ಹೊಸ ವರ್ಷದ ಮೊದಲೇ ದಿನವೇ ಭಾರೀ ಆಘಾತ.. ಯಾಕೆ ಗೊತ್ತಾ?
ಭಾರತವು ವಿಶ್ವದಲ್ಲಿಯೇ ಅತಿದೊಡ್ಡ ಕಾರು ಮಾರುಕಟ್ಟೆಯನ್ನು ಹೊಂದಿದೆ. ತಯಾರಿಕಾ ವೆಚ್ಚಗಳು ಏರಿಕೆಯಾದ್ದರಿಂದ ಟಾಟಾ, ಮಾರುತಿ ಸುಜುಕಿ ಮಹೀಂದ್ರಾ, ಹ್ಯುಂಡೈ, ಸ್ಕೋಡಾ, ಎಂಜಿ ಮೋಟಾರ್ ಹಾಗೂ ಕಿಯಾ ಸೇರಿದಂತೆ ಹಲವು ವಾಹನ ತಯಾರಕ ಕಂಪನಿಗಳು, ವಿವಿಧ ಹೊಸ ಕಾರುಗಳ ಬೆಲೆಯನ್ನು ಹೆಚ್ಚಳ ಮಾಡಿವೆ. ಬಹುತೇಕ ಇಂದಿನಿಂದಲೇ (ಜನವರಿ 1, 2025) ನೂತನ ದರಗಳು ಜಾರಿಗೆ ಬಂದಿದ್ದು, ಹೊಸ ವರ್ಷದ ಮೊದಲ ದಿನವೇ ದರ ಏರಿಕೆ ಶಾಕ್ ದೊರೆತಿದೆ.
ಟಾಟಾ ಮೋಟಾರ್ಸ್ (Tata Motors): ಜನವರಿಯಿಂದ ಇವಿಗಳು ಸೇರಿದಂತೆ ಎಲ್ಲ ಪ್ರಯಾಣಿಕ ವಾಹನಗಳ ಬೆಲೆಯನ್ನು ಶೇಕಡ 3% ವರೆಗೆ ಹೆಚ್ಚಳ ಮಾಡುವುದಾಗಿ ಈ ಹಿಂದೆಯೇ ಟಾಟಾ ಮೋಟಾರ್ಸ್ ಘೋಷಣೆ ಮಾಡಿತ್ತು. ದೇಶೀಯ ಮಾರುಕಟ್ಟೆಯಲ್ಲಿ ಕಂಪನಿಯು ಟಿಯಾಗೊ, ಟಿಗೂರ್, ಪಂಚ್, ನೆಕ್ಸಾನ್, ಕರ್ವ್, ಸಫಾರಿ ಹಾಗೂ ಹ್ಯಾರಿಯರ್ ಸೇರಿದಂತೆ ಹಲವು ಕಾರುಗಳನ್ನು ಮಾರಾಟ ಮಾಡುತ್ತಿದೆ.

ಮಾರುತಿ ಸುಜುಕಿ (Maruti Suzuki): ಉತ್ಪಾದನಾ ವೆಚ್ಚಗಳು ಏರಿಕೆಯಾದ ಕಾರಣ, ಮಾರುತಿ ಸುಜುಕಿಯು ವಿವಿಧ ಕಾರುಗಳ ಬೆಲೆಯನ್ನು ಹೆಚ್ಚಳ ಮಾಡುವುದಾಗಿ ಈ ಮೊದಲೇ ತಿಳಿಸಿತ್ತು. ಜ,1, 2025ಕ್ಕೆ ಅನ್ವಯವಾಗುವಂತೆ ಕಂಪನಿಯ ಹಲವು ಮಾಡೆಲ್‌ಗಳ ದರ ಶೇಕಡ 4% ಅಧಿಕಗೊಂಡಿದೆ. ಪ್ರಸ್ತುತ ಮಾರುತಿ ಸುಜುಕಿಯು ಆಲ್ಟೋ, ಸೆಲೆರಿಯೊ, ವ್ಯಾಗನ್ಆರ್, ಸ್ವಿಫ್ಟ್, ಡಿಜೈರ್, ಬ್ರೆಝಾ, ಫ್ರಾಂಕ್ಸ್, ಬಲೆನೊ ಹಾಗೂ ಗ್ರ್ಯಾಂಡ್ ವಿಟಾರಾ ಒಳಗೊಂಡಂತೆ ಹತ್ತಾರು ಕಾರುಗಳನ್ನು ಯಶಸ್ವಿಯಾಗಿ ಮಾರಾಟಗೊಳಿಸುತ್ತಿದೆ
ಮಹೀಂದ್ರಾ (Mahindra): ಹಣದುಬ್ಬರ ಹಾಗೂ ತಯಾರಿಕಾ ವೆಚ್ಚಗಳು ಹೆಚ್ಚಾದ ಹಿನ್ನೆಲೆ, ಮಹೀಂದ್ರಾ ಕಂಪನಿ ಸಹ ಹಲವು ಎಸ್‌ಯುವಿ ಮಾಡೆಲ್‌ಗಳು ಮತ್ತು ವಾಣಿಜ್ಯ ವಾಹನಗಳ ಬೆಲೆಯನ್ನು ಹೆಚ್ಚಳ ಮಾಡುವುದಾಗಿ ತಿಳಿಸಿತ್ತು. ನೂತನ ದರಗಳು ಶೇಕಡ 3% ಅಧಿಕಗೊಂಡಿದೆ. ಕಂಪನಿಯು ಸ್ಕಾರ್ಪಿಯೋ, ಎಕ್ಸ್‌ಯುವಿ700 ಮತ್ತು ಥಾರ್ ಸೇರಿದಂತೆ ವಿವಿಧ ಕಾರುಗಳನ್ನು ಮಾರಾಟ ಮಾಡುತ್ತಿದೆ.

ಹ್ಯುಂಡೈ (Hyundai): ಉತ್ಪಾದನಾ ವೆಚ್ಚಗಳು ಏರಿಕೆಯಾದ್ದರಿಂದ ಎಲ್ಲ ಕಾರುಗಳ ಬೆಲೆಯನ್ನು ಹೆಚ್ಚಿಸುವುದಾಗಿ ಹ್ಯುಂಡೈ ಕಂಪನಿಯು ಘೋಷಣೆ ಮಾಡಿತ್ತು. ನೂತನ ದರಗಳು ರೂ. 25,000 ವರೆಗೆ ಅಧಿಕಗೊಂಡಿದೆ. ದೇಶೀಯ ಮಾರುಕಟ್ಟೆಯಲ್ಲಿ ಹ್ಯುಂಡೈ ಕಂಪನಿಯು ಐ20, ಐ10 ನಿಯೋಸ್ ಮತ್ತು ಕ್ರೆಟಾ ಒಳಗೊಂಡಂತೆ ಹಲವು ಕಾರುಗಳನ್ನು ಮಾರಾಟಗೊಳಿಸುತ್ತಿದೆ.
ಸ್ಕೋಡಾ (Skoda): ಈ ಕಂಪನಿಯು ಶೇಕಡ 3% ಬೆಲೆ ಏರಿಕೆ ಮಾಡುವುದಾಗಿ ತಿಳಿಸಿತ್ತು. ನೂತನ ದರಗಳು ಇವತ್ತಿನಿಂದಲೇ ಅಧಿಕೃತವಾಗಿ ಜಾರಿಗೆ ಬಂದಿದೆ. ಈ ಬೆಲೆ ಹೆಚ್ಚಳವು ಸ್ಕೋಡಾ ಕಂಪನಿಯ ಜನಪ್ರಿಯ ಕಾರುಗಳಾದ ಕುಶಾಕ್, ಸುಪರ್ಬ್, ಕೊಡಿಯಾಕ್ ಹಾಗೂ ಸ್ಲಾವಿಯಾಗಳಿಗೆ ಅನ್ವಯವಾಗುತ್ತದೆ ಎಂದು ವರದಿಯಾಗಿತ್ತು.

ಎಂಜಿ ಮೋಟಾರ್ & ಕಿಯಾ (MG Motor & Kia): ಇವೆರೆಡು ಕಂಪನಿಗಳು ಕೂಡ ವಿವಿಧ ಕಾರುಗಳ ಬೆಲೆಯನ್ನು ಹೆಚ್ಚಳ ಮಾಡಿವೆ. ಎಂಜಿ ಶೇಕಡ 3% ಹಾಗೂ ಕಿಯಾ ಶೇಕಡ 2% ದರವನ್ನು ಏರಿಕೆಗೊಳಿಸಿದೆ. ಇದರೊಟ್ಟಿಗೆ ಐಷಾರಾಮಿ ಕಾರು ತಯಾರಕರಾದ ಆಡಿ, ಮರ್ಸಿಡಿಸ್ ಮತ್ತು ಬಿಎಂಡಬ್ಲ್ಯೂ ಸಹ ಬೆಲೆ ಹೆಚ್ಚಳಗೊಳಿಸಿವೆ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊ ಗಳನ್ನು ಪಡೆಯಲು ನಮ್ಮ ಫೇಸ್ ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications