ಬೇರೆ ಕಾರುಗಳಿಗೆ ಹೇಳಿ ಟಾ...ಟಾ: ಈ ಜನಪ್ರಿಯ ಟಾಟಾ ಕಾರಿನ ಮೇಲೆ ಭರ್ಜರಿ ಡಿಸ್ಕೌಂಟ್

ದೇಶದಲ್ಲಿ ಸುರಕ್ಷತಾ ವಾಹನಗಳ ತಯಾರಿಕೆಗೆ ಟಾಟಾ ಮೋಟಾರ್ಸ್ (Tata Motors) ಹೆಸರುವಾಗಿದೆ. ಕಂಪನಿಯು ಮಾರಾಟಗೊಳಿಸುವ ಕಾರುಗಳು ಗರಿಷ್ಠ ರಕ್ಷಣಾತ್ಮಕ ವೈಶಿಷ್ಟ್ಯಗಳನ್ನು ಹೊಂದಿರುವುದರಿಂದ ಗ್ರಾಹಕರು ಸಹ ಇಷ್ಟಪಟ್ಟು ಖರೀದಿಸುತ್ತಿದ್ದಾರೆ. ಸದ್ಯ, ಮಧ್ಯಮ ವರ್ಗದ ಜನರಿಗಾಗಿ ವಿನೂತನ ವಿನ್ಯಾಸ ಹಾಗೂ ಶಕ್ತಿಯುತ ಎಂಜಿನ್ ಒಳಗೊಂಡಿರು ಟಾಟಾ ಆಲ್ಟ್ರೊಜ್ (Tata Altroz) ಕಾರು ಭಾರತದಲ್ಲಿ ಗ್ರಾಹಕರ ಗಮನ ಸೆಳೆದಿದಿದೆ. ಅಲ್ಲದೇ ಈ ಟಾಟಾ ಕಾರು ಭಾರತೀಯ ಮಾರುಕಟ್ಟೆಯಲ್ಲಿ ಭರ್ಜರಿಯಾಗಿ ಮಾರಾಟವಾಗುತ್ತಿದೆ. ಈ ನಡುವೆ ಹಬ್ಬದ ಸೀಸನ್ ನಲ್ಲಿ ಟಾಟಾ ಕಂಪನಿಯು ಈ ಜನಪ್ರಿಯ ಆಲ್ಟ್ರೊಜ್ ಕಾರಿನ ಮೇಲೆ ಭರ್ಜರಿ ಡಿಸ್ಕೌಟ್ ಘೋಷಿಸಿದೆ.

ಈ ಟಾಟಾ ಆಲ್ಟ್ರೋಜ್ ಮಾದರಿಯು ಪ್ರೀಮಿಯಂ ಹ್ಯಾಚ್‌ಬ್ಯಾಕ್ ಆಗಿದೆ. 2024ರ ಈ ಟಾಟಾ ಆಲ್ಟ್ರೋಜ್ ಕಾರಿನ ರೂಪಾಂತರಗಳು ರೂ.15,000 ದಿಂದ ರೂ.50,000ವರೆಗೆ ರಿಯಾಯಿತಿ ಹೊಂದಿವೆ.ಇನ್ನು 2023ರ ಆಲ್ಟ್ರೋಜ್ ಕಾರಿನ ರೂಪಾಂತರಗಳು 55,000 ದಿಂದ 70,000ವರೆಗೆ ಹಣಕಾಸಿನ ಪ್ರಯೋಜನವನ್ನು ಒಳಗೊಂಡಿವೆ. ಈ ಟಾಟಾ ಆಲ್ಟ್ರೋಜ್ ಕಾರು, ರೂ.6.50 ಲಕ್ಷದಿಂದ ರೂ.11.16 ಲಕ್ಷ ಎಕ್ಸ್ ಶೋರೂಂ ಬೆಲೆಯನ್ನು ಹೊಂದಿದೆ.

Tata Altroz

ಟಾಟಾ ಆಲ್ಟ್ರೋಜ್ ಕಾರಿನ ಹಲವು ಎಂಜಿನ್ ಆಯ್ಕೆಯಲ್ಲಿ ದೊರೆಯುತ್ತದೆ. ಇದರ 1.2-ಲೀಟರ್ ನ್ಯಾಚುರಲ್ ಆಸ್ಪಿರೇಟೆಡ್ ಪೆಟ್ರೋಲ್ ಎಂಜಿನ್ 88 ಪಿಎಸ್ ಗರಿಷ್ಠ ಪವರ್ (ಶಕ್ತಿ) ಮತ್ತು 115 ಎನ್ಎಂ ಪೀಕ್ ಟಾರ್ಕ್, 1.2-ಲೀಟರ್ ಟರ್ಬೊ ಪೆಟ್ರೋಲ್ ಎಂಜಿನ್ 110 ಪಿಎಸ್ ಪವರ್ ಹಾಗೂ 140 ಎನ್ಎಂ ಪೀಕ್ ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ.

ಮತ್ತೊಂದು 1.5-ಲೀಟರ್ ಡೀಸೆಲ್ ಎಂಜಿನ್ 90 ಪಿಎಸ್ ಗರಿಷ್ಠ ಪವರ್ ಹಾಗೂ ಎನ್ಎಂ ಪೀಕ್ ಟಾರ್ಕ್, 1.2-ಲೀಟರ್ ಸಿಎನ್‌ಜಿ ಎಂಜಿನ್ 73.5 ಪಿಎಸ್ ಪವರ್ ಮತ್ತು 103 ಎನ್ಎಂ ಪೀಕ್ ಟಾರ್ಕ್ ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. ಈ ಕಾರು ರೂಪಾಂತರಗಳಿಗೆ ಅನುಗುಣವಾಗಿ 5-ಸ್ವೀಡ್ ಮ್ಯಾನುವಲ್, 6-ಸ್ವೀಡ್ ಡುಯಲ್-ಕ್ಲಚ್ ಟ್ರಾಸ್ಮಿಷನ್ ಗೇರ್ ಬಾಕ್ಸ್ ಆಯ್ಕೆಯನ್ನು ಒಳಗೊಂಡಿದೆ.

Tata Altroz

ಇನ್ನು ಟಾಟಾ ಆಲ್ಟ್ರೋಜ್ ಹ್ಯಾಚ್‌ಬ್ಯಾಕ್ ವಿನ್ಯಾಸದ ದೃಷ್ಟಿಯಿಂದಲೂ ಅತ್ಯುತ್ತಮವಾಗಿದ್ದು, ಹಾರ್ಬರ್ ಬ್ಲೂ, ಡೌನ್‌ಟೌನ್ ರೆಡ್, ಆರ್ಕೇಡ್ ಗ್ರೇ, ಅವೆನ್ಯೂ ವೈಟ್, ಒಪೇರಾ ಬ್ಲೂ ಸೇರಿದಂತೆ ವಿವಿಧ ಬಣ್ಣಗಳ ಆಯ್ಕೆಯಲ್ಲಿ ಸಿಗುತ್ತದೆ. ಈ ಕಾರಿನಲ್ಲಿ 5 ಮಂದಿ ಆರಾಮದಾಯಕವಾಗಿ ಕುಳಿತುಕೊಂಡು ಪ್ರಯಾಣಿಸಬಹುದು. ಜೊತೆಗೆ ಇಂಧನ ಚಾಲಿತ ಮಾದರಿಗಳು 345 ಲೀಟರ್ ಹಾಗೂ ಸಿಎನ್‌ಜಿ ರೂಪಾಂತರಗಳು 210 ಲೀಟರ್ ಸಾಮರ್ಥ್ಯದ ಬೂಟ್ ಸ್ಪೇಸ್ ಅನ್ನು ಹೊಂದಿದೆ.

ಇನ್ನು ಟಾಟಾ ಆಲ್ಟ್ರೋಜ್ ರೇಸರ್ ಹೊಸ ರೇಸಿಂಗ್ ಪ್ರೇರಿತ ಬಣ್ಣವನ್ನು ಪಡೆದಿದೆ, ಅತ್ಯಾಕರ್ಷಕ ಡ್ಯುಯಲ್ ಟೋನ್ ಆರೆಂಜ್ ಮತ್ತು ಬ್ಲಾಕ್ ಥೀಮ್ ಅನ್ನು ಒಳಗೊಂಡಿದೆ. ಮತ್ತೊಂದು ಪ್ರಮುಖ ಹೈಲೈಟ್ ಎಂದರೆ ಬಾನೆಟ್ ಮತ್ತು ರೂಫ್ ಮೇಲೆ ವೈಟ್ ರೇಸಿಂಗ್ ಪಟ್ಟಿಗಳು ಕಾರಿಗೆ ಸ್ಪೋರ್ಟಿ ಲುಕ್ ನೀಡಿವೆ. ಹೊಸ ಆಲ್ಟ್ರೋಜ್ ರೇಸರ್ ಕಾರು' ಅಟಾಮಿಕ್ ಆರೆಂಜ್, ಅವೆನ್ಯೂ ವೈಟ್ ಮತ್ತು ಪ್ಯೂರ್ ಗ್ರೇ ಎಂಬ ಮೂರು ಬಣ್ಣಗಳಲ್ಲಿ ಲಭ್ಯವಿದೆ.

Tata Altroz

ಇನ್ನು ಇಂಟೀರಿಯರ್‌ನಲ್ಲೂ ಅದೇ ಆರೆಂಜ್ ಬ್ಲಾಕ್ ಥೀಮ್ ಬಳಸಲಾಗಿದೆ. ಎಸಿ ವೆಂಟ್‌ಗಳು ಮತ್ತು ಸೆಂಟರ್‌ ಕನ್ಸೋಲ್‌ನಲ್ಲಿ ಆರೆಂಜ್ ಹೈಲೈಟ್‌ಗಳನ್ನು ಕಾಣಬಹುದು. ಸೀಟ್‌ಗಳು ಕೂಡ ಆರೆಂಜ್ ಮತ್ತು ವೈಟ್ ಬಣ್ಣದಲ್ಲಿ ರೇಸಿಂಗ್ ಪಟ್ಟಿಗಳನ್ನು ಹೊಂದಿವೆ. ಸೀಟ್‌ಗಳು, ಮುಂಭಾಗದ ಆರ್ಮ್‌ರೆಸ್ಟ್ ಮತ್ತು ಲೆದರ್ ಸ್ಟೀರಿಂಗ್ ವ್ಹೀಲ್ ಮೇಲೆ ಕಾಂಟ್ರಾಸ್ಟ್ ಕಲರ್ ಹೊಲಿಗೆಯು ಸ್ಪೋರ್ಟಿಯಾಗಿ ಕಾಣುತ್ತದೆ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋ ಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊ ಗಳನ್ನು ಪಡೆಯಲು ನಮ್ಮ ಫೇಸ್‌ ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

More from DriveSpark

Article Published On: Monday, October 14, 2024, 13:34 [IST]
English summary
Tata altroz discounts in october 2024 details
Read more on tata motors india diwali
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+