ಭಾರತದಲ್ಲಿ ಬಿಡುಗಡೆಗೆ ಸಜ್ಜಾದ ಬಹುನಿರೀಕ್ಷಿತ ಹೊಸ ಸ್ಕೋಡಾ ಸೂಪರ್ಬ್ ಕಾರು
ದೇಶದಲ್ಲಿ 2023ರ ಏಪ್ರಿಲ್ 1 ರಂದು ಜಾರಿಗೆ ಬಂದ ಕಟ್ಟುನಿಟ್ಟಾದ BS6 ಲೆವೆಲ್ II ಮಾಲಿನ್ಯ ಮಾನದಂಡಗಳ ಅನುಷ್ಠಾನದೊಂದಿಗೆ ಸ್ಕೋಡಾ ಇಂಡಿಯಾ ಸೂಪರ್ಬ್ ಸೆಡಾನ್ ಅನ್ನು ಸ್ಥಗಿತಗೊಳಿಸಿತು. ಕೆಲವು ತಿಂಗಳ ನಂತರ, ಸ್ಕೋಡಾ ಕಂಪನಿಯು ಹೊಸ ನಾಲ್ಕನೇ ತಲೆಮಾರಿನ ಸ್ಕೋಡಾ ಸೂಪರ್ಬ್ ಮೊದಲ ನೋಟವನ್ನು ಹಂಚಿಕೊಂಡಿತು.
ಸ್ಕೋಡಾ ಸೂಪರ್ಬ್ (Skoda Superb) ಸೆಡಾನ್‌ನ ಹೊಸ ಮಾದರಿಯನ್ನು ಭಾರತೀಯ ಮಾರುಕಟ್ಟೆಯಲ್ಲಿ CBU (ಸಂಪೂರ್ಣವಾಗಿ ನಿರ್ಮಿಸಿದ ಘಟಕ) ಆಗಿ ಮರುಪರಿಚಯಿಸಲು ನಿರೀಕ್ಷಿಸಲಾಗಿತ್ತು. ಈಗ, ಸೋರಿಕೆಯಾದ ಆಂತರಿಕ ದಾಖಲೆಯ ಪ್ರಕಾರ, ಹೊಸ ಸ್ಕೋಡಾ ಸೂಪರ್ಬ್ 100 ಯುನಿಟ್ ಗಳನ್ನು ತರಲು ಯೋಜಿಸಿದೆ. 2024ರ ಸ್ಕೋಡಾ ಸೂಪರ್ಬ್ ಬ್ರ್ಯಾಂಡ್‌ನ ಪ್ರಮುಖ ಸೆಡಾನ್ ಆಗಿದೆ.

2024ರ ಸ್ಕೋಡಾ ಸೂಪರ್ಬ್ ಬೆಲೆಯು ಅಂದಾಜು ಎಕ್ಸ್ ಶೋ ರೂಂ ಪ್ರಕಾರ ಸುಮಾರು ರೂ.55 ಲಕ್ಷವಾಗಿರಬಹುದು ಎಂದು ನಿರೀಕ್ಷಿಸುತ್ತೇವೆ. ಈ ಹೊಸ ಸ್ಕೋಡಾ ಸೂಪರ್ಬ್ ಏಪ್ರಿಲ್ 3ಕ್ಕೆ ಬಿಡುಗಡೆಯಾಗಲಿದೆ. ಹೊಸ ಸ್ಕೋಡಾ ಸೂಪರ್ಬ್ ಸೆಡಾನ್‌ನಲ್ಲಿ 2.0 ಲೀಟರ್ ಟರ್ಬೊ ಪೆಟ್ರೋಲ್ ಎಂಜಿನ್‌ನಿಂದ ನಡೆಸಲ್ಪಡುವ ಸಂಪೂರ್ಣ-ಲೋಡ್ ಆಗಿರುವ L&K ರೂಪಾಂತರದಲ್ಲಿ ಬರುವ ಸಾಧ್ಯತೆಯಿದೆ.
ಈ ಎಂಜಿನ್ ನೊಂದಿಗೆ 4,200rpm - 6,000rpm ನಡುವೆ 188 bhp ಪವರ್ ಮತ್ತು 1,450rpm - 4,200rpm ನಡುವೆ 320 Nm ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. ಈ ಎಂಜಿನ್ ನೊಂದಿಗೆ ಸ್ಪೀಡ್ DSG ಆಟೋಮ್ಯಾಟಿಕ್ ಗೇರ್‌ಬಾಕ್ಸ್‌ನೊಂದಿಗೆ ಜೋಡಿಸಲಾಗಿದೆ. ಈ ಹೊಸ ಕಾರಿನಲ್ಲಿ 17-ಇಂಚಿನ ಸ್ಟ್ರಾಟೋಸ್ ಅಲಾಯ್ ವ್ಹೀಲ್ ಗಳನ್ನು ಹೊಂದಿರುತ್ತದೆ.

ಈ ಹೊಸ 2024ರ ಸ್ಕೋಡಾ ಸೂಪರ್ಬ್ ಅಡಾಪ್ಟಿವ್ ಆಟೋ ಎಲ್ಇಡಿ ಹೆಡ್‌ಲ್ಯಾಂಪ್‌ಗಳು ಮತ್ತು ಕಾರ್ನರ್ ಮಾಡುವ ಕಾರ್ಯದೊಂದಿಗೆ ಎಲ್‌ಇಡಿ ಫಾಗ್ ಲ್ಯಾಂಪ್‌ಗಳು ಬರುತ್ತದೆ. ಹೊಸ ಸ್ಕೋಡಾ ಸೂಪರ್ಬ್ L&K ರೂಪಾಂತರದಲ್ಲಿ ವೈರ್ಡ್ ಸ್ಮಾರ್ಟ್ ಲಿಂಕ್ ಕಾರ್ಯನಿರ್ವಹಣೆಯೊಂದಿಗೆ ಕೊಲಂಬಸ್ ಇನ್ಫೋಟೈನ್‌ಮೆಂಟ್ ಸಿಸ್ಟಮ್, ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್ ಮತ್ತು ಮೂರು-ಝೂನ್ ಆಟೋಮ್ಯಾಟಿಕ್ ಕ್ಲೈಮೆಂಟ್ ಕಂಟ್ರೋಲ್ ಹೊಂದಿದೆ.
ಇದರೊಂದಿಗೆ 11-ಸ್ಪೀಕರ್ ಕ್ಯಾಂಟನ್ ಆಡಿಯೊ ಸಿಸ್ಟಮ್ ಮತ್ತು 12-ವೇ ಎಲೆಕ್ಟ್ರಿಕಲಿ ಅಡ್ಜಸ್ಟ್ ಮಾಡಬಹುದಾದ ಮುಂಭಾಗದ ಸೀಟುಗಳನ್ನು ಬರುತ್ತದೆ. ಜೊತೆ ವೈರ್‌ಲೆಸ್ ಚಾರ್ಜಿಂಗ್ ಮತ್ತು ಡ್ರೈವರ್ ಸೀಟ್‌ಗಾಗಿ ಮಸಾಜ್ ಫಂಕ್ಷನ್ ಅನ್ನು ಹೊಂದಿದೆ. ಹೊರಭಾಗದಲ್ಲಿ, ಹೊಸ 2024 ಸ್ಕೋಡಾ ಸೂಪರ್ಬ್ ಅಡಾಪ್ಟಿವ್ ಆಟೋ ಎಲ್ಇಡಿ ಹೆಡ್‌ಲ್ಯಾಂಪ್‌ಗಳು, ಕಾರ್ನರ್ ಮಾಡುವ ಕಾರ್ಯದೊಂದಿಗೆ ಎಲ್‌ಇಡಿ ಫಾಗ್ ಲ್ಯಾಂಪ್‌ಗಳು ಮತ್ತು 17-ಇಂಚಿನ ಸ್ಟ್ರಾಟೋಸ್ ಮಿಶ್ರಲೋಹಗಳನ್ನು ಹೊಂದಿರುತ್ತದೆ.

2024ರ ಸ್ಕೋಡಾ ಸೂಪರ್ಬ್ ಕಾರಿನ ಸುರಕ್ಷತೆಯ ಬಗ್ಗೆ ಹೇಳುವುದಾದರೆ, ಈ ಸೆಡಾನ್ ಕೆಲವು ಹೈಟೆಕ್ ವೈಶಿಷ್ಟ್ಯಗಳಾದ ಎಲೆಕ್ಟ್ರಾನಿಕ್ ಡಿಫರೆನ್ಷಿಯಲ್ ಲಾಕ್, ಡೈನಾಮಿಕ್ ಚಾಸಿಸ್ ಕಂಟ್ರೋಲ್, ಎಮರ್ಜನ್ಸಿ ಬ್ರೇಕಿಂಗ್ ಅಸಿಸ್ಟ್‌ನೊಂದಿಗೆ 360-ಡಿಗ್ರಿ ಕ್ಯಾಮೆರಾದೊಂದಿಗೆ ಪಾರ್ಕ್ ಅಸಿಸ್ಟ್, ಆಕ್ಟಿವ್ ಟೈರ್ ಪ್ರೆಶರ್ ಮಾನಿಟರಿಂಗ್ ಸಿಸ್ಟಮ್ ಮತ್ತು ಒಂಬತ್ತು ಏರ್‌ಬ್ಯಾಗ್‌ಗಳನ್ನು ಸಹ ನೀಡುತ್ತದೆ.
ಚಾರ್ಜಿಂಗ್ ಆಯ್ಕೆಗಳು ಗಮನಾರ್ಹ ಸುಧಾರಣೆಯನ್ನು ಕಂಡಿವೆ. 'ಫೋನ್ ಬಾಕ್ಸ್'ನ ಪರಿಚಯವು 15W ವರೆಗೆ ವೈರ್‌ಲೆಸ್ ಚಾರ್ಜಿಂಗ್ ಅನ್ನು ಅನುಮತಿಸುತ್ತದೆ. ಇನ್ನು ಕ್ಲೈಮೆಂಟ್ ಕಂಟ್ರೋಲ್ ಅನ್ನು ಹೊಂದಿದೆ. ಇನ್ನು ಇದಲ್ಲದೆ, USB-C ಪೋರ್ಟ್‌ಗಳು ಈಗ 45W ಪವರ್ ಅನ್ನು ನೀಡುತ್ತವೆ. ಇದರೊಂದಿಗೆ ಹಲವು ಅತ್ಯಾಧುನಿಕ ಫಿಚರ್ಸ್ ಗಳನ್ನು ಕೂಡ ಹೊಂದಿವೆ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications








