ಸುಜುಕಿಯೊಂದಿಗೆ ಕೈಜೋಡಿಸಿದ ಟಾಟಾ: ಆಟೋ ಉದ್ಯಮದಲ್ಲಿ ಹೊಸ ಅಲೆ ಎಬ್ಬಿಸಲು ಸಜ್ಜು!

ಸುಜುಕಿ ಮೋಟಾರ್ ಕಾರ್ಪೊರೇಷನ್ ಮತ್ತು ಟಾಟಾ ಎಲ್ಕ್ಸಿ ಪಾಲುದಾರಿಕೆಯಲ್ಲಿ ಇಂದು ಪುಣೆಯಲ್ಲಿ 'SUZUKI - TATA ELXSI ಆಫ್‌ಶೋರ್ ಡೆವಲಪ್‌ಮೆಂಟ್ ಸೆಂಟರ್' ಅನ್ನು ಉದ್ಘಾಟಿಸಲಾಗಿದೆ. ಈ ಮೀಸಲಾದ ಕೇಂದ್ರವು ಎರಡು ಕಂಪನಿಗಳ ಪಾಲುದಾರಿಕೆಯಲ್ಲಿ ಸುಜುಕಿಯ ಸುಧಾರಿತ ಎಂಜಿನಿಯರಿಂಗ್‌ನಲ್ಲಿನ ಆವಿಷ್ಕಾರಗಳಿಗೆ ಚಾಲನೆ ನೀಡದಲಿದೆ. ಇದಕ್ಕೆ ಬೇಕಾದ ಹಗುರವಾದ ವಿನ್ಯಾಸ, ಸುರಕ್ಷತೆ, ಸ್ಟೈಲಿಂಗ್ ಮತ್ತು ಎಂಜಿನಿಯರಿಂಗ್, ಪರಿಸರ ಸ್ನೇಹಿ ಸುಧಾರಿತ ಸಿಮ್ಯುಲೇಶನ್‌ಗಳ ಸುಜುಕಿಯ ಗುರಿಗಳೊಂದಿಗೆ ಹೊಂದಾಣಿಕೆ ಮಾಡುವ ಮೂಲಕ ಟಾಟಾ ಎಲ್ಕ್ಸಿ ಸುಜುಕಿಯನ್ನು ಬೆಂಬಲಿಸಲಿದೆ. ಈ ಕುರಿತ ಹೆಚ್ಚಿನ ಮಾಹಿತಿಯನ್ನು ಈ ಕೆಳಗೆ ನೋಡೋಣ.

ಸುಜುಕಿ ಮೋಟಾರ್ ಕಾರ್ಪೊರೇಷನ್ ಮತ್ತು ಟಾಟಾ ಎಲ್ಕ್ಸಿ ಪಾಲುದಾರಿಕೆಯು ಮುಂದಿನ ಪೀಳಿಗೆಯ ಪವರ್‌ಟ್ರೇನ್‌ಗಳು ಮತ್ತು ಸಾಫ್ಟ್‌ವೇರ್ - ವ್ಯಾಖ್ಯಾನಿತ ವಾಹನಗಳ ಮೇಲೆ ಕೇಂದ್ರೀಕರಿಸುತ್ತದೆ. ಎಲೆಕ್ಟ್ರಿಕ್, ಹೈಬ್ರಿಡ್ ಮತ್ತು ಪರ್ಯಾಯ ಇಂಧನ ವಾಹನಗಳಿಗೆ ಶಕ್ತಿ - ಸಮರ್ಥ ಪರಿಹಾರಗಳನ್ನು ಉತ್ತೇಜಿಸುತ್ತದೆ ಎಂದು ಎರಡೂ ಸಂಸ್ಥೆಗಳು ಹೇಳಿಕೊಂಡಿವೆ.

suzuki-tata-elxsi-offshore-development-center-launched-in-pune

ಸುಜುಕಿಯ ಮುಖ್ಯ ತಂತ್ರಜ್ಞಾನ ಅಧಿಕಾರಿ ಕಟ್ಸುಹಿರೊ ಕ್ಯಾಟೊ ಮಾತನಾಡಿ, "ಸಂಪರ್ಕಿತ, ಸ್ವಾಯತ್ತ, ಹಂಚಿಕೆಯ ಮತ್ತು ಎಲೆಕ್ಟ್ರಿಕ್ ತಂತ್ರಜ್ಞಾನಗಳಲ್ಲಿ ಉದ್ಯಮವು ಪ್ರಗತಿಯಲ್ಲಿರುವಂತೆಯೇ, ವಿಕಸನಗೊಳ್ಳುತ್ತಿರುವ ಬೇಡಿಕೆಗಳನ್ನು ಪೂರೈಸಲು ಸುಜುಕಿ ಎಲೆಕ್ಟ್ರಾನಿಕ್ ಮತ್ತು ವರ್ಚುವಲ್ ಅಭಿವೃದ್ಧಿಯನ್ನು ವೇಗಗೊಳಿಸಬೇಕಿದೆ. ಇದಕ್ಕಾಗಿ ಸುಧಾರಿತ ಕಂಪ್ಯೂಟಿಂಗ್, ಸಿಮ್ಯುಲೇಶನ್ ಮತ್ತು ಡಿಜಿಟಲ್ ವಿನ್ಯಾಸದಲ್ಲಿ ಟಾಟಾ ಎಲ್ಕ್ಸಿ ಪರಿಣತಿಯು ಆದರ್ಶವಾಗಿದೆ.

ಇದೀಗ ನಮ್ಮ ಹಾಗೂ ಟಾಟಾ ಎಲ್ಕ್ಸಿ ಅವರ ದೀರ್ಘಾವಧಿಯ ಪಾಲುದಾರಿಕೆಯು ಸುಜುಕಿಯ ಶಕ್ತಿಯನ್ನು ಹೆಚ್ಚಿಸಲಿದೆ. ಜಾಗತಿಕವಾಗಿ ನಮ್ಮ ಅಭಿವೃದ್ಧಿ ಪ್ರಯತ್ನಗಳಿಗೆ ಸಕ್ರಿಯವಾಗಿ ಕೊಡುಗೆ ನೀಡಲು ಭಾರತದ ಪ್ರತಿಭೆಯನ್ನು ಸಕ್ರಿಯಗೊಳಿಸುತ್ತದೆ ಎಂದು ಸುಜುಕಿಯ ಮುಖ್ಯ ತಂತ್ರಜ್ಞಾನ ಅಧಿಕಾರಿ ಕಟ್ಸುಹಿರೊ ಕ್ಯಾಟೊ ವಿಶ್ವಾಸ ವ್ಯಕ್ತಪಡಿಸಿದರು.

suzuki-tata-elxsi-offshore-development-center-launched-in-pune

ಟಾಟಾ ಎಲ್ಕ್ಸಿ ಎಂಡಿ ಮನೋಜ್ ರಾಘವನ್ ಮಾತನಾಡಿ, "SUZUKI-TATA ELXSI ಆಫ್‌ಶೋರ್ ಡೆವಲಪ್‌ಮೆಂಟ್ ಸೆಂಟರ್‌ನ ಉದ್ಘಾಟನೆಯು ಸುಜುಕಿಯೊಂದಿಗಿನ ನಮ್ಮ ಪಾಲುದಾರಿಕೆಯಲ್ಲಿ ಮಹತ್ವದ ಮೈಲಿಗಲ್ಲಾಗಿದೆ. ಟಾಟಾ ಎಲ್ಕ್ಸಿಯ ವಿನ್ಯಾಸ-ನೇತೃತ್ವದ, ಡಿಜಿಟಲ್ ಮೊದಲ ವಿಧಾನವು ಸುಜುಕಿಯ ಗುರಿಗಳನ್ನು ಬೆಂಬಲಿಸಲಿದೆ. ನಿಖರ ಮತ್ತು ಜವಾಬ್ದಾರಿಯೊಂದಿಗೆ ಆಟೋಮೋಟಿವ್ ಎಂಜಿನಿಯರಿಂಗ್‌ನ ಭವಿಷ್ಯವನ್ನು ಈ ಪಾಲುದಾರಿಕೆ ಮುನ್ನಡೆಸಲಿದೆ ಎಂದರು.

ಟಾಟಾ ಎಲ್ಕ್ಸಿ: 1989 ರಲ್ಲಿ ಸಂಯೋಜಿತವಾದ ಟಾಟಾ ಎಲ್ಕ್ಸಿ ಆಟೋಮೋಟಿವ್, ಮೀಡಿಯಾ ಮತ್ತು ಟೆಲಿಕಾಂ, ಹೆಲ್ತ್‌ಕೇರ್ ಮತ್ತು ಸಾರಿಗೆ ಸೇರಿದಂತೆ ಆಯ್ದ ಕೈಗಾರಿಕೆಗಳಲ್ಲಿ ವಿನ್ಯಾಸ ಮತ್ತು ತಂತ್ರಜ್ಞಾನ ಸೇವೆಗಳ ವಿಶ್ವದ ಪ್ರಮುಖ ಪೂರೈಕೆದಾರರಲ್ಲಿ ಒಂದಾಗಿ ಗುರ್ತಿಸಿಕೊಂಡಿದೆ. ವಿನ್ಯಾಸ ಮತ್ತು ಉತ್ಪನ್ನ ಎಂಜಿನಿಯರಿಂಗ್ ಸೇವೆಗಳಿಗೆ ಆರ್ಕಿಟೆಕ್ಚರ್‌ನಿಂದ ಪ್ರಾರಂಭಿಸಿ ಆಟೋಮೋಟಿವ್ ಮತ್ತು ಸಾರಿಗೆ ಉದ್ಯಮಗಳಲ್ಲಿನ ಪ್ರಮುಖ ಕಂಪನಿಗಳು ಮತ್ತು ಪೂರೈಕೆದಾರರೊಂದಿಗೆ ಕೆಲಸ ಮಾಡುತ್ತದೆ.

ಇದು ಸ್ವಾಯತ್ತ, ಎಲೆಕ್ಟ್ರಿಕ್ ಮತ್ತು ಸಂಪರ್ಕಿತ ವಾಹನ ತಂತ್ರಜ್ಞಾನಗಳು ಮತ್ತು ಸಾಫ್ಟ್‌ವೇರ್-ವ್ಯಾಖ್ಯಾನಿತ ವಾಹನಗಳಾದ್ಯಂತ ಡೊಮೇನ್ ಅನುಭವವನ್ನು ಸಂಯೋಜಿಸುತ್ತದೆ. ವಿಶ್ವಾದ್ಯಂತ ವಿನ್ಯಾಸ ಸ್ಟುಡಿಯೋಗಳು, ಅಭಿವೃದ್ಧಿ ಕೇಂದ್ರಗಳು, ಕಛೇರಿಗಳು ಮತ್ತು 13,000 ಕ್ಕೂ ಹೆಚ್ಚು ಎಂಜಿನಿಯರ್‌ಗಳು ಮತ್ತು ತಜ್ಞರ ಜಾಗತಿಕ ಪೂಲ್‌ನಿಂದ ಇದು ಬೆಂಬಲಿತವಾಗಿದೆ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊ ಗಳನ್ನು ಪಡೆಯಲು ನಮ್ಮ ಫೇಸ್‌ ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

Article Published On: Monday, November 18, 2024, 18:08 [IST]
English summary
Suzuki tata elxsi offshore development center launched in pune
Read more on auto news india
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+