Tata: ಬಹುನೀರಿಕ್ಷಿತ ಟಾಟಾ ಕರ್ವ್ ಎಲೆಕ್ಟ್ರಿಕ್ ಕಾರಿನ ಪ್ರಮುಖ ವಿವರಗಳು ಸೋರಿಕೆ.. ದುಡ್ಡು ಕೂಡಿಡಿ!

ಭಾರತದ ಜನಪ್ರಿಯ ವಾಹನ ತಯಾರಕ ಸಂಸ್ಥೆಯಾಗಿ ಟಾಟಾ ಮೋಟಾರ್ಸ್ (Tata Motors) ಮನೆ ಮಾತಾಗಿದೆ. ದೇಶೀಯ ಮಾರುಕಟ್ಟೆಯಲ್ಲಿ ಟಿಯಾಗೊ, ಟಿಗೊರ್, ಆಲ್ಟ್ರೋಜ್, ಪಂಚ್, ನೆಕ್ಸಾನ್, ಹ್ಯಾರಿಯರ್, ಸಫಾರಿ ಸೇರಿದಂತೆ ಹಲವು ಕಾರುಗಳನ್ನು ಮಾರಾಟ ಮಾಡುತ್ತಿದೆ. 2024ರ ಹಣಕಾಸು ವರ್ಷದಲ್ಲಿ ಕಂಪನಿಯು ಶೇಕಡ 13.63% ಪಾಲನ್ನು ಹೊಂದಿದ್ದು, ಪ್ರಮುಖ 10 ಕಾರು ಉತ್ಪಾದನಾ ಸಂಸ್ಥೆಗಳ ಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿದೆ. ಇತ್ತೀಚೆಗೆ ಕರ್ವ್ (Curvv) ಕೂಪೆ ಎಸ್‌ಯುವಿಯನ್ನು ಅನಾವರಣಗೊಳಿಸಿತ್ತು. ಈ ನೂತನ ಕಾರನ್ನು ಅಧಿಕೃತವಾಗಿ ಆಗಸ್ಟ್ 7ರಂದು ಬಿಡುಗಡೆ ಮಾಡಲಿದೆ.

ಮೊದಲಿಗೆ ಹೊಚ್ಚ ಹೊಸ ಟಾಟಾ ಕರ್ವ್ ಎಸ್‌ಯುವಿ ಎಲೆಕ್ಟ್ರಿಕ್ ರೂಪದಲ್ಲಿ ಬಿಡುಗಡೆಯಾಗಲಿದೆ. ಆ ಬಳಿಕ, ಇಂಧನ ಚಾಲಿತ (ಪೆಟ್ರೋಲ್/ ಡೀಸೆಲ್) ಆಯ್ಕೆಯಲ್ಲಿ ಬರಲಿದೆ. ಸದ್ಯ, ನೂತನ ಕರ್ವ್ ಇವಿಯ (ಎಲೆಕ್ಟ್ರಿಕ್ ಕಾರು) ಬ್ಯಾಟರಿ ಪ್ಯಾಕ್ ಹಾಗೂ ರೇಂಜ್ ಕುರಿತ ಒಂದಷ್ಟು ವಿವರಗಳು ಸೋರಿಕೆಯಾಗಿವೆ. ಮೂಲಗಳ ಪ್ರಕಾರ, ಈ ಕಾರು ಎರಡು ವಿವಿಧ ಬ್ಯಾಟರಿ ಪ್ಯಾಕ್ ಆಯ್ಕೆಯಲ್ಲಿ ಖರೀದಿಗೆ ದೊರೆಯಬಹುದು ಎನ್ನಲಾಗಿದೆ.

Tata Curvv Electric Car Battery Pack And Range Details Leaked

ಟಾಟಾ ಕರ್ವ್ ಎಲೆಕ್ಟ್ರಿಕ್ ಕಾರಿನ ಗರಿಷ್ಠ ಶ್ರೇಣಿ ರೂಪಾಂತರ 55 ಕೆಡಬ್ಲ್ಯೂಹೆಚ್ ಬ್ಯಾಟರಿ ಪ್ಯಾಕ್ ಹಾಗೂ ಸಿಂಗಲ್ ಎಲೆಕ್ಟ್ರಿಕ್ ಮೋಟಾರ್ ಪಡೆದಿರಲಿದೆ. ಸಂಪೂರ್ಣ ಚಾರ್ಜ್‌ನಲ್ಲಿ 600 ಕಿಲೋಮೀಟರ್ ರೇಂಜ್ (ಮೈಲೇಜ್) ನೀಡಲಿದೆ. ಡಿಸಿ ಫಾಸ್ಟ್ ಚಾರ್ಜ್‌ನಲ್ಲಿ 100 ಕಿಲೋಮೀಟರ್ ಕ್ರಮಿಸುವಷ್ಟು ಚಾರ್ಜ್ ಆಗಲು ಕೇವಲ 10 ನಿಮಿಷ ತೆಗೆದುಕೊಳ್ಳಲಿದೆ ಎಂದು ಹೇಳಲಾಗಿದೆ. ಆದಾಗ್ಯೂ ಆರಂಭಿಕ ಶ್ರೇಣಿ ಮಾದರಿಯ ಬಗ್ಗೆ ಯಾವುದೇ ಮಾಹಿತಿ ಲಭ್ಯವಾಗಿಲ್ಲ.

ಈ ಟಾಟಾ ಕರ್ವ್ ಇವಿ (Tata Curvv EV) ನೋಡುಗರನ್ನು ಸೆಳೆಯುವ ಅತ್ಯಾಧುನಿಕ ವಿನ್ಯಾಸ (ಡಿಸೈನ್) ಹೊಂದಿರಲಿದೆ. ಕೂಪೆ ಎಸ್‌ಯುವಿಯಾಗಿರುವುದರಿಂದ ಇಳಿಜಾರಾದ ರೂಫ್, ದೊಡ್ಡದಾದ ವೀಲ್‌ಗಳು, ಹೆಚ್ಚಿನ ಗ್ರೌಂಡ್ ಕ್ಲಿಯರೆನ್ಸ್, ಎಲ್ಇಡಿ ಹೆಡ್‌ಲ್ಯಾಂಪ್‌ಗಳು ಹಾಗೂ ಫ್ಲಶ್ ಫಿಟ್ಟಿಂಗ್ ಡೋರ್ ಹ್ಯಾಂಡಲ್‌ಗಳನ್ನು ಒಳಗೊಂಡಿರಲಿದೆ ಎಂದು ಹೇಳಲಾಗಿದೆ.

Tata Curvv Electric Car Battery Pack And Range Details Leaked

ಟಾಟಾ ಕರ್ವ್ ಎಲೆಕ್ಟ್ರಿಕ್ ಕಾರು ಅತ್ಯಾಧುನಿಕ ವೈಶಿಷ್ಟ್ಯಗಳನ್ನು ಹೊಂದಿರುವ ನಿರೀಕ್ಷೆಯಿದೆ. 12.3-ಇಂಚಿನ ಟಚ್‌ಸ್ಕ್ರೀನ್, ಆಂಡ್ರಾಯ್ಡ್ ಆಟೋ, ಆಪಲ್ ಕಾರ್ ಪ್ಲೇ, 10.25-ಇಂಚಿನ ಡಿಜಿಟಲ್ ಡ್ರೈವರ್ಸ್ ಡಿಸ್ಪ್ಲೇ, ಜೆಬಿಎಲ್ ಸೌಂಡ್ ಸಿಸ್ಟಮ್, ಸನ್‌ರೂಫ್, ವೈರ್‌ಲೆಸ್ ಫೋನ್ ಚಾರ್ಜರ್ ಹಾಗೂ ವೆಂಟಿಲೇಟೆಡ್ ಫ್ರಂಟ್ ಸೀಟ್‌ಗಳನ್ನು ಹೊಂದಿರಲಿದೆ ಎನ್ನಲಾಗಿದೆ.

ಈ ಕಾರು ಪ್ರಯಾಣಿಕರಿಗೆ ಗರಿಷ್ಠ ರಕ್ಷಣೆ ಒದಗಿಸುತ್ತದೆ. 6 ಏರ್‌ಬ್ಯಾಗ್‌, ಎಬಿಎಸ್ (ಆಂಟಿಲಾಕ್ ಬ್ರೇಕಿಂಗ್ ಸಿಸ್ಟಮ್), ಇಬಿಡಿ (ಎಲೆಕ್ಟ್ರಾನಿಕ್ ಬ್ರೇಕ್‌ಫೋರ್ಸ್ ಡಿಸ್ಟ್ರಿಬ್ಯೂಷನ್), ರೇರ್ ಪಾರ್ಕಿಂಗ್ ಸೇನಾರ್ಸ್, ಇಎಸ್‌ಸಿ (ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಕಂಟ್ರೋಲ್), ಫ್ರಂಟ್ ಪಾರ್ಕಿಂಗ್ ಸೇನಾರ್ಸ್, ಟಿಪಿಎಂಎಸ್ (ಟೈರ್ ಒತ್ತಡದ ಮಾನಿಟರಿಂಗ್ ಸಿಸ್ಟಮ್), ಎಡಿಎಎಸ್ (ಅಡ್ವಾನ್ಸ್ಡ್ ಡ್ರೈವರ್ ಅಸಿಸ್ಟೆನ್ಸ್ ಸಿಸ್ಟಮ್ಸ್) ಹಾಗೂ 360-ಡಿಗ್ರಿ ಕ್ಯಾಮೆರಾ ಒಳಗೊಂಡಿರುವ ಸಾಧ್ಯತೆಯಿದೆ.

ಟಾಟಾ ಕರ್ವ್ ಇವಿ ಅತ್ಯಂತ ಕೈಗೆಟುಕುವ ಬೆಲೆಯಲ್ಲಿ ಖರೀದಿಗೆ ದೊರೆಯಲಿದ್ದು, ಸರಿ ಸುಮಾರು ರೂ.18 ಲಕ್ಷ ಎಕ್ಸ್ ಶೋರೂಂ ಬೆಲೆಯನ್ನು ಪಡೆದಿರುವ ನಿರೀಕ್ಷೆಯಿದೆ. ಈ ಕಾರಿಗೆ ಮುಂದಿನ ತಿಂಗಳಲ್ಲಿ ಬಿಡುಗಡೆಯಾಗಲಿರುವ ಮಾರುತಿ ಸುಜುಕಿ ಇವಿಎಕ್ಸ್ ಮತ್ತು ಹ್ಯುಂಡೈ ಕ್ರೆಟಾ ಇವಿಗಳು ಪ್ರಬಲವಾದ ಸ್ಪರ್ಧೆಯೊಡ್ಡಲಿವೆ ಎಂದು ಹೇಳಲಾಗಿದೆ.

ಮುಂಬರಲಿರುವ ಇಂಧನ ಚಾಲಿತ ಟಾಟಾ ಕರ್ವ್ 1.2-ಲೀಟರ್ ಟರ್ಬೊ ಪೆಟ್ರೋಲ್, 1.2-ಲೀಟರ್ ಜಿಡಿಐ ಪೆಟ್ರೋಲ್ ಹಾಗೂ 1.5-ಲೀಟರ್ ಡೀಸೆಲ್ ಎಂಜಿನ್ ಪಡೆದಿರಲಿದೆ. ಜೊತೆಗೆ 6-ಸ್ಪೀಡ್ ಮ್ಯಾನುವಲ್/ 7-ಸ್ಪೀಡ್ ಡಿಸಿಟಿ ಗೇರ್‌ಬಾಕ್ಸ್‌ನ್ನು ಒಳಗೊಂಡಿರಲಿದೆ. ಇಕೋ, ಸಿಟಿ ಮತ್ತು ಸ್ಪೋರ್ಟ್ಸ್ ಡ್ರೈವಿಂಗ್ ಮೋಡ್ ಹೊಂದಿರಲಿದೆ ಎನ್ನಲಾಗಿದೆ. ಈ ಕಾರು ರೂ.10.50 ಲಕ್ಷ ಆರಂಭಿಕ ಬೆಲೆಯನ್ನು ಪಡೆದಿರಬಹುದು ಎಂದು ಅಂದಾಜಿಸಲಾಗಿದೆ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊ ಗಳನ್ನು ಪಡೆಯಲು ನಮ್ಮ ಫೇಸ್‌ ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

Article Published On: Wednesday, July 24, 2024, 12:58 [IST]
English summary
Tata curvv electric car battery pack range details leaked
Read more on tata motors india
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+