ಮೊದಲ ಬಾರಿಗೆ ಟಾಟಾ ಕರ್ವ್ ಇಂಟೀರಿಯರ್ ರಿವೀಲ್: ಸನ್‌ರೂಫ್, ಪ್ರೀಮಿಯಂ ಫೀಚರ್ಸ್!
ಟಾಟಾ ಮೋಟಾರ್ಸ್‌ನ ಬಹುನಿರೀಕ್ಷಿತ 'ಕರ್ವ್ ಎಸ್‌ಯುವಿ ಕೂಪೆ' ಭಾರತದಲ್ಲಿ ಭಾರೀ ಸದ್ದು ಮಾಡಿದೆ. ಈ ಕಾರು ಮೊದಲು ಎಲೆಕ್ಟ್ರಿಕ್ ಆವೃತ್ತಿಯಲ್ಲಿ ಬಿಡುಗಡೆಯಾಗಿ ಬಳಿಕ ಇಂಧನ ಚಾಲಿತ ಆವೃತ್ತಿಯಲ್ಲಿ ಪರಿಚಯಗೊಳ್ಳಲಿದೆ. ಆಗಸ್ಟ್ 7 ರಂದು ಅಧಿಕೃತವಾಗಿ ಬಿಡುಗಡೆ ಮಾಡುವುದಾಗಿ ಟಾಟಾ ಹೇಳಿದೆ. ಟಾಟಾ ಮೋಟಾರ್ಸ್ ಕರ್ವ್ ಎಸ್‌ಯುವಿ ಕೂಪೆ ಎಲೆಕ್ಟ್ರಿಕ್ (Curvv.ev) ಹಾಗೂ ICE ಕಾರಿನ ಬಾಹ್ಯಾ ವಿನ್ಯಾಸವನ್ನು ಈಗಾಗಲೇ ಬಹಿರಂಗಪಡಿಸಿದೆ. ಆದರೆ ಇಂಟೀರಿಯರ್ ಬಗ್ಗೆ ಯಾವುದೇ ಸುಳಿವು ನೀಡಿರಲಿಲ್ಲ. ಇದೀಗ ಬಿಡುಗಡೆ ಮುನ್ನವೇ ಇಂಟೀರಿಯರ್ ಅನ್ನು ಬಹಿರಂಗಪಡಿಸಿದೆ.
ಟಾಟಾ ಕರ್ವ್ ವಿನ್ಯಾಸವನ್ನು ಗಮನಿಸಿದರೆ, ಇದು ನೆಕ್ಸಾನ್‌ನೊಂದಿಗೆ ಸಾಕಷ್ಟು ಡಿಸೈನ್ ಹಂಚಿಕೊಳ್ಳುತ್ತದೆ. ಹೆಡ್‌ಲೈಟ್ ಮತ್ತು ಡಿಆರ್‌ಎಲ್ ವಿನ್ಯಾಸ, ಜೊತೆಗೆ ಇಡೀ ಮುಂಭಾಗದ ಫ್ಯಾಸಿಯಾ ಕರ್ವ್‌ಗೆ ನೆಕ್ಸಾನ್ ಥೀಮ್ ಅನ್ನು ನೀಡುತ್ತದೆ. ಉಳಿದಂತೆ ಹಿಂಭಾಗದಲ್ಲಿ ಸಂಪೂರ್ಣ ಹೊಸ ಡಿಸೈನ್ ನೀಡಿ ಭಾರತದ ಮೊದಲ ಎಸ್‌ಯುವಿ ಕೂಪೆ ಎಂಬ ಹೆಗ್ಗಳಿಕೆ ಪಡೆದುಕೊಂಡಿದೆ.

ಟಾಟಾ ಕರ್ವ್ ಇಂಟೀರಿಯರ್: ಟಾಟಾ ಕರ್ವ್ ಇಂಟೀರಿಯರ್ ನೋಡಿದ್ರೆ ನೆಕ್ಸಾನ್, ಹ್ಯಾರಿಯರ್, ಸಫಾರಿ ಕಾರುಗಳಲ್ಲಿ ಕಾಣುವ ಹಲವು ವಿನ್ಯಾಸ, ವೈಶಿಷ್ಟ್ಯಗಳನ್ನು ಇದರಲ್ಲೂ ನೋಡಬಹುದು. ಕರ್ವ್ ಕಾರಿನಲ್ಲಿ ಟಾಟಾ ಹ್ಯಾರಿಯರ್‌ನಲ್ಲಿ ನೋಡಬಹುದಾದ ಅದೇ ಟಚ್-ಸೆನ್ಸಿಟಿವ್ ಕಂಟ್ರೋಲ್‌ಗಳನ್ನು ಹೊಂದಿರುವ ಸ್ಟೀರಿಂಗ್ ವೀಲ್ ಮತ್ತು ಪ್ರಕಾಶಮಾನವಾದ ಟಾಟಾ ಲೋಗೋವನ್ನು ಇದರಲ್ಲೂ ನೀಡಲಾಗಿದೆ.
ಉಳಿದಂತೆ ಟಾಟಾ ನೆಕ್ಸಾನ್‌ನಲ್ಲಿ ಸಿಗುವ ಏರ್‌ಕಾನ್ ಕಂಟ್ರೋಲ್‌ಗಳನ್ನು ಇದರಲ್ಲೂ ನೋಡಬಹುದು, ಹಾಗೆಯೇ 12.3 ಇಂಚಿನ ಇನ್ಫೋಟೈನ್ ಮೆಂಟ್ ಸಿಸ್ಟಂ ಟಾಪ್ ಸ್ಪೆಕ್ ಟಾಟಾ ನೆಕ್ಸಾನ್ ವೇರಿಯೆಂಟ್‌ಗಳಲ್ಲಿ ನೀಡುವಂತೆಯೇ ಇದೆ. ಆದರೆ ಸಂಪೂರ್ಣ ಡ್ಯಾಶ್‌ಬೋರ್ಡ್ ಅನ್ನು ಮಾತ್ರ ವಿಶಿಷ್ಟ ವಿನ್ಯಾಸದಲ್ಲಿ ಡಿಸೈನ್ ಮಾಡಲಾಗಿದೆ.

ಪನೋರಮಿಕ್ ಸನ್‌ರೂಫ್, ವೈರ್‌ಲೆಸ್ ಚಾರ್ಜಿಂಗ್, 10.2-ಇಂಚಿನ ಡಿಜಿಟಲ್ ಇನ್ಸ್ ಟ್ರೂಮೆಂಟ್ ಕ್ಲಸ್ಟರ್, ಪವರ್ಡ್ ಮತ್ತು ವೆಂಟಿಲೇಟೆಡ್ ಸೀಟುಗಳು ಸೇರಿದಂತೆ ಹೆಚ್ಚಿನವುಗಳನ್ನು ಒಳಗೊಂಡಿದೆ. ಇದರ 12.3 ಇಂಚಿನ ಇನ್ಫೋಟೈನ್ ಮೆಂಟ್ ಸಿಸ್ಟಂ ನ್ಯಾವಿಗೇಷನ್, ವೈರ್ ಲೆಸ್ ಸ್ಮಾರ್ಟ್ ಫೋನ್ ಸಂಪರ್ಕ ಮತ್ತು ಸಬ್ ವೂಫರ್ ನೊಂದಿಗೆ ಜೆಬಿಎಲ್ ಸ್ಪೀಕರ್‌ಗಳನ್ನು ಪಡೆಯುತ್ತದೆ.
ಟಾಟಾ ಎಲೆಕ್ಟ್ರಿಕ್ ಕಾರುಗಳು ಸೇರಿದಂತೆ ಎಲ್ಲಾ ಎಸ್‌ಯುವಿಗಳು 5 ಸ್ಟಾರ್ ಸುರಕ್ಷತಾ ರೇಟಿಂಗ್ ಪಡೆದಿರುವುದರಿಂದ ಸುರಕ್ಷತೆ ಕೂಡ ಪ್ರಮುಖ ಆದ್ಯತೆಯಾಗಿದೆ. ಟಾಟಾ ಕರ್ವ್‌ನಲ್ಲಿ ಸ್ಟ್ಯಾಂಡರ್ಡ್ ಆಗಿ 6 ಏರ್‌ಬ್ಯಾಗ್‌ಗಳು, ಇಬಿಡಿಯೊಂದಿಗೆ ಎಬಿಎಸ್, ಸ್ಟೆಬಿಲಿಟಿ ಕಂಟ್ರೋಲ್, ಐಎಸ್‌ಒ ಫಿಕ್ಸ್ ಚೈಲ್ಡ್ ಸೀಟ್ ಆಂಕರ್‌ಗಳು, ಟೈರ್-ಪ್ರೆಶರ್ ಸೆನ್ಸಾರ್‌ಗಳು, ಎಲೆಕ್ಟ್ರಾನಿಕ್ ಪಾರ್ಕಿಂಗ್ ಬ್ರೇಕ್, ರಿವರ್ಸಿಂಗ್ ಕ್ಯಾಮೆರಾಗಳು ಮತ್ತು ಪಾರ್ಕಿಂಗ್ ಸೆನ್ಸಾರ್‌ಗಳು ಮತ್ತು ADAS ಲೆವೆಲ್ 2 ಹೊಂದಿರಲಿದೆ.
ಇತ್ತೀಚೆಗೆ ಸೋರಿಕೆಯಾದ ವರದಿಗಳ ಪ್ರಕಾರ, Curvv.ev ಎರಡು ಬ್ಯಾಟರಿ ಪ್ಯಾಕ್‌ಗಳೊಂದಿಗೆ ಬರುತ್ತದೆ. ಮೊದಲನೆಯದು Nexon EV ನಿಂದ ಎರವಲು ಪಡೆದ 40.5 kWh ಬ್ಯಾಟರಿ ಪ್ಯಾಕ್ ಆಗಿರುತ್ತದೆ. ಇನ್ನೊಂದು 55.5 kWh ಬ್ಯಾಟರಿ ಪ್ಯಾಕ್ ಆಗಿರುತ್ತದೆ, ಇದು ಒಂದು ಸಂಪೂರ್ಣ ಚಾರ್ಜ್‌ನಲ್ಲಿ ಸುಮಾರು 600 ಕಿ.ಮೀ ರೇಂಜ್ ನೀಡುತ್ತದೆ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊ ಗಳನ್ನು ಪಡೆಯಲು ನಮ್ಮ ಫೇಸ್ ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications