Tata: ನಂಬಿಕೆ ಬಲವಾಯಿತು.. ಕಲ್ಲು ಬಂಡೆಯಂತಿರುವ ಟಾಟಾದ ಈ ಜನಪ್ರಿಯ ಕಾರುಗಳಿಗೆ ಪ್ರತಿಷ್ಠಿತ ಪ್ರಶಸ್ತಿ

ಟಾಟಾ ಮೋಟಾರ್ಸ್ (Tata Motors), ಗರಿಷ್ಠ ರಕ್ಷಣಾತ್ಮಕ ವೈಶಿಷ್ಟ್ಯಗಳನ್ನು ಹೊಂದಿರುವ ವಾಹನ ತಯಾರಿಕೆಗೆ ಹೆಸರುವಾಸಿಯಾಗಿದೆ. ಕಂಪನಿಯ ಜನಪ್ರಿಯ ಹ್ಯಾರಿಯರ್ (Harrier) ಮತ್ತು ಸಫಾರಿ (Safari) ಎಸ್‌ಯುವಿಗಳಿಗೆ ಗ್ಲೋಬಲ್ ಎನ್‌ಸಿಎಪಿ (Global NCAP), 2024ರ ಪ್ರತಿಷ್ಠಿತ ಸೇಫರ್ ಚಾಯ್ಸ್ ಪ್ರಶಸ್ತಿ (Safer Choice Award 2024) ನೀಡಿದೆ. ಈ ಗ್ಲೋಬಲ್ ಎನ್‌ಸಿಎಪಿ ಎಂಬುದು ಜಾಗತಿಕವಾಗಿ ಕಾರುಗಳಿಗೆ ಸುರಕ್ಷತಾ ಪರೀಕ್ಷೆ ನಡೆಸುವ ಸಂಸ್ಥೆಯಾಗಿದೆ. ನಿರ್ದಿಷ್ಟ ಮಾನದಂಡಗಳ ಅನ್ವಯ ಕಾರುಗಳಿಗೆ ಸ್ಟಾರ್ ರೇಟಿಂಗ್ ನೀಡುತ್ತದೆ.

ಕಳೆದ ವರ್ಷ, ಟಾಟಾ ಹ್ಯಾರಿಯರ್ ಹಾಗೂ ಸಫಾರಿ ಎಸ್‌ಯುವಿಗಳಿಗೆ ವಯಸ್ಕರ ರಕ್ಷಣೆ ವಿಭಾಗ (Adult Occupant Protection) ಹಾಗೂ ಮಕ್ಕಳ ರಕ್ಷಣೆ ವಿಭಾಗದಲ್ಲಿ (Child Occupant Protection) ಗ್ಲೋಬಲ್ ಎನ್‌ಸಿಎಪಿ 5 ಸ್ಟಾರ್‌ ರೇಟಿಂಗ್ ನೀಡಿತ್ತು. ಸದ್ಯ, ಪ್ರಶಸ್ತಿ ಸ್ವೀಕರಿಸಿದ ಬಳಿಕ ಮಾತನಾಡಿರುವ ಟಾಟಾ ಮೋಟಾರ್ಸ್ ಪ್ಯಾಸೆಂಜರ್ ವೆಹಿಕಲ್ಸ್ ಲಿಮಿಟೆಡ್‌ನ ಉಪಾಧ್ಯಕ್ಷ ಮೋಹನ್ ಸಾವರ್ಕರ್ ಅವರು, 'ಇವೆರೆಡು ಕಾರುಗಳು ಸೇಫರ್ ಚಾಯ್ಸ್ ಪುರಸ್ಕಾರ ಪಡೆದಿರುವುದಕ್ಕೆ ಹೆಮ್ಮೆಪಡುತ್ತೇವೆ' ಎಂದು ಹೇಳಿದ್ದಾರೆ.

Tata Harrier And Safari Suv Received Global NCAP Safer Choice Award 2024

ಟಾಟಾ ಹ್ಯಾರಿಯರ್ ಮತ್ತು ಸಫಾರಿ ಕಾರುಗಳು ಪ್ರಯಾಣಿಕರ ಸುರಕ್ಷತೆಗಾಗಿ ಗರಿಷ್ಠ ರಕ್ಷಣಾತ್ಮಕ ವೈಶಿಷ್ಟ್ಯಗಳನ್ನು ಹೊಂದಿವೆ. ಇವುಗಳು 7-ಏರ್‌ಬ್ಯಾಗ್‌, ಇಎಸ್‌ಸಿ (ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಕಂಟ್ರೋಲ್), ಟಿಪಿಎಂಎಸ್ (ಟೈರ್ ಪ್ರೆಶರ್ ಮಾನಿಟರಿಂಗ್ ಸಿಸ್ಟಮ್), ಎಡಿಎಎಸ್ (ಅಡ್ವಾನ್ಸ್ಡ್ ಡ್ರೈವರ್ ಅಸಿಸ್ಟೆನ್ಸ್ ಸಿಸ್ಟಮ್‌), ಹಿಲ್ ಅಸಿಸ್ಟ್, 360-ಡಿಗ್ರಿ ಕ್ಯಾಮೆರಾ ಸೇರಿದಂತೆ ಹಲವು ರಕ್ಷಣಾತ್ಮಕ ವೈಶಿಷ್ಟ್ಯಗಳನ್ನು ಪಡೆದಿದೆ.

ಈ ಹಿಂದೆ, ದೇಶದ ವಾಹನ ಸುರಕ್ಷತಾ ತಪಾಸಣೆ ಸಂಸ್ಥೆ 'ಭಾರತ್ ನ್ಯೂ ಕಾರ್ ಅಸೆಸ್ಮೆಂಟ್ ಪ್ರೋಗ್ರಾಂ' (ಭಾರತ್ ಎನ್‌ಸಿಎಪಿ - Bharat NCAP) ಟಾಟಾ ಹ್ಯಾರಿಯರ್ ಮತ್ತು ಸಫಾರಿ ಕಾರುಗಳನ್ನು ಪರೀಕ್ಷಿಸಿತ್ತು. ಆಗ ವಯಸ್ಕರ ರಕ್ಷಣೆ ಹಾಗೂ ಮಕ್ಕಳ ರಕ್ಷಣೆ ವಿಭಾಗದಲ್ಲಿ 5-ಸ್ಟಾರ್ ರೇಟಿಂಗ್ ಪಡೆದುಕೊಂಡಿದ್ದವು. ಭಾರತ್ ಎನ್‌ಸಿಎಪಿ ಸೈಡ್ ಇಂಪ್ಯಾಕ್ಟ್, ಫ್ರಂಟಲ್ ಇಂಪ್ಯಾಕ್ಟ್, ಪೋಲ್ ಸೈಡ್ ಇಂಪ್ಯಾಕ್ಟ್ ಒಳಗೊಂಡಂತೆ ಹಲವು ಪರೀಕ್ಷೆಗಳನ್ನು ಮಾಡಿತ್ತು.

Tata Harrier And Safari Suv Received Global NCAP Safer Choice Award 2024

ಪ್ರಸುತ್ತ ದೇಶೀಯ ಮಾರುಕಟ್ಟೆಯಲ್ಲಿ ಖರೀದಿಗೆ ದೊರೆಯುವ ಟಾಟಾ ಹ್ಯಾರಿಯರ್ (Tata Harrier) ಎಸ್‌ಯುವಿ ರೂ.15.49 ಲಕ್ಷದಿಂದ ರೂ.26.44 ಲಕ್ಷ ಎಕ್ಸ್ ಶೋರೂಂ ಬೆಲೆಯನ್ನು ಹೊಂದಿದೆ. 2-ಲೀಟರ್ ಡೀಸೆಲ್ ಎಂಜಿನ್ ಪಡೆದಿದ್ದು, 170 ಪಿಎಸ್ ಗರಿಷ್ಠ ಶಕ್ತಿ (ಪವರ್) ಹಾಗೂ 350 ಎನ್ಎಂ ಪೀಕ್ ಟಾರ್ಕ್ ಉತ್ಪಾದಿಸುವ ಸಾಮರ್ಥ್ಯ ಒಳಗೊಂಡಿದೆ. 6-ಸ್ಪೀಡ್ ಮ್ಯಾನುವಲ್/ 6-ಸ್ಪೀಡ್ ಆಟೋಮೆಟಿಕ್ ಗೇರ್‌ಬಾಕ್ಸ್‌ನ್ನು ಹೊಂದಿದೆ.

ಈ ಟಾಟಾ ಹ್ಯಾರಿಯರ್ ರೂಪಾಂತರಗಳಿಗೆ ಅನುಗುಣವಾಗಿ 14.60 ರಿಂದ 16.80 ಕೆಎಂಪಿಎಲ್‌ವರೆಗೆ ಮೈಲೇಜ್ ನೀಡುತ್ತದೆ. ಇದರಲ್ಲಿ 5 ಮಂದಿ ಆರಾಮದಾಯಕವಾಗಿ ಕುಳಿತುಕೊಂಡು ಪ್ರಯಾಣಿಸಬಹುದು. 12.3-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್, ವೈರ್‌ಲೆಸ್ ಆಂಡ್ರಾಯ್ಡ್ ಆಟೋ, ಆಪಲ್ ಕಾರ್ ಪ್ಲೇ, 10.25-ಇಂಚಿನ ಫುಲ್ ಡಿಜಿಟಲ್ ಡ್ರೈವರ್ ಡಿಸ್ಪ್ಲೇ ಸೇರಿದಂತೆ ವಿವಿಧ ವೈಶಿಷ್ಟ್ಯಗಳನ್ನು ಪಡೆದಿದೆ.

Tata Harrier And Safari Suv Received Global NCAP Safer Choice Award 2024

ಟಾಟಾ ಸಫಾರಿ (Tata Safari) ಎಸ್‌ಯುವಿ ರೂ.16.19 ಲಕ್ಷದಿಂದ ರೂ.27.34 ಲಕ್ಷ (ಎಕ್ಸ್ ಶೋರೂಂ) ದರವನ್ನು ಹೊಂದಿದೆ. 2-ಲೀಟರ್ ಡೀಸೆಲ್ ಎಂಜಿನ್ ಪಡೆದಿದ್ದು, 170 ಪಿಎಸ್ ಗರಿಷ್ಠ ಶಕ್ತಿ (ಪವರ್) ಮತ್ತು 350 ಎನ್ಎಂ ಪೀಕ್ ಟಾರ್ಕ್ ಹೊರಹಾಕುತ್ತದೆ. ಜೊತೆಗೆ 6-ಸ್ಪೀಡ್ ಮ್ಯಾನುವಲ್/ 6-ಸ್ಪೀಡ್ ಆಟೋಮೆಟಿಕ್ ಗೇರ್‌ಬಾಕ್ಸ್‌ನ್ನು ಒಳಗೊಂಡಿದೆ.

ನೂತನ ಸಫಾರಿ 16.3 ಕೆಎಂಪಿಎಲ್‌ವರೆಗೆ ಮೈಲೇಜ್ ಕೊಡುತ್ತದೆ. 6 ಅಥವಾ 7 ಆಸನ ಆಯ್ಕೆಯಲ್ಲಿಯೂ ದೊರೆಯುತ್ತದೆ. 12.3-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್, 10.25-ಇಂಚಿನ ಡಿಜಿಟಲ್ ಡ್ರೈವರ್ ಡಿಸ್ಪ್ಲೇ, ವೈರ್‌ಲೆಸ್ ಆಂಡ್ರಾಯ್ಡ್ ಆಟೋ, ಆಪಲ್ ಕಾರ್ ಪ್ಲೇ, 10-ಸ್ಪೀಕರ್ ಜೆಬಿಎಲ್ ಸೌಂಡ್ ಸಿಸ್ಟಮ್, ವೈರ್‌ಲೆಸ್ ಫೋನ್ ಚಾರ್ಜಿಂಗ್, ಡುಯಲ್-ಜೋನ್ ಆಟೋಮೆಟಿಕ್ ಎಸಿ ಹಾಗೂ ಸನ್‌ರೂಫ್ ಸೇರಿದಂತೆ ವಿವಿಧ ವೈಶಿಷ್ಟ್ಯಗಳನ್ನು ಪಡೆದಿದೆ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

Article Published On: Thursday, September 5, 2024, 9:56 [IST]
English summary
Tata harrier and safari suv received global ncap safer choice award 2024
Read more on tata motors india
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+