ಹ್ಯಾಚ್‌ಬ್ಯಾಕ್‌ ಕಿಂಗ್‌ ಯಾರು?: ಟಾಟಾದ ಹೊಸ ಕಾರು ನೋಡಿ, ನೀವೇ ಡಿಸೈಡ್‌ ಮಾಡಿಕೊಳ್ಳಿ...

ನಮ್ಮಲ್ಲಿ ಇತ್ತೀಚೆಗೆ ಭಾರತದಲ್ಲಿ ಪ್ರೀಮಿಯಂ ಹ್ಯಾಚ್‌ಬ್ಯಾಕ್‌ಗಳ ಡಿಮ್ಯಾಂಡ್ ಹೆಚ್ಚಾಗುತ್ತಿದೆ. ಅದರಲ್ಲೂ ಈ ಸೆಗ್ಮೆಂಟ್‌ನಲ್ಲಿ ಅಧಿಪತ್ಯವನ್ನು ಸ್ಥಾಪಿಸಿರುವ ಕಂಪನಿಗಳಲ್ಲಿ ಹ್ಯುಂಡೈ, ಮಾರುತಿ ಮತ್ತು ಟಾಟಾ ಪ್ರಮುಖವಾದುದು. ಈಗಾಗಲೇ ಮಾರುತಿ ಸುಜುಕಿಯ ಬಲೆನೊ, ಹ್ಯುಂಡೈ i20 ಮತ್ತು ಟಾಟಾ ಅಲ್ಟ್ರೋಜ್‌ ಪ್ರಮುಖವಾದುದು. ನಿನ್ನೆಯಷ್ಟೇ ಭಾರತೀಯ ಮಾರುಕಟ್ಟೆಗೆ ಟಾಟಾ ಕಂಪನಿಯು ಆಲ್ಟ್ರೋಜ್‌ ರೇಸರ್‌ ಎಡಿಷನ್‌ ಅನ್ನು ಸಹ ಲಾಂಚ್ ಮಾಡಿದೆ. ಇಂದಿನ ಈ ಲೇಖನದಲ್ಲಿ ನಾವು ಹೊಸ ಟಾಟಾ ಆಲ್ಟ್ರೋಜ್‌ ರೇಸರ್‌ ಮತ್ತು ಹ್ಯುಂಡೈ i20 ಕಾರುಗಳ ಕುರಿತಾಗಿ ನೋಡೋಣ ಬನ್ನಿ.

ಡಿಸೈನ್‌: ಆಲ್ಟ್ರೋಜ್ ರೇಸರ್ (TATA Altroz Racer) ಹೊಸ ರೇಸಿಂಗ್ ಪ್ರೇರಿತ ಬಣ್ಣವನ್ನು ಪಡೆದಿದೆ, ಅತ್ಯಾಕರ್ಷಕ ಡ್ಯುಯಲ್ ಟೋನ್ ಆರೆಂಜ್ ಮತ್ತು ಬ್ಲಾಕ್ ಥೀಮ್ ಅನ್ನು ಒಳಗೊಂಡಿದೆ. ಮತ್ತೊಂದು ಹೈಲೈಟ್ ಎಂದರೆ ಬಾನೆಟ್ ಮತ್ತು ರೂಫ್ ಮೇಲೆ ವೈಟ್ ರೇಸಿಂಗ್ ಪಟ್ಟಿಗಳು ಕಾರಿಗೆ ಸ್ಪೋರ್ಟಿ ಲುಕ್ ನೀಡಿವೆ. ಹೊಸ ಆಲ್ಟ್ರೋಜ್ ರೇಸರ್ ಕಾರು' ಅಟಾಮಿಕ್ ಆರೆಂಜ್, ಅವೆನ್ಯೂ ವೈಟ್ ಮತ್ತು ಪ್ಯೂರ್ ಗ್ರೇ ಎಂಬ ಮೂರು ಬಣ್ಣಗಳಲ್ಲಿ ಲಭ್ಯವಿದೆ.

TATA Altroz Racer VS Hyundai i20 Comparison Engine Price Features And More

ಹ್ಯುಂಡೈ i20 ಸಹ ಅಗ್ರೆಸಿವ್‌ ಲುಕ್ ಹೊಂದಿದ್ದು, ನೋಡುಗರನ್ನು ತನ್ನತ್ತ ಸೆಳೆಯುತ್ತದೆ. ಮುಂಭಾಗದಲ್ಲಿರುವ ಗ್ರಿಲ್‌ ಈ ಕಾರಿನ ನೊಟವನ್ನು ಮತ್ತಷ್ಟು ಹೆಚ್ಚಿಸುತ್ತಿದ್ದು, ಈ ಕಾರಿನ ಐಬ್ರೋ ಡಿಆರ್‌ಎಲ್‌ಗಳು ಇದಕ್ಕೆ ಮತ್ತಷ್ಟು ಇಂಬು ನೀಡುತ್ತದೆ. ಕಾರಿನ ಬಾನೆಟ್‌ ಸೇರಿದಂತೆ ಎಕ್ಟ್‌ಟೀರಿಯರ್ ಸುತ್ತಲೂ ಬಾಡಿ ಲೈನ್‌ಗಳನ್ನು ನೋಡಬಹುದಾಗಿದ್ದು, ಈ ಕಾರಿಗೆ ಮಸ್ಕುಲರ್‌ ಲುಕ್ ನೀಡುತ್ತದೆ.

ಎಂಜಿನ್: ಆಲ್ಟ್ರೊಜ್‌ನ ಹಳೆಯ ಸಾಮಾನ್ಯ ವೇರಿಯೆಂಟ್‌ಗಳಲ್ಲಿ 1.2 ಲೀಟರಿನ ಐ-ಟರ್ಬೊ 3 ಸಿಲಿಂಡರ್ ಪೆಟ್ರೋಲ್ ಎಂಜಿನ್ ನೀಡಲಾಗಿದ್ದು, ಇದು 110 ಬಿಹೆಚ್‌ಪಿ ಪವರ್ ಹಾಗೂ 140 ಎನ್‌ಎಂ ಟಾರ್ಕ್ ಉತ್ಪಾದಿಸುತ್ತದೆ. ಆದರೆ ರೇಸರ್ ಆವೃತ್ತಿಯು ನೆಕ್ಸಾನ್‌ನ 1.2-ಲೀಟರ್ ಟರ್ಬೊ ಪೆಟ್ರೋಲ್ ಘಟಕವನ್ನು ಹೊಂದಿದ್ದು, ಇದು 120 ಪಿಎಸ್ ಪವರ್ ಮತ್ತು 170 ಎನ್ಎಂ ಟಾರ್ಕ್ ಹೊರಹಾಕುತ್ತದೆ.

TATA Altroz Racer VS Hyundai i20 Comparison Engine Price Features And More

ಈ ಕಾರು ಕೇವಲ 1.2 - ಲೀಟರ್ ಪೆಟ್ರೋಲ್ ಎಂಜಿನ್‌ ಆಯ್ಕೆಯಲ್ಲಿ ಮಾತ್ರ ದೊರೆಯಲಿದ್ದು, 83 ಪಿಎಸ್ ಗರಿಷ್ಠ ಪವರ್ (ಶಕ್ತಿ) ಹಾಗೂ 115 ಎನ್ಎಂ ಪೀಕ್ ಟಾರ್ಕ್ ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. 5 - ಸ್ಪೀಡ್ ಮ್ಯಾನುವಲ್ ಅಥವಾ ಸಿವಿಟಿ ಗೇರ್ ಬಾಕ್ಸ್ ನೋಂದಿಗೆ ಖರೀದಿಗೆ ಲಭ್ಯವಿದ್ದು, ರೂಪಾಂತರಗಳಿಗೆ ಅನುಗುಣವಾಗಿ 16 - 20 ಕೆಎಂಪಿಎಲ್ ಮೈಲೇಜ್ ನೀಡುತ್ತದೆ.

ವೇರಿಯೆಂಟ್: ಆಲ್ಟ್ರೊಜ್ ರೇಸರ್ 3 ರೂಪಾಂತರಗಳು (R1, R2 ಮತ್ತು R3) ಮೂರು ಬಣ್ಣಗಳ ಆಯ್ಕೆಯೊಂದಿಗೆ (ಪ್ಯೂರ್ ಗ್ರೇ, ಅಟಾಮಿಕ್ ಆರೆಂಜ್ ಮತ್ತು ಅವೆನ್ಯೂ ವೈಟ್) ಲಭ್ಯವಿದೆ. ಇದಲ್ಲದೆ, Altroz ​​ಲೈನ್ ಅಪ್ ಅನ್ನು ಹೆಚ್ಚಿಸಿ, ಟಾಟಾ ಮೋಟಾರ್ಸ್ ಎರಡು ಹೊಸ ರೂಪಾಂತರಗಳನ್ನು (XZ LUX ಮತ್ತು XZ+S LUX) ಪರಿಚಯಿಸಿದೆ.

ನೂತನ ಹ್ಯುಂಡೈ ಐ20 ಎರಾ, ಮ್ಯಾಗ್ನಾ, ಸ್ಪೋರ್ಟ್ಜ್, ಸ್ಪೋರ್ಟ್ಜ್ (ಒ) ಸೇರಿದಂತೆ ಹಲವು ರೂಪಾಂತರಗಳ ಆಯ್ಕೆಯಲ್ಲಿಯೂ ಲಭ್ಯವಿದೆ. ಈ ಕಾರಿನ ಹೊರ ಭಾಗದ ವಿನ್ಯಾಸ ನೋಡುಗರನ್ನು ಸೆಳೆಯಲಿದ್ದು, ಅಮೆಜಾನ್ ಗ್ರೇ, ಫಿಯರಿ ರೆಡ್, ಅಟ್ಲಾಸ್ ವೈಟ್, ಟೈಫೂನ್ ಸಿಲ್ವರ್ ಒಳಗೊಂಡಂತೆ 2 - ಡುಯಲ್ ಟೋನ್ ಹಾಗೂ 6 - ಮೊನೊ ಟೋನ್ ಬಣ್ಣಗಳೊಂದಿಗೂ ಸಿಗುತ್ತದೆ. ಈ ಕಾರಿನಲ್ಲಿ 5 ಮಂದಿ ಪ್ರಯಾಣಿಸಬಹುದು.

ರೇಸ್ ಪ್ರೇರಿತ ಸ್ಟೈಲಿಂಗ್, ಪವರ್‌ಫುಲ್ ಪರ್ಫಾಮೆನ್ಸ್ ಸೇರಿದಂತೆ ಸೆಗ್ಮೆಂಟ್‌ನಲ್ಲೇ ಮೊದಲ ವಿಶೇಷ ವೈಶಿಷ್ಟ್ಯಗಳೊಂದಿಗೆ ಟಾಟಾ ಆಲ್ಟ್ರೋಜ್ ರೇಸರ್ 9,49,000 ರೂ.ಗೆ (ಎಕ್ಸ್‌ ಶೋರೂಂ) ಬಿಡುಗಡೆಯಾಗಿದೆ. ಇದರ ಟಾಪ್‌ ಎಂಡ್ ಮಾಡಲ್‌ 9,98,900 ರೂ. ಬೆಲೆಯಿದೆ. i20 ಆರಂಭಿಕ ವೇರಿಯಂಟ್ ಆನ್‌ ರೋಡ್‌‌ ಬೆಲೆ ಆರಂಭವಾಗುವುದು, 8,52,541 ರೂಪಾಯಿಗಳು. ಇದರಲ್ಲಿ ಎಕ್ಸ್‌ ಶೋರೂಮ್‌ ಬೆಲೆ ಸುಮಾರು 7,04,400 ಲಕ್ಷಗಳು.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

Article Published On: Sunday, June 9, 2024, 9:00 [IST]
English summary
Tata altroz racer vs hyundai i20 comparison engine price features and more
Read more on auto news india
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+