TATA: ಹೊಸ ಟಾಟಾ ಕರ್ವ್ ಬಗ್ಗೆ ನೀವು ತಿಳಿದುಕೊಳ್ಳಬೇಕಾದ ವಿಚಾರಗಳಿವು.. ರೂ.9.99 ಲಕ್ಷ, 5-ಸೀಟರ್!

ಟಾಟಾ ಮೋಟಾರ್ಸ್ (Tata Motors), ಸೋಮವಾರ ಇಂಧನ ಚಾಲಿತ (ಪೆಟ್ರೋಲ್/ಡೀಸೆಲ್) ನೂತನ ಕರ್ವ್ (Curvv) ಕಾರನ್ನು ಬಿಡುಗಡೆ ಮಾಡಿದೆ. ಇದೊಂದು ಕೂಪೆ ಎಸ್‌ಯುವಿಯಾಗಿದ್ದು, 5 ಆಸನಗಳನ್ನು ಹೊಂದಿದೆ. ರೂ.9.99 ರಿಂದ 17.69 ಲಕ್ಷ ಎಕ್ಸ್ ಶೋರೂಂ ಬೆಲೆಯಲ್ಲಿ ಖರೀದಿಗೆ ದೊರೆಯುತ್ತದೆ. ಈ ದರಗಳು ಅಕ್ಟೊಬರ್ 31ರವರೆಗೆ ಅನ್ವಯವಾಗಲಿದ್ದು, ನಿನ್ನೆಯಿಂದ ಬುಕ್ಕಿಂಗ್ ಸಹ ಆರಂಭವಾಗಿದೆ. ಸೆಪ್ಟೆಂಬರ್ 12ರಿಂದ ವಿತರಣೆಗಳು ಶುರುವಾಗಲಿದೆ. ಈ ಕಾರು ಸ್ಮಾರ್ಟ್, ಪ್ಯೂರ್ ಪ್ಲಸ್, ಕ್ರಿಯೇಟಿವ್, ಕ್ರಿಯೇಟಿವ್ ಪ್ಲಸ್ ಎಸ್, ಅಕಾಂಪ್ಲಿಶ್ಡ್ ಎಸ್ ಒಳಗೊಂಡಂತೆ ಹಲವು ರೂಪಾಂತರಗಳನ್ನು (ವೇರಿಯೆಂಟ್) ಒಳಗೊಂಡಿದೆ. ಇಲ್ಲಿ ಪ್ರತಿಯೊಂದು ರೂಪಾಂತರಗಳು ಪಡೆದಿರುವ ವೈಶಿಷ್ಟ್ಯಗಳ ಕುರಿತಂತೆ ಸಂಕ್ಷಿಪ್ತವಾದ ವಿವರಿಸಿದ್ದೇವೆ.

ಟಾಟಾ ಕರ್ವ್ ಸ್ಮಾರ್ಟ್ (Tata Curvv Smart): ಈ ರೂಪಾಂತರವು 6 ಏರ್‌ಬ್ಯಾಗ್‌ಗಳು, ಎಲ್‌ಇಡಿ ಹೆಡ್‌ಲ್ಯಾಂಪ್‌ಗಳು, ಎಲ್‌ಇಡಿ ಡಿಆರ್‌ಎಲ್‌ಗಳು, ಎಲ್‌ಇಡಿ ಟೈಲ್‌ಲ್ಯಾಂಪ್‌ಗಳು, ಫ್ಲಶ್ ಡೋರ್ ಹ್ಯಾಂಡಲ್‌ಗಳು, ಪವರ್ ವಿಂಡೋಸ್, ಇಕೋ, ಸಿಟಿ & ಸ್ಪೋರ್ಟ್ಸ್ ಎಂಬ ಡ್ರೈವಿಂಗ್ ಮೋಡ್‌ಗಳು, 2-ಸ್ಪೋಕ್ ಇಲ್ಯುಮಿನೇಟೆಡ್ ಡಿಜಿಟಲ್ ಸ್ಟೀರಿಂಗ್ ವೀಲ್, ಎಬಿಎಸ್ (ಆಂಟಿಲಾಕ್ ಬ್ರೇಕಿಂಗ್ ಸಿಸ್ಟಮ್) ಹಾಗೂ ಇಬಿಡಿ (ಎಲೆಕ್ಟ್ರಾನಿಕ್ ಬ್ರೇಕ್ ಫೋರ್ಸ್ ಡಿಸ್ಟ್ರಿಬ್ಯೂಷನ್) ಸೇರಿದಂತೆ ಹಲವು ವೈಶಿಷ್ಟ್ಯಗಳನ್ನು ಹೊಂದಿದೆ.

Tata Curvv Car Variants Wise Features Explained

ಟಾಟಾ ಕರ್ವ್ ಪ್ಯೂರ್ ಪ್ಲಸ್ (Tata Curvv Pure+): ಇದು ಕೂಡ ಅತ್ಯುತ್ತಮವಾಗಿರುವ ರೂಪಾಂತರವಾಗಿದೆ. 7-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್, ಆಂಡ್ರಾಯ್ಡ್ ಆಟೋ, ಆಪಲ್ ಕಾರ್ ಪ್ಲೇ, ಕ್ರೂಸ್ ಕಂಟ್ರೋಲ್, ಅಟೋಮೆಟಿಕ್ ಟೆಂಪರೇಚರ್ ಕಂಟ್ರೋಲ್, 4 ಸ್ಪೀಕರ್‌ಗಳು, ಸ್ಟೀರಿಂಗ್ ಮೌಂಟೆಡ್ ಕಂಟ್ರೋಲ್ಸ್, ಬ್ಲೂಟೂತ್ ಕನೆಕ್ಟಿವಿಟಿ, 4-ಸ್ಪೋಕ್ ಇಲ್ಯುಮಿನೇಟೆಡ್ ಡಿಜಿಟಲ್ ಸ್ಟೀರಿಂಗ್ ವೀಲ್, ಟಿಪಿಎಂಎಸ್ (ಟೈರ್ ಪ್ರೆಶರ್ ಮಾನಿಟರಿಂಗ್ ಸಿಸ್ಟಮ್) ಒಳಗೊಂಡಂತೆ ವಿವಿಧ ವೈಶಿಷ್ಟ್ಯಗಳನ್ನು ಪಡೆದಿದೆ.

ಟಾಟಾ ಕರ್ವ್ ಪ್ಯೂರ್ ಪ್ಲಸ್ ಎಸ್ (Tata Curvv Pure+ S): ಈ ರೂಪಾಂತರವು ಬಹುತೇಕ 'ಪ್ಯೂರ್ ಪ್ಲಸ್‌'ನಂತೆಯೇ ಎಲ್ಲ ವೈಶಿಷ್ಟ್ಯಗಳನ್ನು ಒಳಗೊಂಡಿದೆ. ಹೆಚ್ಚುವರಿಯಾಗಿ ವಾಯ್ಸ್ ಅಸಿಸ್ಟೆಡ್ ಪನೋರಮಿಕ್ ಸನ್‌ರೂಫ್, ರೈನ್ ಸೆನ್ಸಿಂಗ್ ವೈಪರ್ಸ್, ಆಟೋ ಹೆಡ್‌ಲ್ಯಾಂಪ್‌ಗಳು, ಆರ್17 ವೀಲ್‌ಗಳು ಮತ್ತು ಹೈಪರ್ ಸ್ಟೈಲ್ ವೀಲ್‌ಗಳನ್ನು ಹೊಂದಿದೆ.

ಟಾಟಾ ಕರ್ವ್ ಕ್ರಿಯೇಟಿವ್ (Tata Curvv Creative): ಇದು 10.25-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್, 8 ಸ್ಪೀಕರ್‌ಗಳು, ಅಟೋಮೆಟಿಕ್ ಟೆಂಪರೇಚರ್ ಕಂಟ್ರೋಲ್, ಆಂಡ್ರಾಯ್ಡ್ ಆಟೋ, ಆಪಲ್ ಕಾರ್ ಪ್ಲೇ, ರೇರ್ ಡಿಫಾಗರ್, ಸ್ಮಾರ್ಟ್ ಕೀ & ಪುಶ್ ಬಟನ್ ಸ್ಟಾರ್ಟ್, ಕೂಲ್ಡ್ ಗ್ಲೋವ್ ಬಾಕ್ಸ್, ವೈ-ಫೈ ಕನೆಕ್ಟಿವಿಟಿ ಸೇರಿದಂತೆ ವಿವಿಧ ವೈಶಿಷ್ಟ್ಯಗಳನ್ನು ಒಳಗೊಂಡಿದೆ

ಟಾಟಾ ಕರ್ವ್ ಕ್ರಿಯೇಟಿವ್ ಎಸ್ (Tata Curvv Creative S): ಈ ರೂಪಾಂತರವು 'ಕ್ರಿಯೇಟಿವ್'ನಂತೆಯೇ ಬಹುತೇಕ ಎಲ್ಲ ವೈಶಿಷ್ಟ್ಯಗಳನ್ನು (ಫೀಚರ್) ಪಡೆದಿದೆ. ಆದಾಗ್ಯೂ ವಾಯ್ಸ್ ಅಸಿಸ್ಟೆಡ್ ಪನೋರಮಿಕ್ ಸನ್‌ರೂಫ್, ರೈನ್ ಸೆನ್ಸಿಂಗ್ ವೈಪರ್ಸ್, ಆಟೋ ಹೆಡ್‌ಲ್ಯಾಂಪ್‌ಗಳು ಒಳಗೊಂಡಂತೆ ಹಲವು ಹೆಚ್ಚುವರಿ ವೈಶಿಷ್ಟ್ಯಗಳನ್ನು ಹೊಂದಿದೆ.

ಟಾಟಾ ಕರ್ವ್ ಕ್ರಿಯೇಟಿವ್ ಪ್ಲಸ್ ಎಸ್ (Tata Curvv Creative+ S): ಇದು ಸಹ ಅತ್ಯಾಧುನಿಕವಾಗಿರುವ ರೂಪಾಂತರವಾಗಿದೆ. ಕನೆಕ್ಟೆಡ್ ಎಲ್ಇಡಿ ಟೈಲ್ ಟೈಲ್‌ಲ್ಯಾಂಪ್‌, ಎಲ್ಇಡಿ ಫಾಗ್ ಲ್ಯಾಂಪ್‌ಗಳು, ಹಿಲ್ ಡಿಸೆಂಟ್ ಕಂಟ್ರೋಲ್, ಟಿಪಿಎಂಎಸ್ (ಟೈರ್ ಪ್ರೆಶರ್ ಮಾನಿಟರಿಂಗ್ ಸಿಸ್ಟಮ್) 10.25-ಇಂಚಿನ ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್, ಇಂಟೀರಿಯರ್ ಬೂಟ್ ಲ್ಯಾಂಪ್, ಡುಯಲ್ ಟೋನ್ ರೂಫ್ ಸೇರಿದಂತೆ ಹತ್ತಾರು ವೈಶಿಷ್ಟ್ಯಗಳನ್ನು ಪಡೆದಿದೆ.

ಟಾಟಾ ಕರ್ವ್ ಅಕಾಂಪ್ಲಿಶ್ಡ್ ಎಸ್ (Tata Curvv Accomplished S): ಈ ರೂಪಾಂತರವು ವೆಂಟಿಲೇಟೆಡ್ ಫ್ರಂಟ್ ಸೀಟ್‌ಗಳು, ವಾಯ್ಸ್ ಅಸಿಸ್ಟೆಡ್ ಪನೋರಮಿಕ್ ಸನ್‌ರೂಫ್, 9 ಸ್ಪೀಕರ್‌ಗಳು, ಜೆಬಿಎಲ್ ಬ್ರಾಂಡೆಡ್ ಸೌಂಡ್ ಸಿಸ್ಟಮ್, ರೇರ್ ಡಿಸ್ಕ್ ಬ್ರೇಕ್‍‍ಗಳು, ಏರ್ ಪ್ಯೂರಿಫೈಯರ್, ವೈರ್‌ಲೆಸ್ ಸ್ಮಾರ್ಟ್‌ಫೋನ್ ಚಾರ್ಜರ್ ಒಳಗೊಂಡಂತೆ ವಿವಿಧ ವೈಶಿಷ್ಟ್ಯಗಳನ್ನು ಹೊಂದಿದೆ.

ಟಾಟಾ ಕರ್ವ್ ಅಕಾಂಪ್ಲಿಶ್ಡ್ ಪ್ಲಸ್ ಎ (Tata Curvv Accomplished+ A): ಇದು 12.31-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್, ಎಲ್ಇಡಿ ಡಿಆರ್‌ಎಲ್‌ಗಳು, ಟೈಲ್‌ಲ್ಯಾಂಪ್‌, ಅಲೆಕ್ಸಾ ವಾಯ್ಸ್ ಕಮಾಂಡ್‌ಗಳು, ಎಕ್ಸ್‌ಪ್ರೆಸ್‌ ಕೂಲಿಂಗ್, ಲೆವೆಲ್-2 ಎಡಿಎಎಸ್ (ಅಡ್ವಾನ್ಸ್ಡ್ ಡ್ರೈವರ್ ಅಸಿಸ್ಟೆನ್ಸ್ ಸಿಸ್ಟಮ್) ಸೇರಿದಂತೆ ವಿವಿಧ ವೈಶಿಷ್ಟ್ಯಗಳನ್ನು ಒಳಗೊಂಡಿದೆ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

Article Published On: Tuesday, September 3, 2024, 10:17 [IST]
English summary
Tata curvv car variants wise features explained
Read more on tata motors india
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+