Tata Curvv: ಸಾಮಾನ್ಯರ ಲಂಬೋರ್ಗಿನಿ.. ಮತ್ತೆ ಕಾಣಿಸಿಕೊಂಡ ಟಾಟಾ ಕರ್ವ್, ಮತ್ತೇನು ಹೊಸತು?
ಭಾರತದ ವಿಶ್ವಾಸಾರ್ಹ ವಾಹನ ತಯಾರಕ ಸಂಸ್ಥೆಯಾಗಿ ಟಾಟಾ ಮೋಟಾರ್ಸ್ (Tata Motors) ಖ್ಯಾತಿಗಳಿಸಿದೆ. ಮುಂಬರುವ ಕೆಲವೇ ತಿಂಗಳಲ್ಲಿ ದೇಶೀಯ ಮಾರುಕಟ್ಟೆಯಲ್ಲಿ ಕರ್ವ್ (Curvv) ಕೂಪ್ ಎಸ್‌ಯುವಿಯನ್ನು ಪರಿಚಯಿಸಲು ಸಾಕಷ್ಟು ತಯಾರಿಯನ್ನು ಮಾಡಿಕೊಳ್ಳುತ್ತಿದೆ. ಈ ಕಾರು ಹಲವಾರು ಬಾರಿ ಪರೀಕ್ಷಾರ್ಥ ಸಂಚಾರ ನಡೆಸುವಾಗ ಕಂಡುಬಂದಿದೆ.
ಇತ್ತೀಚೆಗೆ ಹೊಸ ಟಾಟಾ ಕರ್ವ್ ಎಸ್‌ಯುವಿಯು ಮತ್ತೊಮ್ಮೆ ಕ್ಯಾಮೆರಾ ಕಣ್ಣಿಗೆ ಸೆರೆ ಸಿಕ್ಕಿದೆ. ಆ ಸ್ಪೈ ಫೋಟೋಗಳು ಆನ್‌ಲೈನ್‌ನಲ್ಲಿ ಸೋರಿಕೆಯಾಗಿದ್ದು, ಈ ಕಾರಿನಲ್ಲಿ ವಿನ್ಯಾಸ (ಡಿಸೈನ್)ವು ಬಹಳಷ್ಟು ಹೊಸತನದಿಂದ ಕೂಡಿರುವುದನ್ನು ನೋಡಬಹುದು. ಪ್ರಾಯೋಗಿಕ ಸಂಚಾರದ ಸಂದರ್ಭದಲ್ಲಿ ಕಾಣಸಿಕ್ಕ ಕರ್ವ್ ಕಾರಿನ ಒಳಭಾಗದ ವಿನ್ಯಾಸವು ನೆಕ್ಸಾನ್ ಎಸ್‌ಯುವಿಯ ತದ್ರೂಪದಂತಿದೆ.

ಆದಾಗ್ಯೂ ಕ್ಯಾಬಿನ್ ನೋಡಲು ತುಂಬಾ ಆಕರ್ಷಕವಾಗಿದ್ದು, ಕಪ್ಪು (ಬ್ಲ್ಯಾಕ್) ಹಾಗೂ ಬಿಳಿ (ವೈಟ್) ಬಣ್ಣಗಳು ಎಲ್ಲೆಡೆ ಚಾಚಿಕೊಂಡಿವೆ. ನವೀನವಾಗಿರುವ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್, ಫ್ಲಾಟ್ - ಬಾಟಮ್ ಸ್ಟೀರಿಂಗ್ ವೀಲ್, ಕೆಪ್ಯಾಸಿಟಿವ್ ಕಂಟ್ರೋಲ್ಸ್ ಮತ್ತು ಸರ್ಕ್ಯುಲರ್ ಡ್ರೈವ್ ಮೋಡ್ ಸೆಲೆಕ್ಟರ್‌ನ್ನು ಕೂಡ ನೂತನ ಕರ್ವ್ ಎಸ್‌ಯುವಿಯು ಹೊಂದಿದೆ.
ಕಳೆದ ತಿಂಗಳು ಪರೀಕ್ಷಾರ್ಥ ಓಡಾಟವನ್ನು ನಡೆಸುವಾಗ ಕಂಡುಬಂದ ಮಾದರಿಯಲ್ಲಿ ಹೊರಭಾಗದ ವಿನ್ಯಾಸ ಕುರಿತಂತೆ ಹಲವು ವಿವರಗಳು ಬಹಿರಂಗಗೊಂಡಿದ್ದವು. ಮುಂಭಾಗ (ಫ್ರಂಟ್)ದಲ್ಲಿರುವ ಫಾಸಿಯಾ ಎಲ್‌ಇಡಿ ಲೈಟ್ ಬಾರ್‌ನೊಂದಿಗೆ ಸಂಪರ್ಕಿತಗೊಂಡಿದ್ದು, ಅತ್ಯಾಧುನಿಕ ಹೆಡ್‌ಲ್ಯಾಂಪ್‌ಗಳನ್ನು ಕೂಡ ಪಡೆದಿತ್ತು. ಜೊತೆಗೆ ಫ್ಲಶ್ ಫಿಟ್ಟಿಂಗ್ ಡೋರ್ ಹ್ಯಾಂಡಲ್ ಅನ್ನು ಒಳಗೊಂಡಿತ್ತು.

ಈ ಟಾಟಾ ಕರ್ವ್ ಕಾರು, ಹೀಟಡ್ & ವೆಂಟಿಲೇಟೆಡ್ ಫ್ರಂಟ್ ಸೀಟ್ಸ್, ಆಂಬಿಯೆಂಟ್ ಲೈಟಿಂಗ್, 8 - ಸ್ಪೀಕರ್ ಜೆಬಿಎಲ್ ಆಡಿಯೋ, ಮಲ್ಟಿಪಲ್ ಏರ್‌ಬ್ಯಾಗ್, ಸನ್‌ರೂಫ್, ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್, 360 - ಡಿಗ್ರಿ ಕ್ಯಾಮೆರಾ ಸಿಸ್ಟಮ್, ಲೆವೆಲ್ 2 ADAS (ಅಡ್ವಾನ್ಸ್ಡ್ ಡ್ರೈವರ್ ಅಸಿಸ್ಟೆನ್ಸ್ ಸಿಸ್ಟಮ್), ಫ್ರಂಟ್ & ರೇರ್ ಪಾರ್ಕಿಂಗ್ ಸೇನಾರ್ಸ್, ESC (ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಕಂಟ್ರೋಲ್) ಸೇರಿದಂತೆ ಹತ್ತಾರು ವೈಶಿಷ್ಟ್ಯಗಳನ್ನು ಪಡೆದಿರುವ ಸಾಧ್ಯತೆಯಿದೆ.
ನೂತನ ಎಸ್‌ಯುವಿಯು ಇಂಧನ ಹಾಗೂ ಎಲೆಕ್ಟ್ರಿಕ್ ಪವರ್‌ಟ್ರೇನ್‌ನೊಂದಿಗೆ ಸಿಗಲಿದೆ ಎನ್ನಲಾಗಿದೆ. ಇದು 1.2-ಲೀಟರ್ ಟಿಜಿಡಿಐ ಪೆಟ್ರೋಲ್ ಎಂಜಿನ್ ಮತ್ತು 1.5-ಲೀಟರ್ ಟರ್ಬೊ ಡೀಸೆಲ್ ಎಂಜಿನ್ ಆಯ್ಕೆಯಲ್ಲಿ ಲಭ್ಯವಾಗಬಹುದು. ಹಾಗೆಯೇ 6-ಸ್ವೀಡ್ ಮ್ಯಾನುವಲ್ ಹಾಗೂ ಡಿಸಿಟಿ (ಡುಯಲ್ ಕ್ಲಚ್ ಟ್ರಾಸ್ಮಿಷನ್) ಗೇರ್ ಬಾಕ್ಸ್‌ನ್ನು ಒಳಗೊಂಡಿರಬಹುದು ಎಂದು ಅಂದಾಜಿಸಲಾಗಿದೆ.

ಎಲೆಕ್ಟ್ರಿಕ್ ಅವತಾರದಲ್ಲಿ ಬರಲಿರುವ ಟಾಟಾ ಕರ್ವ್ ಕೂಪ್ ಎಸ್‌ಯುವಿಯು ಶಕ್ತಿಯುತ ಬ್ಯಾಟರಿ ಪ್ಯಾಕ್ ಪಡೆದಿರಲಿದ್ದು, ಭರ್ತಿ ಚಾರ್ಜ್ ನಲ್ಲಿ 500 ಕಿ.ಮೀ ರೇಂಜ್ (ಮೈಲೇಜ್) ಕೊಡಬಹುದು ಎಂದು ಹೇಳಲಾಗಿದೆ. ಈ ಕಾರು ದೇಶೀಯವಾಗಿ ರೂ.11 ಲಕ್ಷ ಎಕ್ಸ್ ಶೋರೂಂ ಬೆಲೆಯಲ್ಲಿ ಗ್ರಾಹಕರ ಖರೀದಿಗೆ ದೊರೆಯಬಹುದು ಎನ್ನಲಾಗಿದೆ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋ ಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊ ಗಳನ್ನು ಪಡೆಯಲು ನಮ್ಮ ಫೇಸ್ ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications