ಭಾರತದಲ್ಲಿ ಬೇಡಿಕೆಯಿಲ್ಲದ ಜಿಮ್ನಿಗೆ ಮುಗಿಬಿದ್ದ ಅರಬ್ಬರು: ರಣಬೇಟೆಗಾರನಿಗೆ ಕ್ಯೂ ನಿಂತ ಕೋಟ್ಯಾಧಿಪತಿಗಳು
ಜಿಮ್ಮಿ (Jimny) ಮಾದರಿಯು ಒಂದು ಕಾಲದ ಆಫ್-ರೋಡ್ ಕಿಂಗ್ ಆಗಿದ್ದ ಜಿಪ್ಸಿಯ ಉತ್ತರಾಧಿಕಾರಿಯಾಗಿ ಬಂದು ಭಾರತೀಯ ವಾಹನ ಪ್ರೇಮಿಗಳ ಮನ ಗೆಲ್ಲುವಲ್ಲಿ ದೊಡ್ದ ಮಟ್ಟದ ಯಶಸ್ವಿ ಗಳಿಸಲು ಸಾಧ್ಯವಾಗಿಲ್ಲ. ಮಾರಾಟದಲ್ಲಿ ಮಾರುತಿ ಸುಜುಕಿ ಜುಮ್ನಿ ಕುಸಿತವನ್ನು ಕಂಡಿದೆ. ಅದರಲ್ಲೂ ಮಹೀಂದ್ರಾ ಥಾರ್ ರೋಕ್ಸ್ ಬಿಡುಗಡೆಯೊಂದಿಗೆ ಜಿಮ್ನಿಯ ಶವಪೆಟ್ಟಿಗೆಯಲ್ಲಿನ ಕೊನೆಯ ಮೊಳೆಯನ್ನು ಹೊಡೆಯಲಾಗಿದೆ ಎಂದು ಹೇಳಲಾಗುತ್ತಿದೆ. ಅದನ್ನು ಬದಿಗಿಟ್ಟು, ಅರಬ್ಬರು ಅದೇ ಸುಜುಕಿ ಜಿಮ್ನಿ (Suzuki Jimny) ಎಸ್‍ಯುವಿಗೆ ಕ್ಯೂ ನಿಂತು ಖರೀದಿಸುತ್ತಿದ್ದಾರೆ. ಅಲ್ಲಿ ಯಾಕೆ ಈ ಜಿಮ್ಮಿಗೆ ಬೇಡಿಕೆ ಎಂಬ ಮಾಹಿತಿ ಇಲ್ಲಿದೆ.
ಪ್ರಸ್ತುತ ಮಾರುತಿ ಸುಜುಕಿಯ ಸರಣಿಯಲ್ಲಿ ಜಿಮ್ನಿ ಕಡಿಮೆ ಜನಪ್ರಿಯ ಉತ್ಪನ್ನವಾಗಿದ್ದರೂ, ರಫ್ತು ಮಾರುಕಟ್ಟೆಯಲ್ಲಿ ಜಿಮ್ನಿ 5-ಡೋರ್ ಯಶಸ್ವಿಯಾಗಿದೆ. ಉದಾಹರಣೆಗೆ, ಪಶ್ಚಿಮ ಏಷ್ಯಾದ ದೇಶವಾದ ಯುಎಇಯಲ್ಲಿ ಜಿಮ್ನಿಗೆ ಭಾರಿ ಬೇಡಿಕೆಯಿದೆ. ಲೈಫ್‌ಸ್ಟೈಲ್ ಎಸ್‌ಯುವಿಯನ್ನು ಯುಎಇಯಲ್ಲಿ 3-ಡೋರ್ ಮತ್ತು 5-ಡೋರ್ ರೂಪಾಂತರಗಳಲ್ಲಿ ನೀಡಲಾಗುತ್ತದೆ. ಎರಡೂ ಆವೃತ್ತಿಗಳು ಹೆಚ್ಚಿನ ಬೇಡಿಕೆಯಲ್ಲಿವೆ.

ಜಿಮ್ನಿ 5-ಡೋರ್ ಖರೀದಿಸಲು ಬಯಸುವವರು ಸ್ಟಾಕ್ ಲಭ್ಯತೆಯನ್ನು ಅವಲಂಬಿಸಿ 1 ತಿಂಗಳಿಂದ 6 ತಿಂಗಳವರೆಗೆ ಕಾಯಬೇಕಾಗುತ್ತದೆ ಎಂದು ಡೀಲರ್‌ಶಿಪ್ ಮೂಲಗಳು ಹೇಳುತ್ತವೆ. ಯಾಕೆಂದರೆ ಜಿಮ್ನಿ 3 ಡೋರ್ ರೂಪಾಂತರಕ್ಕಾಗಿ ಕಾಯುವ ಅವಧಿಯು 12 ತಿಂಗಳುಗಳಿಗಿಂತ ಹೆಚ್ಚು ಅಂದರೆ ಒಂದು ವರ್ಷಕ್ಕಿಂತ ಹೆಚ್ಚು. ಜಿಮ್ನಿಗೆ ಭಾರತಕ್ಕಿಂತ ಯುಎಇಯಲ್ಲಿ ಹೆಚ್ಚಿನ ಬೆಲೆ ಇದೆ.
ಸುಜುಕಿ ಜಿಮ್ನಿ GL ಮತ್ತು GLX ಟ್ರಿಮ್‌ಗಳಲ್ಲಿ ಲಭ್ಯವಿದೆ. ಈ ಜಿಮ್ನಿಯ ಬೆಲೆ AED 75,250 ಮತ್ತು AED 79,750 ನಡುವೆ ಇದೆ. ಭಾರತೀಯ ಕರೆನ್ಸಿಗೆ ಪರಿವರ್ತಿಸಿದಾಗ ಅದು ಸುಮಾರು 17.16 ಲಕ್ಷದಿಂದ 18.19 ಲಕ್ಷಕ್ಕೆ ಬರುತ್ತದೆ. ಮತ್ತೊಂದೆಡೆ, ಭಾರತದಲ್ಲಿ ಜಿಮ್ನಿಯ ಝೀಟಾ ಮತ್ತು ಆಲ್ಫಾ ಟ್ರಿಮ್‌ಗಳು ರೂ 12.74 ಲಕ್ಷದಿಂದ ರೂ 14.95 ಲಕ್ಷದವರೆಗಿನ ಎಕ್ಸ್ ಶೋ ರೂಂ ಬೆಲೆಯನ್ನು ಹೊಂದಿದೆ.

ಗಮನಾರ್ಹವಾಗಿ, ಸುಜುಕಿ ಜಿಮ್ನಿಯ ಟಾಪ್-ಎಂಡ್ ರೂಪಾಂತರವು ಯುಎಇಗಿಂತ ಭಾರತದಲ್ಲಿ 6 ಲಕ್ಷ ಕಡಿಮೆ ಬೆಲೆಯಲ್ಲಿದೆ. ಯುಎಇಯಲ್ಲಿ ಮಾರಾಟವಾಗುವ ಸುಜುಕಿ ಜಿಮ್ನಿ ಯಾವುದೇ ಹೆಚ್ಚುವರಿ ವೈಶಿಷ್ಟ್ಯಗಳೊಂದಿಗೆ ಬರುವುದಿಲ್ಲ. ಆದರೆ ತೆರಿಗೆಗಳು ಮತ್ತು ಆಮದು ಸುಂಕಗಳು ಜಿಮ್ನಿ 5 ಡೋರ್ ಎಸ್‌ಯುವಿ ಇಷ್ಟು ಹೆಚ್ಚಿನ ಬೆಲೆಗೆ ಕಾರಣವಾಗಿವೆ.
ಮೇಡ್ ಇನ್ ಇಂಡಿಯಾ ಜಿಮ್ನಿಯು 1.5-ಲೀಟರ್ K15B ಪೆಟ್ರೋಲ್ ಎಂಜಿನ್‌ನಿಂದ ಚಾಲಿತವಾಗಿದ್ದು, ಈ ಎಂಜಿನ್ 103 bhp ಪವರ್ ಮತ್ತು 130 Nm ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. ಟ್ರಾನ್ಸ್ಮಿಷನ್ ಆಯ್ಕೆಗಳಲ್ಲಿ 5-ಸ್ಪೀಡ್ ಮ್ಯಾನ್ಯುವಲ್ ಮತ್ತು 4-ಸ್ಪೀಡ್ ಟಾರ್ಕ್ ಕರ್ನವಾಟರ್ ಆಟೋಮ್ಯಾಟಿಕ್ ಸೇರಿವೆ. ಭಾರತದಲ್ಲಿ ಆಲ್ಫಾ ಮತ್ತು ಝೀಟಾ ಟ್ರಿಮ್‌ಗಳಲ್ಲಿ ಎರಡೂ ಟ್ರಾನ್ಸ್‌ಮಿಷನ್‌ಗಳು ಲಭ್ಯವಿವೆ.

ಇದಕ್ಕೆ ವ್ಯತಿರಿಕ್ತವಾಗಿ, UAE-ಸ್ಪೆಕ್ ಜಿಮ್ನಿ GL ಟ್ರಿಮ್‌ನಲ್ಲಿ ಮಾತ್ರ ಮ್ಯಾನುವಲ್ ಗೇರ್ ಬಾಕ್ಸ್ ನೀಡುತ್ತದೆ ಮತ್ತು GLX ಟ್ರಿಮ್‌ನಲ್ಲಿ ಮಾತ್ರ ಆಟೋಮ್ಯಾಟಿಕ್ ಆಯ್ಕೆಯನ್ನು ನೀಡುತ್ತದೆ. ಜಿಮ್ನಿಯ AllGripPro 4×4 ಸಿಸ್ಟಂ ಎಲ್ಲಾ ನಾಲ್ಕು ವ್ಹೀಲ್ ಗಳಿಗೆ ಪವರ್ ಕಳುಹಿಸುತ್ತದೆ. ಹಾರ್ಡ್‌ವೇರ್ ಲೋ-ರೇಂಜ್ ಟ್ರಾನ್ಸ್ಫರ್ ಕೇಸ್ ಮತ್ತು ಲಾಕಿಂಗ್ ಡಿಫರೆನ್ಷಿಯಲ್ ಅನ್ನು ಒಳಗೊಂಡಿದೆ. ಈ ಎಸ್‌ಯುವಿಯ ಗ್ರೌಂಡ್ ಕ್ಲಿಯರೆನ್ಸ್ 210 ಎಂಎಂ ಆಗಿದೆ.
ಜಿಮ್ನಿ 5-ಡೋರ್, ಭಾರತದಲ್ಲಿ ಗಮನಾರ್ಹ ಮಾರಾಟವನ್ನು ಗಳಿಸಲು ವಿಫಲವಾಗಿದೆ, ಗ್ರಾಹಕರ ಆದ್ಯತೆಯಿಂದಾಗಿ UAE ನಲ್ಲಿ ಹಿಟ್ ಆಯಿತು. ಭಾರತೀಯರ ಗ್ರಾಹಕರ ಆದ್ಯತೆಗಳು ಇತರ ಪ್ರಮುಖ ಜಾಗತಿಕ ಮಾರುಕಟ್ಟೆಗಳಿಗಿಂತ ಭಿನ್ನವಾಗಿವೆ. ಭಾರತೀಯರು ಮುಖ್ಯವಾಗಿ ಲುಕ್, ಮೈಲೇಕ್, ವಿಶಾಲವಾದ ಮತ್ತು ವೈಶಿಷ್ಟ್ಯ-ಸಮೃದ್ಧ ವಾಹನಗಳನ್ನು ಹುಡುಕುತ್ತಾರೆ. ಅರಬ್ ರಾಷ್ಟ್ರಗಳ ಜನರು, ಸಾಮಾನ್ಯವಾಗಿ ಶ್ರೀಮಂತರು ಮತ್ತು ಕಾರು-ಪ್ರೀತಿ ಹೊಂದಿರುವವರು, ವೈಶಿಷ್ಟ್ಯಗಳು, ಮೈಲೇಜ್ ಅಥವಾ ಬೆಲೆಯನ್ನು ಹುಡುಕುವುದಿಲ್ಲ.


Click it and Unblock the Notifications