISOFIX ಚೈಲ್ಡ್ ಆಂಕರೇಜ್‌ಗಳು ಮತ್ತು ಹೆಚ್ಚಿನವುಗಳನ್ನು ಒಳಗೊಂಡಂತೆ ಹಲವು ಫೀಚರ್ಸ್ ಗಳನ್ನು ಹೊಂದಿವೆ. ಸ್ಲಾವಿಯಾ 5-ಸ್ಟಾರ್ ಗ್ಲೋಬಲ್ NCAP ರೇಟಿಂಗ್ ಅನ್ನು ಪಡೆದುಕೊಂಡಿದೆ, ಇದು ಮಾರಾಟದಲ್ಲಿರುವ ಭಾರತದಲ್ಲಿ ತಯಾರಿಸಿದ ಸುರಕ್ಷಿತ ಕಾರುಗಳಲ್ಲಿ ಒಂದಾಗಿದೆ.
ಸ್ಟ್ಯಾಂಡರ್ಡ್ ಸ್ಕೋಡಾ ಸ್ಲಾವಿಯಾ 4,541 ಎಂಎಂ ಉದ್ದ, 1,752 ಅಗಲ ಮತ್ತು 1,487 ಎಂಎಂ ಎತ್ತರ ಮತ್ತು 2,651 ಎಂಎಂ ವ್ಹೀಲ್‌ಬೇಸ್ ಹೊಂದಿದೆ. ಈ ಕಾರಿನಲ್ಲಿ ಸುರಕ್ಷತೆಗಾಗಿ ಆರು ಏರ್‌ಬ್ಯಾಗ್‌ಗಳು ಇಎಸ್‌ಸಿ, ಇಡಿಎಸ್, ಟೈರ್ ಪ್ರೆಷರ್ ಮಾನಿಟರ್, ಹಿಲ್ ಹೋಲ್ಡ್, ರಿಯರ್ ಪಾರ್ಕಿಂಗ್ ಕ್ಯಾಮೆರಾ, ಮಲ್ಟಿ ಕೂಲಿಷನ್ ಬ್ರೇಕ್, ಐಸೋಫಿಕ್ಸ್ ಚೈಲ್ಡ್ ಸೀಟ್ ಮೌಂಟ್ಸ್, ರೈನ್ ಸೆನ್ಸಿಂಗ್ ವೈಪ್ಸ್ ಸೇರಿದಂತೆ ಹಲವಾರು ಸ್ಟ್ಯಾಂಡರ್ಡ್ ಫೀಚರ್ಸ್ ಗಳನ್ನು ಹೊಂದಿವೆ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications








