ಮಾರುಕಟ್ಟೆಯಲ್ಲಿ ಘರ್ಜಿಸಿದ ಟಾಟಾ ಹ್ಯಾರಿಯರ್ ಎಸ್‍ಯುವಿಗೆ ಗ್ರಾಹಕರಿಂದ ನಿರೀಕ್ಷಿಸದ ಟ್ವಿಸ್ಟ್!
ಟಾಟಾ ಮೋಟಾರ್ಸ್ (Tata Motors) ವಿಶ್ವಾಸಾರ್ಹ ಕಾರು ತಯಾರಕ ಕಂಪನಿಯಾಗಿ ಖ್ಯಾತಿಗಳಿಸಿದ್ದು, ಹೊರಭಾಗ - ಒಳಭಾಗದಲ್ಲಿ ಸಾಕಷ್ಟು ನವೀನ ಬದಲಾವಣೆ ಹಾಗೂ ವೈಶಿಷ್ಟ್ಯಗಳನ್ನು ಪಡೆದಿರುವ ಫೇಸ್‌ಲಿಫ್ಟ್ ಹ್ಯಾರಿಯರ್ (Harrier facelift) ಎಸ್‌ಯುವಿಯನ್ನು ಮಾರುಕಟ್ಟೆಗೆ ಪರಿಚಯಿಸಿತು.ಸುರಕ್ಷತೆ ಮತ್ತು ಅತ್ಯಾಧುನಿಕ ಫಿಚರ್ಸ್ ಗಳನ್ನು ಹೊಂದಿರುವ ಟಾಟಾ ಹ್ಯಾರಿಯರ್ ಫೇಸ್‌ಲಿಫ್ಟ್ ಎಸ್‍ಯುವಿಯ ಹೊಸ ನವೀಕರಣಗಳನ್ನು ಪಡೆದುಕೊಂಡಿದ್ದು, ವಿನ್ಯಾಸದಲ್ಲಿ ಹಲವು ಬದಲಾವಣೆಗಳನ್ನು ಪಡೆದುಕೊಂಡಿತು. ಈ ಟಾಟಾ ಹ್ಯಾರಿಯರ್ ಎಸ್‍ಯುವಿಯು ಭಾರತೀಯ ಮಾರುಕಟ್ಟೆಯಲ್ಲಿ ಭರ್ಜರಿಯಾಗಿ ಮಾರಾಟವಾಗುತ್ತಿತ್ತು. ಆದರೆ ಕಳೆದ ತಿಂಗಳ ಮಾರಾಟದಲ್ಲಿ ಕುಸಿತವನ್ನು ಕಂಡಿದೆ.
2024ರ ಜೂನ್ ತಿಂಗಳಿನಲ್ಲಿ ಟಾಟಾ ಹ್ಯಾರಿಯರ್ ಮಾದರಿಯ 1,347 ಯುನಿಟ್ ಗಳು ಮಾರಾಟವಾಗಿವೆ. ಇನ್ನು ಕಳೆದ ವರ್ಷದ ಜೂನ್ ತಿಂಗಳಿನಲ್ಲಿ ಹ್ಯಾರಿಯರ್ ಮಾದರಿಯ 2,040 ಯುನಿಟ್ ಗಳು ಮಾರಾಟವಾಗಿತ್ತು. ಇದನ್ನು ಕಳೆದ ತಿಂಗಳ ಮಾರಾಟಕ್ಕೆ ಹೋಲಿಸಿದರೆ ಶೇ.34ರಷ್ಟು ಕುಸಿತವನ್ನು ಕಂಡಿದೆ. ಈ ಟಾಟಾ ಹ್ಯಾರಿಯರ್ (Tata Harrier) ಮಾದರಿಗೆ ಹುಂಡೈ ಕ್ರೆಟಾ ಮತ್ತು ಕಿಯಾ ಸೆಲ್ಟೋಸ್, ಎಂಜಿ ಹೆಕ್ಟರ್ ಮತ್ತು ಜೀಪ್ ಕಂಪಾಸ್ ಪ್ರಬಲ ಪೈಪೋಟಿಯನ್ನು ನೀಡುತ್ತದೆ.

ಟಾಟಾ ಹ್ಯಾರಿಯರ್ ಎಸ್‍ಯುವಿಯು ಲೂನಾರ್ ವೈಟ್, ಪೆಬಲ್ ಗ್ರೇ, ಸನ್ಲೈಟ್ ಯೆಲ್ಲೋ ಮತ್ತು ಕೊರಲ್ ರೆಡ್ ಸೇರಿದಂತೆ 6 ಆಕರ್ಷಕ ಬಣ್ಣಗಳ ಆಯ್ಕೆಯಲ್ಲಿ ಗ್ರಾಹಕರಿಗೆ ಲಭ್ಯವಿದೆ. ಇನ್ನು ಈ ಟಾಟಾ ಹ್ಯಾರಿಯರ್ ಎಸ್‍ಯುವಿ ಪ್ರತಿಯೊಬ್ಬರನ್ನು ಆಕರ್ಷಿಸುವ ಡಿಸೈನ್ ಹೊಂದಿದೆ. ಮುಂಭಾಗದಲ್ಲಿ ಹಲವು ನವೀಕರಣಗಳನ್ನು ಒಳಗೊಂಡಿದ್ದು, ಹೊಸದಾದ ಗ್ರಿಲ್, ಸ್ಪ್ಲಿಟ್ ಹೆಡ್‌ಲೈಟ್ ಪಡೆದಿದೆ. ಜೊತೆಗೆ ಗ್ರಿಲ್ ಮೇಲ್ಭಾಗ ಫುಲ್-ವಿಡ್ತ್ (ಅಗಲ) ಎಲ್ಇಡಿ ಲೈಟ್ ಬಾರ್ ಹೊಂದಿದೆ.
ಇದರೊಂದಿಗೆ ಬಂಪರ್ ಕೂಡ ಹೊಸದಾಗಿದ್ದು, ಸೈಡ್ ಪ್ರೊಫೈಲ್‌ನಲ್ಲಿ ಹ್ಯಾರಿಯರ್ ಫೇಸ್‌ಲಿಫ್ಟ್ ಅಷ್ಟಾಗಿ ಬದಲಾವಣೆ ಪಡೆದಿಲ್ಲ. 18 ಹಾಗೂ 19 ಇಂಚಿನ ಅಲಾಯ್ ವೀಲ್ಸ್ ಅನ್ನು ಹೊಂದಿದೆ. ಹ್ಯಾರಿಯರ್ ಫೇಸ್‌ಲಿಫ್ಟ್ ಎಸ್‍ಯುವಿ ಹಿಂಭಾಗ ಹಲವು ಹೊಸತನವನ್ನು ಹೊಂದಿದೆ. ನವೀಕರಿಸಿದ ಬಂಪರ್ ಹಾಗೂ ಎಲ್ಇಡಿ ಲೈಟಿಂಗ್ ಅನ್ನು ಒಳಗೊಂಡಿದೆ.

ಇದರ ಒಟ್ಟಾರೆ ವಿನ್ಯಾಸ ಕಳೆದ ಜನವರಿಯಲ್ಲಿ ನಡೆದ ಆಟೋ ಎಕ್ಸ್‌ಪೋದಲ್ಲಿ ಪ್ರದರ್ಶಿಸಲಾದ ಹ್ಯಾರಿಯರ್ ಇವಿ ಮಾದರಿಗೆ ಹೋಲಿಕೆಯಾಗುತ್ತದೆ. ಈ ಹ್ಯಾರಿಯರ್ ಎಸ್‍ಯುವಿಯ ಒಳಭಾಗ ಮತ್ತು ಫೀಚಸ್: ಟಾಟಾ ಹ್ಯಾರಿಯರ್ ಫೇಸ್‌ಲಿಫ್ಟ್ ಒಳಭಾಗವು ಹಲವು ಬದಲಾವಣೆಗಳಾಗಿವೆ. ರೂಪಾಂತರಗಳಿಗೆ ಅನುಗುಣವಾಗಿ 10.25 - ಇಂಚು ಅಥವಾ 12.3 - ಇಂಚಿನ ಇನ್ಫೋಟೈನ್‌ಮೆಂಟ್ ಟಚ್‌ಸ್ಕ್ರೀನ್ ಹೊಂದಿದೆ.
ಈ ಎಸ್‍ಯುವಿಯ ಎಲ್ಇಡಿ ಅಂಬಿಯೇಟ್ ಲೈಟಿಂಗ್, 10.25 - ಇಂಚಿನ ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್, ಟಾಟಾ ಲೋಗೋದೊಂದಿಗೆ ಹೊಸದಾದ 4- ಸ್ಪೋಕ್ ಸ್ಟೀರಿಂಗ್ ವೀಲ್ ಅನ್ನು ಹೊಂದಿದೆ. ಇದರೊಂದಿಗೆ ಡ್ಯುಯಲ್ - ಝೋನ್ ಕ್ಲೈಮೇಟ್ ಕಂಟ್ರೋಲ್, 10 - ಸ್ಪೀಕರ್ ಜೆಬಿಎಲ್ - ಟ್ಯೂನ್ಡ್ ಸೌಂಡ್ ಸಿಸ್ಟಮ್, 360 - ಡಿಗ್ರಿ ಕ್ಯಾಮೆರಾ, ಸನ್‌ರೂಫ್ ಸೇರಿದಂತೆ ಹತ್ತಾರು ಫೀಚರ್ಸ್ ಗಳನ್ನು ಹೊಂದಿವೆ.

ಟಾಟಾ ಹ್ಯಾರಿಯರ್ ಎಸ್‌ಯುವಿ ಎಂಜಿನ್ ಪರ್ಫಾಮೆನ್ಸ್ ಬಗ್ಗೆ ಹೇಳುವುದಾದರೆ, ಇದರಲ್ಲಿ 2.0 - ಲೀಟರ್ ಡೀಸೆಲ್ ಎಂಜಿನ್ ಒಳಗೊಂಡಿದ್ದು, 170 hp ಪವರ್ ಹಾಗೂ 350 Nm ಪೀಕ್ ಟಾರ್ಕ್ ಉತ್ಪಾದಿಸುವ ಸಾಮರ್ಥ್ಯ ಹೊಂದಿದೆ. ಈ ಎಂಜಿನ್ ನೊಂದಿಗೆ 6 - ಸ್ವೀಡ್ ಮ್ಯಾನುವಲ್ ಅಥವಾ ಆಟೋಮೆಟಿಕ್ ಗೇರ್ ಬಾಕ್ಸ್ ಆಯ್ಕೆಯಲ್ಲಿ ಲಭ್ಯವಿದೆ. ಈ ಎಸ್‍ಯುವಿ ಇಕೋ, ಸಿಟಿ ಮತ್ತು ಸ್ಪೋರ್ಟ್ ಎಂಬ ಡ್ರೈವಿಂಗ್ ಮೋಡ್ ಆಯ್ಕೆಯನ್ನು ಹೊಂದಿದೆ.
ಈ ಟಾಟಾ ಹ್ಯಾರಿಯರ್ ಸೇಫ್ಟಿ ದೃಷ್ಟಿಯಿಂದ ಅತ್ಯುತ್ತಮ ಕಾರೆಂದು ಗುರುತಿಸಿಕೊಂಡಿದ್ದು, ಗ್ಲೋಬಲ್ ಎನ್‌ಸಿಎಪಿ (Global NCAP) ಪರೀಕ್ಷೆಯ ವಯಸ್ಕರ ಸುರಕ್ಷತೆ ವಿಭಾಗದಲ್ಲಿ 34ಕ್ಕೆ 33.05 ಅಂಕ ಗಳಿಸುವ ಮೂಲಕ 5 - ಸ್ಟಾರ್ ಸೇಫ್ಟಿ ರೇಟಿಂಗ್ ಪಡೆದಿದೆ. ಸುರಕ್ಷತೆ ಸಲುವಾಗಿ 7 ಏರ್‌ಬ್ಯಾಗ್, ADAS, ಹಿಲ್ - ಹೋಲ್ಡ್ ಕಂಟ್ರೋಲ್, 3 - ಪಾಯಿಂಟ್ ಸೀಟ್ ಬೆಲ್ಟ್ ರಿಮೆಂಡರ್ ಒಳಗೊಂಡಂತೆ ವಿವಿಧ ಫೀಚರ್ಸ್ ಹೊಂದಿದೆ.


Click it and Unblock the Notifications