ಟಾಟಾ ಕರ್ವ್ ಖರೀದಿಸಬಹುದೇ? ಬೆಂಗಳೂರಿನಲ್ಲಿ ಆನ್-ರೋಡ್ ಬೆಲೆಯೆಷ್ಟು, ವಿಶೇಷತೆಗಳೇನು?
ಇಂಧನ ಚಾಲಿತ ಟಾಟಾ ಕರ್ವ್ SUV-ಕೂಪೆಯನ್ನು ಇತ್ತೀಚೆಗೆ ಭಾರತದಲ್ಲಿ ಬಿಡುಗಡೆ ಮಾಡಲಾಗಿದೆ. ಇದರ ಎಕ್ಸ್ ಶೋರೋಂ ಬೆಲೆಯು ರೂ. 10 ಲಕ್ಷದಿಂದ ಪ್ರಾರಂಭವಾಗುತ್ತದೆ. ಅಕ್ಟೋಬರ್ 31, 2024 ರವರೆಗೆ ಮಾಡಲಾದ ಬುಕಿಂಗ್‌ಗಳಿಗೆ ಮಾತ್ರ ಈ ಬೆಲೆ ಮಾನ್ಯವಾಗಿರುತ್ತದೆ. ಇದರಲ್ಲಿ ಪೆಟ್ರೋಲ್ ಹಾಗೂ ಡೀಸೆಲ್ ಎಂಜಿನ್ ಆಯ್ಕೆಗಳಿದ್ದು, ಪೆಟ್ರೋಲ್ ಎಂಜಿನ್ ಬೆಲೆಗಳು 10 ಲಕ್ಷದಿಂದ 19 ಲಕ್ಷ ರೂ.ವರೆಗೆ ಇದೆ. ಡೀಸೆಲ್ ಎಂಜಿನ್ 11.50 ಲಕ್ಷದಿಂದ 19 ಲಕ್ಷ ರೂ. (ಎಲ್ಲಾ ಬೆಲೆಗಳು ಎಕ್ಸ್ ಶೋರೂಂ)ವರೆಗೆ ಇದೆ. ಹಾಗಾದ್ರೆ ಬೆಂಗಳೂರಿನಲ್ಲಿ ಆನ್-ರೋಡ್ ಬೆಲೆ ಎಷ್ಟು ಎಂಬುದನ್ನು ಇಲ್ಲಿ ತಿಳಿಯೋಣ.
ಟಾಟಾ ಕರ್ವ್‌ನಲ್ಲಿ ನಿಮಗೆ ಸ್ಮಾರ್ಟ್, ಪ್ಯೂರ್ ಪ್ಲಸ್, ಕ್ರಿಯೇಟಿವ್, ಅಕಾಂಪ್ಲಿಷ್ಡ್ ಎಂಬ ನಾಲ್ಕು ಟ್ರಿಮ್‌ಗಳು ಬರುತ್ತವೆ. ಸ್ಮಾರ್ಟ್ ಟ್ರಿಮ್ ಹೊರತುಪಡಿಸಿ, ಇತರ ಮೂರು ಟ್ರಿಮ್‌ಗಳು ಹೆಚ್ಚುವರಿ ವೈಶಿಷ್ಟ್ಯಗಳೊಂದಿಗೆ ಬರುತ್ತವೆ. ಬೆಂಗಳೂರಿನಲ್ಲಿ ಟಾಟಾ ಕರ್ವ್ ಬೇಸ್ ವೇರಿಯೆಂಟ್ ಆದ 'ಸ್ಮಾರ್ಟ್' ಆನ್‌ರೋಡ್ ಬೆಲೆಯು 12,04,945 ರೂ. ಇದೆ. ಇದರ ಟಾಪ್ ಎಂಡ್ ವೇರಿಯೆಂಟ್ 'ಅಕಾಂಪ್ಲಿಷ್ಡ್ ಪ್ಲಸ್' ಬೆಲೆಯು 23,60,196 ರೂ. ಇದೆ.

ಖರೀದಿಸಬಹುದೇ?: ನೀವು ವಿಶಿಷ್ಟವಾದ ಸ್ಟೈಲಿಂಗ್ ಪ್ಯಾಕೇಜ್ ಹೊಂದಿರುವ ಮತ್ತು ಕಾಂಪ್ಯಾಕ್ಟ್ ಎಸ್‌ಯುವಿಗಳಿಂದ ಎದ್ದು ಕಾಣುವ ಕಾರನ್ನು ಬಯಸಿದರೆ, ಟಾಟಾ ಕರ್ವಿವ್ ಉತ್ತಮ ಆಯ್ಕೆಯಾಗಿದೆ. ಇದರ SUV-ಕೂಪೆ ವಿನ್ಯಾಸವು ಭಾರತೀಯ ಕಾರು ಮಾರುಕಟ್ಟೆಯಲ್ಲಿ ಇತರ ಕಾರುಗಳಿಗೆ ಹೋಲಿಸಿದರೆ ಖಂಡಿತವಾಗಿಯೂ ರಸ್ತೆಗಳಲ್ಲಿ ಎದ್ದು ಕಾಣುವಂತೆ ಮಾಡುತ್ತದೆ.
ಅಲ್ಲದೆ, ಫ್ಲಶ್ ಡೋರ್ ಹ್ಯಾಂಡಲ್‌ಗಳು ಮತ್ತು ಗೆಸ್ಚರ್-ಕಂಟ್ರೋಲ್ ಟೈಲ್‌ಗೇಟ್‌ನಂತಹ ವೈಶಿಷ್ಟ್ಯಗಳೊಂದಿಗೆ ಬರುತ್ತದೆ. ಹೊಸ 1.2-ಲೀಟರ್ ಟರ್ಬೊ-ಪೆಟ್ರೋಲ್ ಎಂಜಿನ್ ಆಯ್ಕೆ ನೀಡಲಾಗಿದ್ದು, ಇದು ನೆಕ್ಸಾನ್‌ನ 1.2-ಲೀಟರ್ ಟರ್ಬೊ-ಪೆಟ್ರೋಲ್ ಎಂಜಿನ್‌ಗಿಂತ ಹೆಚ್ಚು ಪವರ್ ಹೊಂದಿದೆ. ಇದರ ಜೊತೆಗೆ ಇಂಟೀರಿಯರ್‌ನಲ್ಲಿ ಪ್ರೀಮಿಯಂ ಅನುಭವ ನೀಡುವುದರಿಂದ ಬೆಲೆಗೆ ತಕ್ಕ ವಾಹನವಾಗಿದೆ.

ವಿಶೇಷತೆಗಳೇನು: ಟಾಟಾ ಕರ್ವ್ ವೈರ್‌ಲೆಸ್ ಆಪಲ್ ಕಾರ್ಪ್ಲೇ ಮತ್ತು ಆಂಡ್ರಾಯ್ಡ್ ಆಟೋ ಹೊಂದಿರುವ 12.3 ಇಂಚಿನ ಟಚ್ ಸ್ಕ್ರೀನ್ ಸಿಸ್ಟಮ್, 10.25 ಇಂಚಿನ ಡಿಜಿಟಲ್ ಡ್ರೈವರ್ ಡಿಸ್ಪ್ಲೇ ಮತ್ತು ಸಬ್‌ವೂಫರ್ ನೊಂದಿಗೆ 9 ಸ್ಪೀಕರ್ ಹೊಂದಿರುವ ಜೆಬಿಎಲ್ ಸೌಂಡ್ ಸಿಸ್ಟಮ್ ಹೊಂದಿದೆ.
ವೆಂಟಿಲೇಟೆಡ್ ಫ್ರಂಟ್ ಸೀಟ್, 6-ವೇ ಪವರ್ಡ್ ಡ್ರೈವರ್ ಸೀಟ್, ಏರ್ ಪ್ಯೂರಿಫೈಯರ್, ಪನೋರಮಿಕ್ ಸನ್‌ರೂಫ್, ಮಲ್ಟಿ-ಕಲರ್ ಆಂಬಿಯೆಂಟ್ ಲೈಟಿಂಗ್, ವೈರ್‌ಲೆಸ್ ಫೋನ್ ಚಾರ್ಜರ್ ಮತ್ತು ಫ್ಲಶ್ ಟೈಪ್ ಡೋರ್ ಹ್ಯಾಂಡಲ್‌ಗಳನ್ನು ಹೊಂದಿದೆ. ಜೊತೆಗೆ 500 ಲೀಟರ್ ಬೂಟ್ ಸ್ಪೇಸ್ ಮತ್ತು ಬ್ಲೈಂಡ್-ಸ್ಪಾಟ್ ಮಾನಿಟರ್ ಅನ್ನು ಸಹ ಒದಗಿಸಲಾಗಿದೆ.

ಸುರಕ್ಷತೆ: ಆರು ಏರ್‌ಬ್ಯಾಗ್‌ಗಳು, ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಕಂಟ್ರೋಲ್, ರಿಯರ್ ಪಾರ್ಕಿಂಗ್ ಸೆನ್ಸಾರ್, ಐಎಸ್ ಒಫಿಕ್ಸ್ ಚೈಲ್ಡ್ ಸೀಟ್ ಒಳಗೊಂಡಿದೆ. ಟಾಪ್ ವೇರಿಯೆಂಟ್‌ಗಳು ಲೇನ್ ಕೀಪಿಂಗ್ ಅಸಿಸ್ಟ್, ಅಡಾಪ್ಟಿವ್ ಕ್ರೂಸ್ ಕಂಟ್ರೋಲ್, ಬ್ಲೈಂಡ್ ವ್ಯೂ ಮಾನಿಟರಿಂಗ್, ಫ್ರಂಟ್ ಪಾರ್ಕಿಂಗ್ ಸೆನ್ಸಾರ್, ಟೈರ್ ಪ್ರೆಶರ್ ಮಾನಿಟರಿಂಗ್ ಸಿಸ್ಟಮ್ ಸೇರಿದಂತೆ ADAS ಲೆವೆಲ್ -2 ನೊಂದಿಗೆ 360-ಡಿಗ್ರಿ ಕ್ಯಾಮೆರಾವನ್ನು ಹೊಂದಿವೆ.
ಎಲೆಕ್ಟ್ರಿಕ್ ಆಯ್ಕೆ ಕೂಡ ಇದೆ: ನೀವು ಪರಿಸರ ಪ್ರೇಮಿಯಾಗಿದ್ದರೆ ಕರ್ವ್‌ನ ಎಲೆಕ್ಟ್ರಿಕ್ ಆವೃತ್ತಿಯನ್ನು ಖರೀದಿಸಬಹುದು. ಇದರ ಬೆಲೆಗಳು ರೂ 17.49 ಲಕ್ಷದಿಂದ ಪ್ರಾರಂಭವಾಗುತ್ತವೆ (ಎಕ್ಸ್-ಶೋರೂಮ್). Nexon EV ಯಂತೆಯೇ, Curvv EV ಸಹ ಒಮ್ಮೆ ಚಾರ್ಜ್ ಮಾಡಿದರೆ 585 ಕಿ.ಮೀ ವರೆಗೆ ರೇಂಜ್ ನೀಡುತ್ತದೆ.


Click it and Unblock the Notifications