ಇನ್ಮುಂದೆ ಸ್ಕೋಡಾ ಕಾರು ಖರೀದಿ ಸುಲಭ: ಡಿಜಿಟಲೀಕರಣದತ್ತ ಬಹುದೊಡ್ಡ ಹೆಜ್ಜೆ
ಆಟೋಮೊಬೈಕ್ ಕ್ಷೇತ್ರವು ಡಿಜಿಟಲೀಕರಣದತ್ತ ಸಾಗುತ್ತಿದೆ. ಈ ಕ್ರಮದಲ್ಲಿ, ಭಾರತೀಯ ಮಾರುಕಟ್ಟೆಯಲ್ಲಿ ಪ್ರಮುಖ ಕಾರು ತಯಾರಕರಾದ ಸ್ಕೋಡಾ ಆಟೋ ಇಂಡಿಯಾ ತನ್ನ ಗ್ರಾಹಕರೊಂದಿಗೆ ಹೆಚ್ಚು ಸಂಪರ್ಕ ಸಾಧಿಸಲು ಹೊಸ ಹೆಚ್ಚೆ ಇಟ್ಟಿದೆ. ಸ್ಕೋಡಾ "ನೇಮ್ ಯುವರ್ ಸ್ಕೋಡಾ" (Name Your Skoda) ಎಂಬ ಹೊಸ ಅಭಿಯಾನವನ್ನು ಪ್ರಾರಂಭಿಸಿದೆ.
ನೇಮ್ ಯುವರ್ ಸ್ಕೋಡಾ ಅಭಿಯಾನವು 360-ಡಿಗ್ರಿ ಡಿಜಿಟಲ್ ಚಟುವಟಿಕೆಯ ಫ್ಲಾಟ್ ಫಾರ್ಮ್ ಆಗಿದೆ. ಸ್ಕೋಡಾ (Skoda) ಕಂಪನಿಯು ತಮ್ಮ ಗ್ರಾಹಕರೊಂದಿಗೆ ಉತ್ತಮ ಸಂಬಂಧವನ್ನು ಗುರಿಯನ್ನು ಹೊಂದಿದ್ದಾರೆ. ನೇಮ್ ಯುವರ್ ಸ್ಕೋಡಾ ಅಭಿಯಾನದಲ್ಲಿ 2025ರ ಮೊದಲಾರ್ಧದಲ್ಲಿ ಬಿಡುಗಡೆಯಾಗಲಿರುವ ಮುಂಬರುವ ಕಾಂಪ್ಯಾಕ್ಟ್ ಎಸ್‍ಯುವಿಗಾಗಿ 1,50,000 ಕ್ಕೂ ಹೆಚ್ಚು ಹೆಸರುಗಳನ್ನು ಸ್ವೀಕರಿಸಿದೆ.

ಇದು ಸ್ಕೋಡಾದ ಎಲ್ಲಾ ಎಸ್‍ಯುವಿಗಳ ಹೆಸರುಗಳನ್ನು 'K' ನಿಂದ ಪ್ರಾರಂಭಿಸಿ 'Q' ನೊಂದಿಗೆ ಕೊನೆಗೊಳ್ಳುವ ಸಂಪ್ರದಾಯವನ್ನು ಅನುಸರಿಸಿದೆ. ಅದರಲ್ಲಿ 21,000 ಹೆಸರುಗಳು ಅನನ್ಯವಾಗಿವೆ. ಸ್ಕೋಡಾ ಆಟೋ ಭಾರತದಲ್ಲಿ ಹಾಗೂ ಜಾಗತಿಕ ಮಾರುಕಟ್ಟೆಯಲ್ಲಿ ಕಾರು ತಯಾರಿಕೆಯಲ್ಲಿ ಮುಂಚೂಣಿಯಲ್ಲಿದೆ ಎಂಬುದರಲ್ಲಿ ಸಂದೇಹವಿಲ್ಲ. ಜೆಕ್ ಗಣರಾಜ್ಯ ಮೂಲದ ಸ್ಕೋಡಾ ಕಳೆದ ಕೆಲವು ವರ್ಷಗಳಿಂದ ಭಾರತೀಯ ಮಾರುಕಟ್ಟೆಯಲ್ಲಿ ಕಾರ್ಯನಿರ್ವಹಿಸುತ್ತಿದೆ.
ಸ್ಕೋಡಾ, ಫೋಕ್ಸ್‌ವ್ಯಾಗನ್ ಸಹಯೋಗದೊಂದಿಗೆ 2021 ರಲ್ಲಿ ಎಲ್ಲಾ ಹೊಸ ಪ್ಲಾಟ್‌ಫಾರ್ಮ್‌ನಲ್ಲಿ ನಿರ್ಮಿಸಲಾದ ಕುಶಾಕ್ ಎಸ್‌ಯುವಿಯನ್ನು ಬಿಡುಗಡೆ ಮಾಡಿತು. ಸ್ಕೋಡಾ ಕುಶಾಕ್ ದೇಶದಲ್ಲಿ ಹೆಚ್ಚು ಮಾರಾಟವಾಗುವ ಎಸ್‌ಯುವಿಗಳಲ್ಲಿ ಒಂದಾಗಿದೆ. ಇದಕ್ಕೆ ಅನುಗುಣವಾಗಿ, ಸ್ಕೋಡಾ ಆಟೋ ಇಂಡಿಯಾ ಶೀಘ್ರದಲ್ಲೇ ಮತ್ತೊಂದು ಹೊಸ ಕಾಂಪ್ಯಾಕ್ಟ್ ಎಸ್‌ಯುವಿಯನ್ನು ಬಿಡುಗಡೆ ಮಾಡುವುದಾಗಿ ಘೋಷಿಸಿದೆ.
ಸ್ಕೋಡಾ ತನ್ನ ಕಾರು-ಕೊಳ್ಳುವ ಗ್ರಾಹಕರೊಂದಿಗೆ ಹೆಚ್ಚು ಸಂಪರ್ಕ ಸಾಧಿಸುವ ಪ್ರಯತ್ನಗಳ ಭಾಗವಾಗಿ 360-ಡಿಗ್ರಿ ಡಿಜಿಟಲ್ ಚಟುವಟಿಕೆಗಳನ್ನು ತರಲು ಸಜ್ಜಾಗಿದೆ. ಹಳೆಯ ಮತ್ತು ಹೊಸ ಸ್ಕೋಡಾ ಗ್ರಾಹಕರು ಡಿಜಿಟಲ್ ಗುಣಮಟ್ಟದ ಮಾಲೀಕರ ಅನುಭವವನ್ನು ಆನಂದಿಸಬಹುದು. ಈ ನಿಟ್ಟಿನಲ್ಲಿ ಸ್ಕೋಡಾ "ನೇಮ್ ಯುವರ್ ಸ್ಕೋಡಾ" ಎಂಬ ಡಿಜಿಟಲ್ ಕಾರ್ಯಕ್ರಮವನ್ನು ಪ್ರಾರಂಭಿಸಿದೆ.
ಈ ಯೋಜನೆಯ ಮೂಲಕ, ಸ್ಕೋಡಾ ಕಾರುಗಳನ್ನು ಹೊಂದಿರುವ ಗ್ರಾಹಕರು ಭಾರತದಲ್ಲಿ ಬಿಡುಗಡೆಯಾಗಲಿರುವ ಸ್ಕೋಡಾದ ಮುಂದಿನ ಕಾಂಪ್ಯಾಕ್ಟ್ ಎಸ್‍ಯುವಿಗಿ ತಮ್ಮ ಆಯ್ಕೆಯ ಹೆಸರನ್ನು ಸೂಚಿಸಬಹುದು. ಈ ಕಾರ್ಯಕ್ರಮದ ಭಾಗವಾಗಿ, ಹೊಸ ಕಾಂಪ್ಯಾಕ್ಟ್ SUV ಇದುವರೆಗೆ ಸುಮಾರು 1.5 ಲಕ್ಷ ಹೆಸರು ಸಲಹೆಗಳನ್ನು ಸ್ವೀಕರಿಸಿದೆ ಎಂದು ಸ್ಕೋಡಾ ಬಹಿರಂಗಪಡಿಸಲು ಸಂತೋಷವಾಗಿದೆ
ಇದಲ್ಲದೆ, ಸ್ಕೋಡಾ ಡಿಜಿಟಲ್ ಪ್ಲಾಟ್‌ಫಾರ್ಮ್ ಅನ್ನು ಬಳಸಲು ಜನರನ್ನು ಉತ್ತೇಜಿಸಲು ಸ್ಕೋಡಾ ಇತರ ಕೆಲವು ಕ್ರಮಗಳನ್ನು ತೆಗೆದುಕೊಳ್ಳುತ್ತಿದೆ. ಇದರ ಭಾಗವಾಗಿ, ಮಾರ್ಚ್ 24 ರಂದು, ಸ್ಕೋಡಾ ತನ್ನ ಡಿಜಿಟಲ್ ಪ್ಲಾಟ್‌ಫಾರ್ಮ್ ಅನ್ನು ಬಳಸಲು ಗ್ರಾಹಕರನ್ನು ಉತ್ತೇಜಿಸುವ ಪ್ರಯತ್ನದಲ್ಲಿ ಕಾರು ಖರೀದಿದಾರರಿಗೆ ಕೆಲವು ಕೊಡುಗೆಗಳನ್ನು ಘೋಷಿಸಿತು. ಈ ಕೊಡುಗೆಗಳು ಮಾರ್ಚ್ 24 ರಂದು ಮಾತ್ರ ಮಾನ್ಯವಾಗಿರುತ್ತವೆ.
ಸ್ಕೋಡಾ ಬ್ರಾಂಡ್‌ಗೆ ಗ್ರಾಹಕರನ್ನು ಹತ್ತಿರ ತರುವ ಪ್ರಯತ್ನವಾಗಿ ಘೋಷಿಸಲಾದ ಕೊಡುಗೆಗಳ ಮೂಲಕ ಸ್ಕೋಡಾ ಒಂದೇ ದಿನದಲ್ಲಿ 709 ಬುಕಿಂಗ್‌ಗಳನ್ನು ಪಡೆದುಕೊಂಡಿದೆ. ಅದೇ ಖುಷಿಯಲ್ಲಿ ಸ್ಕೋಡಾ ಕೂಡ 'ಸ್ಕೋಡಾ ಫಾರ್ ಆಲ್' ಎಂಬ ಯೋಜನೆಯನ್ನು ಜಾರಿಗೆ ತಂದಿದೆ. ಇದು ಸದಸ್ಯತ್ವ ಕಾರ್ಯಕ್ರಮ ಎಂದು ಹೇಳಿಕೊಂಡಿದೆ. ವಾಹನಗಳ ಬಗ್ಗೆ ಆಸಕ್ತಿ ಹೊಂದಿರುವ ಜನರನ್ನು ಒಂದು ಗ್ರೂಪ್ ಆಗಿ ಒಂದುಗೂಡಿಸುವ ಪ್ರಯತ್ನದಲ್ಲಿ ಸ್ಕೋಡಾ ಈ ಕಾರ್ಯಕ್ರಮವನ್ನು ಪ್ರಾರಂಭಿಸಿದೆ.
ಇದರ ಮೂಲಕ, ಕಂಪನಿಯು ಈ ಗ್ರೂಪ್ ನಲ್ಲಿನ ಸದಸ್ಯರಿಗೆ ಸ್ಕೋಡಾ ಈವೆಂಟ್‌ಗಳಲ್ಲಿ ವಿಐಪಿ ಸ್ಥಾನಮಾನವನ್ನು ನೀಡಲು ಮತ್ತು ಕಾರು ಮತ್ತು ಸರ್ವಿಸ್ ಪಡೆದುಕೊಳ್ಳುವಾಗ ವಿಶೇಷ ಕೊಡುಗೆಗಳನ್ನು ನೀಡಲು ಯೋಜಿಸಿದೆ. ಇನ್ನು ಗ್ರಾಹಕರನ್ನು ಆಕರ್ಷಿಸುವ ಪ್ರಯತ್ನದಲ್ಲಿ ಸ್ಕೋಡಾ ಆಟೋ ಭಾರತದಲ್ಲಿ 2023 ರಲ್ಲಿ 'ದಿ ಸರ್ವೀಸ್ ಕ್ಯಾಮ್' ಎಂಬ ಫೋನ್ ಆಧಾರಿತ ಅಪ್ಲಿಕೇಶನ್ ಅನ್ನು ಬಿಡುಗಡೆ ಮಾಡಿದ್ದರು.
ಸ್ಕೋಡಾ ತಂದಿರುವ ಈ ಮೊಬಿಲಿಟಿ ಭಾಗವಾಗಿ ಸ್ಕೋಡಾ ವೆಬ್‌ಸೈಟ್ ಮಾತ್ರವಲ್ಲದೆ ಶೋರೂಮ್‌ಗಳೂ ಸಂಪೂರ್ಣ ಡಿಜಿಟಲ್ ಆಗಲಿವೆ. ಹೊಸ ಸ್ಕೋಡಾ ಕಾರು ಖರೀದಿಸಲು ಬರುವ ಗ್ರಾಹಕರು ಶೋರೂಂನಲ್ಲಿರುವ ಟೇಬಲ್ ಗಳ ಮೇಲಿನ ಸ್ಕ್ರೀನ್ ಗಳ ಮೂಲಕ ತಮ್ಮ ನೆಚ್ಚಿನ ಕಾರನ್ನು ಆಯ್ಕೆ ಮಾಡಿಕೊಳ್ಳಬಹುದು. ಈ ಮೂಲಕ ಸುಲಭವಾಗಿ ಗ್ರಾಹಕರನ್ನು ಸೆಳೆಯಬಹುದು.


Click it and Unblock the Notifications








