Tata: ನಂಬಿಕೆ ಗಟ್ಟಿಯಾಯ್ತು.. ಹಳ್ಳಿ-ಹಳ್ಳಿಗೂ ತಲುಪಿದ ಟಾಟಾ, ಪ್ರತಿಸ್ಪರ್ಧಿಗಳಿಗೆ ನಡುಕ!

ದೇಶದ ವಿಶ್ವಾಸಾರ್ಹ ವಾಹನ ತಯಾರಕ ಸಂಸ್ಥೆಯಾಗಿ ಟಾಟಾ ಮೋಟಾರ್ಸ್ (Tata Motors) ಗುರುತಿಸಿಕೊಂಡಿದೆ. ಕಂಪನಿಯ ಕಾರುಗಳು ದೊಡ್ಡ ನಗರಗಳಲ್ಲಿ ಮಾತ್ರವಲ್ಲದೆ, ಸಣ್ಣ ಪಟ್ಟಣಗಳು ​​ಹಾಗೂ ಹಳ್ಳಿಗಳಲ್ಲಿಯೂ ಹೆಚ್ಚು ಜನಪ್ರಿಯವಾಗುತ್ತಿವೆ. ಟಾಟಾ ಮೋಟಾರ್ಸ್ 2024ರ ಹಣಕಾಸು ವರ್ಷದಲ್ಲಿ ಗ್ರಾಮೀಣ ಭಾಗದಲ್ಲಿ ದೊಡ್ಡ ಸಂಖ್ಯೆಯಲ್ಲಿ ಕಾರುಗಳನ್ನು ಮಾರಿದೆ. ಹಳ್ಳಿಗಾಡಿನ ಮಾರಾಟ ಪ್ರಮಾಣವು ಕಂಪನಿಯ ಒಟ್ಟು ಪ್ರಯಾಣಿಕ ವಾಹನ (Passenger Vehicle) ಮಾರಾಟಕ್ಕೆ ಶೇಕಡ 40% ಕೊಡುಗೆಯನ್ನು ನೀಡಿದೆ. ಸರಿ ಸುಮಾರು 100ರಲ್ಲಿ 40 ಕಾರುಗಳನ್ನು ಗ್ರಾಮೀಣ ಭಾಗದ ಜನರು ಖರೀದಿ ಮಾಡಿದ್ದಾರೆ.

ಟಾಟಾದ ಕಾರುಗಳನ್ನು ಮೊದಲ ಬಾರಿಗೆ ಕೊಂಡುಕೊಳ್ಳುವವರ ಸಂಖ್ಯೆಯೂ ಶೇಕಡ 70% ಅಧಿಕಗೊಂಡಿದೆ. ದೇಶದಲ್ಲಿ ಮೂಲಸೌಕರ್ಯ ಅಭಿವೃದ್ಧಿಗೆ ಹೆಚ್ಚಿನ ಒತ್ತು ನೀಡಲಾಗುತ್ತಿದ್ದು, ಜನರ ಜೀವನಮಟ್ಟವು ಸುಧಾರಿಸುತ್ತಿದೆ. ಇದರಿಂದ ನಗರ ಪ್ರದೇಶಗಳಂತೆ ಗ್ರಾಮೀಣ ಭಾಗದ ಜನರ ಆರ್ಥಿಕ ಸ್ಥಿತಿ ಉತ್ತಮವಾಗುತ್ತಿದ್ದು, ತಮ್ಮ ಕುಟುಂಬದ ಬಳಕೆಗಾಗಿ ಕಾರುಗಳನ್ನು ಖರೀದಿಸಲು ಮುಂದಾಗುತ್ತಿದ್ದಾರೆ. ಜೊತೆಗೆ ಟಾಟಾದ ಹ್ಯಾಚ್‌ಬ್ಯಾಕ್ ಹಾಗೂ ಎಸ್‌ಯುವಿಗಳು ಸುರಕ್ಷತೆಗೂ ಹೆಸರುವಾಸಿಯಾಗಿರುವುದರಿಂದ ಅವುಗಳನ್ನು ಖರೀದಿಸಲು ಇಷ್ಟಪಡುತ್ತಿದ್ದಾರೆ.

Tata Cars Sales Increased In Rural India Details

ದೇಶೀಯ ಮಾರುಕಟ್ಟೆಯಲ್ಲಿ ಟಾಟಾ ಮಾರಾಟಗೊಳಿಸುವ ವಿವಿಧ ಕಾರುಗಳ ಬಗ್ಗೆ ಮಾತನಾಡೋಣ. ಮೊದಲಿಗೆ ಎಂಟ್ರಿ ಲೆವೆಲ್ ಮಾಡೆಲ್ (ಆರಂಭಿಕ ಆವೃತ್ತಿ) ಆಗಿರುವ ಟಿಯಾಗೊ (Tiago) ಹ್ಯಾಚ್‌ಬ್ಯಾಕ್, ರೂ.5.65 ಲಕ್ಷದಿಂದ ರೂ.8.90 ಲಕ್ಷ ಎಕ್ಸ್ ಶೋರೂಂ ಬೆಲೆಯಲ್ಲಿ ಖರೀದಿಗೆ ದೊರೆಯುತ್ತದೆ. ಪೆಟ್ರೋಲ್ ಹಾಗೂ ಸಿಎನ್‌ಜಿ ಎಂಜಿನ್ ಆಯ್ಕೆಯಲ್ಲಿ ಹೊಂದಿದ್ದು, 19.43 ರಿಂದ 28.06 ಕೆಎಂಪಿಎಲ್‌ವರೆಗೆ ಮೈಲೇಜ್ ನೀಡುತ್ತದೆ. 7-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್ ಸೇರಿದಂತೆ ವಿವಿಧ ವೈಶಿಷ್ಟ್ಯಗಳನ್ನು ಒಳಗೊಂಡಿದೆ.

ಟಾಟಾ ಟಿಗೂರ್ (Tata Tigor) ಸೆಡಾನ್ ರೂ.6.30 ಲಕ್ಷದಿಂದ ರೂ.9.55 ಲಕ್ಷ ದರವನ್ನು (ಎಕ್ಸ್ ಶೋರೂಂ) ಹೊಂದಿದೆ. ಈ ಕಾರು ಪೆಟ್ರೋಲ್ ಮತ್ತು ಸಿಎನ್‌ಜಿ ಎಂಜಿನ್‌ನ್ನು ಪಡೆದಿದ್ದು, 19.28 ರಿಂದ 28.06 ಕೆಎಂಪಿಎಲ್‌ವರೆಗೆ ಮೈಲೇಜ್ ಕೊಡುತ್ತದೆ. 7-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್, ಸೆಮಿ-ಡಿಜಿಟಲ್ ಡ್ರೈವರ್ ಡಿಸ್‌ಪ್ಲೇ, ಆಂಡ್ರಾಯ್ಡ್ ಆಟೋ, ಆಪಲ್ ಕಾರ್‌ ಪ್ಲೇ ಒಳಗೊಂಡಂತೆ ವಿವಿಧ ವೈಶಿಷ್ಟ್ಯಗಳನ್ನು ಒಳಗೊಂಡಿದೆ.

Tata Cars Sales Increased In Rural India Details

ಟಾಟಾ ಆಲ್ಟ್ರೋಜ್ (Tata Altroz) ಪ್ರೀಮಿಯಂ ಹ್ಯಾಚ್‌ಬ್ಯಾಕ್ ಆಗಿದ್ದು, ರೂ.6.65 ಲಕ್ಷದಿಂದ ರೂ.11.35 ಲಕ್ಷ ಎಕ್ಸ್ ಶೋರೂಂ ದರದಲ್ಲಿ ಖರೀದಿಗೆ ಲಭ್ಯವಿದೆ. ಇದು ಪೆಟ್ರೋಲ್, ಡೀಸೆಲ್ ಮತ್ತು ಸಿಎನ್‌ಜಿ ಪವರ್‌ಟ್ರೇನ್‌ನ್ನು ಒಳಗೊಂಡಿದ್ದು, 19.33 ರಿಂದ 26.20 ಕೆಎಂಪಿಎಲ್‌ವರೆಗೆ ಮೈಲೇಜ್ ನೀಡುತ್ತದೆ. 10.25-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್, 7-ಇಂಚಿನ ಫುಲ್-ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್ ಸೇರಿದಂತೆ ಹಲವು ವೈಶಿಷ್ಟ್ಯಗಳನ್ನು ಪಡೆದಿದೆ. ಸುರಕ್ಷತೆಗಾಗಿ ಏರ್‌ಬ್ಯಾಗ್‌ಗಳನ್ನು ಹೊಂದಿದೆ.

ಮೆಕ್ರೋ ಎಸ್‌ಯುವಿ ಟಾಟಾ ಪಂಚ್ (Tata Punch), ರೂ.6.13 ಲಕ್ಷದಿಂದ ರೂ.10.20 ಲಕ್ಷ ಎಕ್ಸ್ ಶೋರೂಂ ಬೆಲೆಯನ್ನು ಪಡೆದಿದೆ. ಪೆಟ್ರೋಲ್ ಹಾಗೂ ಸಿಎನ್‌ಜಿ ಎಂಜಿನ್‌ನೊಂದಿಗೆ ಲಭ್ಯವಿದೆ. 20.09 ರಿಂದ 26.99 ಕೆಎಂಪಿಎಲ್‌ವರೆಗೆ ಮೈಲೇಜ್ ಕೊಡುತ್ತದೆ. 7-ಇಂಚಿನ ಟಚ್‌ಸ್ಕ್ರೀನ್ ಡಿಸ್ಪ್ಲೇ, 7-ಇಂಚಿನ ಸೆಮಿ ಡಿಜಿಟಲ್ ಇನ್ಸ್ಟ್ರುಮೆಂಟ್ ಪ್ಯಾನೆಲ್, ಆಟೋಮೆಟಿಕ್ ಎಸಿ, ಪುಶ್-ಬಟನ್ ಸ್ಟಾರ್ಟ್/ ಸ್ಟಾಪ್, ಮತ್ತು ಕ್ರೂಸ್ ಕಂಟ್ರೋಲ್ ಒಳಗೊಂಡಂತೆ ವಿವಿಧ ವೈಶಿಷ್ಟ್ಯಗಳನ್ನು ಪಡೆದಿದೆ.

Tata Cars Sales Increased In Rural India Details

ಟಾಟಾ ನೆಕ್ಸಾನ್ (Tata Nexon) ಎಸ್‌ಯುವಿ ರೂ.8 ಲಕ್ಷದಿಂದ ರೂ.15.80 ಲಕ್ಷ (ಎಕ್ಸ್ ಶೋರೂಂ) ದರದಲ್ಲಿ ಗ್ರಾಹಕರಿಗೆ ಸಿಗುತ್ತದೆ. ಟಾಟಾ ಹ್ಯಾರಿಯರ್ (Tata Harrier), ರೂ.15.49 ರಿಂದ ರೂ.26.44 ಲಕ್ಷ ಮತ್ತು ಟಾಟಾ ಸಫಾರಿ (Tata Safari) ರೂ.16.19 ಲಕ್ಷದಿಂದ ರೂ.27.34 ಲಕ್ಷ ಎಕ್ಸ್ ಶೋರೂಂ ಬೆಲೆಯನ್ನು ಹೊಂದಿದೆ.

ಟಾಟಾದ ಎಲೆಕ್ಟ್ರಿಕ್ ಕಾರುಗಳು ಕೂಡ ಖರೀದಿದಾರರಿಗೆ ಲಭ್ಯವಿದ್ದು, ಟಿಯಾಗೊ ಇವಿ ರೂ.7.99 ಲಕ್ಷದಿಂದ ರೂ.11.89 ಲಕ್ಷ ಬೆಲೆಯನ್ನು (ಎಕ್ಸ್ ಶೋರೂಂ) ಹೊಂದಿದೆ. ಸಂಪೂರ್ಣ ಚಾರ್ಜ್‌ನಲ್ಲಿ 250 ರಿಂದ 315 ಕಿ.ಮೀ ರೇಂಜ್ (ಮೈಲೇಜ್) ನೀಡುತ್ತದೆ. ಟಾಟಾ ಪಂಚ್ ಇವಿ ರೂ.10.99 ಲಕ್ಷದಿಂದ ರೂ.15.49 ಎಕ್ಸ್ ಶೋರೂಂ ದರವನ್ನು ಪಡೆದಿದೆ. ಈ ಕಾರು ಭರ್ತಿ ಚಾರ್ಜ್‌ನಲ್ಲಿ 315 ರಿಂದ 421 ಕಿ.ಮೀ ಕ್ರಮಿಸುತ್ತದೆ.

ಟಾಟಾ ನೆಕ್ಸಾನ್ ಇವಿ (Tata Nexon EV) ರೂ.14.49 ಲಕ್ಷದಿಂದ ರೂ.19.49 ಲಕ್ಷ ಎಕ್ಸ್ ಶೋರೂಂ ಬೆಲೆಯಲ್ಲಿ ಸಿಗುತ್ತದೆ. ಪೂರ್ತಿ ಚಾರ್ಜ್‌ನಲ್ಲಿ 325 ರಿಂದ 465 ಕಿ.ಮೀ ಓಡುತ್ತದೆ. 12.3-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್, 10.25-ಇಂಚಿನ ಫುಲ್ ಡಿಜಿಟಲ್ ಡ್ರೈವರ್ ಡಿಸ್ಪ್ಲೇ, 9-ಸ್ಪೀಕರ್ ಜೆಬಿಎಲ್ ಸೌಂಡ್ ಸಿಸ್ಟಮ್ ಒಳಗೊಂಡಂತೆ ವಿವಿಧ ವೈಶಿಷ್ಟ್ಯಗಳನ್ನು ಹೊಂದಿದೆ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋ ಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊ ಗಳನ್ನು ಪಡೆಯಲು ನಮ್ಮ ಫೇಸ್‌ ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

Article Published On: Friday, June 14, 2024, 15:47 [IST]
English summary
Tata cars sales increased in rural india details
Read more on tata motors india
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+