ಹಬ್ಬಕ್ಕೆ ಬಿಡುಗಡೆಯಾದ ಹೊಸ ಟಾಟಾ ಪಂಚ್ ಕ್ಯಾಮೊ ಎಡಿಷನ್ ವಿಶೇಷತೆಗಳು!
ಟಾಟಾ ಮೋಟಾರ್ಸ್ ಮೊನ್ನೆಯಷ್ಟೆ ಹಬ್ಬದ ಅಂಗವಾಗಿ ಪಂಚ್‌ನ ವಿಶೇಷ ಸೀಮಿತ ಅವಧಿಯ CAMO ಎಡಿಷನ್ ಬಿಡುಗಡೆ ಮಾಡಿದೆ. ಹೊಸ ಕಾರಿನಲ್ಲಿ ವೈರ್‌ಲೆಸ್ ಚಾರ್ಜರ್, ರಿಯರ್ ಎಸಿ ವೆಂಟ್‌ಗಳು, ವೈರ್‌ಲೆಸ್ ಆಂಡ್ರಾಯ್ಡ್ ಆಟೋ ಮತ್ತು ಆಪಲ್ ಕಾರ್ಪ್ಲೇನೊಂದಿಗೆ 10.25-ಇಂಚಿನ ಇನ್ಫೋಟೈನ್‌ಮೆಂಟ್ ಸಿಸ್ಟಮ್, ವೇಗದ ಸಿ-ಟೈಪ್ ಯುಎಸ್‌ಬಿ ಚಾರ್ಜರ್, ಆರ್ಮ್‌ರೆಸ್ಟ್‌ನೊಂದಿಗೆ ಗ್ರ್ಯಾಂಡ್ ಕನ್ಸೋಲ್‌ನಂತಹ ಕಂಫರ್ಟ್-ಟೆಕ್ ವೈಶಿಷ್ಟ್ಯಗಳನ್ನು ನೀಡಲಾಗಿದೆ. ಈ ಫೀಚರ್‌ಗಳು ಟಾಟಾ ಪಂಚ್ ಕ್ಯಾಮೊದಲ್ಲಿ ಪ್ರೀಮಿಯಂ ಮತ್ತು ಚಾಲನಾ ಅನುಭವವನ್ನು ಮತ್ತಷ್ಟು ಹೆಚ್ಚಿಸುತ್ತವೆ ಎಂದು ಟಾಟಾ ಹೇಳಿದೆ.
ಇವಿಷ್ಟೇ ಅಲ್ಲದೇ ವಿಶಿಷ್ಟವಾದ CAMO ಮಾದರಿಯು ಪ್ರೀಮಿಯಂ ಸೀವೀಡ್ ಗ್ರೀನ್ ಬಣ್ಣದಲ್ಲಿ ಬರುತ್ತದೆ. ಜೊತೆಗೆ ವೈಟ್ ರೂಫ್, R16 ಚಾರ್ಕೋಲ್ ಗ್ರೇ ಅಲಾಯ್ ವೀಲ್‌ಗಳನ್ನು ಒಳಗೊಂಡು ಈಗ ಮತ್ತಷ್ಟು ಸ್ಪೋರ್ಟಿಯಾಗಿ ಕಾಣುತ್ತದೆ. ಆಸಕ್ತ ಗ್ರಾಹಕರು ಪಂಚ್ CAMO ಅನ್ನು ಟಾಟಾ ಮೋಟಾರ್ಸ್ ವೆಬ್‌ಸೈಟ್‌ನಲ್ಲಿ ಬುಕ್ ಮಾಡಬಹುದು. ಇದು ರೂ. 8,44,900 (ಎಕ್ಸ್ ಶೋ ರೂಂ ನವದೆಹಲಿ) ಆರಂಭಿಕ ಬೆಲೆಯಲ್ಲಿ ಖರೀದಿಗೆ ಲಭ್ಯವಿದೆ.

ಇವನ್ನು ಹೊರತುಪಡಿಸಿ ಉಳಿದ ಎಲ್ಲವೂ ಸಾಮಾನ್ಯ ಪಂಚ್‌ನಲ್ಲಿ ಇರುವಂತೆಯೇ ಇರಲಿದೆ. ಮೈಕ್ರೋ ಎಸ್‌ಯುವಿ ವಿಭಾಗದಲ್ಲಿ ಟಾಟಾ ಪಂಚ್ ದೃಢವಾದ ವಿನ್ಯಾಸ, 187 ಎಂಎಂ ಗ್ರೌಂಡ್ ಕ್ಲಿಯರೆನ್ಸ್, ಕಮಾಂಡಿಂಗ್ ಡ್ರೈವಿಂಗ್ ಪೊಸಿಷನ್ ಮತ್ತು ವೈವಿಧ್ಯಮಯ ಭಾರತೀಯ ಭೂಪ್ರದೇಶಗಳನ್ನು ಸಲೀಸಾಗಿ ನಿಭಾಯಿಸುವ ಸಾಮರ್ಥ್ಯವನ್ನು ಹೊಂದಿದೆ.
2021ರ GNCAP ಸುರಕ್ಷತಾ ಮಾನದಂಡಗಳ ಅಡಿಯಲ್ಲಿ ಪ್ರತಿಷ್ಠಿತ 5 - ಸ್ಟಾರ್ ರೇಟಿಂಗ್ ಅನ್ನು ಗಳಿಸಿರುವ ಪಂಚ್, ಭಾರತದ ಸುರಕ್ಷಿತ ಸಬ್-ಕಾಂಪ್ಯಾಕ್ಟ್ SUV ಆಗಿದೆ. ಇದೇ ಕಾರಣಕ್ಕೆ ಕಾರು ಉತ್ತಮ ಮಾರಾಟವನ್ನು ಕಾಣುತ್ತಿದ್ದು, ಇಂದಿಗೂ ಬೇಡಿಕೆ ಕಡಿಮೆಯಾಗದೇ ಉತ್ತಮ ಮಾರಾಟದೊಂದಿಗೆ ಮುನ್ನುಗ್ಗುತ್ತಿದೆ.

ಟಾಟಾ ಪಂಚ್ ಭಾರತದಲ್ಲಿ ಕೇವಲ 10 ತಿಂಗಳಲ್ಲಿ 1 ಲಕ್ಷ ಮಾರಾಟ ಹಾಗೂ ಕೇವಲ 34 ತಿಂಗಳಲ್ಲಿ 4 ಲಕ್ಷ ಮಾರಾಟದ ಗಡಿ ದಾಟಿದೆ. ಟಾಟಾ ಮೋಟಾರ್ಸ್ ತನ್ನ ಪಂಚ್ ಮೈಕ್ರೋ ಎಸ್‌ಯುವಿಯನ್ನು ಪೆಟ್ರೋಲ್, ಡ್ಯುಯಲ್-ಸಿಲಿಂಡರ್ CNG ಮತ್ತು ಎಲೆಕ್ಟ್ರಿಕ್ ಸೇರಿದಂತೆ ಬಹು ಪವರ್‌ಟ್ರೇನ್ ಆಯ್ಕೆಗಳೊಂದಿಗೆ ಖರೀದಿಗೆ ಲಭ್ಯವಾಗಿಸಿದೆ.
ಇವಿಷ್ಟೇ ಅಲ್ಲದೇ ಪರ್ಫಾಮೆನ್ಸ್ ವಿಷಯದಲ್ಲಿ ಟಾಟಾ ಪಂಚ್ ರೋಮಾಂಚಕ ಚಾಲನಾ ಅನುಭವವನ್ನು ನೀಡುತ್ತದೆ. ಸದ್ಯ ತನ್ನ ವಿಭಾಗದಲ್ಲಿ ಸಣ್ಣ ಫ್ಯಾಮಿಲಿಗೆ ಉತ್ತಮ ಆಯ್ಕೆಯಾಗಿದ್ದು, ಈಗ ಹೊಸ ಕ್ಯಾಮೊ ಎಡಿಷನ್ ಹಬ್ಬದ ಸೀಸನ್‌ನಲ್ಲಿ ಯಾವ ಮಟ್ಟಕ್ಕೆ ಬೇಡಿಕೆ ಪಡೆಯಲಿದೆ ಎಂಬುದನ್ನು ಕಾದು ನೋಡಬೇಕಿದೆ.

ಟಾಟಾ ಪಂಚ್ ವಿಶಾಲವಾದ ಒಳಾಂಗಣ, ಸಂಪೂರ್ಣ ಸುರಕ್ಷತೆ ನೀಡುವ ಮೂಲಕ ತನ್ನ ವಿಭಾಗದಲ್ಲಿ ಕ್ರಾಂತಿ ಸೃಷ್ಟಿಸಿದೆ. ಬೆಳೆಯುತ್ತಿರುವ ಜನಪ್ರಿಯತೆಯು ಪಂಚ್ ಅನ್ನು FY25 ರಲ್ಲಿ ಎಲ್ಲಾ ವಿಭಾಗಗಳಲ್ಲಿ ಅತಿ ಹೆಚ್ಚು ಮಾರಾಟವಾಗುವ ವಾಹನವನ್ನಾಗಿ ಮಾಡಿದೆ. ಬೇಡಿಕೆಯ ಮೇರೆಗೆ, ಈಗ ಪಂಚ್‌ನ ಸೀಮಿತ CAMO ಎಡಿಷನ್ ಪರಿಚಯಿಸಿದ್ದೇವೆ ಎಂದು ಟಾಟಾ ಪ್ಯಾಸೆಂಜರ್ ಎಲೆಕ್ಟ್ರಿಕ್ ಮೊಬಿಲಿಟಿಯ ಮುಖ್ಯ ವಾಣಿಜ್ಯ ಅಧಿಕಾರಿ ವಿವೇಕ್ ಶ್ರೀವತ್ಸ ಹೇಳಿದ್ದಾರೆ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊ ಗಳನ್ನು ಪಡೆಯಲು ನಮ್ಮ ಫೇಸ್ ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications