ಬೆಸ್ಟ್ 5-ಸೀಟರ್ ಕಾರು: ಗರಿಷ್ಠ ಸೇಫ್ಟಿ, ಪ್ರೀಮಿಯಂ ಫೀಚರ್ಸ್ ಹೊಂದಿರುವ ಟಾಟಾ ಕಾರು

2024ರ ಮೊದಲಾರ್ಧ (ಜನವರಿ ತಿಂಗಳಿನಿಂದ ಜುಲೈ ತಿಂಗಳವರೆಗೆ) ಭಾರತದಾದ್ಯಂತ ಹ್ಯಾಚ್‌ಬ್ಯಾಕ್ ಮಾರಾಟದಲ್ಲಿ ಭಾರೀ ಕುಸಿತವನ್ನು ಕಂಡಿದೆ. ಇತ್ತೀಚೆಗೆ ಭಾರತದಲ್ಲಿ ಎಸ್‍ಯುವಿ ಮಾದರಿಗಳಿಗೆ ಹೆಚ್ಚು ಬೇಡಿಕೆಯನ್ನು ಪಡೆದುಕೊಂಡಿದೆ. ಪ್ರಮುಖ ತಯಾರಕರಾದ ಮಾರುತಿ ಸುಜುಕಿ, ಟಾಟಾ ಮೋಟಾರ್ಸ್ ಮತ್ತು ಹ್ಯುಂಡೈ ನಂತಹ ಹಲವಾರು ಪ್ರಮುಖ ಮಾದರಿಗಳು ಕಳೆದ ವರ್ಷದ ಮೊದಲಾರ್ಧ ಅವಧಿಯಲ್ಲಿ 564,187 ಯುನಿಟ್‌ ಗಳಿಗೆ ಹೋಲಿಸಿದರೆ 2024ರ H1 ಅವಧಿಯಲ್ಲಿ 469,856 ಯುನಿಟ್‌ ಗಳನ್ನು ಮಾರಾಟ ಮಾಡಿವೆ. ಇದು ಕಳೆದ ವರ್ಷದ ಅವಧಿಗೆ ಹೋಲಿಸಿದರೆ ಶೇ.17 ರಷ್ಟು ಕುಸಿತ ಕಂಡಿದೆ.

ಟಾಟಾ ಆಲ್ಟ್ರೊಜ್ (Tata Altroz) 2024ರ H1 ಆವಧಿಯ ಮಾರಾಟ ಅಂಕಿ ಅಂಶಗಳು ಬಹಿರಂಗವಾಗಿವೆ. 2024ರ ​​H1 ಅವಧಿಯಲ್ಲಿ ಟಾಟಾ ಆಲ್ಟ್ರೊಜ್ ಮಾದರಿಯ 29,556 ಯುನಿಟ್‌ಗಳು ಮಾರಾಟವಾಗಿವೆ ಇನ್ನು ಕಳೆದ ವರ್ಷದ ಇದೇ ಅವಧಿಯಲ್ಲಿ 30,820 ಯುನಿಟ್‌ಗಳು ಮಾರಾಟವಾಗಿತ್ತು. ಇದನ್ನು ಈ ವರ್ಷದ ಅವಧಿಗೆ ಹೋಲಿಸಿದರೆ ಶೇ.4% ರಷ್ಟು ಮಾರಾಟ ಕುಸಿತವನ್ನು ಕಂಡಿದೆ. 2024ರ H1 ಅವಧಿಯ ಹ್ಯಾಚ್‌ಬ್ಯಾಕ್ ಮಾರಾಟದ ಪಟ್ಟಿಯಲ್ಲಿ ಒಂಬತ್ತನೇ ಸ್ಥಾನವನ್ನು ಪಡೆದುಕೊಂಡಿದೆ.

Tata Altroz

ಟಾಟಾ ಆಲ್ಟ್ರೋಜ್ ಹ್ಯಾಚ್‌ಬ್ಯಾಕ್ ವಿನ್ಯಾಸದ ದೃಷ್ಟಿಯಿಂದಲೂ ಅತ್ಯುತ್ತಮವಾಗಿದ್ದು, ಹಾರ್ಬರ್ ಬ್ಲೂ, ಡೌನ್‌ಟೌನ್ ರೆಡ್, ಆರ್ಕೇಡ್ ಗ್ರೇ, ಅವೆನ್ಯೂ ವೈಟ್, ಒಪೇರಾ ಬ್ಲೂ ಸೇರಿದಂತೆ ವಿವಿಧ ಬಣ್ಣಗಳ ಆಯ್ಕೆಯಲ್ಲಿ ಸಿಗುತ್ತದೆ. ಈ ಕಾರಿನಲ್ಲಿ 5 ಮಂದಿ ಆರಾಮದಾಯಕವಾಗಿ ಕುಳಿತುಕೊಂಡು ಪ್ರಯಾಣಿಸಬಹುದು. ಜೊತೆಗೆ ಇಂಧನ ಚಾಲಿತ ಮಾದರಿಗಳು 345 ಲೀಟರ್ ಹಾಗೂ ಸಿಎನ್‌ಜಿ ರೂಪಾಂತರಗಳು 210 ಲೀಟರ್ ಸಾಮರ್ಥ್ಯದ ಬೂಟ್ ಸ್ಪೇಸ್ ಅನ್ನು ಪಡೆದಿವೆ.

ಈ ಕಾರು ಹಲವು ಎಂಜಿನ್ ಆಯ್ಕೆಯಲ್ಲಿ ದೊರೆಯುತ್ತದೆ. ಇದರ 1.2-ಲೀಟರ್ ನ್ಯಾಚುರಲ್ ಆಸ್ಪಿರೇಟೆಡ್ ಪೆಟ್ರೋಲ್ ಎಂಜಿನ್ 88 ಪಿಎಸ್ ಗರಿಷ್ಠ ಪವರ್ (ಶಕ್ತಿ) ಮತ್ತು 115 ಎನ್ಎಂ ಪೀಕ್ ಟಾರ್ಕ್, 1.2-ಲೀಟರ್ ಟರ್ಬೊ ಪೆಟ್ರೋಲ್ ಎಂಜಿನ್ 110 ಪಿಎಸ್ ಪವರ್ ಹಾಗೂ 140 ಎನ್ಎಂ ಪೀಕ್ ಟಾರ್ಕ್ ಹೊರಹಾಕುವ ಸಾಮರ್ಥ್ಯವನ್ನು ಹೊಂದಿದೆ.

Tata Altroz

ಮತ್ತೊಂದು 1.5-ಲೀಟರ್ ಡೀಸೆಲ್ ಎಂಜಿನ್ 90 ಪಿಎಸ್ ಗರಿಷ್ಠ ಪವರ್ (ಶಕ್ತಿ) ಹಾಗೂ ಎನ್ಎಂ ಪೀಕ್ ಟಾರ್ಕ್, 1.2-ಲೀಟರ್ ಸಿಎನ್‌ಜಿ ಎಂಜಿನ್ 73.5 ಪಿಎಸ್ ಪವರ್ ಮತ್ತು 103 ಎನ್ಎಂ ಪೀಕ್ ಟಾರ್ಕ್ ಉತ್ಪಾದಿಸುತ್ತದೆ. ಈ ಕಾರು, ರೂಪಾಂತರಗಳಿಗೆ ಅನುಗುಣವಾಗಿ 5-ಸ್ವೀಡ್ ಮ್ಯಾನುವಲ್, 6-ಸ್ವೀಡ್ ಡುಯಲ್-ಕ್ಲಚ್ ಟ್ರಾಸ್ಮಿಷನ್ (ಡಿಸಿಟಿ) ಗೇರ್ ಬಾಕ್ಸ್ ಆಯ್ಕೆಯನ್ನು ಒಳಗೊಂಡಿದೆ.

ಇನ್ನು ಹೊಸದಾಗಿ ಬಿಡುಗಡೆಗೊಂಡ ಟಾಟಾ ಆಲ್ಟ್ರೋಜ್ ರೇಸರ್ ಹೊಸ ರೇಸಿಂಗ್ ಪ್ರೇರಿತ ಬಣ್ಣವನ್ನು ಪಡೆದಿದೆ, ಅತ್ಯಾಕರ್ಷಕ ಡ್ಯುಯಲ್ ಟೋನ್ ಆರೆಂಜ್ ಮತ್ತು ಬ್ಲಾಕ್ ಥೀಮ್ ಅನ್ನು ಒಳಗೊಂಡಿದೆ. ಮತ್ತೊಂದು ಪ್ರಮುಖ ಹೈಲೈಟ್ ಎಂದರೆ ಬಾನೆಟ್ ಮತ್ತು ರೂಫ್ ಮೇಲೆ ವೈಟ್ ರೇಸಿಂಗ್ ಪಟ್ಟಿಗಳು ಕಾರಿಗೆ ಸ್ಪೋರ್ಟಿ ಲುಕ್ ನೀಡಿವೆ. ಹೊಸ ಆಲ್ಟ್ರೋಜ್ ರೇಸರ್ ಕಾರು' ಅಟಾಮಿಕ್ ಆರೆಂಜ್, ಅವೆನ್ಯೂ ವೈಟ್ ಮತ್ತು ಪ್ಯೂರ್ ಗ್ರೇ ಎಂಬ ಮೂರು ಬಣ್ಣಗಳಲ್ಲಿ ಲಭ್ಯವಿದೆ.

Tata Altroz

ಇಂಟೀರಿಯರ್‌ನಲ್ಲೂ ಅದೇ ಆರೆಂಜ್ ಬ್ಲಾಕ್ ಥೀಮ್ ಬಳಸಲಾಗಿದೆ. ಎಸಿ ವೆಂಟ್‌ಗಳು ಮತ್ತು ಸೆಂಟರ್‌ ಕನ್ಸೋಲ್‌ನಲ್ಲಿ ಆರೆಂಜ್ ಹೈಲೈಟ್‌ಗಳನ್ನು ಕಾಣಬಹುದು. ಸೀಟ್‌ಗಳು ಕೂಡ ಆರೆಂಜ್ ಮತ್ತು ವೈಟ್ ಬಣ್ಣದಲ್ಲಿ ರೇಸಿಂಗ್ ಪಟ್ಟಿಗಳನ್ನು ಹೊಂದಿವೆ. ಸೀಟ್‌ಗಳು, ಮುಂಭಾಗದ ಆರ್ಮ್‌ರೆಸ್ಟ್ ಮತ್ತು ಲೆದರ್ ಸ್ಟೀರಿಂಗ್ ವ್ಹೀಲ್ ಮೇಲೆ ಕಾಂಟ್ರಾಸ್ಟ್ ಕಲರ್ ಹೊಲಿಗೆಯು ಸ್ಪೋರ್ಟಿಯಾಗಿ ಕಾಣುತ್ತದೆ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋ ಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊ ಗಳನ್ನು ಪಡೆಯಲು ನಮ್ಮ ಫೇಸ್‌ ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

Article Published On: Thursday, August 8, 2024, 13:29 [IST]
English summary
Tata altroz h1 2024 sales report details
Read more on tata motors india
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+