ರತನ್ ಟಾಟಾ ಕಂಪನಿಯಿಂದ ಹೊಸ ಬ್ರಹ್ಮಾಸ್ತ್ರ: 585 ಕಿ.ಮೀ ಚಲಿಸುವ ಎಲೆಕ್ಟ್ರಿಕ್ ಕಾರು ಬಿಡುಗಡೆ

ಜನಪ್ರಿಯ ಮತ್ತು ಸ್ವದೇಶಿ ವಾಹನ ತಯಾರಕ ಕಂಪನಿಯಾದ ಟಾಟಾ ಮೋಟಾರ್ಸ್ (Tata Motors) ತನ್ನ ಟಾಟಾ ಕರ್ವ್ ಇವಿ (Tata Curvv EV) ಕೂಪೆ ಎಸ್‍ಯುವಿಯನ್ನು ಬಿಡುಗಡೆಗೊಳಿಸಿದೆ. ಈ ಹೊಸ ಟಾಟಾ ಕರ್ವ್ ಇವಿಯ ಆರಂಭಿಕ ಬೆಲೆಯು ರೂ.17.49 ಲಕ್ಷವಾಗಿದೆ. ಇನ್ನು ಟಾಟಾ ಕರ್ವ್ ICE (ಇಂಧನ ಚಾಲಿತ) ಮಾದರಿಯ ಬೆಲೆಯು ಈ ವರ್ಷದ ಸೆಪ್ಟೆಂಬರ್ 2ಕ್ಕೆ ಪ್ರಕಟಿಸುತ್ತದೆ. ಈ ಹೊಸ ಟಾಟಾ ಎಲೆಕ್ಟ್ರಿಕ್ ಕಾರು 5 ಟ್ರಿಮ್‌ಗಳಲ್ಲಿ ಲಭ್ಯವಿದೆ. ಇದು ಎಸ್‍ಯುವಿ ಕೂಪೆ ಬಾಡಿ ಸ್ಟೈಲ್ ಅನ್ನು ಹೊಂದಿದೆ.

ಹೊಸ ಟಾಟಾ ಕರ್ವ್ ಇವಿಯುಎರಡು ಬ್ಯಾಟರಿ ಪ್ಯಾಕ್ ಆಯ್ಕೆಗಳನ್ನು ಹೊಂದಿವೆ. ಇದರಲ್ಲಿ 45 kWh ಬ್ಯಾಟರಿ ಪ್ಯಾಕ್ 502 ಕಿ.ಮೀ ರೇಂಜ್ ನೀಡಿದರೆ, 55 kWh ಬ್ಯಾಟರಿ ಪ್ಯಾಕ್ 585 ಕಿ.ಮೀ ರೇಂಜ್ ನೀಡುತ್ತದೆ. ಈ ಎಲೆಕ್ಟ್ರಿಕ್ ಕಾರನ್ನು ಫಾಸ್ಟ್ ಚಾರ್ಜಿಂಗ್ ಮೂಲಕ ಕೇವಲ 10 ನಿಮಿಷಗಳು ಚಾರ್ಜ್ ಮಾಡಿದರೆ 150 ಕಿಮೀ ರೇಂಜ್ ಅನ್ನು ನೀಡಬಹುದು.

Tata Curvv EV

ಕಾರ್ಯಕ್ಷಮತೆಗೆ ಸಂಬಂಧಿಸಿದಂತೆ, ಈ ಹೊಸ ಟಾಟಾ ಕರ್ವ್ ಇವಿಯು 163 bhp ಪವರ್ ಉತ್ಪಾದಿಸುವ ಎಲೆಕ್ಟ್ರಿಕ್ ಮೋಟಾರ್ ಅನ್ನು ಹೊಂದಿದೆ, ಇದು ಕಾರನ್ನು ಕೇವಲ 8.6 ಸೆಕೆಂಡುಗಳಲ್ಲಿ 100 ಕಿ.ಮೀ ವೇಗವನ್ನು ಪಡೆದುಕೊಳ್ಳುವ ಸಾಮರ್ಥ್ಯವನ್ನು ಹೊಂದಿದೆ. ಇದಲ್ಲದೆ, ಈ ಹೊಸ ಎಲೆಕ್ಟ್ರಿಕ್ ಕಾರಿನ ಟಾಪ್ ಸ್ಪೀಡ್ 160 ಕಿ.ಮೀ ಆಗಿದೆ.

ಇದಲ್ಲದೆ, 70kW ಚಾರ್ಜರ್ ಬಳಸಿ 10% ರಿಂದ 80% ವರೆಗೆ ಚಾರ್ಜ್ ಮಾಡುವುದು ಕೇವಲ 40 ನಿಮಿಷಗಳನ್ನು ತೆಗೆದುಕೊಳ್ಳುತ್ತದೆ. ಇದು V2V ಮತ್ತು V2L ಕಾರ್ಯಗಳನ್ನು ಸಹ ಹೊಂದಿದೆ. ಕರ್ವ್ ಇವಿಯ ಡೈನಾಮಿಕ್ಸ್ ಅನ್ನು ಸುಧಾರಿಸಲು, ಮಾದರಿಯ CG ಅನ್ನು 60mm ಕಡಿಮೆ ಮಾಡಲಾಗಿದೆ. ಈ ಟಾಟಾ ಕರ್ವ್ ಎಲೆಕ್ಟ್ರಿಕ್ ಕಾರು 190 mm ನ ಗ್ರೌಂಡ್ ಕ್ಲಿಯರೆನ್ಸ್ ಮತ್ತು 450 mm ವಾಟರ್ ವೇಡಿಂಗ್ ಆಳವನ್ನು ಒಳಗೊಂಡಿವೆ.

ಕೂಪೆ ತರಹದ ನಿಲುವಿನ ಹೊರತಾಗಿಯೂ, ಟಾಟಾ ಕರ್ವ್ ಇವಿ ಪ್ರಾಯೋಗಿಕ ಎಸ್‍ಯುವಿ ಆಗಿದ್ದು, 60:40 ಸ್ಪ್ಲಿಟ್ ಹಿಂಬದಿ ಸೀಟುಗಳಂತಹ ವೈಶಿಷ್ಟ್ಯಗಳನ್ನು ಹೊಂದಿದೆ. ಇದಲ್ಲದೆ, ಮಾದರಿಯು ಅಗಾಧವಾದ 500-ಲೀಟರ್ ಬೂಟ್ ಸ್ಪೇಸ್‌ನೊಂದಿಗೆ ಬರುತ್ತದೆ. ಇತರ ಗಮನಾರ್ಹ ಮುಖ್ಯಾಂಶಗಳು 215/55 ಟೈರ್‌ಗಳಲ್ಲಿ ಸುತ್ತುವ ಅದರ 18-ಇಂಚಿನ ಅಲಾಯ್ ವ್ಹೀಲ್ ಗಳನ್ನು ಒಳಗೊಂಡಿವೆ.

ಹೊಸ ಹೊಸ ಟಾಟಾ ಕರ್ವ್ ಇವಿ ಲೆವೆಲ್ 2 ಎಡಿಎಎಸ್ ಟೆಕ್, ಡಿಜಿಟಲ್ ಡ್ರೈವರ್ಸ್ ಡಿಸ್ಪ್ಲೇ, ದೊಡ್ಡ ಇನ್ಫೋಟೈನ್‌ಮೆಂಟ್ ಯೂನಿಟ್, ವೆಂಟಿಲೇಟೆಡ್ ಫ್ರಂಟ್ ಸೀಟ್‌ಗಳು, 6-ವೇ ಪವರ್ ಅಡ್ಜಸ್ಟಬಲ್ ಡ್ರೈವರ್ ಸೀಟ್, ರಿಕ್ಲೈನಿಂಗ್ ಹಿಂಬದಿ ಸೀಟುಗಳು, ಪನರೊಮಿಕ್ ಸನ್‌ರೂಫ್, ಆಂಬಿಯೆಂಟ್ ಲೈಟಿಂಗ್ ಸೇರಿದಂತೆ ಸಾಕಷ್ಟು ತಂತ್ರಜ್ಞಾನದೊಂದಿಗೆ ಟಾಟಾ ಕರ್ವ್ ಬಂದಿದೆ.

ಹೊಸ ಟಾಟಾ ಕರ್ವ್ ಎಲೆಕ್ಟ್ರಿಕ್ ಕೂಪೆ ಎಸ್‍ಯುವಿ ಮಾದರಿಯ ಬಣ್ಣಗಳ ಆಯ್ಕೆಗಳ ಬಗ್ಗೆ ಹೇಳುವುದಾದರೆ, ಇದು ವರ್ಚುವಲ್ ಸನ್‌ರೈಸ್, ಪ್ಯೂರ್ ಗ್ರೇ, ಪ್ರಿಸ್ಟಿನ್ ವೈಟ್, ಫ್ಲೇಮ್ ರೆಡ್ ಮತ್ತು ಎಂಪವರ್ಡ್ ಆಕ್ಸೈಡ್ ಎಂಬ 5 ಬಣ್ಣಗಳಲ್ಲಿ ಲಭ್ಯವಿರುತ್ತದೆ. ಇದರಲ್ಲಿ ಈ ಎಲೆಕ್ಟ್ರಿಕ್ ಕಾರಿನ ಟಾಪ್-ಸ್ಪೆಕ್ ರೂಪಾಂತರವು ಎಂಪವರ್ಡ್ ಆಕ್ಸೈಡ್ ಬಣ್ಣ ಹೊಂದಿದೆ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊ ಗಳನ್ನು ಪಡೆಯಲು ನಮ್ಮ ಫೇಸ್‌ ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

Article Published On: Wednesday, August 7, 2024, 13:54 [IST]
English summary
Tata curvv ev launched in india price range features
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+