ಸದ್ಯದಲ್ಲೇ ಹೊಸ ಅವತಾರದಲ್ಲಿ ಜಿಮ್ನಿ!: ಮಾರುಕಟ್ಟೆಯಲ್ಲಿ ಮಾರಾಟ ಹೆಚ್ಚಿಸಲು ಸುಜುಕಿ ಸರ್ಕಸ್...
ಸದ್ಯಕ್ಕೆ ಕಡಿಮೆ ಬೆಲೆಗೆ ಭಾರತದಲ್ಲಿ ಪ್ರಸಿದ್ದ 4X4 ಆಫ್‌ರೋಡ್ ವಾಹನವೆಂದರೆ ಅದು ಮಾರುತಿ ಸುಜುಕಿಯ ಜಿಮ್ನಿ. ವಿದೇಶದಲ್ಲಿ ಅಭೂತ ಪೂರ್ವ ಯಶಸ್ಸನ್ನು ಸಾಧಿಸಿದ ಬಳಿ ಭಾರತೀಯ ಮಾರುಕಟ್ಟೆಗೆ ಮಾರುತಿ ಸುಜುಕಿ ಈ ಕಾರನ್ನು ಲಾಂಚ್ ಮಾಡಿತ್ತು. ಇಲ್ಲಿಯೂ ಸಹ ಈ ಕಾರಿಗೆ ಇಳ್ಳೆಯ ಸ್ಪಂದನೆ ದೊರಕುತ್ತಿದೆ.
ಇದೀಗ ಈ ಯಶಸ್ಸಿನ ಅಂಗವಾಗಿ ಜಿಮ್ನಿಯ ಕುರಿತಾಗಿನ ಹೊಸ ಸುದ್ದಿಯೊಂದು ಬಂದಿದೆ. ಮಾರುತಿ ಸುಜುಯು ಜಿಮ್ನಿ ಕಾರಿನ ಹೆರಿಟೇಜ್ ಎಡಿಷನ್ ಅನ್ನು ಇದೀಗ ಮಾರುಕಟ್ಟೆಗೆ ತರಲಿದೆ. ಈಗಾಗಲೇ ಈ ಎಡಿಷನ್ ಅನ್ನು ಅನಾವರಣ ಮಾಡಿದ್ದು, ಈ ಜಿಮ್ನಿಯು ಮೊದಲು ಆಸ್ಟ್ರೇಲಿಯಾದಲ್ಲಿ ಮಾರಾಟಕ್ಕೆ ಹೋಗಲಿದೆ ಎಂದು ತಿಳಿದು ಬಂದಿದೆ.

ಈ ಹೆರಿಟೇಜ್ ಎಡಿಷನ್‌ನಲ್ಲಿ ಜಿಮ್ನಿಯ (Suzuki Jimny) ಹೊರಾಂಗಣ ತುಂಬಾನೇ ವಿಭಿನ್ನವಾಗಿ ಇರಲಿದೆ. ಬಿಳಿ ಬಣ್ಣದ ಹೊರಾಂಗಣದಲ್ಲಿ ಕೆಂಪು ಬಣ್ಣದ ಸ್ಟ್ರೈಪ್‌ಗಳನ್ನು ನಾವು ಕಾಣಬಹುದಾಗಿದೆ. ಮಾತ್ರವಲ್ಲದೇ ಇದರಲ್ಲಿ ಕೆಂಪು ಬಣ್ಣದ ಮಡ್ ಫ್ಲಾಪ್ಸ್‌ಗಳು ಇರುವುದನ್ನು ಕಾಣಬಹುದು. ಈ ಎಡಿಷನ್‌ನಲ್ಲಿ 5 ಸ್ಪೀಡ್ ಮ್ಯಾನುವಲ್ ಗೇರ್ ಬಾಕ್ಸ್ ಮಾತ್ರ ಲಭ್ಯವಾಗಲಿದೆ. ಆದ್ಟ್ರೇಲಿಯಾದಲ್ಲಿ ಕಳೆದ ವರ್ಷ ಮೂರು ಡೋರ್ ಜಿಮ್ನಿಗೂ ಈ ಅಪ್‌ಡೇಟ್ ಸಿಕ್ಕಿತ್ತು.
ಇನ್ನು ಮಾರುಕಟ್ಟೆಯಲ್ಲಿ ಲಭ್ಯವಿರುವ ಮಾರುತಿ ಸುಜುಕಿ ಜಿಮ್ನಿ ಕಾರಿನ ಬಗ್ಗೆ ನೊಡುವುದಾದರೆ ಇದು 5 ಡೋರ್ ಆಫ್-ರೋಡ್ ಎಸ್‌ಯುವಿಯಾಗಿರುವುದರಿಂದ ಅದಕ್ಕೆ ತಕ್ಕಂತೆಯೇ ವಿನ್ಯಾಸವನ್ನು ಹೊಂದಿದೆ . ಫ್ಲಾಟ್ ಕ್ಲಾಮ್‌ಶೆಲ್ ಬಾನೆಟ್, ವಾಷರ್‌ಗಳೊಂದಿಗೆ ಎಲ್ಇಡಿ ಪ್ರೊಜೆಕ್ಟರ್ ಹೆಡ್‌ಲ್ಯಾಂಪ್, ಅಲಾಯ್ ವೀಲ್ಸ್, 195/80 ಅಳತೆಯ ಟೈಯರ್ಸ್ ಪಡೆದಿದೆ. ಜೊತೆಗೆ ಇದರ ಫ್ರಂಟ್ ಲುಕ್ ನೋಡುಗರನ್ನು ಸೆಳೆಯುತ್ತದೆ. 4WD (ಫೋರ್ ವೀಲ್ಸ್ ಡ್ರೈವ್) ತಂತ್ರಜ್ಞಾನವನ್ನು ಹೊಂದಿದೆ.

ಜಿಮ್ನಿ 5 ಡೋರ್ ಎಂಜಿನ್ ಕಾರ್ಯಕ್ಷಮತೆ ಬಗ್ಗೆ ಮಾತನಾಡುವುದಾದರೆ, ಇದು ಐಡಲ್ ಸ್ಟಾರ್ಟ್/ ಸ್ಟಾಪ್ ಬಟನ್ ವೈಶಿಷ್ಟ್ಯದೊಂದಿಗೆ 1.5L ಕೆ-ಸೀರಿಯಸ್ ಪೆಟ್ರೋಲ್ ಎಂಜಿನ್ ಹೊಂದಿದ್ದು, 6000 rpmನಲ್ಲಿ 104.8 Ps ಗರಿಷ್ಠ ಪವರ್ ಹಾಗೂ 4000 rpmನಲ್ಲಿ 134.2 Nm ಪೀಕ್ ಟಾರ್ಕ್ ಉತ್ಪಾದಿಸುತ್ತದೆ. 5 ಸ್ವೀಡ್ ಮ್ಯಾನುವಲ್ ಹಾಗೂ 4 ಸ್ವೀಡ್ ಆಟೋಮೆಟಿಕ್ ಗೇರ್ ಬಾಕ್ಸ್ ಆಯ್ಕೆಯಲ್ಲಿ ಖರೀದಿಗೆ ಲಭ್ಯವಿದೆ.
ಇದೊಂದು ಆಫ್-ರೋಡ್ ಎಸ್‌ಯುವಿಯಾಗಿದ್ದರೂ ಅತ್ಯುತ್ತಮ ಇಂಧನ ದಕ್ಷತೆ ಹೊಂದಿದೆ ಎಂದು ಹೇಳಿದರೆ ತಪ್ಪಾಗುವುದಿಲ್ಲ. ಇದರ 5-ಸ್ವೀಡ್ MT ರೂಪಾಂತರ, 16.94 km/l ಹಾಗೂ 4-ಸ್ವೀಡ್ AT ರೂಪಾಂತರ 16.39km/l ಮೈಲೇಜ್ ನೀಡುತ್ತದೆ. ಈ ಜಿಮ್ನಿ 5 ಡೋರ್ ಸುತ್ತಳತೆ ಬಗ್ಗೆ ಹೇಳುವುದಾದರೆ, ಇದು 3985 ಎಂಎಂ ಉದ್ದ, 1645 ಎಂಎಂ ಅಗಲ, 1720 ಎತ್ತರವಿದ್ದು, 2590 ಎಂಎಂ ಅಳತೆಯ ವೀಲ್ಸ್ ಬೇಸ್ ಹೊಂದಿದೆ.

ಇದರ ಎದುರಾಳಿ ಮಹೀಂದ್ರಾ ಥಾರ್ ಎಸ್‍ಯುವಿಯ ಬಗ್ಗೆ ಹೇಳುವುದಾದರೆ, ಇದು ಹಲವು ಎಂಜಿನ್ ಆಯ್ಕೆಗಳೊಂದಿಗೆ ಲಭ್ಯವಿದೆ. ಇದರಲ್ಲಿ ಮೊದಲಿಗೆ 2.0 ಲೀಟರ್ ಟರ್ಬೊ-ಪೆಟ್ರೋಲ್ ಎಂಜಿನ್ ಆಗಿದೆ. ಈ ಎಂಜಿನ್ 150 ಬಿಹೆಚ್‍ಪಿ ಪವರ್ ಮತ್ತು 320 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. ಇನ್ನು 2.2 ಲೀಟರ್ ಟರ್ಬೊ-ಡೀಸೆಲ್ ಎಂಜಿನ್ 130 ಬಿಹೆಚ್‍ಪಿ ಪವರ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications