TATA: ರತನ್ ಟಾಟಾ ಕಂಪನಿಯಿಂದ ದೊಡ್ಡ ಸಿಹಿಸುದ್ದಿ.. 1 ಲಕ್ಷ ಡಿಸ್ಕೌಂಟ್, 5 ಲಕ್ಷಕ್ಕೆ ಹೊಸ ಕಾರು!

ರತನ್ ಟಾಟಾ ಒಡೆತನದ ಟಾಟಾ ಮೋಟಾರ್ಸ್, ವಿಶ್ವಾಸಾರ್ಹ ಕಾರು ತಯಾರಕ ಕಂಪನಿಯಾಗಿ ಗುರುತಿಸಿಕೊಂಡಿದೆ. ಜನಪ್ರಿಯ ಕಾರುಗಳಾದ ಟಿಯಾಗೊ, ಟಿಗೂರ್, ಆಲ್ಟ್ರೋಜ್, ಪಂಚ್, ನೆಕ್ಸಾನ್, ಹ್ಯಾರಿಯರ್ ಹಾಗೂ ಸಫಾರಿ ಖರೀದಿಗೆ ಮೇಲೆ ದೊಡ್ಡಮಟ್ಟದ ರಿಯಾಯಿತಿ ಘೋಷಣೆ ಮಾಡಿದೆ. ಈ ಹಣಕಾಸಿನ ಪ್ರಯೋಜನಗಳು ಅಕ್ಟೋಬರ್ 31, 2024ರವರೆಗೆ ಮಾತ್ರ ಮಾನ್ಯವಾಗಿರಲಿದೆ. ಬನ್ನಿ.. ಯಾವ ಕಾರು ಎಷ್ಟು ರಿಯಾಯಿತಿ ಪಡೆದಿದೆ ಎಂಬುದರ ಕುರಿತಂತೆ ಸಂಕ್ಷಿಪ್ತವಾದ ಮಾಹಿತಿ ತಿಳಿಯೋಣ.

ಮೊದಲಿಗೆ ಟಾಟಾ ಟಿಯಾಗೊ (Tata Tiago) ಹ್ಯಾಚ್‌ಬ್ಯಾಕ್ ಹೊಂದಿರುವ ರಿಯಾಯಿತಿ ಬಗ್ಗೆ ಮಾತನಾಡೋಣ. ಈ ಕಾರಿನ 2024ರ ರೂಪಾಂತರಗಳು (ವೇರಿಯೆಂಟ್), ರೂ.20,000 ದಿಂದ 30,000ವರೆಗೆ ಹಣಕಾಸಿನ ಪ್ರಯೋಜನ ಹೊಂದಿವೆ. 2023ರ ಟಿಯಾಗೊ ರೂಪಾಂತರಗಳು ರೂ.85,000 ದಿಂದ 90,000ವರೆಗೆ ರಿಯಾಯಿತಿಯನ್ನು ಒಳಗೊಂಡಿವೆ. ನೂತನ ಟಾಟಾ ಟಿಯಾಗೊ ಹ್ಯಾಚ್‌ಬ್ಯಾಕ್, ರೂ.5 ಲಕ್ಷದಿಂದ ರೂ.8.75 ಲಕ್ಷ (ಎಕ್ಸ್ ಶೋರೂಂ) ಬೆಲೆಯನ್ನು ಹೊಂದಿದೆ.

Tata Cars Have Discount Upto Rs 1 Lakh In October 2024 Tiago Tigor Altroz Punch Nexon Harrier Safari

ಟಾಟಾ ಟಿಗೊರ್ (Tata Tigor) ಪ್ರಮುಖ ಸೆಡಾನ್ ಆಗಿದೆ. ಈ ಅಕ್ಟೋಬರ್‌ನಲ್ಲಿ ಭರ್ಜರಿ ರಿಯಾಯಿತಿಯನ್ನು ಹೊಂದಿದೆ. ಇದರ 2024ರ ರೂಪಾಂತರಗಳು ರೂ.20,000 ದಿಂದ 30,000 ಹಾಗೂ 2023ರ ರೂಪಾಂತರಗಳು ರೂ.85,000ವರೆಗೆ ಹಣಕಾಸು ಪ್ರಯೋಜನ ಪಡೆದಿವೆ. ಹೊಸ ಟಿಗೊರ್ ಕಾರು, ರೂ.6 ಲಕ್ಷದಿಂದ ರೂ.9.40 ಲಕ್ಷ ಎಕ್ಸ್ ಶೋರೂಂ ದರವನ್ನು ಒಳಗೊಂಡಿದೆ.

ಟಾಟಾ ಆಲ್ಟ್ರೋಜ್ (Tata Altroz) ಪ್ರೀಮಿಯಂ ಹ್ಯಾಚ್‌ಬ್ಯಾಕ್ ಆಗಿದೆ. ಇದರ 2024ರ ರೂಪಾಂತರಗಳು ರೂ.15,000 ದಿಂದ ರೂ.50,000ವರೆಗೆ ರಿಯಾಯಿತಿ ಹೊಂದಿವೆ. 2023ರ ರೂಪಾಂತರಗಳು 55,000 ದಿಂದ 70,000ವರೆಗೆ ಹಣಕಾಸಿನ ಪ್ರಯೋಜನವನ್ನು ಒಳಗೊಂಡಿವೆ. ಈ ಆಲ್ಟ್ರೋಜ್ ಕಾರು, ರೂ.6.50 ಲಕ್ಷದಿಂದ ರೂ.11.16 ಲಕ್ಷ ಎಕ್ಸ್ ಶೋರೂಂ ಬೆಲೆಯನ್ನು ಪಡೆದಿದೆ.

Tata Cars Have Discount Upto Rs 1 Lakh In October 2024 Tiago Tigor Altroz Punch Nexon Harrier Safari

ಟಾಟಾ ಪಂಚ್ (Tata Punch) ಜನಪ್ರಿಯ ಮೆಕ್ರೋ ಎಸ್‌ಯುವಿಯಾಗಿದೆ. ಈ ಕಾರಿನ 2024ರ ರೂಪಾಂತರಗಳು (ವೇರಿಯೆಂಟ್) ರೂ.15,000 ದಿಂದ ರೂ.18,000ವರೆಗೆ ರಿಯಾಯಿತಿ ಮತ್ತು 2023ರ ರೂಪಾಂತರಗಳು ಸಹ ರೂ.15,000 ದಿಂದ ರೂ.18,000 ಹಣಕಾಸಿನ ಪ್ರಯೋಜನವನ್ನು ಒಳಗೊಂಡಿವೆ. ಹೊಸ ಟಾಟಾ ಪಂಚ್ ರೂ.6.13 ಲಕ್ಷದಿಂದ ರೂ.10 ಲಕ್ಷ ಎಕ್ಸ್ ಶೋರೂಂ ದರದಲ್ಲಿ ಖರೀದಿಗೆ ಸಿಗುತ್ತದೆ.

ಟಾಟಾ ನೆಕ್ಸಾನ್ (Tata Nexon) ಪ್ರಖ್ಯಾತ ಎಸ್‌ಯುವಿಯಾಗಿದೆ. ಇದರ 2024ರ ರೂಪಾಂತರಗಳು ರೂ.10,000 ದಿಂದ ರೂ.25,000 ಹಣಕಾಸಿನ ಪ್ರಯೋಜವನ್ನು ಹೊಂದಿವೆ. 2023ರ ರೂಪಾಂತರಗಳು ರೂ.25,000 ದಿಂದ 95,000ವರೆಗೆ ರಿಯಾಯಿತಿ ಪಡೆದಿವೆ. ಈ ಕಾರು ರೂ.8 ಲಕ್ಷದಿಂದ ರೂ.15.50 ಲಕ್ಷ ಎಕ್ಸ್ ಶೋರೂಂ ಬೆಲೆಯನ್ನು ಒಳಗೊಂಡಿದೆ.

Tata Cars Have Discount Upto Rs 1 Lakh In October 2024 Tiago Tigor Altroz Punch Nexon Harrier Safari

ಟಾಟಾ ಹ್ಯಾರಿಯರ್ (Tata Harrier) ಎಸ್‌ಯುವಿ ಕೂಡ ಭರ್ಜರಿ ರಿಯಾಯಿತಿಯನ್ನು ಹೊಂದಿದೆ. ಈ ಕಾರಿನ 2024ರ ರೂಪಾಂತರಗಳು ರೂ.25,000 ಮತ್ತು 2023ರ ರೂಪಾಂತರಗಳು 50,000 ದಿಂದ ರೂ.1,33,000 ಹಣಕಾಸಿನ ಪ್ರಯೋಜನವನ್ನು ಒಳಗೊಂಡಿವೆ. ಹೊಸ ಟಾಟಾ ಹ್ಯಾರಿಯರ್ ರೂ.14.99 ಲಕ್ಷದಿಂದ ರೂ.25.89 ಲಕ್ಷ (ಎಕ್ಸ್ ಶೋರೂಂ) ದರವನ್ನು ಪಡೆದಿದೆ.

ಟಾಟಾ ಸಫಾರಿ (Tata Safari) ಎಸ್‌ಯುವಿಯು ಉತ್ತಮ ಹಣಕಾಸಿನ ಪ್ರಯೋಜವನ್ನು ಹೊಂದಿದೆ. ಇದರ 2024ರ ರೂಪಾಂತರಗಳು ರೂ.25,000 ಮತ್ತು 2023ರ ರೂಪಾಂತರಗಳು 50,000 ದಿಂದ ರೂ.1,33,000 ರಿಯಾಯಿತಿಯನ್ನು ಪಡೆದಿವೆ. ಈ ಸಫಾರಿ ರೂ.15.49 ಲಕ್ಷದಿಂದ ರೂ.26.89 ಲಕ್ಷ ಎಕ್ಸ್ ಶೋರೂಂ ಬೆಲೆಯನ್ನು ಒಳಗೊಂಡಿದೆ.

ನಿಮ್ಮ ಗಮನಕ್ಕೆ.. ಈ ರಿಯಾಯಿತಿ ಪ್ರಯೋಜನಗಳು ನಗರದಿಂದ ನಗರಕ್ಕೆ ಬೇರೆಯಿರಲಿದ್ದು, ಹೆಚ್ಚಿನ ಮಾಹಿತಿಗೆ ಸಮೀಪದ ಶೋರೂಂಗೆ ಭೇಟಿ ನೀಡಿರಿ.

More from DriveSpark

Article Published On: Monday, October 7, 2024, 14:42 [IST]
English summary
Tata cars have discount upto rs 1 lakh in october 2024 tiago tigor altroz punch nexon harrier safari
Read more on tata motors india diwali
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+