ಕಲರ್‌ಪುಲ್ ಸ್ವಿಫ್ಟ್ ಸ್ಪೆಷಲ್ ಎಡಿಷನ್ ವಿಶೇಷತೆಗಳು... ಬೆಲೆ ಇಷ್ಟೇನಾ?
ವಿಶ್ವದ ಅತ್ಯಂತ ಜನಪ್ರಿಯ ಹ್ಯಾಚ್‌ಬ್ಯಾಕ್‌ಗಳಲ್ಲಿ ಒಂದಾದ ಸುಜುಕಿ ಸ್ವಿಫ್ಟ್ ಕೂಡ ಒಂದಾಗಿದೆ. ಪ್ರಸ್ತುತ ಅನೇಕ ಮಾರುಕಟ್ಟೆಗಳಲ್ಲಿ ಸ್ವಿಫ್ಟ್ ಕಾರಿನ 4ನೇ ಜನರೇಷನ್ ಸ್ವಿಫ್ಟ್ ಕಾರನ್ನು ಮಾರಾಟ ಮಾಡುತ್ತಿದೆ. ಥೈಲ್ಯಾಂಡ್ ನಲ್ಲಿ ಇನ್ನೂ ಕೂಡ 3ನೇ ತಲೆಮಾರಿನ ಮಾದರಿಯ ಸ್ವಿಫ್ಟ್ ಕಾರನ್ನು ಮಾರಾಟ ಮಾಡುತ್ತಿದೆ. ಈಗ, ಸುಜುಕಿ ಮೋಟಾರ್ ಥೈಲ್ಯಾಂಡ್ ನಲ್ಲಿ ಸ್ವಿಫ್ಟ್ ಸ್ಪೆಷಲ್ ಎಡಿಷನ್ ಅನ್ನು ಬಿಡುಗಡೆಗೊಳಿಸಿದೆ. ಈ ಸುಜುಕಿ ಸ್ವಿಫ್ಟ್ (Suzuki Swift )ಕಾರಿನ ಆರಂಭಿಕ ಬೆಲೆಯು THB 567,000 ಆಗಿದೆ. ಇದು ಭಾರತದ ಕರೆನ್ಸಿಯಲ್ಲಿ ರೂ.14 ಲಕ್ಷವಾಗಿದೆ.
ಸುಜುಕಿ ಸ್ವಿಫ್ಟ್ ಸ್ಪೆಷಲ್ ಎಡಿಷನ್ ಎಂದು ಕರೆಯಲ್ಪಡುವ ಇದನ್ನು ಇಂಪ್ಯಾಕ್ಟ್ ಚಾಲೆಂಜರ್ ಮುವಾಂಗ್ ಥಾಂಗ್ ಥಾನಿಯಲ್ಲಿ ಮೋಟಾರ್ ಎಕ್ಸ್‌ಪೋ 2024 ನಲ್ಲಿ ಪ್ರದರ್ಶಿಸಿದ್ದಾರೆ. ಇದನ್ನು 2024ರ 29ನೇ ನವೆಂಬರ್‌ನಿಂದ 10ನೇ ಡಿಸೆಂಬರ್ ನಡುವೆ ಪ್ರದರ್ಶಿಸಿದ್ದಾರೆ. ಸುಜುಕಿ ಸ್ವಿಫ್ಟ್ ಸ್ಪೆಷಲ್ ಎಡಿಷನ್ (Suzuki Swift Special Edition) ಪ್ರಮುಖ ಆಕರ್ಷಣೆಯೆಂದರೆ ಅದರ ಆಕರ್ಷಕ ಗ್ರೇಡಿಯಂಟ್ ಕಲರ್ ಆಗಿದೆ.

ಬಣ್ಣದ ಹೈಲೆಟ್: ಸುಜುಕಿ ಸ್ವಿಫ್ಟ್ ಸ್ಪೆಷಲ್ ಎಡಿಷನ್ ಮಾದರಿಯು ಮುಂಭಾಗದಲ್ಲಿ ಪಿಂಕ್-ಇಶ್ ಪರ್ಪಲ್ ನೆರಳು ಮತ್ತು ಹಿಂಭಾಗದಲ್ಲಿ ನೀಲಿ ಬಣ್ಣವನ್ನು ಹೊಂದಿದೆ. ಇದು ಸುಂದರವಾಗಿ ಮತ್ತು ಆಕರ್ಷಕವಾಗಿ ಕಾಣುತ್ತಿದೆ. ಈ ಸ್ವಿಫ್ಟ್ ಸ್ಪೆಷಲ್ ಎಡಿಷನ್ ಕಾರಿನಲ್ಲಿ ಸ್ಪೋರ್ಟಿನೆಸ್ ಮತ್ತು ಪಾತ್ರವನ್ನು ಸೇರಿಸುವ ಬಿಳಿ, ಕೆಂಪು ಮತ್ತು ಕಪ್ಪು ಪಟ್ಟಿಗಳನ್ನು ನೋಡಬಹುದು. ಇನ್ನು ಈ ಸ್ವಿಫ್ಟ್ ಸ್ಪೆಷಲ್ ಎಡಿಷನ್ ಕಾರಿನಲ್ಲಿ ಸ್ಪೋರ್ಟಿನೆಸ್ ಅಲಾಯ್ ವ್ಹೀಲ್ ಗಳು ಬ್ಲ್ಯಾಕ್ ಬಣ್ಣಗಳಲ್ಲಿದೆ.
ವಿನ್ಯಾಸ: ಸುಜುಕಿ ಸ್ವಿಫ್ಟ್ ಸ್ಪೆಷಲ್ ಎಡಿಷನ್ ಅಲಾಯ್ ವ್ಹೀಲ್ ಗಳು ಆಫ್ಟರ್‌ಮಾರ್ಕೆಟ್ ಪಡೆದಂತೆ ತೋರುತ್ತಿವೆ ಮತ್ತು ಆಕರ್ಷಕ ವಿನ್ಯಾಸವನ್ನು ಹೊಂದಿವೆ. ಇನ್ನು ಈ ಸ್ವಿಫ್ಟ್ ಕಾರಿನ ಎಲ್ಲಾ ಈ ಬದಲಾವಣೆಗಳನ್ನು ಹೊರತುಪಡಿಸಿ, ಸುಜುಕಿ ಸ್ವಿಫ್ಟ್ ವಿಶೇಷ ಆವೃತ್ತಿಯು ಭಾರತದಲ್ಲಿ ಮಾರಾಟವಾದ 3ನೇ ಜನರಲ್ ಸ್ವಿಫ್ಟ್ ಅನ್ನು ಹೋಲುತ್ತದೆ. ಈ ಸ್ಪೆಷಲ್ ಎಡಿಷನ್ ಎಲ್‌ಇಡಿ ಪ್ರೊಜೆಕ್ಟರ್ ಹೆಡ್‌ಲೈಟ್‌ಗಳು, ಎಲ್‌ಇಡಿ ಟೈಲ್ ಲೈಟ್‌ಗಳು ಒಂದೇ ಆಗಿವೆ.

ಎಂಜಿನ್: ಸುಜುಕಿ ಸ್ವಿಫ್ಟ್ ಸ್ಪೆಷಲ್ ಎಡಿಷನ್ ಮಾದರಿಯು 1.2 ಲೀಟರ್ K12M 4-ಸಿಲಿಂಡರ್ ನ್ಯಾಚುರಲ್ ಪೆಟ್ರೋಲ್ ಎಂಜಿನ್ ಅನ್ನು ಹೊಂದಿದೆ. ಈ ಎಂಜಿನ್ 83 PS ಪೀಕ್ ಪವರ್ ಮತ್ತು 108 Nm ಪೀಕ್ ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. ಈ ಎಂಜಿನ್ ಅನ್ನು CVT ಗೇರ್‌ಬಾಕ್ಸ್‌ಗೆ ಜೋಡಿಸಲಾಗಿದೆ. ಚಾಸಿಸ್ ಇತರ ಸುಜುಕಿ ವಾಹನಗಳೊಂದಿಗೆ ಕಂಡುಬರುವ ಅದೇ ಹಾರ್ಟೆಕ್ಟ್ ಪ್ಲಾಟ್‌ಫಾರ್ಮ್ ಆಗಿದೆ .
ಇನ್ನು ಭಾರತದಲ್ಲಿ ಮಾರಾಟವಾಗುವ ಸ್ವಿಫ್ಟ್ ವಿನ್ಯಾಸ ಕಾರಿನ ಬಗ್ಗೆ ಹೇಳುವುದಾದರೆ, ಇದು ಕೂಡ ಅತ್ಯುತ್ತಮವಾಗಿದ್ದು, 7 - ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್, ಹೈಟ್ - ಅಡ್ಜಸ್ಟ್ಏಬಲ್ ಡ್ರೈವರ್ ಸೀಟ್, ಕ್ರೂಸ್ ಕಂಟ್ರೋಲ್ ಮತ್ತು ಆಟೋ ಎಸಿ ಸೇರಿದಂತೆ ಹತ್ತಾರು ವೈಶಿಷ್ಟ್ಯಗಳನ್ನು ಹೊಂದಿವೆ. ಸುರಕ್ಷತೆಯಲ್ಲಿಯೂ ಮಾರುತಿ ಸ್ವಿಫ್ಟ್ ಅತ್ಯಾಧುನಿಕವಾಗಿದ್ದು, ಡುಯಲ್ ಫ್ರಂಟ್ ಏರ್‌ಬ್ಯಾಗ್ಸ್, EBD, ABS, ಹಿಲ್-ಹೋಲ್ಡ್ ಕಂಟ್ರೋಲ್, ESC, ಫ್ರಂಟ್ & ರೇರ್ ಪಾರ್ಕಿಂಗ್ ಸೇನಾರ್ಸ್ ಹೊಂದಿದೆ.
ಇನ್ನು ಸುಜುಕಿ ಕಂಪನಿಯು ನ್ಯೂ ಜನರೇಷನ್ ಸ್ವಿಫ್ಟ್ ಹ್ಯಾಚ್‌ಬ್ಯಾಕ್ ಅನ್ನು ತಾಯಿನಾಡು ಜಪಾನ್ ನಲ್ಲಿ ಪರಿಚಯಿಸಿದೆ. ಹೊಸ ಸುಜುಕಿ ಸ್ವಿಫ್ಟ್ ಕಾರು ಪರಿಷ್ಕೃತ ಸ್ಟೈಲಿಂಗ್ ಮತ್ತು ಹೊಸ ಇಂಜಿನ್ ಆಯ್ಕೆಗಳೊಂದಿಗೆ ನವೀಕರಿಸಿದ ಇಂಟಿಯರ್ ಗಳೊಂದಿಗೆ ಬರುತ್ತಿದೆ. 2024ರ ಮಾರುತಿ ಸ್ವಿಫ್ಟ್ ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಯಾಗಲಿದೆ. ಹೊಸ ಮಾರುತಿ ಸುಜುಕಿ ಸ್ವಿಫ್ಟ್ ಕಾರನ್ನು ಗುಜರಾತ್‌ನ ಸುಜುಕಿಯ ಹಂಸಲ್‌ಪುರ ಘಟಕದಲ್ಲಿ ತಯಾರಿಸಲಿದೆ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications