ಇಷ್ಟು ಕಡಿಮೆ ವಯಸ್ಸಿನಲ್ಲಿ ಹೊಸ ಕಾರಿಗೆ ಒಡತಿ: ಕೇವಲ ರೀಲ್ಸ್‌ ಮಾಡಿ ಹುಡುಗರ ಮನಕದ್ದ ಪೋರಿ!

ಟಿಕ್‌ಟಾಕ್‌ ಆ್ಯಪ್‌ ಭಾರತ ಬಿಟ್ಟು ಹೋದ ಮೇಲೆ ಅದರ ಜಾಗವನ್ನು ಅದಕ್ಕಿಂತಲೂ ಹೆಚ್ಚಾಗಿ ತುಂಬಿದ್ದು ಇನ್ಸ್ಟಾಗ್ರಾಂ ರೀಲ್ಸ್‌ ಎಂದೇ ಹೇಳಬಹುದು. ಟಿಕ್‌ಟಾಕ್‌ ಬ್ಯಾನ್‌ ಆದ ಮೇಲೆ ಅಲ್ಲಿದ್ದ ಕ್ರೀಯೆಟರ್ಸ್‌ ಎಲ್ಲರೂ ರೀಲ್ಸ್‌ಗೆ ಬಂದು ತಮ್ಮ ಹವಾವನ್ನು ಅದೇ ರೀತಿ ಕೊಂಡೊಯ್ದಿದ್ದಾರೆ. ರೀಲ್ಸ್‌ನಲ್ಲ ಹಲವರಕು ಯಶಸ್ಸನ್ನು ಕಂಡು, ಅಫಿಲಿಯೇಟ್ ಮಾರ್ಕೆಟಿಂಗ್‌ ಮೂಲಕ ಹಲವಾರು ಪ್ರಾಡೆಕ್ಟ್‌ಗಳನ್ನು ಪ್ರಮೋಟ್‌ ಮಾಡಿ ಅದರಿಂದ ಸಾಕಷ್ಟು ಹಣವನ್ನು ಗಳಿಸುತ್ತಿದ್ದಾರೆ. ಅದೇ ರೀತಿ ಇಲ್ಲೊಬ್ಬರು ಪ್ರೊಮೋಷನ್‌ ಹಣದಲ್ಲಿ ಒಂದು ಹೊಸ ಕಾರನ್ನೇ ಖರೀದಿ ಮಾಡಿರುವುದು ಈಗ ಸುದ್ದಿಯಾಗುತ್ತಿದೆ.

ಅಮಲಾ ಶಾಜಿ ಎಂಬ ಇನ್ಸ್ಟಾಗ್ರಾಂ ಇನ್ಫ್ಲುಯೆನ್ಸರ್‌ ಹೊಸ ಹ್ಯುಂಡೈ ಎಕ್ಸ್ಟರ್‌ ಕಾರನ್ನು ಖರೀದಿ ಮಾಡಿದ್ದು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ. ಈಕೆ ಮೂಲತಃ ಕೇರಳದವಳಾಗಿದ್ದರೂ, ತಮಿಳು ನಾಡಿನಲ್ಲಿ ಈಕೆಯ ರೀಲ್ಸ್‌ಗೆ ಭಾರೀ ಬೇಡಿಕೆ ಇದೆ. ಅಲ್ಲಿ ಈಕೆಯನ್ನು ಒಂದು ಸೆಲೆಬ್ರಿಟಿ ರೀತಿಯಲ್ಲಿ ಟ್ರೀಟ್‌ ಮಾಡುತ್ತಿದ್ದು, ಹಲವು ಪಡ್ಡೆ ಹುಡುಗರ ನೆಚ್ಚಿನ ಕ್ರೀಯೆಟರ್‌ ಈಕೆ.

Social Media Influencer Amala Shaji Brought New Hyundai Exter More Details

ನಿಮಗೆ ತಿಳಿಯದ ಇನ್ನೊಂದು ವಿಷಯವೆಂದರೆ ಈಕೆ ಹಲವು ಅವಾರ್ಡ್‌ ಈವೆಂಟ್‌ಗಳಲ್ಲಿ ಅವಾರ್ಡ್‌ಗಳನ್ನು ಸಹ ಪಡೆದಿದ್ದಾಳೆ. ಈಕೆಯ ಒಂದು ಮಾತಿಗಾಗಿಯೂ ತಮಿಳು ನಾಡಿನ ಹುಡುಗರು ಕಾಯುತ್ತಾ ಇರುತ್ತಾರೆ ಎಂದರೆ ನೀವು ನಂಬಲೇ ಬೇಕು. ಈಕೆ ಖರೀದಿಸಿರುವ ಕಾರು ಈಗಾಗಲೇ ಹೇಳಿದಂತೆ ಹ್ಯುಂಡೈ ಎಕ್ಸ್‌ಟರ್‌.

ಈ ಕಾರಿನ ಕುರಿತಾಗಿ ನೋಡುವುದಾದರೆ, ಹ್ಯುಂಡೈ ಕಂಪನಿಯು ಈ ಕಾರನ್ನು ಕಳೆದ ವರ್ಷವಷ್ಟೇ ಮಾರುಕಟ್ಟೆಗೆ ತಂದಿತ್ತು. ಈ ಎಸ್‌ಯುವಿ, 1.2-ಲೀಟರ್, 4 ಸಿಲಿಂಡರ್ (ಪೆಟ್ರೋಲ್) ಎಂಜಿನ್ ಹೊಂದಿದ್ದು, 81.8 bhp ಗರಿಷ್ಠ ಪವರ್ ಹಾಗೂ 113.8 Nm ಪಿಕ್ ಟಾರ್ಕ್ ಉತ್ಪಾದಿಸುತ್ತದೆ. ಸಿಎನ್‌ಜಿ ಮೋಡ್ ನಲ್ಲಿ 67.7 bhp ಪವರ್ ಮತ್ತು 95.2 Nm ಪೀಕ್ ಟಾರ್ಕ್ ಉತ್ಪಾದಿಸುವ ಸಾಮರ್ಥ್ಯ ಹೊಂದಿದೆ. ಪೆಟ್ರೋಲ್ ಆವೃತ್ತಿಯು ಮ್ಯಾನ್ಯುವಲ್ ಮತ್ತು AMT ಗೇರ್‌ಬಾಕ್ಸ್ ಆಯ್ಕೆಯನ್ನು ಹೊಂದಿದೆ.

Social Media Influencer Amala Shaji Brought New Hyundai Exter More Details

ಸಿಎನ್‌ಜಿ ಆವೃತ್ತಿಯು ಮ್ಯಾನ್ಯುವಲ್‌ (5 ಸ್ಪೀಡ್) ಗೇರ್‌ಬಾಕ್ಸ್ ಅನ್ನು ಪಡೆದಿದೆ. ಹ್ಯುಂಡೈ ಎಕ್ಸ್‌ಟರ್‌ (Hyundai Exter) ಕಾರಿನ ಮೈಲೇಜ್ ವಿಚಾರವಾಗಿ ಮಾತನಾಡುವದಾದರೆ, ಪೆಟ್ರೋಲ್ ಚಾಲಿತ ಕಾರು, 19.2km/l - 19.4km/l ಇಂಧನ ದಕ್ಷತೆಯನ್ನು ಹೊಂದಿದೆ. ಸಿಎನ್‌ಜಿ ಚಾಲಿತ ಕಾರು ಗರಿಷ್ಠ 27.1km/kg ಮೈಲೇಜ್ ನೀಡುತ್ತದೆ.

ಈ ಎಕ್ಸ್‌ಟರ್ ಚಾಲನೆ ಮಾಡುವುದು ಎಲೆಕ್ಕ್ಟ್ರಿಕ್ ಕಾರನ್ನು ಓಡಿಸಿದ ಅನುಭವ ನೀಡುತ್ತದೆ. ಆಸನಗಳು ಕೊಂಚ ಗಟ್ಟಿ ಇದ್ದರೂ ಆರಾಮದಾಯಕವಾಗಿ ಲಾಂಗ್ ಡ್ರೈವ್ ಹೋಗಬಹುದು. ಪ್ರಯಾಣದ ಅವಧಿಯಲ್ಲಿ ತುಂಬಾ ಖುಷಿಯ ಅನುಭವ ನೀಡುತ್ತದೆ ಎಂದು ಹೇಳಿದರೆ ತಪ್ಪಾಗುವುದಿಲ್ಲ.

Social Media Influencer Amala Shaji Brought New Hyundai Exter More Details

ದಕ್ಷಿಣ ಕೊರಿಯಾದ ಹ್ಯುಂಡೈನ ಎಕ್ಸ್‌ಟರ್ ಟಾಟಾ ಪಂಚ್‌ಗೆ ಭಾರೀ ಪೈಪೋಟಿ ನೀಡಲಿದ್ದು, ಭಾರತದ ಮಾರುಕಟ್ಟೆಯಲ್ಲಿ ರೂ.6 ಲಕ್ಷದಿಂದ ರೂ.10.10 ಲಕ್ಷ ಎಕ್ಸ್ ಶೋರೂಂ ಬೆಲೆಯಲ್ಲಿ ಖರೀದಿಗೆ ಲಭ್ಯವಿದೆ. ಈ ಕಾರಿನ ಒಂದಷ್ಟು ಡಿಸೈನ್ ಹಾಗೂ ಫೀಚರ್ಸ್ ಗ್ರ್ಯಾಂಡ್ ಐ10 ನಿಯೋಸ್ ಹ್ಯಾಚ್‌ಬ್ಯಾಕ್ ಹಾಗೂ ಔರಾ ಸೆಡಾನ್‌ಗೆ ಹೋಲಿಕೆಯಾಗುತ್ತದೆ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

Article Published On: Thursday, June 13, 2024, 11:28 [IST]
English summary
Social media influencer amala shaji brought new hyundai exter more details
Read more on hyundai india
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+