ಬಹುನಿರೀಕ್ಷಿತ ಆಗಸ್ಟ್ ಬಂದೇಬಿಟ್ಟಿದೆ... 5 ಹೊಸ ಎಸ್‌ಯುವಿಗಳು ಇದೇ ತಿಂಗಳು ಬಿಡುಗಡೆಗೆ!
ಪ್ರತಿ ವರ್ಷ ಹಬ್ಬದ ಸೀಸನ್ ಬಂತೆಂದರೆ ಸಾಕು ಎಲ್ಲರ ಕಣ್ಣು ಆಟೋ ಉದ್ಯಮದ ಮೇಲಿರುತ್ತದೆ. ಹೊಸ ಕಾರುಗಳ ಬಿಡುಗಡೆಗಳು ಹಾಗೂ ಫೆಸ್‌ಲಿಫ್ಟ್ ಮಾದರಿಗಳೊಂದಿಗೆ ನವೀಕರಣಗೊಂಡ ಕಾರುಗಳ ಬಿಡುಗಡೆಗಳು ಹೆಚ್ಚಾಗಿರುತ್ತವೆ. ಈ ವರ್ಷ ಕೂಡ ಅದೇ ಮುಂದುವರಿಯಲಿದ್ದು, ಟಾಟಾ ಮೋಟಾರ್ಸ್, ಮಹೀಂದ್ರಾ, ಸಿಟ್ರನ್ ಮತ್ತು ಲ್ಯಾಂಬೊರ್ಗಿನಿಯಂತಹ ಕಾರು ತಯಾರಕರು ಈ ಹಬ್ಬದ ಸೀಸನ್‌ನಲ್ಲಿ ವಿವಿಧ ವಿಭಾಗಗಳಲ್ಲಿ ಹೊಸ ಎಸ್‌ಯುವಿಗಳನ್ನು ಬಿಡುಗಡೆ ಮಾಡಲು ಸಜ್ಜಾಗಿದ್ದಾರೆ. ಹಾಗಾದ್ರೆ ಬನ್ನಿ ಈ ಬ್ರಾಂಡ್‌ಗಳಿಂದ ಯಾವೆಲ್ಲಾ ಹೊಸ ಕಾರುಗಳು ಎಂಟ್ರಿಕೊಡುತ್ತಿವೆ ಎಂಬುದನ್ನು ತಿಳಿಯೋಣ.
1. ಮಹೀಂದ್ರಾ ಥಾರ್ ರಾಕ್ಸ್: ಮಹೀಂದ್ರಾ ಕಂಪನಿಯು ತನ್ನ ಬಹುನಿರೀಕ್ಷಿತ 5-ಡೋರ್ ಥಾರ್ ರೋಕ್ಸ್ ಅನ್ನು ಇದೇ ಆಗಸ್ಟ್ 15 ರಂದು ಪರಿಚಯಿಸಲಿದೆ. ಇದು ಸುಧಾರಿತ ವೈಶಿಷ್ಟ್ಯಗಳಿಂದ ಕೂಡಿದ ಕ್ಯಾಬಿನ್ ಮತ್ತು 3-ಡೋರ್ ಮಾದರಿಗೆ ಹೋಲಿಸಿದರೆ ಗಮನಾರ್ಹ ಕಾಸ್ಮೆಟಿಕ್ ಅಪ್‌ಡೇಟ್‌ಗಳನ್ನು ಒಳಗೊಂಡಿದೆ.

ಈ ಹೊಸ ಆಫ್-ರೋಡ್ ಎಸ್‌ಯುವಿ ತನ್ನ ಹಳೆಯ ಮಾದರಿಗಿಂತ ಉದ್ದವಾಗಿರಲಿದೆ. ಹಾಗೆಯೇ ಹೆಚ್ಚು ವಿಶಾಲವಾದ ಒಳಾಂಗಣವನ್ನು ಹೊಂದಿರಲಿದೆ. ಇದು 1.5 ಲೀಟರ್ ಡೀಸೆಲ್, 2.2 ಲೀಟರ್ ಡೀಸೆಲ್ ಮತ್ತು 2.0 ಲೀಟರ್ ಪೆಟ್ರೋಲ್ ಒಳಗೊಂಡಂತೆ ಮೂರು ಎಂಜಿನ್ ಆಯ್ಕೆಗಳೊಂದಿಗೆ ಲಭ್ಯವಿರುತ್ತದೆ. ಮ್ಯಾನುವಲ್ ಮತ್ತು ಆಟೋಮ್ಯಾಟಿಕ್ ಟ್ರಾನ್ಸ್ಮಿಷನ್ ಆಯ್ಕೆಗಳು ಇರಲಿವೆ.
2. ಲ್ಯಾಂಬೊರ್ಗಿನಿ ಉರುಸ್ ಎಸ್ಇ: ಲ್ಯಾಂಬೊರ್ಗಿನಿ ಕಂಪನಿಯು ಉರುಸ್ ಎಸ್‌ಇ ಪಿಎಚ್‌ಇವಿ ಕಾರನ್ನು ಆಗಸ್ಟ್ 9ರಂದು ದೇಶಿಯ ಮಾರುಕಟ್ಟೆಯಲ್ಲಿ ಬಿಡುಗಡೆಯಾಗಲಿದೆ. ಇದರ 4.0 ಲೀಟರಿನ ಟ್ವಿನ್ ಟರ್ಬೋಚಾರ್ಜ್ಡ್ ವಿ8 ಎಂಜಿನ್ 789 ಬಿಹೆಚ್‌ಪಿ ಪವರ್ ಹಾಗೂ 950 ಎನ್‌ಎಂ ಟಾರ್ಕ್ ಉತ್ಪಾದಿಸುತ್ತದೆ. ಕೇವಲ 3.4 ಸೆಕೆಂಡುಗಳಲ್ಲಿ 100 ಕಿ.ಮೀ ವೇಗ ತಲುಪುವ ಸಾಮರ್ಥ್ಯವಿದೆ.

3. ಟಾಟಾ ಕರ್ವ್ ಇವಿ ಮತ್ತು ಐಸಿಇ: ಮೊದಲ ಬಾರಿಗೆ ಭಾರತದಲ್ಲಿ ಟಾಟಾ ಮೋಟಾರ್ಸ್ 'ಕರ್ವ್' ಎಸ್‌ಯುವಿ ಕೂಪೆ ಕಾರನ್ನು ಪರಿಚಯಿಸಲಿದೆ, ಇದು ಮೊದಲು ಎಲೆಕ್ಟ್ರಿಕ್ ಆವೃತ್ತಿಯಲ್ಲಿ ಬಿಡುಗಡೆಯಾಗಲಿದೆ. ಇದನ್ನು ಆಗಸ್ಟ್ 7 ರಂದು ಪರಿಚಯಿಸಲಿದ್ದಾರೆ, ಇದರ ಆರಂಭಿಕ ಬೆಲೆಯು ಭಾರತದ ಎಕ್ಸ್ ಶೋರೂಂ ದರದಂತೆ ರೂ.17 ಲಕ್ಷಗಳಾಗಿರಬಹುದು ಎಂದು ನಿರೀಕ್ಷಿಸಲಾಗಿದೆ.
ಟಾಟಾ ಕರ್ವ್ ಎಲೆಕ್ಟ್ರಿಕ್ ಕಾರಿನ ಟಾಪ್-ಸ್ಪೆಕ್ ರೂಪಾಂತರಗಳು 600 ಕಿ.ಮೀ ರೇಂಜ್ ನೀಡುವ ಸಾಧ್ಯತೆಯಿದೆ. ಈ ಕಾರು ಆಧುನಿಕ ತಂತ್ರಜ್ಞಾನ ಮತ್ತು ಪ್ರೀಮಿಯಂ ವೈಶಿಷ್ಟ್ಯಗಳಿಂದ ತುಂಬಿರುತ್ತದೆ. ನಂತರ, ಕರ್ವ್ ಇಂಧನ ಚಾಲಿತ ಕಾರು ಕೂಡ ಶೀಘ್ರದಲ್ಲೇ ಶೋರೂಂಗಳಿಗೆ ಬರುವ ನಿರೀಕ್ಷೆಯಿದೆ. ಇದರಲ್ಲಿ 1.2 ಲೀಟರ್ ಪೆಟ್ರೋಲ್ ಮತ್ತು 1.5 ಲೀಟರ್ ಡೀಸೆಲ್ ಎಂಜಿನ್ ಆಯ್ಕೆಗಳಿರವೆ.

4. ಸಿಟ್ರನ್ ಬಸಾಲ್ಟ್: ಟಾಟಾ ಕರ್ವ್‌ಗೆ ನೇರ ಪ್ರತಿಸ್ಪರ್ಧಿಯಾಗಿರುವ ಸಿಟ್ರನ್ ಬಸಾಲ್ಟ್ ಎಸ್‌ಯುವಿ ಕೂಪೆಯನ್ನು ಕೂಡ ಇದೇ ಆಗಸ್ಟ್‌ನಲ್ಲಿ ಬಿಡುಗಡೆ ಮಾಡಲು ಕಂಪನಿ ತಯಾರಿ ನಡೆಸುತ್ತಿದೆ. ಇದು 1.2 ಲೀಟರ್ 3 ಸಿಲಿಂಡರ್ ಪೆಟ್ರೋಲ್ ಮತ್ತು ಟರ್ಬೊ ಪೆಟ್ರೋಲ್ ಎಂಜಿನ್‌ನೊಂದಿಗೆ ಪಾದಾರ್ಪಣೆ ಮಾಡಲಿದೆ. ಇದರಲ್ಲಿ ಮ್ಯಾನುವಲ್ ಮತ್ತು ಆಟೋಮ್ಯಾಟಿಕ್ ಟ್ರಾನ್ಸ್ ಮಿಷನ್ ಆಯ್ಕೆಗಳಿರಲಿವೆ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊ ಗಳನ್ನು ಪಡೆಯಲು ನಮ್ಮ ಫೇಸ್ ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications