ರತನ್ ಟಾಟಾ ಕಂಪನಿಯ ಪವರ್: ಮತ್ತೊಂದು ಕಾರಿಗೆ 5-ಸ್ಟಾರ್ ಸುರಕ್ಷತಾ ರೇಟಿಂಗ್... ಪಕ್ಕಾ ಕಲ್ಲುಬಂಡೆ!
ಜನಪ್ರಿಯ ಸ್ವದೇಶಿ ವಾಹನ ತಯಾರಕ ಕಂಪನಿಯಾದ ಟಾಟಾ ಮೋಟಾರ್ಸ್ (Tata Motors) ಹೊಚ್ಚ ಹೊಸ ಕರ್ವ್ ಎಲೆಕ್ಟ್ರಿಕ್ ಕೂಪೆ ಎಸ್‌ಯುವಿಯನ್ನು ದೇಶೀಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿ ವಾರಗಳ ನಂತರ ಟಾಟಾ ಕರ್ವ್ ICE (Tata Curvv ICE) ಕೂಪೆ ಎಸ್‌ಯುವಿಯನ್ನು ಬಿಡುಗಡೆಗೊಳಿಸಿತು. ಈ ಹೊಸ ಟಾಟಾ ಕರ್ವ್ ಎಸ್‍ಯುವಿಯು ಭಾರತ್ ನ್ಯೂ ಕಾರ್ ಅಸೆಸ್‌ಮೆಂಟ್ ಪ್ರೋಗ್ರಾಂ (ಭಾರತ್ NCAP) ಅಡಿಯಲ್ಲಿ ಕ್ರ್ತಾಶ್ ಟೆಸ್ಟ್‌ಗೆ ಒಳಪಡಿಸಿದೆ. ಟಾಟಾ ಮೋಟಾರ್ಸ್ ಸುರಕ್ಷತೆಗೆ ಹೆಸರುವಾಗಿರುವ ಬ್ರ್ಯಾಂಡ್. ಇದಕ್ಕೆ ತಕ್ಕಂತೆ ಈ ಹೊಸ ಟಾಟಾ ಕರ್ವ್ ಕಾರು ಕೂಡ 5-ಸ್ಟಾರ್ ಸುರಕ್ಷತಾ ರೇಟಿಂಗ್‌ಗಳನ್ನು ಪಡೆದುಕೊಂಡಿವೆ.
ಟಾಟಾ ಕರ್ವ್ ICE ಕೂಪೆ ಎಸ್‌ಯುವಿಯು ಭಾರತ್ ನ್ಯೂ ಕಾರ್ ಅಸೆಸ್‌ಮೆಂಟ್ ಪ್ರೋಗ್ರಾಂ (ಭಾರತ್ NCAP) ಅಡಿಯಲ್ಲಿ ಕ್ರ್ತಾಶ್ ಟೆಸ್ಟ್ ನಲ್ಲಿ 5-ಸ್ಟಾರ್ ಸುರಕ್ಷತಾ ರೇಟಿಂಗ್ ಪಡೆದುಕೊಂಡಿವೆ. ಈ ಕ್ರ್ತಾಶ್ ಟೆಸ್ಟ್ ನಲ್ಲಿ ವಯಸ್ಕರ ರಕ್ಷಣೆಯಲ್ಲಿ 32 ರಲ್ಲಿ 29.5 ಮತ್ತು ಮಕ್ಕಳ ರಕ್ಷಣೆಯಲ್ಲಿ 49 ರಲ್ಲಿ 43.66 ಅಂಕಗಳನ್ನು ಗಳಿಸಿದೆ.

ಇನ್ನು ಟಾಟಾ ಕರ್ವ್ ಎಲೆಕ್ಟ್ರಿಕ್ ಕೂಪೆ ಎಸ್‌ಯುವಿಯ ವಯಸ್ಕರ ರಕ್ಷಣೆಯಲ್ಲಿ 32 ರಲ್ಲಿ 30.81 ಮತ್ತು ಮಕ್ಕಳ ರಕ್ಷಣೆಯಲ್ಲಿ 49 ರಲ್ಲಿ 44.83 ಅಂಕಗಳನ್ನು ಗಳಿಸಿದೆ. ಭಾರತ್ ನ್ಯೂ ಕಾರ್ ಅಸೆಸ್‌ಮೆಂಟ್ ಪ್ರೋಗ್ರಾಂ ಪ್ರಕಾರ, ಟಾಟಾ ಕರ್ವ್ ಫ್ರಂಟಲ್ ಆಫ್‌ಸೆಟ್ ಡಿಫಾರ್ಮಬಲ್ ಬ್ಯಾರಿಯರ್ ಟೆಸ್ಟ್‌ನಲ್ಲಿ 16.00 ರಲ್ಲಿ 14.65 ಮತ್ತು ಸೈಡ್ ಮೂವಬಲ್ ಡಿಫಾರ್ಮಬಲ್ ಬ್ಯಾರಿಯರ್ ಟೆಸ್ಟ್‌ನಲ್ಲಿ 16.00 ರಲ್ಲಿ 14.85 ಸ್ಕೋರ್ ಮಾಡಿದೆ.
ಅಪಘಾತದ ಸಮಯದಲ್ಲಿ ಮುಂಭಾಗದ ಪ್ರಯಾಣಿಕರು ಹೆಚ್ಚಾಗಿ ಸುರಕ್ಷಿತವಾಗಿದ್ದರೆ, ಚಾಲಕನ ಬಲಗಾಲು ಕನಿಷ್ಠ ರಕ್ಷಣೆಯನ್ನು ಪಡೆದುಕೊಂಡಿದೆ ಎಂದು ಟೆಸ್ಟ್ ರಿಸಲ್ಟ್ ನಿಂದ ತಿಳಿಯುತ್ತದೆ. ಮಕ್ಕಳ ರಕ್ಷಣೆಯಲ್ಲಿ ಟಾಟಾ ಕರ್ವ್ ಎಸ್‍ಯುವಿಯು 13 ರಲ್ಲಿ 9 ಅಂಕಗಳನ್ನು ಗಳಿಸಿದೆ ಎಂದು ತಿಳಿದುಬಂದಿದೆ. ಇದು ಡೈನಾಮಿಕ್ ಸ್ಕೋರ್‌ನಲ್ಲಿ 24 ರಲ್ಲಿ 22.66 ಮತ್ತು CRS ಇನ್‌ಸ್ಟಾಲೇಶನ್ ಸ್ಕೋರ್‌ನಲ್ಲಿ 12 ರಲ್ಲಿ 12 ಅನ್ನು ಪಡೆದುಕೊಂಡಿದೆ.

ಇನ್ನು ಟಾಟಾ ಕರ್ವ್ ಎಲೆಕ್ಟ್ರಿಕ್ ಕೂಪೆ ಎಸ್‌ಯುವಿ ಫ್ರಂಟಲ್ ಆಫ್‌ಸೆಟ್ ಡಿಫಾರ್ಮಬಲ್ ಬ್ಯಾರಿಯರ್ ಟೆಸ್ಟ್‌ನಲ್ಲಿ 16.00 ರಲ್ಲಿ 15.66 ಮತ್ತು ಸೈಡ್ ಮೂವಬಲ್ ಡಿಫಾರ್ಮಬಲ್ ಬ್ಯಾರಿಯರ್ ಟೆಸ್ಟ್‌ನಲ್ಲಿ 16.00 ರಲ್ಲಿ 15.15 ಅಂಕ ಗಳಿದೆ. ಇನ್ನು ಈ ಜನಪ್ರಿಯ ಎಸ್‍ಯುವಿ ಐಸಿಯು ಮಾದರಿಗಿಂತ ಮುಂಭಾಗದ ಪ್ರಯಾಣಿಕರು ಅಪಘಾತದ ಸಂದರ್ಭದಲ್ಲಿ ಉತ್ತಮ ರಕ್ಷಣೆಯನ್ನು ಪಡೆಯುತ್ತದೆ.
ಟಾಟಾ ಕರ್ವ್ ಎಲೆಕ್ಟ್ರಿಕ್ ಎಸ್‍ಯುವಿ ಫ್ರಂಟಲ್ ಆಫ್‌ಸೆಟ್ ಡಿಫಾರ್ಮಬಲ್ ಬ್ಯಾರಿಯರ್ ಟೆಸ್ಟ್‌ನಲ್ಲಿ 16.00 ರಲ್ಲಿ 15.66 ಮತ್ತು ಸೈಡ್ ಮೂವಬಲ್ ಡಿಫಾರ್ಮಬಲ್ ಬ್ಯಾರಿಯರ್ ಟೆಸ್ಟ್‌ನಲ್ಲಿ 16.00 ರಲ್ಲಿ 15.15 ಅನ್ನು ಪಡೆದುಕೊಂಡಿದೆ. ಇನ್ನು ಮಕ್ಕಳ ರಕ್ಷಣೆಗೆ ಸಂಬಂಧಿಸಿದಂತೆ, ಕರ್ವ್ ಇವಿ ಡೈನಾಮಿಕ್ ಸ್ಕೋರ್‌ನಲ್ಲಿ 24 ರಲ್ಲಿ 23.88 ಮತ್ತು CRS ಇನ್‌ಸ್ಟಾಲೇಶನ್ ಸ್ಕೋರ್‌ನಲ್ಲಿ 12 ರಲ್ಲಿ 12 ಅಂಕಗಳನ್ನು ಪಡೆದುಕೊಂಡಿದೆ.

ಟಾಟಾ ಕರ್ವ್ (Tata Curvv) ಎಸ್‍ಯುವಿಯಲ್ಲಿ ಎಲೆಕ್ಟ್ರಾನಿಕ್ ಸ್ಟೇಬಿಲಿಟಿ ಕಂಟ್ರೋಲ್ ಮತ್ತು TPMS ಜೊತೆಗೆ ಆರು ಏರ್‌ಬ್ಯಾಗ್‌ಗಳನ್ನು ಸ್ತ್ಯಾಂಡರ್ಡ್ ಆಗಿ ನೀಡಲಾಗಿದೆ. ಇನ್ನು ಈ ಕರ್ವ್ ಎಸ್‍ಯುವಿಯ ಟಾಪ್ ಎಂಡ್ ರೂಪಾಂತರಗಳಲ್ಲಿ 360-ಡಿಗ್ರಿ ಕ್ಯಾಮೆರಾ, ಲೆವೆಲ್ 2 ಎಡಿಎಎಸ್, ಎಲ್ಲಾ ಡಿಸ್ಕ್ ಬ್ರೇಕ್‌ಗಳು ಮತ್ತು ಆಟೋ ಹೋಲ್ಡ್‌ನೊಂದಿಗೆ ಎಲೆಕ್ಟ್ರಾನಿಕ್ ಪಾರ್ಕಿಂಗ್ ಬ್ರೇಕ್ ಅನ್ನು ಸಹ ಪಡೆಯುತ್ತವೆ.
ಟಾಟಾ ಕರ್ವ್ ಎಲೆಕ್ಟ್ರಿಕ್ ಎಸ್‍ಯುವಿಯಲ್ಲಿ ಆರು ಏರ್‌ಬ್ಯಾಗ್‌ಗಳು, ಆಟೋ ಹೋಲ್ಡ್ ಫಂಕ್ಷನ್‌ನೊಂದಿಗೆ ಎಲೆಕ್ಟ್ರಾನಿಕ್ ಪಾರ್ಕಿಂಗ್ ಬ್ರೇಕ್, ಹಿಲ್-ಸ್ಟಾರ್ಟ್ ಮತ್ತು ಡಿಸೆಂಟ್ ಅಸಿಸ್ಟ್, ESP, ಡ್ರೈವರ್ ಡ್ರೆಸಿನೆಸ್ ಅಲರ್ಟ್ ಸಿಸ್ಟಮ್, ಬ್ಲೈಂಡ್ ಸ್ಪಾಟ್ ಮಾನಿಟರ್ ಮತ್ತು ಲೆವೆಲ್ 2 ADAS ನಂತಹ ಅತ್ಯಾಧುನಿಕ ಫೀಚರ್ಸ್ ಗಳನ್ನು ಪಡೆಯುತ್ತದೆ.


Click it and Unblock the Notifications